ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ, ಮುಂದೆ ಏನಾಗುತ್ತೆ ಗೊತ್ತಾ..?
ಕನಸು ಕಾಣುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಯಾವುದೇ ದುಡ್ಡು ಕೊಡದೆ, ಟ್ಯಾಕ್ಸ್ ಕಟ್ಟದೆ ನೋಡೋಕಾಗೋದು ಕನಸು ಮಾತ್ರ. ಶ್ರೀಮಂತರು, ಬಡವರು, ಮೇಲು-ಕೀಳು ಎಂಬ ಬೇಧವಿಲ್ಲದೆ ಎಲ್ಲರ ಕೈಗೂ ಸುಲಭವಾಗಿ ಸಿಗುವಂತದ್ದು. ಕನಸಲ್ಲಿ ಭಿಕ್ಷುಕ ಶ್ರೀಮಂತನಾಗುತ್ತಾನೆ, ಶ್ರೀಮಂತ ಭಿಕಾರಿಯಾಗುತ್ತಾನೆ. ಕನಸಿನಲ್ಲಿ ಅದೆಷ್ಟೋ ಮಂದಿ ಕಾಣದ ಅದೆಷ್ಟೋ ಜಾಗಗಳಿಗೆ ಹೋಗಿ ಬರುತ್ತಾರೆ. ಇದೇ ಕನಸಿನಲ್ಲಿ ದೂರದೂರಿನ ಸ್ನೇಹಿತರನ್ನೋ, ಸತ್ತ ಸಂಬಂಧಿಕರನ್ನೂ ಭೇಟಿಯಾಗುತ್ತಾರೆ. ಕನಸೆಂದರೇ ಹಾಗೇ. ಊಹೆಗೂ ಮೀರಿದ್ದು, ತರ್ಕಕ್ಕೆ ನಿಲುಕದ್ದು.
ಕನಸು ಕಾಣುವುದೇನೋ ಒಳ್ಳೆಯದೇ. ಆದರೆ ಕೆಲವೊಂದು ವಸ್ತುಗಳು ಕನಸಿನಲ್ಲಿ ಬಂದರೆ ಅದು ಶುಭ ಎಂದು ತರ್ಕಿಸಲಾಗುತ್ತದೆ. ಇನ್ನು ಕೆಲವು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭ ಎಂದು ಹೇಳಲಾಗುತ್ತದೆ. ಸ್ವಪ್ನದಲ್ಲಿ ಕೆಲವೊಂದು ಪ್ರಾಣಿ , ಪಕ್ಷಿಗಳನ್ನು ನೋಡುವುದು ಅದೃಷ್ಟ ಎಂದು ಇನ್ನು ಕೆಲವೊಂದು ಪ್ರಾಣಿಗಳು ಕನಸಲ್ಲಿ ಬಂದರೆ ದುರಾದೃಷ್ಟವೆಂದು ಪರಿಗಣಿಸಲಾಗುತ್ತದೆ.
ಮನೋವಿಜ್ಞಾನಿಗಳು ಕನಸಿಗೆ ನೀಡುವ ವ್ಯಾಖ್ಯಾನವೇ ಬೇರೆ. ಮನೋ ಜ್ಯೋತಿಷಿಗಳು ಕನಸಿನ ಸಂಜ್ಞೆಗಳಿಗೆ ಬೇರೆ ಬೇರೆ ಅರ್ಥಗಳನ್ನು ನೀಡುತ್ತಾರೆ. ಅದನ್ನು ಶಕುನಶಾಸ್ತ್ರದ ಹಿನ್ನೆಲೆಯಲ್ಲಿ ತರ್ಕಿಸುತ್ತಾರೆ. ಇದೇ ವಿಚಾರದಲ್ಲಿ ಸ್ವಪ್ನ ಶಾಸ್ತ್ರ ಕೂಡಾ ಚಾಲ್ತಿಯಲ್ಲಿದೆ. ಸ್ವಪ್ನ ಶಾಸ್ತ್ರಜ್ಞರ ಪ್ರಕಾರ ಕೆಲವೊಂದು ಪ್ರಾಣಿ ಪಕ್ಷಿಗಳನ್ನು ನೋಡಿದರೆ ನಮ್ಮ ಯೋಗ ಬದಲಾಗುವ ಮುನ್ಸೂಚನೆಯಂತೆ. ಆ ಪ್ರಾಣಿ ಪಕ್ಷಿಗಳು ಯಾವುವು..? ಯಾವ ಪ್ರಾಣಿಗಳು ಕನಸಿನಲ್ಲಿ ಬಂದರೆ ಒಳ್ಳೆಯದು, ಯಾವ ಪ್ರಾಣಿಗಳು ಕನಸಿನಲ್ಲಿ ಬಂದರೆ ಒಳ್ಳೆಯದಲ್ಲ ಎಂಬುದನ್ನು ತಿಳಿಯೋಣ
ಸ್ವಪ್ನಶಾಸ್ತ್ರದ ಪ್ರಕಾರ ನಾವು ಕನಸಿನಲ್ಲಿ ನೋಡಿದ್ದು ನಿಜ ಜೀವನದಲ್ಲಿ ಎಲ್ಲಾದರೂ ಸತ್ಯವಾಗುತ್ತದೆ. ಸ್ವಪ್ನದಲ್ಲಿ ಕೆಲವೊಂದು ವಸ್ತುಗಳು ಬಂದರೆ ಅದು ಶುಭ ಎಂದು ತರ್ಕಿಸಲಾಗುತ್ತದೆ. ಇನ್ನು ಕೆಲವು ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭ ಎನ್ನಲಾಗುತ್ತದೆ. ಸ್ವಪ್ನದಲ್ಲಿ ಕೆಲವೊಂದು ಪ್ರಾಣಿ ಪಕ್ಷಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ. ಇನ್ನೂ ಕೆಲವು ಸ್ವಪ್ನ ಶಾಸ್ತ್ರ ಪಂಡಿತರ ಪ್ರಕಾರ ಸ್ವಪ್ನ ದಲ್ಲಿ ಕೆಲವೊಂದು ವಿಶೇಷ ಪ್ರಾಣಿ ಪಕ್ಷಿಗಳನ್ನು ನೋಡಿದರೆ, ಅದು ನಮ್ಮ ಯೋಗ ಬದಲಾಗುವ ಮುನ್ಸೂಚನೆಯಂತೆ. ಅದನ್ನು ಒಂದೊಂದಾಗಿ ವಿಶ್ಲೇಷಣೆ ಮಾಡೋಣ
ಕನಸಲ್ಲಿ ಗೋವು ಕಾಣಿಸಿಕೊಂಡರೆ ಸರ್ವ ಕಾರ್ಯ ಸಂಪನ್ನ
Image Credits : Naukri Nama / The conversation
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಗೋವು ಕಾಣಿಸಿಕೊಂಡರೆ ಅದು ಶುಭಸೂಚಕ. ಇದರಿಂದ ಆ ದಿನ ಶುಭಫಲಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಗೋವು ಕಾಣಿಸಿಕೊಂಡರೆ, ಅಂಥಹ ವ್ಯಕ್ತಿಗೆ ದೇವರ ಅನುಗ್ರಹ ಸಾಕಷ್ಟು ಇದೆ. ಯಾವುದಕ್ಕೂ ಹೆದರಬೇಕಾದ ಅಗತ್ಯವಿಲ್ಲ ಎಂಬರ್ಥವಿದೆ ಕನಸಿನಲ್ಲಿ ಗೋವು ಕಾಣಿಸಿಕೊಂಡರೆ ಸರ್ವಕಾರ್ಯದಲ್ಲೂ ಯಶಸ್ಸು ನಿಮ್ಮದಾಗಿರುತ್ತದೆ.
ಆನೆ ಕಾಣಿಸಿಕೊಂಡರೆ ಸಂಪತ್ತು ಪ್ರಾಪ್ತಿ
Image credits : NRDC / The Great Courses Daily
ಕನಸಿನಲ್ಲಿ ಆನೆ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಎಲ್ಲರ ಕನಸಿನಲ್ಲೂ ಆನೆ ಕಾಣಿಸಿಕೊಳ್ಳುವುದಿಲ್ಲ. ಒಂದು ವೇಳೆ ಆನೆ ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಅದೃಷ್ಟ ಖುಲಾಯಿಸಲಿದೆ ಎಂದೇ ಅರ್ಥ. ನಿಮಗೆ ಸಕಲ ಐಶ್ವರ್ಯವೂ ಸಿಗಲಿದೆ. ನಿಮ್ಮ ಜೀವನದಲ್ಲಿ ಮುಂದೆ ಸುಖ ಸಮೃದ್ಧಿ ಸಿಗಲಿದೆ ಎಂಬುದು ಆನೆ ಕನಸಿನಲ್ಲಿ ಬರುವುದರ ಮುನ್ಸೂಚನೆ.
ಕನಸಿನಲ್ಲಿ ಮೊಲ ಕಾಣಿಸಿದರೆ ಕಾರ್ಯಸಿದ್ಧಿ
Image Credits : Good Housekeeping / Telangana mata
ಕನಸಿನಲ್ಲಿ ಮೊಲ ಬಂದರೆ ಒಳ್ಳೆಯದು. ಇದರಿಂದ ನೀವು ಅಂದುಕೊಂಡ ಕಾರ್ಯ ಯಾವುದೇ ಅಡ್ಡಿಯಿಲ್ಲದೆ ಸುಲಭವಾಗಿ ನೆರವೇರುತ್ತದೆ ಎಂಬರ್ಥವಿದೆ. ಕನಸಿನಲ್ಲಿ ಮೊಲ ಕಾಣಿಸಿಕೊಂಡರೆ ಸಕಲ ಕಾರ್ಯ ಸಿದ್ದಿಯಾಗುತ್ತದೆ ಎಂದು ಹೇಳುತ್ತಾರೆ. ಅಲ್ಲದೆ, ಕನಸಿನಲ್ಲಿ ಮೊಲ ಕಾಣಿಸಿಕೊಂಡರೆ, ನಿಮ್ಮ ಪ್ರೇಮ ಜೀವನ ಚೆನ್ನಾಗಾಗಲಿದೆ ಎಂದು ಹೇಳುತ್ತಾರೆ. ಹೀಗಾಗಿ ಕನಸಲ್ಲಿ ಮೊಲ ಕಾಣಿಸಿಕೊಳ್ಳುವುದು ಸಾಕಷ್ಟು ಶುಭ ಎನ್ನಲಾಗಿದೆ.
ಕಾಳಸರ್ಪ ಕಾಣಿಸಿಕೊಂಡರೆ ಮನೋಕಾಮನೆ ಪ್ರಾಪ್ತಿ:
Image Credits : The Conversation / Newsline Phillipines
ಕನಸ್ಸಿನಲ್ಲಿ ಕಾಳಸರ್ಪ ಕಾಣಿಸಿಕೊಂಡರೆ ಭಯಾನಕ ಸ್ವಪ್ನವೆಂದು ಹೆದರಬೇಕಿಲ್ಲ. ಯಾಕೆಂದರೆ ಕನಸಿನಲ್ಲಿ ಕಾಳಸರ್ಪ ಬರುವುದು ಶುಭ ಶಕುನ. ಕಾಳಸರ್ಪ ಕನಸಿನಲ್ಲಿ ಕಾಣಿಸಿಕೊಂಡರೆ ಅದರ ಅರ್ಥ ಮುಂದಿನ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ ಎನ್ನುವುದು. ಕಾಳಸರ್ಪ ಕಾಣಿಸಿಕೊಂಡರೆ ಸಕಲ ಮನೋಕಾಮನೆ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗುತ್ತದೆ.
ಗೂಬೆ ಕಾಣಿಸಿಕೊಂಡರೆ ಲಕ್ಷ್ಮೀ ಕಟಾಕ್ಷ
Image Credits : ithaca Journal / Love By Olivia
ಗೂಬೆಯನ್ನು ಲಕ್ಷ್ಮಿಯ ವಾಹನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕನಸಿನಲ್ಲಿ ಗೂಬೆ ಕಾಣಿಸಿಕೊಳ್ಳುವುದು ಕೂಡಾ ಶುಭಕರವಾಗಿದೆ. ಗೂಬೆ ಕಾಣಿಸಿಕೊಂಡರೆ ಮಹಾಲಕ್ಷ್ಮಿ ಅನುಗ್ರಹವಾಗಿದೆಯೆಂದೇ ಅರ್ಥ. ಹೀಗಾಗಿ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ. ಯಾವುದೇ ಹಣಕಾಸಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳುತ್ತಾರೆ. ಅಲ್ಲದೆ, ಗೂಬೆಗಳನ್ನು ದೇವದೂತರು ಎಂದು ಪರಿಗಣಿಸಲಾಗುತ್ತದೆ. ಈ ಪಕ್ಷಿ ಅನೇಕ ದೇವತೆಗಳೊಂದಿಗೆ ಸಂಬಂಧ ಹಾಗೂ ಸಂಪರ್ಕ ಹೊಂದಿರುತ್ತವೆ ಎನ್ನಲಾಗುತ್ತದೆ. ಇವು ನೋಡಲು ಸಿಗುವುದೇ ಅಪರೂಪ. ಹಾಗಾಗಿ ಇವು ಕನಸಿನಲ್ಲಿ ಕಂಡರೆ ಒಳ್ಳೆಯದು ಎಂದು ಹೇಳುತ್ತಾರೆ.
ಬೆಕ್ಕು ಕನಸಲ್ಲಿ ಬಂದರೆ ಅದೃಷ್ಟ ಖುಲಾಯಿಸುತ್ತದೆ
Image Credits : Depositphotos / turcopolier.typepad.com
ಬೆಕ್ಕು ಶಕ್ತಿಯುತ ದೇವತೆಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಈ ಪ್ರಾಣಿ ಗುಪ್ತ, ಮಾಂತ್ರಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿದೆ. ಕಪ್ಪು ಬಣ್ಣದ ಬೆಕ್ಕು ಕನಸಿನಲ್ಲಿ ಕಂಡರೆ ನಮ್ಮ ಅದೃಷ್ಟದ ಬದಲಾವಣೆಯನ್ನು ಸೂಚಿಸುತ್ತದೆ. ಬಿಳಿಯ ಬೆಕ್ಕು ಪ್ರಣಯ ಹಾಗೂ ಫಲವತ್ತತೆಯ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.
ಹಲ್ಲಿ, ಜೇಡ ಕನಸಿನಲ್ಲಿ ಬಂದರೆ ಶುಭ
Image Credits : istock / Grit city magazine / pestcontrol universe
ಕನಸಿನಲ್ಲಿ ಹಲ್ಲಿ ಕಾಣಿಸಿಕೊಳ್ಳುವುದು ಅಶುಭ ಅಲ್ಲ. ಅದರಿಂದ ಸಾಕಷ್ಟು ಶುಭ ಫಲ ನಿರೀಕ್ಷೆ ಮಾಡಬಹುದು. ಹಲ್ಲಿ ಕಾಣಿಸಿಕೊಂಡರೆ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಜೇಡ ಉತ್ತಮ ಶಕುನದ ಪ್ರತೀಕ ಎಂದು ಕರೆಯುತ್ತಾರೆ. ಜೇಡವು ಬಲೆಯನ್ನು ಹೆಣೆಯುತ್ತಿರುವಂತೆ ಕನಸು ಕಂಡಲ್ಲಿ ಆ ವ್ಯಕ್ತಿಯು ತನ್ನ ಪರಿಶ್ರಮಕ್ಕೆ ಬೇಗ ಫಲ ಪಡೆಯುತ್ತಾನೆ ಎಂದರ್ಥ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3vEd6G8
June 19, 2021 at 08:40AM