ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಿಸಬೇಕು..?
ಹಿಂದೂ ಧರ್ಮವು ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧಾರ್ಮಿಕತೆ ಶ್ರೇಷ್ಠವಾದ ಪರಂಪರೆಯನ್ನು ಹೊಂದಿದೆ. ಇಲ್ಲಿ ಪೂಜೆ ಪುನಸ್ಕಾರಕ್ಕೆ ವಿಶೇಷ ಮಹತ್ವ ಇದೆ. ಅದರಲ್ಲೂ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ, ಹವನ-ಹೋಮಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಭಕ್ತಿ ಪೂರ್ವಕವಾಗಿ ನಡೆಸುವ ಪೂಜೆಗಳಿಂದ ಶಾಂತಿ, ನೆಮ್ಮದಿ, ಸಮೃದ್ಧಿ ಲಭಿಸುತ್ತದೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿಯೇ ಸಂಕಷ್ಟಗಳು ಬಂದಾಗ ಜನರು ದೇವರ ಮೊರೆ ಹೋಗುತ್ತಾರೆ. ವಿಶೇಷ ಪೂಜೆ ಸಲ್ಲಿಸುತ್ತಾರೆ. ಭಕ್ತಿಯಿಂದ ದೇವರನ್ನು ಪೂಜಿಸುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆಯಿದೆ
ಹಿಂದೂ ಧರ್ಮದ ಪೂಜಾ ವಿಧಿ-ವಿಧಾನಗಳಲ್ಲಿ ಹೂವುಗಳಿಗೆ ಪ್ರತ್ಯೇಕವಾದ ಸ್ಥಾನವನ್ನು ನೀಡಲಾಗಿದೆ. ದೇವರಿಗೆ ಹೂವುಗಳನ್ನು ಅರ್ಪಿಸದ ಹೊರತು ಯಾವುದೇ ಪೂಜೆ ಸಂಪನ್ನಗೊಳ್ಳುವುದಿಲ್ಲ ಎಂದು ನಂಬಲಾಗುತ್ತದೆ. ಶಾಸ್ತ್ರಗಳಲ್ಲಿ ಈ ಹೂವುಗಳನ್ನು ‘ದೈವಸ್ಯ ಮಸ್ತಕಂ ಕುರ್ಯಾತ್ಕುಸುಮೋಪಾಹಿತಾಂ ಸದಾ’ ಎಂದು ಬಣ್ಣಿಸಿದ್ದಾರೆ. ಅಂದರೆ ದೇವತೆಗಳ ಶಿರವು ಎಂದೆಂದಿಗೂ ಹೂವುಗಳಿಂದ ಅಲಂಕೃತಗೊಂಡಿರುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಪ್ರತಿಯೊಂದು ಹೂವುಗಳು ತನ್ನದೇ ಆದಂತಹ ವಿಶೇಷತೆಯನ್ನು ಒಳಗೊಂಡಿರುತ್ತದೆ. ಹಾಗಾಗಿ ದೇವತಾ ಕಾರ್ಯ, ಪೂಜೆ ಪುನಸ್ಕಾರ, ಆರತಿ ಮಾಡುವ ವೇಳೆ ಹೂವುಗಳಿಲ್ಲದಿದ್ದರೆ ಕೈಂಕರ್ಯವು ಪೂರ್ಣಗೊಳ್ಳುವುದಿಲ್ಲ.
ಆದರೆ ಪೂಜೆಯಲ್ಲಿ ದೇವರಿಗೆ ಹೂವು ಸಮರ್ಪಿಸುವ ಮೊದಲು, ಯಾವ ದೇವರಿಗೆ ಯಾವ ಹೂವು ಮುಖ್ಯ ಅನ್ನೋದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ವಾತಾವರಣದಲ್ಲಿ, ನಿರ್ದಿಷ್ಟ ದೇವರುಗಳು ಕೆಲವೊಂದು ಹೂವುಗಳಿಗೆ ಆಕರ್ಷಿತರಾಗಿರುತ್ತಾರೆ. ಅವರುಗಳು ಆವರ್ತನೆಗಳನ್ನು ಸ್ವೀಕರಿಸಿದಾಗ ಅದನ್ನು ಮರಳಿ ವಾತಾವರಣಕ್ಕೆ ಕಳುಹಿಸುತ್ತಾರೆ ಇದನ್ನು "ಪವಿತ್ರಕ" ಎಂದು ಕರೆಯಲಾಗುತ್ತದೆ.
ಯಾವ ಹೂವು ಯಾವ ದೇವರಿಗೆ ಪ್ರಿಯವಾಗುತ್ತದೆ..?
ಗಣಪತಿಗೆ ಅರ್ಪಿಸಬೇಕಾದ ಹೂವುಗಳು
Image credits : plantdecors.com
ಹಿಂದೂ ನಂಬಿಕೆಯ ಪ್ರಕಾರ ಗಣಪನಿಗೆ ತುಳಸಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಹೂವುಗಳನ್ನು ಸಮರ್ಪಿಸಬಹುದು. ಪದ್ಮ ಪುರಾಣದಲ್ಲಿ ' ನ ತುಳಸ್ಯ ಗಣಾಧಿಪಂ' ಎಂದೂ ಉಲ್ಲೇಖಿಸಲಾಗಿದೆ. ಇದರರ್ಥ ಗಣಪತಿಯನ್ನು ತುಳಸಿಯಿಂದ ಪೂಜಿಸುವಂತಿಲ್ಲ ಎಂಬುದಾಗಿದೆ. ಮುಖ್ಯವಾಗಿ ಗಣಪತಿಗೆ ಗರಿಕೆ ಹುಲ್ಲನ್ನು ಸಮರ್ಪಿಸುವ ಪದ್ದತಿ ನಮ್ಮಲ್ಲಿದೆ. ಯಾಕೆಂದರೆ ಗಣಪನಿಗೆ ಗರಿಕೆ ಶ್ರೇಷ್ಠ. ಸುಮಾರು ಐದರಿಂದ ಆರರಷ್ಟು ಗರಿಕೆ ಹುಲ್ಲನ್ನು ಗಣಪರಿಗೆ ನಿತ್ಯ ಅರ್ಪಿಸಿದರೆ ಬಹಳ ಒಳ್ಳೆಯದು. ಅಲ್ಲದೆ, ವಿಘ್ನವಿನಾಶಕನಿಗೆ ಬಿಳಿ ಎಕ್ಕದ ಹೂವನ್ನು ಅರ್ಪಿಸಿದರೆ ಸಂಕಷ್ಟಗಳನ್ನು ನಿವಾರಿಸಿ ಬಾಳು ಹಸನಾಗುವಂತೆ ಮಾಡುವನು ಎಂದು ನಂಬಲಾಗುತ್ತದೆ.
ಶಿವನಿಗೆ ಸಮರ್ಪಿಸುವ ಹೂವುಗಳು
Image Credits : Daily Hunt
ಉಮ್ಮತ್ತಿ ಹೂವು, ಪಾರಿಜಾತ, ನಾಗಕೇಸರ, ಸಹಸ್ರಪತ್ರೆ, ದರ್ಭೆ ಹಾಗೂ ಬಿಳಿ ಎಕ್ಕದ ಹೂವೆಂದರೆ ಶಿವದೇವರಿಗೆ ಬಹಳ ಪ್ರಿಯ. ಇದರ ಹೊರತಾಗಿ ತುಂಬೆ ಹೂವು, ಮಂದಾರ ಮತ್ತು ಕಣಗಿಲೆ ಹೂವು ಶಿವನಿಗೆ ತುಂಬಾ ಇಷ್ಟವಾಗಿದೆ. ಬಿಳಿ ಎಕ್ಕದ ಹೂವು, ಸಂಪಿಗೆ ಮತ್ತು ಲಿಂಗದ ಹೂವನ್ನು ಅರ್ಪಿಸಿದರೆ ಶಿವ ಪ್ರಸನ್ನನಾಗುವನು ಎಂದು ನಂಬಲಾಗುತ್ತದೆ. ಯಾವುದೇ ಬಿಳಿ ಹೂವು. ನೀಲಿ ತಾವರೆ, ಮಾಲುಶ್ರೀ, ಕನೀರ್. ಇತರ ಹೂವುಗಳಾದ ಬೇಲ ಎಲೆಗಳು, ದತ್ತೂರ ಹೂವನ್ನು ಶಿವನಿಗೆ ಅರ್ಪಿಸುತ್ತಾರೆ.
ಶಿವನಿಗೆ ಅರ್ಪಿಸುವ ಎಲ್ಲಾ ಹೂವುಗಳನ್ನು ಪಾರ್ವತಿ ದೇವಿಗೆ ಅರ್ಪಿಸಬಹುದು. ಪಾರ್ವತಿಗೆ ಸಲ್ಲಿಸುವ ಹೂವುಗಳನ್ನು ಲಲಿತ ಸಹಸ್ರನಾಮದಲ್ಲಿ ವಿವರಿಸಲಾಗಿದೆ. ಪಾರ್ವತಿ ದೇವಿಗೆ ಇಷ್ಟವಾಗುವ ದಾಸವಾಳ, ಚಂಪಕ, ಮಲ್ಲಿಗೆ, ಪುನ್ನಾಗ ಹೂವು ಮತ್ತು ದವನ, ಮರುಗವನ್ನು ಪೂಜೆಗೆ ಅರ್ಪಿಸಲಾಗುತ್ತದೆ. ಬಿಳಿ ತಾವರೆ, ಬೇಲ, ಪಲಾಶ್, ಮದಾರ್, ಅಪಮರ್ಗ್, ಚಂಪಾ ಮತ್ತು ಚಮೇಲಿಯನ್ನು ಬಳಸಬಹುದು.
ವಿಷ್ಣುವಿಗೆ ಪ್ರಿಯವಾದ ಹೂವುಗಳು
Image Credits : Rudraksha Ratna
ವಿಷ್ಣುವನ್ನು ಒಲಿಸಿಕೊಳ್ಳಲು ತುಳಸಿ ಬಹು ಮುಖ್ಯ. ಒಂದು ತುಳಸಿ ಎಲೆ ಆತನನ್ನು ಸಂತೋಷಗೊಳಿಸುತ್ತದೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ತುಳಸಿಯ ಹೊರತಾಗಿ ಪಾರಿಜಾತ, ಶಂಖಪುಷ್ಪ ಅಥವಾ ಅಪರಾಜಿತ, ಅಶೋಕ ಪುಷ್ಟ ಕಮಲ ಮುಂತಾದ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಬಹುದು. ವಿಷ್ಣುವಿಗೆ ತಾವರೆ ಎಂದರೆ ಬಲು ಪ್ರೀತಿ. ಕೆಂಪು ತಾವರೆ, ಮಾಲುಶ್ರೀ, ಜೂಹಿ, ಕದಂಬ, ಕೇವಾರ, ಚಮೇಲಿ, ಚಂಪಾ, ಅಶೋಕ, ಮಲ್ತಿ, ಬಸಂತಿ ಹೂವುಗಳನ್ನು ವಿಷ್ಣು ಪೂಜೆಗೆ ಬಳಸಬಹುದು. ಕಾರ್ತಿಕ ಮಾಸದಲ್ಲಂತೂ ನಾರಾಯಣನಿಗೆ ಕೇದಗೆಯ ಹೂವನ್ನು ಸಮರ್ಪಿಸಿದರೆ ಬಹಳ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆಯಿದೆ.
ಲಕ್ಷ್ಮೀ ದೇವಿಗೆ ಪ್ರಿಯ ತಾವರೆ
Image Credits : Pinterest
ಲಕ್ಷ್ಮಿ ದೇವಿಗೆ ಅತೀ ಪ್ರಿಯವಾದ ಹೂವೆಂದರೆ ಅದು ತಾವರೆ ಹೂವು. ಏಕೆಂದರೆ ಆಕೆ ಆಸೀನವಾದುದೇ ತಾವರೆಯ ಮಧ್ಯೆ. ಇದಲ್ಲದೇ, ಸೇವಂತಿಗೆ, ಕೇದಗೆ, ಸಂಪಿಗೆ ಮುಂತಾದುವನ್ನು ದೇವಿಗೆ ಅರ್ಪಿಸಬಹುದು. ಯಾವುದೇ ಹಳದಿ ಹೂವುಗಳನ್ನು ಕೂಡಾ ಅರ್ಪಿಸಬಹುದು. ಲಕ್ಷ್ಮೀ ದೇವಿಗೆ ಕೆಂಪು ಬಣ್ಣದ ಗುಲಾಬಿ ಎಂದರೆ ಬಹಳ ಇಷ್ಟ. ಸರಸ್ವತಿಗೆ ಬಿಳಿ ಕಮಲ, ಸುವಾಸನೆ ಬೀರುವ ಪಾರಿಜಾತವನ್ನು ಅರ್ಪಿಸಿದರೆ ಒಳ್ಳೆಯ ವಿದ್ಯೆ ಕರುಣಿಸುವಳು ಎಂದು ನಂಬಲಾಗುತ್ತದೆ. ಮಹಾಕಾಳಿಗೆ ಹಳದಿ ಕನೇರ ಹೂವನ್ನು ಅರ್ಪಿಸುತ್ತಾರೆ.
ತುಳಸೀ ಪ್ರಿಯ ಶ್ರೀಕೃಷ್ಣ
Image Credits : Pinterest
ತುಳಸಿ ಎಲೆಗಳು, ನೀಲಿ ತಾವರೆ, ಪಾರಿಜಾತ ಶ್ರೀಕೃಷ್ಣನಿಗೆ ಬಲುಪ್ರಿಯ. ಮಹಾಭಾರತದಲ್ಲಿ ಯುಧಿಷ್ಟಿರನಿಗೆ ಶ್ರೀಕೃಷ್ಣನು ನನಗೆ ಕುಮುದಾ, ಮಾಲತಿ ಲತೆ, ಚನಕ್, ಮುತ್ತುಗ ಹೂವುಗಳೆಂದರೆ ಬಹಳ ಇಷ್ಟ ಎಂದು ಹೇಳುವ ಉಲ್ಲೇಖವಿದೆ. ಹಾಗಾಗಿ ಶ್ರೀ ಕೃಷ್ಣನ ಭಕ್ತರು ಕೂಡ ತಮ್ಮ ಇಷ್ಟ ದೇವರಿಗೆ ಈ ಮೇಲಿನ ಹೂವುಗಳಿಂದ ಪೂಜೆ ಮಾಡಿದರೆ ಬಹಳ ಒಳ್ಳೆಯದು
ದುರ್ಗಾ ದೇವಿ, ಕಾಳೀಮಾತೆ ಪ್ರಿಯ ಹೂವುಗಳು
Image Credits : The Daily Star
ದುರ್ಗಾ ಮಾತೆ ಎಂದರೆ ಶಕ್ತಿ ಹಾಗೂ ಬೆಂಕಿಯ ಪ್ರತೀಕ.ಹಾಗಾಗಿ ಬಣ್ಣಗಳಲ್ಲಿ ಕೆಂಪು ಬಣ್ಣವೆಂದರೆ ಶಕ್ತಿಯ ಪ್ರತೀಕ. ಹಾಗಾಗಿ ದುರ್ಗಾ ಮಾತೆಗೆ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ದುರ್ಗೆಗೆ ಕೆಂಪು ಬಣ್ಣದ ಎಲ್ಲ ಹೂವುಗಳೂ ಇಷ್ಟ. ದಾಸವಾಳ, ಅಶೋಕ ಪುಷ್ಪ, ಕಣಗಿಲೆ ಹೂವನ್ನು ದುರ್ಗೆಗೆ ಅರ್ಪಿಸಲಾಗುತ್ತದೆ. ಎಲ್ಲಾ ಕೆಂಪು ಹೂವುಗಳು. ತಾವರೆ, ಮೋಗ್ರಾ ಹೂವು, ಬೇಲಾ ಹೂವುಗಳನ್ನು ಅರ್ಪಿಸಬಹುದು. ಕಾಳಿಮಾತೆಗೆ 108 ದಾಸವಾಳವನ್ನು ರ್ಪಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂದು ನಂಬಲಾಗುತ್ತದೆ.
ವೀಳ್ಯದೆಲೆ ಹಾರ ಪ್ರಿಯ ಹನುಮ
Image Credits : Pinterest
ಹನುಮನಿಗೆ ತುಳಸಿಹಾರ ಮತ್ತು ವೀಳ್ಯದೆಲೆಯ ಹಾರವನ್ನು ಹಾಕಿದರೆ ಒಳಿತನ್ನು ಕರುಣಿಸುವನು ಎಂದು ಹೇಳುತ್ತಾರೆ. ಹನುಮಂತ ಎಂದರೆ ಭಕ್ತಿ, ಶಕ್ತಿ ಹಾಗೂ ಧೈರ್ಯ ದ ಪ್ರತೀಕ. ಹಾಗಾಗಿ ಕೆಂಪು ಬಣ್ಣವು ಈ ಎಲ್ಲ ವಿಚಾರಗಳಿಗೆ ಸೂಕ್ತವಾದುದು.ಅಲ್ಲದೇ ಹನುಮಂತನಿಗೆ ಕೆಂಪು ಗುಲಾಬಿ ಎಂದರೆ ಬಹಳ ಅಚ್ಚುಮೆಚ್ಚು.ಹಾಗಾಗಿ ಕೆಂಬಣ್ಣದ ಗುಲಾಬಿ ಅಥವಾ ಇನ್ನಿತರ ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬಹುದು. ಕಡು ಬಣ್ಣದ ಎಲ್ಲಾ ರೀತಿಯ ಹೂವುಗಳೆಂದರೆ ಶನಿದೇವರಿಗೆ ಪ್ರಿಯ. ಹಾಗಾಗಿ ಕಡು ಬಣ್ಣದ ಅಥವಾ ಕಡು ನೀಲಿ ಬಣ್ಣದ ಹೂವುಗಳನ್ನು ಅರ್ಪಿಸಿದರೂ ಶನಿದೇವನು ಸಂತುಷ್ಟನಾಗುತ್ತಾನೆ.
ಈ ರೀತಿ ಆಯಾ ದೇವರಿಗೆ ನಿರ್ಧಿಷ್ಟ ಹೂವು ಅರ್ಪಿಸುವುದರ ಹಿಂದೆ ವೈಜ್ಞಾನಿಕ ಸತ್ಯವೂ ಅಡಗಿದೆ. ಪ್ರತಿಯೊಂದು ಹೂವು ಕೂಡಾ ತನ್ನದೇ ಆದ ಸುವಾಸನೆ ಮತ್ತು ಬಣ್ಣವನ್ನು ಒಳಗೊಂಡಿದೆ. ಅಂದರೆ ಪ್ರತಿಯೊಂದು ಹೂವಿನ ಆವರ್ತನೆ ಶಕ್ತಿ ವಿಭಿನ್ನವಾಗಿದೆ. ನಿರ್ದಿಷ್ಟ ದೇವರುಗಳ ದೈವಿಕ ಶಕ್ತಿಯನ್ನು ನಿರ್ದಿಷ್ಟ ಹೂವುಗಳು ಹೀರಿಕೊಳ್ಳುತ್ತವೆ ಎಂದು ಸಹ ಹೇಳಲಾಗುತ್ತದೆ.
Featured Image Credits : Garden Collage
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv
June 15, 2021 at 08:28PM