ಸಮುದ್ರದಲ್ಲಿ ನಡೆದುಕೊಂಡೇ ನಿಷ್ಕಳಂಕ ಮಹಾದೇವನ ದೇಗುಲಕ್ಕೆ ತೆರಳಬೇಕು..!

Image Credits : Gujrat Expert
ಭಾರತ ದೇಶದಲ್ಲಿ ಅಸಂಖ್ಯಾತ ವಿಭಿನ್ನ ದೇವಾಲಯಗಳಿವೆ. ಬೆಟ್ಟದ ಮೇಲಿರುವ ದೇವಾಲಯ, ನದಿಯ ಮಧ್ಯೆಯಿರುವ ದೇವಾಲಯ, ಗುಹೆಯೊಳಗಿರುವ ದೇವಾಲಯ ಹೀಗೆ ಹಲವಾರು ರೀತಿಯ ದೇಗುಲಗಳನ್ನು ಭಾರತದಲ್ಲಿ ನೋಡಬಹುದು. ವಿಭಿನ್ನ ರಚನೆ, ವಾಸ್ತುಶಿಲ್ಪ, ಶಿಲ್ಪಕಲೆಯಿಂದ ಈ ದೇವಸ್ಥಾನಗಳು ಪ್ರಸಿದ್ಧಿ ಹೊಂದಿವೆ. ದೇವಾಲಯ ಕುಗ್ರಾಮ, ಬೆಟ್ಟ, ಗುಹೆಯಲ್ಲಿದ್ದರೂ ಸರಿ. ಜನರು ಮಾತ್ರ ಅದೆಷ್ಟೇ ಕಷ್ಟವಾದರೂ ಅಲ್ಲಿಗೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಭಾರತದಲ್ಲಿರುವ ಅಂಥಹಾ ವಿಶೇಷ ದೇವಸ್ಥಾನಗಳಲ್ಲೊಂದು ಅರಬ್ಬೀ ಸಮುದ್ರದ ಮಧ್ಯೆಯಿರುವ ಈ ದೇವಸ್ಥಾನ.
ಅರೆ, ಸಮುದ್ರದ ಮಧ್ಯೆ ದೇಗುಲನಾ ಎಂದು ಅಚ್ಚರಿ ಪಡಬೇಡಿ. ಹೌದು, ಈ ದೇವಾಲಯ ಇರೋದು ಅರಬ್ಬೀ ಸಮುದ್ರದ ಮಧ್ಯದಲ್ಲೇ. ಜನರು ಈ ಸಮುದ್ರದಲ್ಲೇ ನಡೆದುಕೊಂಡು ಹೋಗಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಆ ಅದ್ಭುತ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ,
ಇದನ್ನು ಓದಿ : ಮೆಟ್ಟಿಲಿನ ಮೇಲೆ ತಟ್ಟಿದರೆ ಸಂಗೀತದ ಸ್ವರಗಳು ಕೇಳಿಸುವ ಐರಾವತೇಶ್ವರ ದೇವಾಲಯ
ಪ್ರಪಂಚದಲ್ಲಿ ಪರಶಿವನನ್ನು ಪೂಜಿಸುವ ಅದೆಷ್ಟೋ ದೇವಾಲಯಗಳಿವೆ. ಅದರಲ್ಲೂ ದೇಶದ ವಿವಿಧ ರಾಜ್ಯಗಳಲ್ಲಿ ಅದ್ಭುತವಾದ ಶಿವನ ದೇವಾಲಯಗಳು ನಿರ್ಮಾಣಗೊಂಡಿವೆ. ಇದು ಕೂಡಾ ಅಂಥಹದ್ದೇ ಒಂದು ಸುಂದರ ದೇವಾಲಯ. ಗುಜರಾತ್ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಸಮುದ್ರದ ಮಧ್ಯೆಯಿರುವ ಈ ದೇವಸ್ಥಾನದಲ್ಲಿ ಶಿವನನ್ನು ಪೂಜಿಸಲಾಗುತ್ತದೆ.
ನಿಷ್ಕಳಂಕ ಮಹಾದೇವ ದೇವಾಲಯದ ವಿಶೇಷತೆಗಳು

Featured Image Credits : Pravase
ಗುಜರಾತ್ ರಾಜ್ಯದ ಅಹಮದಾಬಾದ್ಗೆ ಸಮೀಪದಲ್ಲಿನ ಬಾಲಾನಗರದಲ್ಲಿನ ಅರಬ್ಬೀ ಸಮುದ್ರ ತೀರದಲ್ಲಿ ಈ ದೇವಾಲಯವಿದೆ. ನಿಷ್ಕಳಂಕ ಮಹಾದೇವ ದೇವಾಲಯ ಎಂಬ ಕರೆಯಲ್ಪಡುವ ಈ ದೇಗುಲಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಕುಳಿಯಾಕ್ ಎಂಬ ಗ್ರಾಮದ ಮುಖಾಂತರ ತೆರಳಿ ಈ ದೇವಾಲಯವನ್ನು ದರ್ಶನ ಮಾಡಿಕೊಳ್ಳಬಹುದು. ಸಮುದ್ರದಲ್ಲಿ ಸುಮಾರು 2 ಕಿ,ಮೀ ಅಂತರದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ.
ನಿಷ್ಕಳಂಕ ದೇವಾಲಯಕ್ಕೆ ತೆರಳುವುದು ಒಂದು ಸಾಹಸ ಯಾತ್ರೆಯೇ ಸರಿ. ಏಕೆಂದರೆ ಜನರು ಈ ದೇವಸ್ಥಾನವನ್ನು ತಲುಪಲು ಸುಮಾರು 1.5 ಕಿ.ಮೀ. ನೀರಿನಲ್ಲಿ ನಡೆಯಬೇಕು. ಸಮುದ್ರ ಅಲೆಗಳು ಬಂದಾಗ ಇಲ್ಲಿ ಜಾಗರೂಕತೆಯಿಂದ ನಡೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಅಪಾಯ ಖಂಡಿತ, ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದ ಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮುಚ್ಚಿ ಹೋಗುತ್ತದೆ. ದೇವಸ್ಥಾನದ ಮೇಲಿರುವ ಧ್ವಜ ಮತ್ತು ದೇವಸ್ಥಾನದ ಕಂಬ ಮಾತ್ರ ನೋಡಲು ಸಿಗುತ್ತದೆ.
ಮಧ್ಯಾಹ್ನ ಸರಿ ಸುಮಾರು 2 ಗಂಟೆಯ ನಂತರ ಈ ದೇವಾಲಯಕ್ಕೆ ತೆರಳುವುದು ಉತ್ತಮ. ಈ ಸಂದರ್ಭದಲ್ಲಿ ಅಲೆಗಳ ಅಬ್ಬರ ಕಡಿಮೆಯಿರುತ್ತದೆ. ಮುಖ್ಯವಾಗಿ ಈ ದೇವಾಲಯಕ್ಕೆ ಚಿಕ್ಕ ಮಕ್ಕಳ ಪ್ರವೇಶವನ್ನು ನಿಷೇಧಿಸಲಾಗಿದೆ. ಏಕೆಂದರೆ ಚಿಕ್ಕ ಮಕ್ಕಳು ಸಮುದ್ರದಲ್ಲಿ ನಡೆಯಲು ಆಗುವುದಿಲ್ಲ. ಮಕ್ಕಳಿಗೆ 10 ವರ್ಷ ದಾಟಿದರೆ ಮಾತ್ರ ಈ ದೇವಾಲಯಕ್ಕೆ ಬರಲು ಅನುಮತಿ ನೀಡುತ್ತಾರೆ.
ಇದನ್ನು ಓದಿ : ನೆರಳು ಕಾಣಿಸದ ದೇಗುಲ, ತಾಂಜಾವೂರಿನ ಬೃಹದೀಶ್ವರ ದೇವಾಲಯ
ನಿಷ್ಕಳಂಕ ದೇವಾಲಯಕ್ಕಿದೆ ಮಹಾಭಾರತದ ಹಿನ್ನಲೆ
ಮಹಾಭಾರತದದಲ್ಲಿ ಪಾಂಡವರು ಕೃಷ್ಣನ ಸೂಚನೆಯ ಮೇರೆಗೆ ಶಿವನನ್ನು ಪೂಜಿಸುತ್ತಾರೆ. ಏಕೆಂದರೆ ಅವರು ತಮ್ಮ ಸಹೋದರರನ್ನು ಅಂದರೆ ಎಲ್ಲಾ ಕೌರವರನ್ನು ಕೊಂದ ಪಾಪವನ್ನು ಮಾಡಿರುತ್ತಾರೆ. ಶಿವನ ಆಶೀರ್ವಾದಕ್ಕಾಗಿ ಪಾಂಡವರು ತಪಸ್ಸು ಮಾಡಿದರು. ನಂತರ ಅವರ ಆರಾಧನೆಯಿಂದ ಪ್ರಭಾವಿತರಾಗಿ 5 ಲಿಂಗದ ರೂಪದಲ್ಲಿ ಪಾಂಡವರ ಮುಂದೆ ಕಾಣಿಸಿಕೊಂಡರು ಮತ್ತು ಅವರನ್ನು ನಿಷ್ಕಳಂಕ ಎಂದು ಆಶೀರ್ವದಿಸಿದರು. ಹಾಗಾಗಿ ಈ ನಿಷ್ಕಳಂಕ ಮಹಾದೇವ ದೇವಾಲಯ ನಿರ್ಮಾಣವಾಯಿತು ಎಂದು ಹೇಳುತ್ತಾರೆ.
ಪಂಚ ಪಾಂಡವರು ಪ್ರತಿಷ್ಠಾಪಿಸಿದ ಶಿವಲಿಂಗ

Image Credits : Wikipedia
ನಿಷ್ಕಳಂಕ ದೇವಾಲಯದಲ್ಲಿ ಐದು ಪವಿತ್ರವಾದ ಶಿವಲಿಂಗಗಳಿವೆ. ಇಲ್ಲಿ ಶಿವನಿಗೆ ಪ್ರತಿನಿತ್ಯ ಸಮುದ್ರ ಅಲೆಗಳ ಮೂಲಕ ಅಭಿಷೇಕವಾಗುತ್ತಲೇ ಇರುತ್ತದೆ.5 ಶಿವಲಿಂಗವನ್ನು ಪಂಚ ಪಾಂಡವರು ಪ್ರತಿಷ್ಟಾಪಿಸಿರುವುದು ಎಂದು ಪುರಾಣಗಳು ಹೇಳುತ್ತವೆ. ಧರ್ಮರಾಜ ಪ್ರತಿಷ್ಟಾಪಿಸಿದ ಲಿಂಗೇಶ್ವರಕ್ಕೆ ಇಲ್ಲಿನ ಭಕ್ತರು ಅತ್ಯಂತ ಶ್ರಧ್ದೆ ಭಕ್ತಿಯಿಂದ ಪೂಜಿಸುತ್ತಾರೆ. ಭೀಮ, ಅರ್ಜುನ, ನಕುಲ, ಸಹದೇವರು ಕೂಡ ಉಳಿದ 4 ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಈ ದೇವಸ್ಥಾನದಲ್ಲಿ ಐದು ಶಿವಲಿಂಗಗಳಿವೆ ಎಂದು ಹೇಳುತ್ತಾರೆ.
ಚಂದ್ರನ ಕಾಂತಿ ಈ ಶಿವಲಿಂಗಗಳ ಮೇಲೆ ಬಿದ್ದಾಗ ಅದ್ಭುತವಾಗಿ ಕಾಣಿಸುತ್ತದೆ ಎಂದು ಹೇಳುತ್ತಾರೆ ಇಲ್ಲಿನ ಜನರು. ದೇವಾಲಯದಲ್ಲಿರುವ ಮಹಾ ಶಿವಲಿಂಗದ ಮಹಿಮೆ ಏನೆಂದರೆ ಮನಸ್ಸಿನಲ್ಲಿ ಒಂದು ಕೋರಿಕೆಯನ್ನು ಕೋರಿಕೊಂಡು ಭಕ್ತಿಯಿಂದ ಪ್ರಧಾನ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆಯಂತೆ.
ನಿಷ್ಕಳಂಕ ದೇವಾಲಯವು 500 ಅಡಿ ಎತ್ತರದಲ್ಲಿದೆ ಮತ್ತು ಇದು ಸಮುದ್ರದಲ್ಲಿ 2000 ಅಡಿ ಉದ್ದವಾಗಿದೆ. ಇಲ್ಲಿ ಭಕ್ತರು ಮೊದಲು ತಮ್ಮ ಕೈಗಳನ್ನು ಮತ್ತು ಕಾಲುಗಳನ್ನು ಪಾಂಡವಸ್ ಪೊನ್ ಎಂಬ ಕೊಳದಲ್ಲಿ ತೊಳೆದುಕೊಳ್ಳುತ್ತಾರೆ. ನಂತರವೇ ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಇನ್ನೊಂದು ಅಚ್ಚರಿಯ ವಿಷಯ ಏನೆಂದರೆ ಈ ದೇವಾಲಯದಲ್ಲಿ ಪೂಜಾರಿಗಳು ಯಾರೂ ಇರುವುದಿಲ್ಲ. ಕೇವಲ ಭಕ್ತರು ಮಾತ್ರ ಬಂದು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದು ಹಿಂದಿರುಗುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3d6GSfZ
June 24, 2021 at 05:54PM