ಪ್ರಾಚೀನ ಕಾಲದ ಹತ್ತು ಹೆಸರುವಾಸಿ ಆಯುಧಗಳು ಯಾವುವು ಗೊತ್ತಾ..? ಇಲ್ಲಿದೆ ಮಾಹಿತಿ
Featured Image Credits : done3d.com
ಭೂಮಿಯಲ್ಲಿ ಮಾನವನ ಉಗಮವಾದಾಗಿನಿಂದಲೂ ಮನುಷ್ಯ ಹೊಸ ಹೊಸತನ್ನು ಆವಿಷ್ಕರಿಸುತ್ತಲೇ ಬಂದಿದ್ದಾನೆ. ಮನುಷ್ಯನ ಅಗತ್ಯ, ಅನುಕೂಲಗಳಿಗೆ ತಕ್ಕಂತೆ ನವೀನ ವಸ್ತುಗಳು ಆವಿಷ್ಕರಿಸಲ್ಪಟ್ಟಿವೆ. ದಿನನಿತ್ಯದ ಜೀವನದ ಚಟುವಟಿಕೆಗಳು ಸುಲಭವಾಗಲು ಮನುಷ್ಯ ಈ ಹೊಸ ಆವಿಷ್ಕಾರಗಳನ್ನು ಬಳಸಿಕೊಂಡಿದ್ದಾನೆ. ನಂತರ ದಿನಗಳಲ್ಲಿ ಮನುಷ್ಯನ ಈ ಸಣ್ಣ ಪುಟ್ಟ ಆವಿಷ್ಕಾರಗಳೇ ದೊಡ್ಡ ಮಟ್ಟಿಗೆ ಸಹಾಯವಾಗಿವೆ. ಈ ರೀತಿ ಪ್ರಾಚೀನ ಕಾಲದಲ್ಲಿ ಮನುಷ್ಯ ಆವಿಷ್ಕರಿಸಿರುವುದರಲ್ಲಿ ಮುಖ್ಯವಾದುದು ಆಯುಧಗಳು.
ಪುರಾತನ ಕಾಲದಲ್ಲಿ ಮಾನವ ನಿರ್ಮಿತ ಆಯುಧಗಳ ಬಳಕೆ ಆರಂಭವಾಯಿತು ಎಂದು ತಿಳಿದುಬಂದಿದೆ. ದಿನನಿತ್ಯದ ಅಗತ್ಯಗಳಿಗಾಗಿ ಮಾನವ ಕಲ್ಲುಗಳ ಆಯುಧಗಳನ್ನು ಆವಿಷ್ಕರಿಸಲು ಆರಂಭಿಸಿದ. ಕಲ್ಲಿನ ಆಯುಧಗಳಿಗೂ ಮುಂಚೆ, ಕಲ್ಲಿಗಿಂತಲೂ ಮೃದುವಾದ ಮತ್ತು ಸುಲಭವಾಗಿ ರೂಪಿಸಬಹುದಾದ ಮೂಳೆ ಮತ್ತು ಮರಗಳ ಆಯುಧಗಳನ್ನು ಬಳಸಲು ಯತ್ನಿಸಿರಬಹುದು ಎಂದು ಊಹಿಸಲಾಗುತ್ತದೆ. ಮನುಷ್ಯರ ಸಂಖ್ಯೆ ಹೆಚ್ಚುತ್ತಾ ಹೋದಂತೆಲ್ಲಾ ಗಲಾಟೆ, ಸಂಘರ್ಷಗಳು ಹೆಚ್ಚಾದವು. ಈ ಸಂದರ್ಭದಲ್ಲಿ ರಕ್ಷಣೆಗಾಗಿ, ದಾಳಿ ಮಾಡಲು ಆಯುಧಗಳ ಬಳಕೆ ಮಾಡುವುದು ಅಗತ್ಯವಾಗಿ ಹೋಯಿತು. ಅದರ ಬೆನ್ನಲ್ಲೇ ಮಾನವ ಭಿನ್ನ-ವಿಭಿನ್ನ ಆಯುಧಗಳನ್ನು ತಯಾರಿಸಲು ತೊಡಗಿದ.
ರೋಮನ್ ಸೀಸರ್, ಶುರಿಕೇನ್, ಭಾಗ್ ನಾಕ್, ಮಡು, ಹೈಪಾಸ್ ಪಿಸ್ಟ್, ಜುವಾ, ಶೊಟೇಲ್, ಕೊಫೇಶ್, ಸ್ಪಾರ್ಟನ್ ಹೋಪ್ಲೋನ್ ಶೀಲ್ಡ್, ಫ್ಲೇಮಿಂಗ್ ಏರೋಸ್ ಪುರಾತನ ಕಾಲದ ಕೆಲವು ಆಯುಧಗಳಾಗಿವೆ.
1. ರೋಮನ್ ಸೀಸರ್
Image Credits : ancienthistorylists.com
ಹೆಸರೇ ಸೂಚಿಸುವಂತೆ ರೋಮನ್ ಕಾಲದ ಆಯುಧವಾಗಿರುವ ರೋಮನ್ ಸೀಸರ್ ನ್ನು ಗ್ಲಾಡಿಯೇಟರ್ ಗಳು ಹೆಚ್ಚಾಗಿ ಬಳಸುತ್ತಿದ್ದರು. ಈ ಆಯುಧದಲ್ಲಿ ಎರಡು ಭಾಗವಿದ್ದು, ಹರಿತವಾದ ಆಯುಧ ಮತ್ತು ಆಯುಧದ ಹಿಡಿಗೆಗೆ ಸಿಲಿಂಡರ್ ಆಕಾರದ ಹಿಡಿಯನ್ನು ಇರಿಸಲಾಗುತ್ತಿತ್ತು. ವಿಚಿತ್ರ ಶೈಲಿಯಲ್ಲಿರುವ ಈ ಆಯುಧ, ಗ್ಲಾಡಿಯೇಟರ್ ಗಳು ತಮ್ಮ ಶತ್ರುಗಳಾದ ರಿಟಾರಿಯಸ್ ಜನರ ಜತೆ ಹೋರಾಡಲು ಹೆಚ್ಚು ಉಪಯೋಗಕ್ಕೆ ಬರುತ್ತಿತ್ತು. ಯಾಕೆಂದರೆ ರಿಟಾರಿಯಸ್ ಜನಾಂಗದವರು ದಾಳಿ ಮಾಡುವ ಬಲೆಯಂತಹಾ ಸಾಧನವನ್ನು ಬಳಸುತ್ತಿದ್ದರು. ಈ ರೋಮನ್ ಸೀಸರ್ ನಿಂದ ಇಂಥಹಾ ಬಲೆಯನ್ನು ಸುಲಭವಾಗಿ ಕತ್ತರಿಸಲು ಸಾಧ್ಯವಾಗುತ್ತಿತ್ತು.
2. ಶುರಿಕೇನ್

Image Credits : ancienthistorylists.com
ಶುರಿಕೇನ್ ಎಂದರೆ ಪ್ರಸಿದ್ಧವಾದ ಜಪಾನ್ ಆಯುಧ. ನಿಂಜಾ ಸ್ಟಾರ್ ಈ ಶುರಿಕೇನ್ ಬಳಸುತ್ತಿದ್ದ ಎಂದು ಹೇಳಲಾಗುತ್ತದೆ. ಮತ್ತೊಬ್ಬರ ಮೇಲೆ ದಾಳಿ ಮಾಡುವುದಕ್ಕಿಂತ ಹೆಚ್ಚಾಗಿ ಸ್ವ-ರಕ್ಷಣೆಗಾಗಿ ಈ ಆಯುಧವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಶುರಿಕೇನ್ ಆಯುಧದಲ್ಲಿ ಹಲವು ವಿಧಗಳಿವೆ. ಅದರಲ್ಲೂ ಹೀರಾ ಶುರಿಕೇನ್ ಅನ್ನುವುದು ಹೆಚ್ಚು ಹೆಸರುವಾಸಿಯಾಗಿದೆ. ಇದೊಂದು ಪಾಯಿಂಟೆಡ್ ಆಯುಧವಾಗಿದ್ದು, ಸ್ಟಾರ್ ಶೇಪ್ ನಲ್ಲಿದ್ದು ಚೂಪಾದ ಬದಿಗಳನ್ನು ಹೊಂದಿದೆ. ಶಾರ್ಪ್ ಆದ ಎಡ್ಜ್ ಇರುವ ಮೆಟಲ್, ಕಾಯಿನ್ ಗಳನ್ನು ಬಳಸಿ ಈ ಆಯುಧಗಳನ್ನು ತಯಾರಿಸಲಾಗುತ್ತಿತ್ತು. ಶುರಿಕೇನ್ ಮತ್ತೊಬ್ಬರ ಮೇಲೆ ಬಳಸುವುದಿರಂದ ಕಣ್ಣು, ಮುಖ, ಕೈಗಳು ಕತ್ತರಿಸಲ್ಪಡುವ ಸಾಧ್ಯತೆಯಿರುವುದರಿಂದ ಈ ಆಯುಧ ಹೆಚ್ಚು ಅಪಾಯಕಾರಿಯಾಗಿದೆ.
3.ಭಾಗ್ನಾಕ್

Image Credits : ancienthistorylists.com
ಭಾಗ್ನಾಕ್ ಅನ್ನುವ ಈ ಆಯುಧವನ್ನು ಭಾಗ್ ನಾಕಾ ಎಂದು ಸಹ ಕರೆಯುತ್ತಾರೆ. ಅಂದರೆ ಹುಲಿಯ ಉಗುರುಗಳು ಎಂದರ್ಥ. ಈ ಆಯುಧ ಹುಲಿಯ ಉಗುರುಗಳನ್ನು ಹೋಲುವ ಕಾರಣ ಇದನ್ನು ಭಾಗ್ ನಾಕ್ ಎಂದು ಕರೆಯುತ್ತಾರೆ. ಪುರಾತನ ಕಾಲದಲ್ಲೇ ಈ ಭಾಗ್ನಾಕ್ ಆಯುಧದ ಬಳಕೆ ಮಾಡಲಾಗುತ್ತಿತ್ತು. ಈ ಆಯುಧದಲ್ಲಿ ನಾಲ್ಕರಿಂದ ಐದು ಬೆಂಡಾದ ಬ್ಲೇಡ್ ಇರುತ್ತದೆ. ಆಯುಧದ ಎರಡೂ ಬದಿಯಲ್ಲಿ ಎರಡು ರಂಧ್ರಗಳಿದ್ದು, ಬೆರಳುಗಳನ್ನು ಈ ರಂಧ್ರದಲ್ಲಿಟ್ಟು ಅಂಗೈಯಲ್ಲಿ ಆಯುಧವನ್ನಿರಿಸಿ ಇದನ್ನು ಪ್ರತಿದಾಳಿಯ ಸಂದರ್ಭದಲ್ಲಿ ಬಳಸಲಾಗುತ್ತದೆ. ನಂತರ ದಿನಗಳಲ್ಲಿ ಈ ಆಯುಧದ ತುದಿಗೆ ಚೂರಿಯಂತಹಾ ಸಣ್ಣ ಆಯುಧವನ್ನು ಸಹ ಸೇರಿಸಲಾಯಿತು. ಇದು, ಶತ್ರುಗಳು ಆಕ್ರಮಣ ಮಾಡುವ ಸಂದರ್ಭದಲ್ಲಿ ಅವರಿಗೆ ಚುಚ್ಚಿ ಸ್ವಯಂ ರಕ್ಷಣೆ ಮಾಡಿಕೊಳ್ಳಲು ನೆರವಾಗುತ್ತಿತ್ತು.
4. ಮಡು

Image Credits : pinterest
ಇದು ಪ್ರಾಚೀನ ಭಾರತದ ಅತ್ಯಂತ ಹಳೆಯ ಆಯುಧ. ಜನಸಾಮಾನ್ಯ ಭಾಷೆಯಲ್ಲಿ ಮರು ಎಂದು ಸಹ ಇದನ್ನು ಕರೆಯುತ್ತಾರೆ. ಬ್ಲ್ಯಾಕ್ ಬಕ್ ಪ್ರಾಣಿಯ ಕೊಂಬಿನಿಂದ ಈ ಆಯುಧವನ್ನು ತಯಾರಿಸಲಾಗುತ್ತಿತ್ತು. ಕ್ರಾಸ್ ಬಾರ್ ನಂತಿರುವ ಹ್ಯಾಂಡಲ್ ನ್ನು ಇದಕ್ಕೆ ಅಳವಡಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಈ ಆಯುಧವನ್ನು ಸ್ಟೀಲ್ ನಿಂದ ತಯಾರಿಸಲು ಆರಂಭಿಸಲಾಯಿತು. ದಕ್ಷಿಣಭಾರತದಲ್ಲಿ ಈ ಆಯುಧ ಹೆಚ್ಚಾಗಿ ಕಂಡು ಬಂದಿದ್ದು, ಶತ್ರುಗಳು ದಾಳಿ ಮಾಡುವಾಗ ಪ್ರತಿದಾಳಿ ಮಾಡಲು ಮತ್ತು ರಕ್ಷಾಕವಚದಂತೆ ಗುರಾಣಿಯ ರೀತಿ ಈ ಆಯುಧವನ್ನು ಬಳಸಲಾಗುತ್ತಿತ್ತು.
5. ಹೈಪಾಸ್ ಪಿಸ್ಟ್
Image credits : Google sites
ಇದು ಪುರಾತನ ಕಾಲದ ಹಳೆಯ ಆಯುಧಗಳಂತಲ್ಲ. ಈ ಆಯುಧದ ಹೆಸರು ಸೈನಿಕರ ಗುಂಪಾಗಿದೆ. ಅಲೆಕ್ಸಾಂಡರ್ ಸೈನ್ಯದಲ್ಲಿರುವ ಸೈನಿಕರ ಗುಂಪನ್ನು ಹೈಪಾಸ್ ಪಿಸ್ಟ್ ಎಂದು ಕರೆಯಲಾಗುತ್ತಿತ್ತು. ಹೈಪಾಸ್ ಪಿಸ್ಟ್ ಎಂಬ ಗ್ರೀಕ್ ಪದದ ಅರ್ಥ ಗುರಾಣಿಧಾರಕ ಎಂಬುದಾಗಿದೆ. ಈ ಗುರಾಣಿಧಾರಕರು ಶಕ್ತಿ, ಚುರುಕುತನ, ಅತೀವ ಧೈರ್ಯಕ್ಕೆ ಹೆಸರುವಾಸಿಯಾಗಿದ್ದರು. ಆ ಗುಂಪಿನ ಹಲವರು ರಾಜನ ಅಂಗರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹೈಪಾಸ್ ಪಿಸ್ಟ್ ಸೈನಿಕರು ಬೆಳ್ಳಿಯ ಕವಚಗಳನ್ನು ಧರಿಸುತ್ತಿದ್ದ ಕಾರಣ, ಇವರನ್ನು ಸಿಲ್ವರ್ ಶೀಲ್ಡ್ಗಳು ಎಂದೂ ಕರೆಯಲಾಗುತ್ತಿತ್ತು. ಸೈನ್ಯದಲ್ಲಿರುವ ಅನುಭವಕ್ಕೆ ತಕ್ಕಂತೆ ಈ ಬೆಳ್ಳೆಯ ಕವಚಗಳನ್ನು ನೀಡಲಾಗುತ್ತಿತ್ತು.
6.ಜುಹಾ

Image credits : Top Ancient History
ಜುಹಾ ಹಳೆಯ ಕಾಲದಲ್ಲಿ ಬಳಕೆಯಲ್ಲಿದ್ದ ಚೈನೀಸ್ ಆಯುಧವಾಗಿದೆ ಜುಹಾ. ಚರಿತ್ರೆಯಲ್ಲಿರುವ ಅಸಾಧಾರಣ ಆಯುಧ ಇದಾಗಿದೆ. ಚೈನೀಸ್ ಭಾಷೆಯಲ್ಲಿ ಜುಹಾ ಎಂದರೆ ಪ್ರಾಣಿಯ ಕಾಲುಗಳು ಎಂಬರ್ಥವಿದೆ. ಈ ಆಯುಧ ಉಗುರಿನಂತಹಾ ಆಕೃತಿಯನ್ನು ಹೊಂದಿದ್ದು, ಆಯುಧದ ಬದಿಗಳಲ್ಲಿ ಶಾರ್ಪ್ ಬ್ಲೇಡ್ನ್ನು ಅಳವಡಿಸಲಾಗಿರುತ್ತದೆ. ಆಯುಧಕ್ಕೆ ಉದ್ದವಾದ ಹಿಡಿಯಿರುವುದು ವಿಶೇಷ. ಶತ್ರುಗಳ ರಕ್ಷಣಾಕವಚ, ಆಯುಧಗಳನ್ನು ಅವರಿಂದ ಕಿತ್ತೆಸೆಯಲು ಈ ಆಯುಧವನ್ನು ಬಳಸಲಾಗುತ್ತಿತ್ತು. ಅತಿಯಾದ ಭಾರವಿರುವ ಈ ಆಯುಧ ಸಮರ್ಪಕವಾಗಿ ಬಳಸಲ್ಪಟ್ಟರೆ ಎದುರಿಗಿರುವ ವ್ಯಕ್ತಿ ಆಯುಧ ಬೀಸಿದ ಒಂದೇ ಏಟಿಗೆ ಸಾವನ್ನಪ್ಪುತ್ತಿದ್ದ. ಆಯುಧದಲ್ಲಿರುವ ಚೂಪಾದ ಉಗುರಿನಂತಹಾ ಹರಿತ ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು.
7. ಶೋಟೆಲ್

Image Credits : Ancient origin
ಅಂದು ಅಭ್ಯಸಿನಿಯಾ, ಇಂದು ಇಥಿಯೋಪಿಯಾ ಎಂದು ಕರೆಯಲ್ಪಡುತ್ತಿರುವ ದೇಶದಲ್ಲಿ ಈ ಆಯುಧದ ಬಳಕೆ ಆರಂಭವಾಯಿತು. ಶೋಟೆಲ್ ಬೆಂಡಾಗಿರುವ ಖಡ್ಗದಂತಹಾ ಆಯುಧವಾಗಿದೆ. ಸೈನಿಕರು ಈ ಶೋಟೆಲ್ ಆಯುಧಗಳನ್ನು ಬಳಸುತ್ತಿದ್ದರು. ಅರೆ ಬೆಂಡಾಗಿರುವ ಈ ಆಯುಧ ಬೀಸಿದರೆ ಶ್ವಾಸಕೋಸ ಮತ್ತು ಕಿಡ್ನಿಯ ಮೇಲೆಯೇ ಹಾನಿಯಾಗುತ್ತಿತ್ತು. ಎದುರಾಳಿಯ ತಲೆಯ ಶಿರಸ್ತ್ರಾಣವನ್ನು ಈ ಅಸ್ತ್ರ ಬಳಸಿ ಸುಲಭವಾಗಿ ಚಿಮ್ಮಿಸಬಹುದಿತ್ತು. ಈ ಆಯುಧದ ಬ್ಲೇಡ್ ತೆಳುವಾಗಿದ್ದು, 40 ಇಂಚಸ್ ಉದ್ದವಾಗಿರುತ್ತಿತ್ತು. 19ನೇ ಶತಮಾನದಲ್ಲಿ ಈ ಆಯುಧಗಳ ಬಳಕೆಯಾಗುತ್ತಿತ್ತು ಎಂದು ಹೇಳಲಾಗುತ್ತದೆ.
8.ಕೊಫೇಶ್

Image Credits : weAfrique
ಹಳೆಯ ಈಜಿಪ್ಟ್ನಲ್ಲಿ ದೊರಕಿರುವ ಕೊಫೇಶ್ ಆಯುಧ ಕುಡುಗೋಲನ್ನು ಹೋಲುತ್ತದೆ. ಕೊಫೇಶ್ ಆಯುಧವನ್ನು ಈಜಿಪ್ಟ್ ನಲ್ಲಿ ಹೆಚ್ಚಾಗಿ ಬಳಸುತ್ತಿರಲ್ಲಿಲ್ಲ. ಕಠಾರಿಗಳು, ಸಣ್ಣ ಖಡ್ಗಗಳು ಇಲ್ಲದ ಸಮಯದಲ್ಲಿ ಪರ್ಯಾಯವಾಗಿ ಈ ಕುಡುಗೋಲಿನಂತಹಾ ಆಯುಧವನ್ನು ಬಳಸಲಾಗುತ್ತಿತ್ತು. ಈ ಆಯುಧ 50ರಿಂದ 60 ಸೆಂಟಿಮೀಟರ್ ನಷ್ಟು ಉದ್ದವಿರುತ್ತಿತ್ತು. ಆಯುಧದ ಒಳಭಾಗ ಹಾಗೂ ಹೊರಭಾಗ ಬಹಳ ಚೂಪಾಗಿದ್ದು, ಹರಿತವಾದ ತುದಿಯನ್ನು ಹೊಂದಿದೆ. ಈ ಆಯುಧವನ್ನು ಹೆಚ್ಚಾಗಿ ಕಬ್ಬಿಣ ಅಥವಾ ಕಂಚಿನಿಂದ ತಯಾರಿಸಲಾಗುತ್ತಿತ್ತು.
9. ಸ್ಪಾರ್ಟನ್ ಹೋಪ್ಲೋನ್ ಶೀಲ್ಡ್

Image Credits : Pinterest
ಸ್ಪಾರ್ಟನ್ಸ್ ಎಂದು ಕರೆಯಲ್ಪಡುವ ಸೈನಿಕರು ಈ ಆಯುಧಗಳನ್ನು ಬಳಸುತ್ತಿದ್ದರು. ಸ್ಪಾರ್ಟನ್ಸ್ ಆಯುಧಗಳು ವೃತ್ತಾಕಾರದಲ್ಲಿರುವ ಗುರಾಣಿಗಳಂತಹಾ ಆಯುಧವಾಗಿದೆ. ಇದನ್ನು ಹೋಪ್ಲೋನ್ಸ್ ಅಥವಾ ಆಸ್ಪೀಸ್ ಎಂದು ಸಹ ಕರೆಯುತ್ತಿದ್ದರು. ಮರ ಅಥವಾ ಕಂಚಿನಿಂದ ಈ ಆಯುಧಗಳನ್ನು ತಯಾರಿಸಲಾಗುತ್ತಿತ್ತು. ಸುಮಾರು 30 ಪೌಂಡ್ನಷ್ಟು ಭಾರವಿರುವ ಈ ಆಯುಧ, 3 ಫೀಟ್ ಅಗಲವಿರುತ್ತಿತ್ತು. ಈ ಗುರಾಣಿಯ ವಿಶೇಷತೆಯೆಂದರೆ ಇದನ್ನು ಹಿಡಿಯುವ ರೀತಿ. ಸ್ಪಾರ್ಟನ್ ಆಯುಧದ ಹಿಡಿಯ ಮಧ್ಯೆ ಚರ್ಮದಿಂದ ಮಾಡಿದ ಹೊದಿಕೆಯಿರುತ್ತಿತ್ತು. ಇದರಿಂದಾಗಿ ಯುದ್ಧದ ಸಂದರ್ಭ ಈ ಗುರಾಣಿಯನ್ನು ಸುಲಭವಾಗಿ ಅತ್ತಿತ್ತ ತಿರುಗಿಸಲು ಸೈನಿಕರಿಗೆ ಸಾಧ್ಯವಾಗುತ್ತಿತ್ತು. ರಕ್ಷಣಾಕವಚವಾಗಿ ಈ ಸ್ಪಾರ್ಟನ್ ಹೋಪ್ಲೋನ್ ಶೀಲ್ಡ್ನ್ನು ಬಳಸಲಾಗುತ್ತಿತ್ತು.
10. ಫ್ಲೇಮಿಂಗ್ ಏರೋಸ್ (ಬೆಂಕಿಯ ಬಾಣಗಳು)
Image Credits : Quora
ಮಧ್ಯಕಾಲ ಯುಗದಲ್ಲಿ ಬೆಂಕಿಯ ಬಾಣಗಳು ಅಥವಾ ಫ್ಲೇಮಿಂಗ್ ಏರೋಸ್ ಆಯುಧಗಳ ಬಳಕೆಯಿತ್ತು. ರೋಮನ್ಸ್, ಅಸ್ಸಿಯೆನ್ಸ್, ಜುಡಿಯನ್ಸ್ ಮೊದಲಾದವರು ಈ ಬೆಂಕಿಯ ಬಾಣಗಳನ್ನು ಉಪಯೋಗಿಸುತ್ತಿದ್ದರು. ಈ ಆಯುಧವನ್ನು ಚೀನಾ ದೇಶದಲ್ಲಿ ಸಾಂಗ್ ರಾಜ್ಯಭಾರದ ಸಮಯದಲ್ಲಿ ಕಂಡು ಹಿಡಿಯಲಾಗಿತ್ತು. ಜಪಾನೀಸ್ ಮತ್ತು ಕೊರಿಯನ್ಸ್ ಹೆಚ್ಚಾಗಿ ಈ ಬೆಂಕಿಯ ಬಾಣಗಳನ್ನು ಉಪಯೋಗಿಸುತ್ತಿದ್ದರು. ಬಾಣಗಳ ತುದಿಗೆ ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಇರಿಸಲಾಗುತ್ತಿತ್ತು. ಮರದ ಮೇಲೆ ಈ ಬಾಣವನ್ನು ಉಪಯೋಗಿಸಿದರೆ ಸುಲಭವಾಗಿ ಸುಟ್ಟು ಹೋಗುತ್ತಿತ್ತು. ಚೈನೀಸರು ತಯಾರಿಸಿದ ಫ್ಲೇಮಿಂಗ್ ಏರೋಸ್ಗಳ ತುದಿಗೆ ನಂತರದ ದಿನಗಳಲ್ಲಿ ಗನ್ಪೌಡರ್ನ್ನು ಸೇರಿಸಲು ಆರಂಭಿಸಿದರು. ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿತ್ತು.
ಪುರಾತನ ಕಾಲದ ಈ ಎಲ್ಲಾ ಆಯುಧಗಳ ಪರಿಚಯದಿಂದ ತಿಳಿಯುವುದೇನೆಂದರೆ ಪ್ರಾಚೀನ ಕಾಲದ ಆಯುಧಗಳು ತಮ್ಮದೇ ಆದ ವೈಶಿಷ್ಟ್ಯತೆಯಿಂದ ಕೂಡಿರುವುದು ಮಾತ್ರವಲ್ಲ ಬಹಳ ಅಪಾಯಕಾರಿಯೂ ಆಗಿದ್ದವು. ನಂತರದ ದಿನಗಳಲ್ಲಿ ಹೊಸ ಹೊಸ ಆಯುಧಗಳ ಆವಿಷ್ಕಾರ, ಗನ್ ಪೌಡರ್, ಬಾಂಬ್ ಕಂಡುಹಿಡಿಯುವಿಕೆಯೊಂದಿಗೆ ಹಳೆಯ ಕಾಲದ ಆಯುಧಗಳು ಬಳಕೆ ಕಡಿಮೆಯಾಗಿ ತೆರೆಮರೆಗೆ ಸರಿದವು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3fTIlIl
June 06, 2021 at 11:03AM
