ಸಿಕ್ಕಾಪಟ್ಟೆ ಟೀ, ಕಾಫಿ ಕುಡಿಯೋ ಅಭ್ಯಾಸ ಇದೆಯಾ..? ಹಾಗಾದರೆ ಬೆಚ್ಚಿಬೀಳಿಸುವ ಈ ವಿಚಾರವನ್ನು ತಿಳಿದುಕೊಳ್ಳಿ..!
ಭಾರತದ ಅತ್ಯಂತ ಜನಪ್ರಿಯ ಪೇಯವೆಂದರೆ ಟೀ ಅಥವಾ ಚಹಾ. ಬೆಳಗ್ಗಿನ ಪ್ರಥಮ ಆಹಾರವಾಗಿ ಪ್ರಾರಂಭಿಸಿ ದಿನದ ಕಟ್ಟಕಡೆಯ ಆಹಾರವಾಗಿ ಸೇವಿಸಲ್ಪಡುತ್ತಾ ಬಂದಿರುವ ಪೇಯವೇ ಚಹಾ. ಭಾರತೀಯರಿಗೆ ಬೆಳಗಾಗುವುದೇ ಚಹಾದಿಂದ. ಸಂಜೆಯಾದರೆ ನಾಲ್ಕೈದು ಜನರು ಸುತ್ತ ಕುಳಿತು ಮಾತನಾಡುತ್ತಾ ಟೀ ಕುಡಿಯಲು ತೊಡಗುತ್ತಾರೆ. ಟೀ ಮಾಡದ ಮನೆ, ಅಥವಾ ಹೊಟೇಲ್ ಭಾರತದಲ್ಲಿ ಸಿಗಲು ಕಾಣುವುದು ಕಡಿಮೆ. ಎಂಥಹಾ ಗಲ್ಲಿ ಹೋಟೇಲಾದರೂ ಸರಿ, ಫೈವ್ ಸ್ಟಾರ್ ಹೊಟೇಲಾದರೂ ಸರಿ. ಅಲ್ಲಿ ಟೀಯಂತೂ ಇದ್ದೇ ಇರುತ್ತದೆ. 10 ರೂಪಾಯಿನಿಂದ ಹಿಡಿದು ಸಾವಿರವನ್ನೂ ದಾಟಿದ ಬೆಲೆಯ ಚಹಾಗಳು ಭಾರತದಲ್ಲಿ ಸಿಗುತ್ತವೆ.
ಟೀ ಸೇವನೆಯಿಂದ ಆರೋಗ್ಯಕ್ಕೆ ತೊಂದರೆ
Featured Image Credits : blog.englishteastore.com
ಬೆಳಗ್ಗೆದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಹಲವರಿಗಿದೆ. ಮನೆಗೆ ಅತಿಥಿಗಳು ಬಂದಾಗ ಟೀ ಬಿಸ್ಕೆಟ್ ಸತ್ಕಾರವಂತೂ ನಡೆಯಲೇಬೇಕು. ಫ್ರೆಂಡ್ಸ್, ಫ್ಯಾಮಿಲಿ ಸೇರಿದಾಗ ಜತೆ ಟೀ ಕುಡಿಯುವ ಖುಷಿಯೇ ಬೇರೆ. ಹೀಗೆ ಭಾರತದಲ್ಲಿ ಹಲವು ನೆಪಗಳನ್ನೊಡ್ಡಿ ಜನರು ಟೀ ಕುಡಿಯೋಕೆ ಹೆಚ್ಚು ಉತ್ಸಾಹ ತೋರಿಸುತ್ತಾರೆ. ಇಂದಿಗೂ ಊರಿನ ಕೇಂದ್ರಭಾಗದಲ್ಲಿ ಹೋಟೆಲುಗಳು ಕಾಫಿ, ಟೀ ನೀಡಲೆಂದು ಮುಂಜಾನೆಯೇ ತೆರೆದಿರುತ್ತವೆ. ಸಮೀಕ್ಷೆಯೊಂದರ ಪ್ರಕಾರ ಶೇ.ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ ಎಂದು ಹೇಳಲಾಗಿದೆ.
ಅಚ್ಚರಿಯ ವಿಷಯ ಗೊತ್ತಾ..ಟೀ ಕುಡಿಯುವುದು ಮೂಲತಃ ಭಾರತೀಯ ಸಂಸ್ಕೃತಿಯಲ್ಲ, ಬದಲಿಗೆ ಇದು ಬ್ರಿಟಿಷರು ಆರಂಭಿಸಿರುವ ಪದ್ಧತಿ. ಹಿಂದೆಲ್ಲಾ ಪ್ರತಿಷ್ಠೆಯ ವಿಷಯಕ್ಕೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಲಾಗಿತ್ತು. ಆದರೆ ಭಾರತದಲ್ಲಿ ಚಹಾ ಅನ್ನುವುದು ಈ ಅವಿಭಾಜ್ಯ ಜೀವನದ ಅಂಗವಾಗಿಬಿಟ್ಟಿದೆ. ಆದರೆ ನಿಮಗೆ ಗೊತ್ತಾ, ಚಹಾ ಅಥವಾ ಕಾಫಿಯ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಸ್ವತಃ ತಜ್ಞರೇ ಇದನ್ನು ವಿವರಿಸಿದ್ದಾರೆ. ಟೀ ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು ತಿಳಿಯೋಣ.
ಟೀ ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು..?
Image Credits : The Trend Spotter
ತಜ್ಞರು ವಿವರಿಸಿರುವ ಪ್ರಕಾರ, ಟೀ ಸೇವನೆ ಆರೋಗ್ಯಕ್ಕೆ ಹಾನಿಕರ. ವಿಶೇಷವಾಗಿ ಹೊಟ್ಟೆ ಮತ್ತು ಕರುಳುಗಳ ಒಳಭಾಗದ ಪದರವನ್ನು ಟೀಯಲ್ಲಿರುವ ರಾಸಾಯನಿಕಗಳು ಘಾಸಿಗೊಳಿಸುತ್ತವೆ. ಚಹಾದಲ್ಲಿರುವ ಸಕ್ಕರೆಯ ಪ್ರಮಾಣ ದೇಹದಲ್ಲಿ ಅನಗತ್ಯ ಅನಗತ್ಯ ಕ್ಯಾಲೋರಿಗಳನ್ನು ಹೆಚ್ಚಿಸುತ್ತಾ ಹೋಗುತ್ತದೆ. ಕುಡಿಯುವ ಚಹಾದ ಪ್ರಮಾಣ ಹೆಚ್ಚಾದಷ್ಟೂ ಸಕ್ಕರೆ ಮತ್ತು ಅದರ ಮೂಲಕ ಕ್ಯಾಲೋರಿಗಳು ಸಹ ಹೆಚ್ಚಾಗುತ್ತಾ ಹೋಗುತ್ತವೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ.
ನಮ್ಮ ಜೀರ್ಣಾಂಗಗಳಲ್ಲಿ ಸದಾ ಜೀರ್ಣರಸಗಳು ಇರುತ್ತವೆ ಹಾಗೂ ಜೀರ್ಣಕ್ರಿಯೆಯಲ್ಲಿ ಬಳಕೆಯಾಗುತ್ತಿದ್ದಂತೆಯೇ ಸತತವಾಗಿ ಉತ್ಪತ್ತಿಯಾಗುತ್ತಲೂ ಇದ್ದು ಸಮತೋಲನ ಕಾಯ್ದುಕೊಳ್ಳುತ್ತವೆ. ಆದರೆ, ಟೀ ಅಥವಾ ಕಾಫಿ ಕುಡಿದರೆ ಈ ರಸಗಳ ಆಮ್ಲೀಯ-ಕ್ಷಾರೀಯ ಸಮತೋಲನ ತಪ್ಪಿ ಹೋಗುತ್ತದೆ. ಪರಿಣಾಮವಾಗಿ ಈ ರಸಗಳು ನಿರ್ವಹಿಸಬೇಕಾಗಿದ್ದ ಜೀರ್ಣಕ್ರಿಯೆ ಆಗಬೇಕಾಗಿದ್ದ ಕ್ರಮದಲ್ಲಿ ಆಗುವುದಿಲ್ಲ. ಟೀಯಲ್ಲಿರುವ ಥಿಯೋಫೈಲೀನ್ ಎಂಬ ಅಂಶ ಜೀರ್ಣಾಂಗಗಳಲ್ಲಿ ನೀರಿನ ಅಂಶ ಇಲ್ಲದಂತೆ ಮಾಡುತ್ತದೆ. ಹೀಗಾಗಿ ಇದರಿಂದ ಮಲಬದ್ಧತೆ ಉಂಟಾಗುತ್ತದೆ.
ಅಲ್ಲದೇ ಟೀ ಅಥವಾ ಕಾಫಿಯನ್ನು ಕುಡಿದಾಗ ಇದರಲ್ಲಿರುವ ಸಕ್ಕರೆಯನ್ನು ಬಾಯಿಯ ಲಾಲಾರಸ ಒಡೆದು ಆಮ್ಲೀಯವಾಗಿಸುತ್ತದೆ. ಈ ರಸ ಬಾಯಿಯನ್ನು ಆಮ್ಲೀಯವಾಗಿಸುತ್ತದೆ ಹಾಗೂ ಈ ಆಮ್ಲೀಯದ ಪ್ರಭಾವದಿಂದ ಹಲ್ಲುಗಳು ಶೀಘ್ರವಾಗಿ ಸವೆಯುತ್ತವೆ.
ಟೀ ಕ್ಷಾರೀಯವೂ ಕೊಂಚ ಆಮ್ಲೀಯವೂ ಆಗಿರುವ ಕಾರಣ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜೀರ್ಣರಸಗಳ ಪ್ರಭಾವ ಏರುಪೇರಾಗುತ್ತದೆ. ಈ ಏರುಪೇರು ವಾಕರಿಕೆಯೂ ಕಾರಣವಾಗುತ್ತದೆ..
ಯಾವಾಗ ಟೀ, ಕಾಫಿ ಸೇವಿಸಬಹುದು..?
Image Credits : universalhcs.com
ತಜ್ಞರು ಟೀ, ಕಾಫಿಗಳನ್ನು ಊಟದ ಎರಡು ಘಂಟೆಗಳ ಬಳಿಕವೇ ಸೇವಿಸುವುದು ಸೂಕ್ತ ಎಂದು ವಿವರಿಸುತ್ತಾರೆ. ಅದರಲ್ಲೂ ಬೆಳಗ್ಗೆದ್ದ ಕೂಡಲೇ ಅಥವಾ ಪ್ರಥಮ ಆಹಾರವಾಗಿ ಟೀಯನ್ನು ಸೇವಿಸಲೇಬಾರದು ಎಂಬುದು ತಜ್ಞರ ಅಭಿಪ್ರಾಯ. ಬದಲಿಗೆ ಉಪಾಹಾರದ ಬಳಿಕ ಕೊಂಚ ಹೊತ್ತು ಬಿಟ್ಟು ಸೇವಿಸಬಹುದು. ಸಂಜೆಯ ಸಮಯದಲ್ಲಿ ಕುರುಕು ತಿಂಡಿ ಅಥವಾ ಇತರ ಸಂಜೆಯ ತಿನಿಸುಗಳ ಜೊತೆಗೂ ಸೇವಿಸಬಹುದು. ಆದರೆ ಊಟಕ್ಕೂ ಮುನ್ನ ಮತ್ತು ಊಟದ ಬಳಿಕ ತಕ್ಷಣ, ಟೀ ಕಾಫಿಗಳನ್ನು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ.
ರಾತ್ರಿ ಮಲಗುವ ಮುನ್ನ ಸಹ ಟೀ, ಕಾಫಿ ಕುಡಿಯಲೇ ಬಾರದು, ಏಕೆಂದರೆ ಇದು ನಿದ್ದೆಯ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದರಿಂದ ತಡರಾತ್ರಿಯ ವರೆಗೂ ನಿದ್ದೆಯೇ ಬಾರದಿರಬಹುದು. ವ್ಯಾಯಾಮದ ಸಮಯಕ್ಕೂ ಮುನ್ನ ಕೊಂಚ ಕಾಫಿ ಕುಡಿದು ಕೆಲವು ನಿಮಿಷಗಳ ಬಳಿಕ ವ್ಯಾಯಾಮವನ್ನು ಪ್ರಾರಂಭಿಸಿದರೆ ಇದರಿಂದ ಮನಸ್ಸು ಹಾಗೂ ದೇಹ ಎರಡೂ ಉಲ್ಲಸಿತಗೊಳ್ಳುತ್ತವೆ ಎಂದು ದೇಹದಾರ್ಢ್ಯ ಪಟುಗಳು ಅಭಿಪ್ರಾಯ ಪಡುತ್ತಾರೆ.
ದಿನವೊಂದಕ್ಕೆ ಎಷ್ಟು ಸಾರಿ ಚಹಾ ಕುಡಿಯಬಹುದು..?
Image Credits : Orissa Post
ಕೆಲವೊಬ್ಬರು ದಿನವೊಂದಕ್ಕೆ ಹತ್ತಕ್ಕಿಂತ ಅಧಿಕ ಬಾರಿ ಚಹಾ ಸೇವನೆ ಮಾಡುತ್ತಾರೆ, ಮಾರ್ನಿಂಗ್ ಕಾಫಿ, ಟೀ, ಬ್ರೇಕ್ಫಾಸ್ಟ್, ಮೀಟಿಂಗ್, ಇವಿನಿಂಗ್ ಚಾಟ್ಸ್, ತಲೆನೋವು, ಫ್ರೆಂಡ್ಸ್ ಔಟಿಂಗ್ ಹೀಗೆ ನಾನಾ ನೆಪಗಳ ಹೆಸರಿನಲ್ಲಿ ಕಾಫಿ, ಟೀ ಕಂಟಿನ್ಯೂ ಆಗುತ್ತಲೇ ಇರುತ್ತದೆ. ಆದರೆ ದಿನವೊಂದಕ್ಕೆ ಹೆಚ್ಚೆಂದರೆ 3 ಬಾರಿ ಚಹಾ ಸೇವನೆ ಮಾಡಬಹುದು. ಅದಕ್ಕಿಂತ ಹೆಚ್ಚಾದರೆ ಆರೋಗ್ಯಕ್ಕೆ ಹಾನಿ ಅಂತಾರೆ ತಜ್ಞರು. ಇವಿಷ್ಟೇ ಅಲ್ಲದೆ ಕಾಫಿ, ಟೀ ಸೇವನೆಯ ಪ್ರಮಾಣ ಇಡಿಯ ದಿನದಲ್ಲಿ ಮಿತವಾಗಿರುವುದೂ ಅಗತ್ಯ. ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ, ಟೀ ಸೇವನೆ ಹೆಚ್ಚು ಉಪಕಾರಿಯಂತೂ ಇಲ್ಲ.
ಯಾವ ರೀತಿಯ ಚಹಾ ಹೆಚ್ಚು ಅಪಾಯಕಾರಿ..?
Image credits : Hungrito
ಭಾರತದಲ್ಲಿ ಟೀ ಕುಡಿಯುವ ತೊಂಭತ್ತು ಶೇಖಡಾ ಜನರಲ್ಲಿ ಎಂಭತ್ತೊಂಭತ್ತು ಶೇಕಡಾ ಜನರು ಹಾಲು ಸೇರಿಸಿದ ಟೀ ಕುಡಿಯುತ್ತಾರೆ. ಉಳಿದವರು ಕಪ್ಪು ಟೀ ಅಥವಾ ಬ್ಲಾಕ್ ಟೀ ಸೇವಿಸುತ್ತಾರೆ. ಕಪ್ಪು ಟೀ ಎಂದರೆ ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಟೀ. ಇದು ತೂಕ ಇಳಿಸಲು ಉತ್ತಮವಾದರೂ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಆಮ್ಲೀಯತೆ ಹೆಚ್ಚುತ್ತದೆ, ಇದರಿಂದ ಹೊಟ್ಟೆಯ ಜೀರ್ಣರಸಗಳೂ ಪ್ರಭಾವಕ್ಕೊಳಗಾಗಿ ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆ ತುಂಬಿರುವ ಹುಸಿಭಾವನೆಯನ್ನು ಮೂಡಿಸುತ್ತದೆ. ಅಲ್ಲದೆ ಹೆಚ್ಚು ಪುಡಿ ಬಳಸಿದ ಅಥವಾ ಸ್ಟ್ರಾಂಗ್ ಟೀ ಕುಡಿದರೆ ಅದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಆಮ್ಲಗಳು ಜೀರ್ಣರಸಗಳ ರಚನೆಯನ್ನೇ ಬದಲಿಸಿಬಿಡುತ್ತವೆ. ಇದು ಅಲ್ಸರ್, ಹುಳಿತೇಗು, ಹೊಟ್ಟೆಯುರಿ, ಎದೆಯುರಿ ಮೊದಲಾದವುಗಳಿಗೆ ನೇರವಾಗಿ ಕಾರಣವಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3vFMvZi
June 19, 2021 at 09:17AM