ಪೈಥಾಗೋರಸ್ ಸಿದ್ಧಾಂತ ಮೊದಲು ಕಂಡು ಹಿಡಿದಿದ್ದು ಗ್ರೀಕರಲ್ಲ..ಭಾರತೀಯರು..!
Featured Image Credits : Onmanorama
ಗಣಿತಶಾಸ್ತ್ರದಲ್ಲಿ ಬಹಳ ಹೆಸರುವಾಸಿಯಾಗಿರುವುದು ಪೈಥಾಗೋರಸ್ನ ನಿಯಮ. ಈ ಸಿದ್ಧಾಂತವನ್ನು ಗ್ರೀಕ್ ದೇಶದ ಒಬ್ಬ ಅಯಾನಿಯನ್ ಪಂಗಡದ ಗ್ರೀಕ್ ತತ್ವಜ್ಞಾನಿ ಪೈಥಾಗೋರಸ್ ಕಂಡು ಹಿಡಿದನು. ಪೈಥಾಗರಿಯನಿಸಮ್ ಎಂಬ ಧಾರ್ಮಿಕ ಪಂಥದ ಚಳುವಳಿನ್ನು ಹುಟ್ಟುಹಾಕಿದರು. ಇವರನ್ನು ಒಬ್ಬ ಮಹಾನ್ ಗಣಿತಜ್ಞ, ಸಂತ ಮತ್ತು ವಿಜ್ಞಾನಿಯೆಂದು ಗೌರವಿಸಲಾಗಿದೆ. ಆದರೂ, ಕೆಲವರು ಗಣಿತ ಮತ್ತು ನೈಸರ್ಗಿಕ ತತ್ವಶಾಸ್ತ್ರಕ್ಕೆ ಇವರ ಕೊಡುಗೆಯ ವ್ಯಾಪ್ತಿಯನ್ನು ಪ್ರಶ್ನಿಸಿದ್ದಾರೆ. 'ಗ್ರೀಕರಲ್ಲಿ ಅತ್ಯಂತ ಸಮರ್ಥ ತತ್ವಜ್ಞಾನಿಯೆಂದು ಹೆರೊಡೊಟಸ್ ಅಭಿಪ್ರಾಯಪಟ್ಟಿದ್ದಾರೆ.
ಪೈಥಾಗೋರಸ್ನ ಪ್ರಕಾರ, ಜಗತ್ತಿನ ಪ್ರತಿಯೊಂದು ಬೆಳವಣಿಗೆಯೂ ಗಣಿತದ ಪ್ರಕಾರ ನಡೆಯುತ್ತದೆ; ತತ್ವಜ್ಞಾನದ ಮೂಲಕ ಮೋಕ್ಷ ಹೊಂದಬಹುದು; ಆತ್ಮ ಪರಮಾತ್ಮನನ್ನು ಸೇರಬಹುದು; ಕೆಲವೊಂದು ಚಿಹ್ನೆಗಳು ಗೂಢಾರ್ಥ ಹೊಂದಿರುತ್ತವೆ; ಪಂಥವೊಂದರ ಎಲ್ಲಾ ಸದಸ್ಯರು ರಹಸ್ಯ ಹಾಗೂ ನಿಯತ್ತನ್ನು ಕಾಪಾಡಿಕೊಳ್ಳಬೇಕು ಹಾಗೂ ಸಂಗೀತದ ಸ್ವರಚಿಹ್ನೆಗಳಿಗೆ ಗಣಿತಾಂಕಗಳ ಮೌಲ್ಯವಿದೆ ಎಂದು ಹೇಳಲಾಗಿದೆ.
ಸಾಮೋಸ್ನ ಪೈಥಾಗೋರಸ್ ನಿಸ್ಸಂಶಯವಾಗಿ ಮೊದಲ ಶುದ್ಧ ಗಣಿತಜ್ಞ ಹಾಗೂ ತತ್ವಜ್ಞಾನಿ. ಗ್ರೀಸ್ ದೇಶದ ಸಾಮೋಸ್ ಎಂಬಲ್ಲಿ ಕ್ರಿಪೂ 570ರಲ್ಲಿ ಹುಟ್ಟಿದ ಪೈಥಾಗೋರಸ್ನ ತಂದೆ ನೆಸಾರ್ಚ್ಸ್ ಹಾಗೂ ತಾಯಿ ಪೈಥಾಯಿಸ್. ತಂದೆ ವೃತ್ತಿಯಿಂದ ವಜ್ರ ಪರೀಕ್ಷಕ ಮತ್ತು ವ್ಯಾಪಾರಿ. ತನ್ನ ಗಣಿತ ಸಿದ್ಧಾಂತ, ತತ್ವಜ್ಞಾನ ಪ್ರಸ್ತಾಪಗಳು ಹಾಗೂ ಹೊಸದೊಂದು ಧಾರ್ಮಿಕ ಪಂಥವನ್ನು ಹುಟ್ಟುಹಾಕಿದ ಕಾರಣಗಳಿಂದಾಗಿ ಪೈಥಾಗೋರಸ್ ಹೆಸರಾಗಿದ್ದಾನೆ. ಆದರೆ, ಇವೆಲ್ಲ ಮಾಹಿತಿ ಹೊರಬಂದಿದ್ದು ಪೈಥಾಗೋರಸ್ ಕ್ರಿಪೂ 475ರಲ್ಲಿ ಮೃತಹೊಂದಿದ ಶತಮಾನಗಳ ನಂತರ. ಇದರಿಂದಾಗಿ, ಆತನ ಕುರಿತಾಗಿ ಖಚಿತ ವಿವರಗಳು ಸಿಗುವುದು ಕಷ್ಟ. ಏಕೆಂದರೆ, ಆತನ ಬಗ್ಗೆ ಬಂದಿರುವ ಮೊದಮೊದಲಿನ ಬರಹಗಳು ಆತನನ್ನು ದೈವೀಪುರುಷ, ಅತಿಮಾನುಷ ಎಂಬಂತೆ ಬಿಂಬಿಸಿವೆ.
ಇದನ್ನು ಓದಿ : ಶಿಲ್ಪಕಲೆಯ ನೆಲೆವೀಡು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ
ಪೈಥಾಗೋರಸ್ ಬಾಲ್ಯವನ್ನು ಸಾಮೋಸ್ನಲ್ಲಿ ಕಳೆದನಾದರೂ, ಯೌವನದಲ್ಲಿ ಪೈಥಾಗೋರಸ್ ವ್ಯಾಪಕವಾಗಿ ಪ್ರವಾಸ ಮಾಡಿದ. ಜ್ಞಾನಾರ್ಜನೆ ಆತನ ಅಲೆದಾಟಕ್ಕೆ ಮುಖ್ಯ ಕಾರಣವಾಗಿತ್ತು. ಆತ ಉತ್ತಮ ಶಿಕ್ಷಣ ಪಡೆದಿದ್ದ. ಅಪಾರ ಜ್ಞಾನದಾಹವಿತ್ತು. ಹೊಸ ಹೊಸ ಪ್ರದೇಶಗಳನ್ನು ನೋಡುವ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಾಗೂ ಇವನ್ನು ಒರೆಗೆ ಹಚ್ಚಿ ಒಪ್ಪಿಕೊಳ್ಳುವ ಬುದ್ಧಿಯಿತ್ತು. ಆತನ ಗುರುಗಳ ಪೈಕಿ ಅಥವಾ ಆತನನ್ನು ಪ್ರಭಾವಗೊಳಿಸಿದವರ ಪೈಕಿ ಕನಿಷ್ಟ ಮೂರು ಜನ ತತ್ವಜ್ಞಾನಿಗಳಿದ್ದರು.
ತೇಲ್ಸ್ ಮತ್ತು ಆತನ ಶಿಷ್ಯ ಅನಾಕ್ಸಿಮ್ಯಾಂಡರ್ ಎಂಬುವವರು ಪೈಥಾಗೋರಸ್ನಲ್ಲಿ ಗಣಿತ ಕುರಿತ ಆಸಕ್ತಿ ಕೆರಳಿಸಿದರು. ಗಣಿತ, ಖಗೋಳಶಾಸ್ತ್ರಗಳ ಬಗ್ಗೆ ವಿವರಿಸಿದ ತೇಲ್ಸ್, ಹೆಚ್ಚಿನ ಕಲಿಕೆಗಾಗಿ ಈಜಿಪ್ತ್ಗೆ ಹೋಗುವಂತೆ ಸೂಚಿಸುತ್ತಾನೆ. ಸುಮಾರು 537ರಲ್ಲಿ ಈಜಿಪ್ತ್ಗೆ ತೆರಳಿದ ಪೈಥಾಗೋರಸ್, ಅಲ್ಲಿ ತನ್ನ ಕಲಿಕೆಯನ್ನು ಮುಂದುವರಿಸಿದ. ರೇಖಾಗಣಿತದಲ್ಲಿ ಬರುವ ಲಂಬತ್ರಿಕೋನದ ವಿಸ್ತಾರ ಅಳೆಯುವ ಸಿದ್ಧಾಂತವನ್ನು ಪೈಥಾಗೋರಸ್ ಕಂಡು ಹಿಡಿದಿದ್ದನಾದ್ದರಿಂದ, ಅದಕ್ಕೆ ಪೈಥಾಗೋರಸ್ ಪ್ರಮೇಯ ಎಂದೇ ಹೆಸರಿಡಲಾಗಿದೆ. ತನ್ನ ಕಾಲವಲ್ಲದೇ, ನಂತರದ ಕಾಲದ ತತ್ವಜ್ಞಾನಿಗಳಾದ ಅರಿಸ್ಟಾಟಲ್, ಪ್ಲೇಟೋ ಮುಂತಾದವರನ್ನು ಈತ ಪ್ರಭಾವಗೊಳಿಸಿದ್ದ ಎಂದು ಹೇಳುತ್ತಾರೆ.
ಇವಿಷ್ಟು ಪೈಥಾಗೋರಸ್ನ ನಿಯಮ, ಪೈಥಾಗೋರಸ್ನ ಬಗ್ಗೆಯಿರುವ ಮಾಹಿತಿ. ಆದರೆ ನಿಮಗೆ ಗೊತ್ತಾ ವಿಶ್ವವೇ ಕಂಡುಹಿಡಿದಿರುವ ಪೈಥಾಗೋರಸ್ನ ಸಿದ್ಧಾಂತವನ್ನು ಗ್ರೀಕರು ಕಂಡು ಹಿಡಿದಿದ್ದಾರೆ ಎಂದು ಹೇಳುತ್ತಾರದರೂ ಇದನ್ನು ನಿಜವಾಗಿ ಕಂಡು ಹಿಡಿದಿರುವುದು ಭಾರತೀಯರು ಎಂದು ತಿಳಿದುಬಂದಿದೆ. ಆದರೆ ದಾಖಲೆಗಳಲ್ಲಿ ಎಲ್ಲಾ ಕಡೆಯು ಪೈಥಾಗೋರಸ್ ಸಿದ್ಧಾಂತ ಗ್ರೀಕ್ ದೇಶದ್ದು ಎಂದು ಹೇಳಲಾಗುತ್ತಿದೆ.
ಭಾರತೀಯರು ಕಂಡು ಹಿಡಿದ ಪೈಥಾಗೋರಸ್ ನಿಯಮ..!
Image Credits : Vedicmathschool
ಭಾರತೀಯ ಪುರಾತನ ಕಾಲದ ಬೌದ್ಧಾಯನ ಋಷಿ ಪೈಥಾಗೋರಸ್ ನಿಯಮಗಳನ್ನು ವಿವರಿಸುವ ಬರಹವನ್ನು ಮೊದಲ ಬಾರಿ ಬರೆದಿದ್ದರು ಎಂದು ಹೇಳಲಾಗುತ್ತದೆ. ಆ ನಂತರದ ದಿನಗಳಲ್ಲಿ ಇದೇ ವಿಷಯವನ್ನು ಇಟ್ಟುಕೊಂಡು ಗ್ರೀಕ್ನಲ್ಲಿ ಪೈಥಾಗೋರಸ್ ನಿಯಮವನ್ನು ರೂಪಿಸಲಾಯಿತು. ಆ ಬಳಿಕ ಪೈಥಾಗೋರಸ್ ಸಿದ್ಧಾಂತ ಗ್ರೀಕರ ಸಂಶೋಧನೆ ಎಂದು ಗುರುತಿಸಲ್ಪಟ್ಟಿತು ಎನ್ನುತ್ತಾರೆ. ಬೌದ್ಧಾಯನ ಋಷಿಗಳು ಈ ಸಿದ್ಧಾಂತವನ್ನು ಮೊದಲ ಬಾರಿಗೆ ಕಲ್ಲುಗಳಲ್ಲಿ ಕೆತ್ತಿ ದಾಖಲಿಸಿ ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತದೆ. ಬೌದ್ಧಾಯನ ಸೂತ್ರದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.
ಇದನ್ನು ಓದಿ : ಇಲ್ಲಿದೆ ಬೆಳೆಯುವ ನಂದಿಯ ಪ್ರತಿಮೆ..! ಅಚ್ಚರಿ ಮೂಡಿಸುತ್ತಿದೆ ಪರಶಿವನ ದೇವಾಲಯದ ಪವಾಡ
ಬೌದ್ಧಾಯನ ಸೂತ್ರಗಳು ಧರ್ಮ, ದೈನಂದಿನ ಆಚರಣೆ, ಗಣಿತ ಇತ್ಯಾದಿಗಳನ್ನು ಒಳಗೊಂಡಿರುವ ವೈದಿಕ ಸಂಸ್ಕೃತ ಗ್ರಂಥಗಳಾಗಿವೆ. ಬೌದ್ಧಾಯನ ಸೂತ್ರ 6 ಅಧ್ಯಾಯಗಳನ್ನು ಒಳಗೊಂಡಿದೆ. ಇದು ಸ್ರಾತುಸೂತ್ರ, ಕರ್ಮಣತುಸೂತ್ರ, ದ್ವೈದಸೂತ್ರ, ಗೃಹಯಸೂತ್ರ, ಧರ್ಮಸೂತ್ರ, ಸುಲಭಸೂತ್ರಗಳಾಗಿವೆ. ಇದರಲ್ಲಿ ಬೌದ್ಧಾಯನ ಸುಲಭಸೂತ್ರದಲ್ಲಿ ಪ್ರಾಚೀನ ಕಾಲದ ಹಲವು ಗಣಿತ ಶಾಸ್ತ್ರಗಳ ಕುರಿತು ಉಲ್ಲೇಖಿಸಲಾಗಿದೆ. ಇದರಲ್ಲೇ ಸ್ಕ್ವೇರ್ ರೂಟ್ ಆಫ್ 2 ಮತ್ತು ಪೈಥಾಗೋರಸ್ ಸಿದ್ಧಾಂತದ ಬಗ್ಗೆ ವಿವರಿಸಲಾಗಿದೆ.
100 ವರ್ಷದ ಮೊದಲೇ ಸಿದ್ಧಾಂತದ ಬಗ್ಗೆ ತಿಳಿದಿದ್ದ ಭಾರತೀಯರು..!
ಹೌದು ಗ್ರೀಕರು ಕಂಡು ಹಿಡಿದರು ಎಂದು ಹೇಳಲಾಗುತ್ತಿರುವ ಪೈಥಾಗೋರಸ್ ನಿಯಮದ ಬಗ್ಗೆ ಭಾರತೀಯರು ಅವರಿಗಿಂತ ನೂರಾರು ವರ್ಷದ ಮೊದಲೇ ತಿಳಿದಿದ್ದರು. ಬೌದ್ಧಾಯನ ಕ್ರಿ.ಪೂ 800ರ ಸುಮಾರಿಗೆ ಜನಿಸಿದರೆ, ಪೈಥಾಗೋರಸ್ ಕ್ರಿ.ಪೂ 570ರಲ್ಲಿ ಜನಿಸಿದನೆಂದು ತಿಳಿದುಬಂದಿದೆ. ಪೈಥಾಗೋರಸ್ ಹೆಸರನ್ನು ಹೊಂದಿರುವ ಸಿದ್ಧಾಂತವು ಲಂಬ ಕೋನ ತ್ರಿಕೋನದಲ್ಲಿ ಇತರ ಎರಡು ಬದಿಗಳ ಚೌಕಗಳ ಮೊತ್ತಕ್ಕೆ ಸಮನಾಗಿರುತ್ತದೆ ಎಂದು ಹೇಳುತ್ತದೆ. ಇದನ್ನೇ ಬೌದ್ಧಾಯನದ ಸುಲಭ ಸೂತ್ರದಲ್ಲಿ ಹೇಳಲಾಗಿದೆ.
ಬೌದ್ಧಾಯನ ಸುಲಭಸೂತ್ರದಲ್ಲಿ ಈ ಸಿದ್ಧಾಂತವನ್ನು, ಲಂಬಕೋನ ತ್ರಿಕೋನದಲ್ಲಿ ದೊಡ್ಡದರಿಂದ ಚಿಕ್ಕದಾದ ಬದಿಯೊಂದಿಗೆ ಉದ್ದವನ್ನು ಕತ್ತರಿಸಿ. ಆ ಉದ್ದವಾದ ಒಂದು ಬದಿಗಳನ್ನು ಇನ್ನೊಂದು ಬದಿಗೆ ಎಳೆಯಿರಿ. ಅದು ಇನ್ನೊಂದು ಬದಿಗೆ ತಲುಪಿದಲ್ಲಿ, ಅದನ್ನು ಕಡಿತಗೊಳಿಸಲಾಗುತ್ತದೆ ಎಂದು ವಿವರಿಸಲಾಗಿದೆ. ಇದು ಪೈಥಾಗೋರಸ್ ಸಿದ್ಧಾಂತದಲ್ಲಿ ವಿವರಿಸಿರುವ ಸೂತ್ರವೇ ಆಗಿದೆ. ಹೀಗಾಗಿ ಗ್ರೀಕರು ಪೈಥಾಗೋರಸ್ ನಿಯಮವನ್ನು ಕಂಡು ಹುಡುಕುವ ಮೊದಲೇ ಭಾರತೀಯರು ಈ ಸಿದ್ಧಾಂತವನ್ನು ಕಂಡು ಹುಡುಕಿದ್ದರು ಎಂದು ಹೆಮ್ಮೆಯಿಂದ ಹೇಳಬಹುದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3jr3N9Y
June 28, 2021 at 05:17PM