ಮುಂಜಾನೆ ಎದ್ದು ಈ ಕೆಲಸ ಮಾಡಿದರೆ ದೋಷ ಪರಿಹಾರವಾಗುತ್ತದೆ..!
Image credits : m.dailyhunt.in
ಬೆಳಗ್ಗೆ ಎದ್ದು ನಾವೇನು ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೋ, ಪೂರ್ತಿ ದಿನ ಅದೇ ಗುಂಗು ನಮ್ಮನ್ನು ಆವರಿಸಿಕೊಂಡಿರುತ್ತದೆ. ಕೆಲವೊಮ್ಮೆ ಬೆಳಗ್ಗೆ ಖುಷಿಯಾಗಿದ್ದವರು ಪೂರ್ತಿ ದಿನ ಬೇಸರದಲ್ಲಿರುತ್ತಾರೆ ಅಥವಾ ಆಲಸಿಯಾಗಿರುತ್ತಾರೆ. ಹಲವರು ಇದನ್ನು ಗಮನಿಸಿರಬಹುದು. ಹೀಗಾಗಿ ನಾವು ಬೆಳಗ್ಗೆದ್ದು ಏನು ಕೆಲಸ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ನಾವು ಬೆಳಗ್ಗೆ ಮಾಡುವ ಚಟುವಟಿಕೆಗಳು ನಮ್ಮ ಪೂರ್ತಿ ದಿನದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನಾವು ಬೆಳಗ್ಗೆದ್ದು ಏನು ಮಾಡಿದರೆ ಸೂಕ್ತ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ನಮ್ಮ ಹಿರಿಯರು ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಿ, ರಂಗೋಲಿ ಹಾಕಿ, ಮಡಿಯಲ್ಲೇ ದೇವರ ಪೂಜೆ ಮಾಡಿ, ದೇವರ ಮಂತ್ರಗಳನ್ನು ಪಠಿಸುತ್ತಿದ್ದರು. ಬಳಿಕ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು. ಹೀಗಾಗಿಯೇ ಅವರ ಸಂಪೂರ್ಣ ದಿನ ಉಲ್ಲಾಸಕರವಾಗಿರುತ್ತಿತ್ತು. ಆದರೆ ಇವತ್ತಿನ ಜನರು, ಎದ್ದು 2 ಮೂರು ತಾಸುಗಳನ್ನು ಮೊಬೈಲ್ ನೋಡುತ್ತಾ ಹಾಸಿಗೆಯಲ್ಲೇ ಕಳೆದು ಬಿಡುತ್ತಾರೆ. ಇದು ಆಲಸೀತನವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಮಾತ್ರವಲ್ಲ ಇಡೀ ದಿನ ಉಲ್ಲಸಿತವಾಗಿ ಕಳೆಯುವುದಂತೂ ದೂರದ ಮಾತು. ಹೀಗಾಗಿ ನಾವು ಬೆಳಗ್ಗೆದ್ದು ಏನು ಮಾಡಿದರೆ ಮುಖ್ಯ ಎಂಬುದನ್ನು ತಿಳಿದುಕೊಂಡು ಅನುಸರಿಸುವುದು ಮುಖ್ಯ.
ಬೆಳಗ್ಗೆ ಎದ್ದಾಗ ಮೊತ್ತ ಮೊದಲಾಗಿ ಯಾವಾಗಲೂ ಉತ್ತಮ ಕಾರ್ಯ ಮಾಡುವುದು ಮುಖ್ಯ. ಕೆಲವನ್ನು ಮುಂಜಾನೆ ಎದ್ದಾಕ್ಷಣ ನೋಡುವುದನ್ನು ಅಸಹ್ಯಕರವೆಂದು ಪರಿಗಣಿಸಲಾಗುತ್ತದೆ. ಕಣ್ಣುಗಳು ತೆರೆದ ತಕ್ಷಣ, ಇಡೀ ದಿನ ಶುಭವಾಗಿರಲು ಉತ್ತಮವಾದುದ್ದನ್ನು ನೋಡಬೇಕು ಎಂದು ಹೇಳಲಾಗುತ್ತದೆ. ಅಂತಹ ಅನೇಕ ವಿಷಯಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.ಈ ರೀತಿ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ನಿವಾರಿಸಬಹುದು. ಧರ್ಮಗ್ರಂಥಗಳಲ್ಲಿ ಹೇಳಿದಂತೆ, ಮುಂಜಾನೆ ನಾವು ಎದ್ದಾಕ್ಷಣ ಏನನ್ನು ನೋಡಬೇಕು..? ಏನನ್ನು ಮಾಡಬೇಕು..? ಇಲ್ಲಿದೆ ವಿವರಗಳು..
ಸೂರ್ಯನಿಗೆ ಅರ್ಘ್ಯ ಅರ್ಪಿಸಿ
Image credits : astrosaathi.com
ಪ್ರತಿದಿನ ಮುಂಜಾನೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ ಆತನನ್ನು ಪೂಜಿಸುವುದರಿಂದ ಪೂರ್ತಿ ದಿನ ಖುಷಿಯಿಂದ ಇರಲು ಸಾಧ್ಯವಾಗುತ್ತದೆ. ಅಲ್ಲದೆ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದರಿಂದ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ಸೂರ್ಯನಿಗೆ ಸಂಬಂಧಿಸಿದ ದೋಷಗಳು ಸಹ ಕೊನೆಗೊಳ್ಳಲು ಪ್ರಾರಂಭಿಸುತ್ತವೆ. ಅಲ್ಲದೆ, ಸೂರ್ಯನಿಗೆ ಅರ್ಘ್ಯ ಕೊಡುವುದರಿಂದ ಮೂಳೆಗಳು ಮತ್ತು ಕಣ್ಣುಗಳ ಸಮಸ್ಯೆ ಕೊನೆಗೊಳ್ಳುತ್ತದೆ. ಇಡೀ ದಿನ ಶುಭಕರವಾಗಿ ಪರಿಣಮಿಸುತ್ತದೆ.
ಬೆಳಗ್ಗೆ ತುಳಸಿ ಪೂಜೆ ಮಾಡುವುದು ಉತ್ತಮ
Image Credits : Twitter
ಬೆಳಗ್ಗೆ ಎದ್ದಾಕ್ಷಣ ಸ್ನಾನ ಮಾಡಿ ತುಳಸಿ ಪೂಜೆ ಮಾಡುವುದು ಸೂಕ್ತ. ಹಿಂದೂ ಧರ್ಮದಲ್ಲಿ ತುಳಸೀ ಗಿಡವನ್ನು ಪವಿತ್ರವೆಂದು ನಂಬಲಾಗಿದೆ. ತುಳಸೀ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳುತ್ತಾರೆ. ಅಲ್ಲದೆ ಮುಂಜಾನೆ ಮಾಡುವ ತುಳಸಿಯ ಪೂಜೆ ಗ್ರಹಗಳ ದೋಷಗಳನ್ನು ತೆಗೆದುಹಾಕುತ್ತದೆ ಮತ್ತು ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎನ್ನುತ್ತಾರೆ. ಅಲ್ಲದೆ, ಜಾತಕದಲ್ಲಿ ಅವರ ಸ್ಥಾನವು ಬಲವಾಗಿರುತ್ತದೆ. ಪ್ರತಿದಿನ ತುಳಸಿ ಪೂಜೆ ಮಾಡುವುದರಿಂದ ಒಳಿತು ಮತ್ತು ಏಳಿಗೆ ಕಾಣುಬಹುದು. ತುಳಸಿ ಪೂಜೆಯನ್ನು ಸುಮಂಗಲಿಯರು ಮತ್ತು ಬಾಲಕಿಯರು ಪ್ರತಿದಿನ ತಪ್ಪದೇ ಮಾಡಬೇಕು ಎಂದು ಹೇಳುತ್ತಾರೆ.
ಮಂತ್ರವನ್ನು ಪಠಿಸಿ
Image credits : rgyan.com
ಬೆಳಗ್ಗೆ ದೇವರ ಪೂಜೆಯನ್ನು ಮಾಡುವಾಗ ದೇವರ ಮಂತ್ರ ಪಠಿಸುವುದು ಮುಖ್ಯ. ದುರ್ಗಾ ಸಪ್ತಶತಿಯ ಕವಾಚ, ಕೀಲಕ, ಅರ್ಗಲಾ ಸ್ತೋತ್ರವನ್ನು ಮುಂಜಾನೆ ಪಠಿಸುವುದು ಉತ್ತಮ. ಈ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಜಾತಕದಲ್ಲಿ ಬುಧ ಮತ್ತು ಶುಕ್ರನ ಸ್ಥಾನವು ಬಲಗೊಳ್ಳುತ್ತದೆ. ಹೀಗಾಗಿ ಸಂಪೂರ್ಣ ದಿನದ ತೊಂದರೆಗಳು ಪರಿಹಾರವಾಗಿ ಶುಭವೇ ಆಗುತ್ತದೆ, ದುರ್ಗಾ ದೇವಿಯ ಆಶೀರ್ವಾದದಿಂದ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ..
ಅರಳಿಮರಕ್ಕೆ ನೀರು ಎರೆಯಿರಿ
Image credits : Amarujala
ಹಿಂದೂ ಧರ್ಮದಲ್ಲಿ, ಅರಳಿ ಮರಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಆದ್ದರಿಂದ ಬೆಳಗ್ಗೆ ಎದ್ದಾಕ್ಷಣ ಅರಳಿ ಮರಕ್ಕೆ ನೀರು ಎರೆಯಬೇಕು ಎಂದು ಹೇಳುತ್ತಾರೆ. ಅರಳಿ ಮರವನ್ನು ಪೂಜಿಸುವ ಮೂಲಕ, ಜಾತಕದಲ್ಲಿ ಶನಿ ಮತ್ತು ರಾಹು ದೋಷವನ್ನು ಹೊಂದಿದ್ದರೆ ಅವರ ಕೆಟ್ಟ ಪರಿಣಾಮಗಳಿಂದ ಪರಿಹಾರ ಸಿಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರೊಂದಿಗೆ, ಅರಳಿ ಮರಕ್ಕೆ ನೀರು ಕೊಡುವುದರಿಂದ ವಿಷ್ಣುವಿನ ಆಶೀರ್ವಾದ ಕೂಡಾ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ಇನ್ನು, ಬೆಳಗ್ಗೆ ಎದ್ದಾಕ್ಷಣ ಮನೆಯಿಂದ ಹೊರ ಹೋಗುವ ಮೊದಲು ಅರಿಶಿನ ಅಥವಾ ಕೇಸರಿಯ ತಿಲಕವನ್ನಿಟ್ಟುಕೊಂಡು ಹೋಗುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ, ಬೃಹಸ್ಪತಿ ದೇವನ ಆಶೀರ್ವಾದ ಸಿಗುತ್ತದೆ ಮತ್ತು ಜಾತಕ ದೋಷ ಪರಿಹಾರವೇ ಶುಭವಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ತಿಲಕದ ಪ್ರಭಾವದಿಂದ ಇಡೀ ದಿನ ಯಾವುದೇ ಕೆಡುಕುಂಟಾಗುವುದಿಲ್ಲ ಬದಲಾಗಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ.
ಬೆಳಗ್ಗೆದ್ದು ಹಿರಿಯರು ಮಂತ್ರಗಳನ್ನು ಪಠಿಸುವುದರಿಂದ ದೀರ್ಘಾಯುಷಿಗಳಾಗುತ್ತಾರೆ. ಸ್ತ್ರೀಯರು ದೇವರ ಮಂತ್ರವನ್ನು ಪಠಿಸಿವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ವೈವಾಹಿಕ ಜೀವನವು ಉತ್ತಮಗೊಳ್ಳುತ್ತದೆ. ಎಲ್ಲಾ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ನಿಮ್ಮ ಕಾರ್ಯಗಳೆಲ್ಲವೂ ಸುಲಭವಾಗಿ ನೆರವೇರುತ್ತದೆ ಎಂದು ನಂಬಲಾಗುತ್ತದೆ. ಆದರೆ ಬೆಳಗ್ಗೆದ್ದು ಕನ್ನಡಿ, ಪೊರಕೆ, ಒಡೆದ ಪಾತ್ರೆಗಳನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3g4NrR8
June 03, 2021 at 09:21AM