ಮನೆಯಿಂದ ಹೊರ ಹೋಗುವಾಗ ಮೊಸರು, ಸಕ್ಕರೆ ತಿನ್ನಿಸುವುದು ಯಾಕೆ..?

Image Credits : Boldsky
ಭಾರತೀಯ ಸಂಸ್ಕೃತಿಯಲ್ಲಿ ಕೆಲವೊಂದು ಪದ್ಧತಿಗಳು ಅದೆಷ್ಟೋ ವರ್ಷಗಳಿಂದ ಪಾಲನೆಯಾಗುತ್ತಲೇ ಬರುತ್ತಿದೆ. ಬೆಳಗ್ಗೆ, ಸಂಜೆಯ ಹೊತ್ತು ಮನೆಯಲ್ಲಿ ದೀಪ ಬೆಳಗುವುದು, ನಿಯಮಿತವಾಗಿ ಪೂಜೆ ಪುನಸ್ಕಾರ ಮಾಡುವುದು, ಯಶಸ್ಸು ಸಿಕ್ಕಾಗ ಸಿಹಿ ತಿನ್ನುವುದು, ಚಪ್ಪಲಿಯನ್ನು ಮನೆಯಿಂದ ಹೊರಗೆ ಬಿಡುವುದು ಹೀಗೆ ಹಲವಾರು ಪದ್ಧತಿಗಳಿವೆ. ಕೆಲವೊಂದು ಆಚರಣೆಗಳ ಅರ್ಥವನ್ನು ತಿಳಿದು ಜನರು ಅದನ್ನು ಪಾಲಿಸುತ್ತಾರೆ. ಆದರೆ ಇನ್ನೂ ಕೆಲವು ಸಂಪ್ರದಾಯಗಳ ಬಗ್ಗೆ ಹೆಚ್ಚು ಹೆಚ್ಚಾಗಿ ಮಾಹಿತಿಯಿಲ್ಲದಿದ್ದರೂ ಅದನ್ನು ಸಹ ಚಾಚೂತಪ್ಪದೆ ಪಾಲಿಸಲಾಗುತ್ತದೆ. ಯಾಕೆಂದರೆ ನಮ್ಮ ಹಿರಿಯರು ಇಂಥಹಾ ಆಚರಣೆಗಳನ್ನು ಯಾವುದೋ ಒಂದು ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡೇ ಮಾಡಿರುತ್ತಾರೆ.
ಯಾವುದೇ ಶುಭ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುವಾಗ ಮೊಸರು ಮತ್ತು ಸಕ್ಕರೆ ಸೇವಿಸುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಭಾರತದಲ್ಲಿ ಅದೆಷ್ಟೋ ವರ್ಷಗಳಿಂದ ಈ ಪದ್ಧತಿ ಪಾಲನೆಯಾಗುತ್ತಾ ಬರುತ್ತಿದೆ. ಆದರೆ ಮನೆಯಿಂದ ಹೊರಡುವ ಸಮಯದಲ್ಲಿ ಮೊಸರು ಸಕ್ಕರೆಯನ್ನು ಏಕೆ ನೀಡಲಾಗುತ್ತದೆ ಎಂಬುದರ ಬಗ್ಗೆ ಹಲವರಿಗೆ ತಿಳಿದಿಲ್ಲ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇದನ್ನು ಓದಿ : ಕಿವಿ ಹಣ್ಣಿನ ಸೇವನಿಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ
ಮನೆಯಿಂದ ಹೊರ ಹೋಗುವಾಗ ಮೊಸರು ಸಕ್ಕರೆ ತಿನ್ನಿಸುವ ಮುಖ್ಯ ಕಾರಣವೆಂದರೆ ಇವೆರಡೂ ಆರೋಗ್ಯಕ್ಕೆ ಅತ್ಯುತ್ತಮ. ಯಾಕೆಂದರೆ ಮೊಸರು, ಸಕ್ಕರೆಯ ದೇಹಕ್ಕೆ ಪ್ರಯೋಜನಕಾರಿಯಾಗುವ ಅನೇಕ ಗುಣಗಳನ್ನು ಒಳಗೊಂಡಿದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ -12, ವಿಟಮಿನ್ ಬಿ -2, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಪ್ರಮುಖ ಪೋಷಕಾಂಶಗಳಿರುತ್ತವೆ. ಹೀಗಾಗಿ ಮೊಸರನ್ನು ಸಕ್ಕರೆಯೊಂದಿಗೆ ಸೇವಿಸಿದರೆ ಅದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

Featured Image Credits : nancyvinayakjn23.wordpress.com
ಮೊಸರು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಯಾವುದೇ ಆಹಾರ ಸೇವಿಸಿದ್ದರೂ ಕೊನೆಯಲ್ಲಿ ಮೊಸರು ತಿಂದಾಗ ಯಾವುದೇ ಹೊಟ್ಟೆ ಉಬ್ಬರದ ಸಮಸ್ಯೆ ಕಾಣಿಸಿಕೊಳ್ಳದೆ ನಿರಾಳವಾಗುತ್ತದೆ. ಮನೆಯಿಂದ ಹೊರಗೆ ಹೋಗುವಾಗ ಮೊಸರು ಮತ್ತು ಸಕ್ಕರೆಯನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಗ್ಲೂಕೋಸ್ ಸಿಗುತ್ತದೆ, ಇದು ತಕ್ಷಣ ಶಕ್ತಿಯನ್ನು ನೀಡುತ್ತದೆ. ಮೊಸರಿನಲ್ಲಿ ಕಂಡುಬರುವ ಉತ್ತಮ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಾತ್ರವಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ಬೆಳಗ್ಗೆ ಉಪಾಹಾರದಲ್ಲಿ ಮೊಸರು ಮತ್ತು ಸಕ್ಕರೆಯನ್ನು ತಿನ್ನುವುದು ಒಳ್ಳೆಯದು. ಇದು ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಆಯುರ್ವೇದದಲ್ಲಿ ಮೊಸರು ಸಕ್ಕರೆಯನ್ನು ಹೊಟ್ಟೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಪಿತ್ತರಸ ಕಡಿಮೆಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ. ಹೀಗಾಗಿಯೇ ಮನೆಯಿಂದ ಹೊರ ಹೋಗುವವರಿಗೆ ಮೊಸರು ಮತ್ತು ಸಕ್ಕರೆಯನ್ನು ನೀಡಲಾಗುತ್ತದೆ.
ಇದನ್ನು ಓದಿ : ನೆನೆಸಿದ ಬಾದಾಮಿಯನ್ನು ಏಕೆ ಸೇವಿಸಬೇಕು..?
ಬೆಳಗ್ಗೆ ಮೊಸರು, ಸಕ್ಕರೆಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತ್ವರಿತ ಗ್ಲುಕೋಸ್ ಸಿಗುತ್ತದೆ. ಹೀಗಾಗಿ ದಿನವಿಡೀ ಚುರುಕಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಮೊಸರು ಸಕ್ಕರೆಯಿಂದ ಬರುವ ಗ್ಲೂಕೋಸ್ ತಕ್ಷಣ ನಿಮ್ಮ ಮೆದುಳು ಮತ್ತು ದೇಹಕ್ಕೆ ಶಕ್ತಿ ತುಂಬುತ್ತದೆ. ಆದ್ದರಿಂದ ನೀವು ಬೆಳಿಗ್ಗೆ ಸಿಹಿ ಮೊಸರು ತಿಂದ ನಂತರ ಹೊರಬಂದರೆ, ಅದು ದಿನವಿಡೀ ಶಕ್ತಿಯುತವಾಗಿರುತ್ತದೆ.

Image Credits : Herzindagi
ರಾತ್ರಿಯಲ್ಲಿ ಮೊಸರು ಮತ್ತು ಸಕ್ಕರೆ ತಿನ್ನುವುದನ್ನು ತಪ್ಪಿಸಬೇಕು. ಶೀತ ಮತ್ತು ಕೆಮ್ಮು ಇರುವವರು ಸಕ್ಕರೆಯೊಂದಿಗೆ ಮೊಸರು ತಿನ್ನಬಾರದು. ಸಕ್ಕರೆ ಕಾಯಿಲೆ ಸಮಸ್ಯೆ ಇದ್ದರೆ, ನೀವು ಸಕ್ಕರೆಯೊಂದಿಗೆ ಮೊಸರು ತಿನ್ನಬಾರದು. ತೂಕ ಇಳಿಸಿಕೊಳ್ಳಲು ಡಯಟ್ ಮಾಡುವವರು ಸಹ ಸಿಹಿ ಮೊಸರನ್ನು ತಿನ್ನಬಾರದು, ಏಕೆಂದರೆ ಇದರಲ್ಲಿ ಬಹಳಷ್ಟು ಕ್ಯಾಲೊರಿಗಳಿವೆ. ಇದು ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚು ಮಾಡುತ್ತದೆ.
ಬೇಸಗೆಯಲ್ಲಿ ಹೆಚ್ಚಾಗಿ ಮೂತ್ರಕೋಶದಲ್ಲಿ ಉರಿಯೂತ ಉಂಟಾಗುವುದು. ಮೊಸರು ಮತ್ತು ಸಕ್ಕರೆಯು ಮೂತ್ರಕೋಶದ ಉರಿಯೂತ ಕಡಿಮೆ ಮಾಡುವುದು. ಇದರಿಂದ ಯುಟಿಐಯಂತಹ ಸಮಸ್ಯೆ ಬಗೆಹರಿಯುವುದು. ಮೊಸರಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಸಿ, ಫಾಲಟೆ, ನಿಯಾಸಿನ್, ರಿಬೊಫ್ಲಾವಿನ್, ಥೈಮೇನ್, ವಿಟಮಿನ್ ಬಿ12, ಹೈಡ್ರೋಕ್ಲೋರೈಡ್, ಕ್ಯಾರೊಟೆನಾಯ್ಡ್ ಗಳು ಇವೆ
ಇದನ್ನು ಓದಿ : ಉತ್ತಮ ಆರೋಗ್ಯಕ್ಕೆ ಶುಂಠಿಯ ಬಳಕೆ ಹೇಗೆ..? ಏನೆಲ್ಲಾ ಪ್ರಯೋಜನ..?
ಒಳ್ಳೆಯ ಬ್ಯಾಕ್ಟೀರಿಯಾವು ಕರುಳಿಗೆ ಇದರ ವಿರುದ್ಧ ಹೋರಾಡುವಂತಹ ಶಕ್ತಿ ನೀಡುವುದು.ಕರುಳಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪ್ರೊಬಯೋಟಿಕ್ಸ್ ಗಳು ನಿಯಂತ್ರಿಸುವುದು. ಪ್ರೊಬಯೋಟಿಕ್ಸ್ ಎಂದರೆ ಕರುಳಿನಲ್ಲಿ ಇರುವಂತಹ ಒಳ್ಳೆಯ ಬ್ಯಾಕ್ಟೀರಿಯಾಗಳು ಮತ್ತು ಇದು ಕರುಳಿನ ಆರೋಗ್ಯಕ್ಕೆ ನೆರವಾಗುವುದು. ಮೊಸರು ಪ್ರೋಬಯೋಟಿಕ್ ಆಗಿದೆ. ದಿನಾಲೂ ಮೊಸರು ತಿಂದರೆ ಅದರಿಂದ ಕರುಳಿನ ಆರೋಗ್ಯ ಕಾಪಾಡಬಹುದು.
ಹಾಲಿನಲ್ಲಿ ಇರುವಂತಹ ಪ್ರೋಟೀನ್ ಗೆ ಹೋಲಿಕೆ ಮಾಡಿದರೆ ಮೊಸರಿನಲ್ಲಿ ಇರುವ ಪ್ರೋಟೀನ್ ಬೇಗನೆ ಕರಗುವುದು. ನಾವು ಕುಡಿದಂತಹ ನಾಲ್ಕನೇ ಒಂದರಷ್ಟು ಹಾಲು ಕರಗುವ ಹೊತ್ತಿಗೆ ಮೊಸರು ಸಂಪೂರ್ಣವಾಗಿ ಕರಗಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮನೆಯಿಂದ ಹೊರ ಹೋಗುವವರಿಗೆ ಮೊಸರು, ಸಕ್ಕರೆ ತಿನ್ನಿಸಿ ಕಳುಹಿಸುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3zWs39G
June 24, 2021 at 05:22PM