ಉಗುರುಗಳ ಮೇಲೆ ಮೂಡುವ ಅರ್ಧ ಚಂದ್ರಾಕೃತಿಯ ಬಿಳಿಯ ಬಣ್ಣ ಏನನ್ನು ಸೂಚಿಸುತ್ತದೆ..?
Featured Image Credits : First Cry Parenting
ಸಾಮಾನ್ಯವಾಗಿ ಆರೋಗ್ಯದ ಬಗ್ಗೆ ಎಲ್ಲರೂ ಗಮನಹರಿಸುತ್ತಾರೆ. ಆದರೆ ಉಗುರಿನ ಆರೋಗ್ಯದ ಬಗ್ಗೆ ಹೆಚ್ಚಿನವರು ಗಮನಹರಿಸುವುದಿಲ್ಲ. ಹೀಗಾಗಿಯೇ ಇದು ಹಲವು ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಉಗುರುಗಳು ನಮ್ಮ ದೇಹದ ಒಂದು ಅಂಗಗಳಲ್ಲಿ ಒಂದು. ನಿರಂತರವಾಗಿ ಬೆಳೆಯುವ ಉಗುರನ್ನು ಆಗಾಗ ಸ್ವಚ್ಛ ಮಾಡುವುದು ಮತ್ತು ಕತ್ತರಿಸುವುದು ಮಾಡುತ್ತೇವೆ. ಅದಕ್ಕೂ ಹೆಚ್ಚಾಗಿ ಉಗುರಿನ ಆರೋಗ್ಯದ ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಆದರೆ ಉಗುರಿನ ಆರೋಗ್ಯ ಸರಿಯಿದ್ದರಷ್ಟೇ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಎಂಬುದು ನಿಜ.
ಅರೆ ಉಗುರಿಗೂ. ಬೆರಳಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ನೀವು ಅಂದುಕೊಳ್ಳುತ್ತಿರಬಹುದು. ಆದರೆ ವಾಸ್ತವದಲ್ಲಿ ಉಗುರಿಗೂ, ಆರೋಗ್ಯಕ್ಕೂ ಬಹಳ ಗಾಢವಾದ ನಂಟಿದೆ. ಅದು ಹೇಗೆ..ಯಾವ ರೀತಿ ಎಂಬುದನ್ನು ತಿಳಿಯೋಣ.
ವೈದ್ಯರು ನಡೆಸುವ ಮೇಲ್ನೋಟದ ಪರೀಕ್ಷೆಯಲ್ಲಿ ಶರೀರದ ಬಿಸಿ, ಕಣ್ಣುಗಳ ಒಳಭಾಗ, ನಾಲಿಗೆ ಮತ್ತು ಉಗುರುಗಳು ಪ್ರಮುಖವಾಗಿವೆ. ಇವುಗಳನ್ನು ನೋಡಿಯೇ ವೈದ್ಯರು ನಮ್ಮ ಆರೋಗ್ಯ, ಅನಾರೋಗ್ಯದ ಬಗ್ಗೆ ಹೇಳುವುದನ್ನು ನಾವು ಗಮನಿಸಿರಬಹುದು. ಉಗುರುಗಳಲ್ಲಿ ಕೆಲವು ವ್ಯತ್ಯಾಸಗಳು ಗೋಚರಿಸಿದರೆ ಆ ವ್ಯತ್ಯಾಸ ಯಾವುದೋ ದೈಹಿಕ ತೊಂದರೆಯಿಂದ ಉಂಟಾಗಿರುವುದಾಗಿ ವೈದ್ಯರು ಹೇಳುತ್ತಾರೆ. ಆರೋಗ್ಯವಂತರ ಉಗುರುಗಳು ಹೊಳಪಿನಿಂದ ಕೂಡಿರುತ್ತದೆ.
ಇದನ್ನು ಓದಿ : ಮೊಡವೆಗಳ ಗೊಡವೆಗೆ ಸುಲಭ ಮನೆ ಮದ್ದು..
ಉಗುರಿನಲ್ಲಿ ಬದಲಾಗುವ ಬಿಳಿಯ ಬಣ್ಣ ದೇಹದಲ್ಲಿ ಉಂಟಾಗುವ ಕೆಲವು ಅನಾರೋಗ್ಯ, ಜೀವಸತ್ವದ ಕೊರತೆ ಹಾಗೂ ಅದೃಷ್ಟಗಳನ್ನು ಪ್ರತಿಬಿಂಬಿಸುತ್ತದೆ. ಉಗುರುಗಳ ಬುಡದಲ್ಲಿ ಬಿಳಿ ಬಣ್ಣದ ಅರ್ಧ ಚಂದ್ರ ಆಕಾರವನ್ನು ನಾವು ಗಮನಿಸಬಹುದು. ಉಗುರಿನಲ್ಲಿ ಇರುವ ಈ ಚಿಹ್ನೆ ಯಾವೆಲ್ಲಾ ಸಂಗತಿಗಳನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ತಿಳಿಯೋಣ.
Image Credits : The Sun
ನಮ್ಮ ಉಗುರುಗಳು ನಮ್ಮ ಬೆರಳುಗಳಿಗೆ ರಕ್ಷಣೆ ನೀಡುತ್ತದೆ. ಉಗುರಿನ ಕೆಳಗೆ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಅದರ ರಕ್ಷಣೆ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಉಗುರು ನಮ್ಮ ಬೆರಳುಗಳ ಸೂಕ್ಷ್ಮ ಚರ್ಮವನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ಮನುಷ್ಯನ ಉಗುರುಗಳು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತವೆ. ಕೆಲವರು ಉಗುರುಗಳು ತುಂಬಾ ಗಟ್ಟಿಯಾಗಿದ್ದರೆ, ಮತ್ತೊಬ್ಬರ ಉಗುರುಗಳು ತುಂಬಾ ಮೃದುವಾಗಿರುತ್ತದೆ. ಅದಲ್ಲದೆ, ಕೆಲವು ಜನರ ಉಗುರುಗಳ ಮೇಲೆ ಅರ್ಧ ಚಂದ್ರನ ಆಕೃತಿ ಮೂಡಿರುತ್ತದೆ. ಇದನ್ನು ಲುನುಲಾ ಎನ್ನುತ್ತಾರೆ. ಈ ಆಕೃತಿಯೇ ನಮ್ಮ ಆರೋಗ್ಯವನ್ನು ಸೂಚಿಸುತ್ತದೆ.
ಚರ್ಮಗಳ ಚೀಲದೊಳಗಿನಿಂದ ಉಗುರುಗಳು ಬೆಳೆಯುತ್ತವೆ. ಇದನ್ನು ಮ್ಯಾಟ್ರಿಕ್ಸ್ ಎಂದು ಕರೆಯುವರು. ಇವು ಹೊಸ ಕೋಶಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಲುನುಲಾ ಎನ್ನುವುದು ಮ್ಯಾಟ್ರಿಕ್ಸ್ ನ ಗೋಚರ ಭಾಗವನ್ನು ಒಳಗೊಂಡಿರುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ.
ನಿಮ್ಮ ಕೈಯ ಉಗುರುಗಳನ್ನು ಪರಿಶೀಲಿಸಿ ಮತ್ತು ಉಗುರುಗಳಲ್ಲಿ ಬಿಳಿಯ ಅರ್ಧ ಚಂದ್ರ ಆಕೃತಿ ಮೂಡಿದೆಯೇ ಪರಿಶೀಲಿಸಿ. ಉಗುರಿನಲ್ಲಿ ಮೂಡಿದ ಈ ಅರ್ಧ ಚಂದ್ರಾಕೃತಿ ನಮ್ಮ ಆರೋಗ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ. ಉಗುರಿನಲ್ಲಿ ಮೂಡಿದ ಅರ್ಧ ಚಂದ್ರ ಬಿಳಿ ಮತ್ತು ಸ್ಪಷ್ಟವಾಗಿದ್ದರೆ, ನೀವು ಸಂಪೂರ್ಣವಾಗಿ ಉತ್ತಮ ಮತ್ತು ಆರೋಗ್ಯವಂತರು ಎಂದು ಅರ್ಥ. ಸಾಮಾನ್ಯವಾಗಿ, ಹೆಬ್ಬೆರಳಿನ ಮೇಲೆ ಅರ್ಧ ಚಂದ್ರಾಕೃತಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಇತರ ಬೆರಳುಗಳ ಮೇಲೆ ಅಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ.
ಇದನ್ನು ಓದಿ : ಅಂದಗೆಡಿಸುತ್ತಿದೆಯೇ ಡಾರ್ಕ್ ಸರ್ಕಲ್..?
ಬಿಳಿ ಬಣ್ಣದ ಲುನುಲಾ ಉತ್ತಮ ಆರೋಗ್ಯ ಸ್ಥಿತಿ ಹಾಗೂ ಜೀವಸತ್ವಗಳು ಸಮತೋಲನದಲ್ಲಿ ಇರುವುದನ್ನು ತಿಳಿಸುವುದು. ಹಾಗಾಗಿ ನಿಮ್ಮ ಉಗುರುಗಳ ಮೇಲೆ ಬಿಳಿ ಬಣ್ಣದ ಅರ್ಧ ಚಿಹ್ನೆ ಕಾಣಬಹುದು. ಲುನುಲಾ ಅನುಪಸ್ಥಿತಿಯು ಹಲವಾರು ವಿಷಯಗಳನ್ನು ತಿಳಿಸುತ್ತದೆ. ದೇಹದಲ್ಲಿ ಜೀವಸತ್ವದ ಕೊರತೆ, ಖನಿಜದ ಕೊರತೆ ಹಾಗೂ ವಿಟಮಿನ್ ಬಿ 12 ಕೊರತೆಯನ್ನು ಬಿಂಬಿಸುತ್ತದೆ. ರಕ್ತ ಹೀನತೆಯನ್ನು ಅನುಭವಿಸುತ್ತಿರುವವರ ಉಗುರಿನ ಮೇಲೆ ಅರ್ಧ ಚಂದ್ರಾಕೃತಿಯು ಇರುವುದಿಲ್ಲ ಶ್ವಾಸಕೋಶದ ಸಮಸ್ಯೆ, ಹೃದಯ ರೋಗ, ಮಧುಮೇಹ, ಉಗುರುಗಳ ಸಿಂಡ್ರೋಮ್ ಇರುವವರಲ್ಲಿಯೂ ಲುನುಲಾ ಕಾಣಿಸಿಕೊಳ್ಳುವುದಿಲ್ಲ.
ಉಗುರುಗಳ ಬಣ್ಣ ಬದಲಾವಣೆಯಾಗಿದ್ದರೆ ಇದು ಪ್ರಮುಖವಾಗಿ ಶಿಲೀಂಧ್ರದ ಧಾಳಿ ಮತ್ತು ಅದರ ಮೂಲಕ ಬಂದ ಜ್ವರದಿಂದ ಎಂದು ತಿಳಿಯಬಹುದು. ಅಂತೆಯೇ ಹೃದಯದ ತೊಂದರೆ, ಯಕೃತ್ನ ಕಾಯಿಲೆ, ರಕ್ತಹೀನತೆ, ಮೊದಲಾದ ಕಾಯಿಲೆಗಳು ಬದಲಾಗುವ ಉಗುರಿನ ಬಣ್ಣದಿಂದ ತಿಳಿದುಬರುತ್ತದೆ. ಉಗುರುಗಳಲ್ಲಿ ಒಂದು ವೇಳೆ ಅಡ್ಡಲಾಗಿ ಒಂದು ರೇಖೆ ಗುಳಿಯಂತೆ ಬಿದ್ದರೆ ಇದು ಶರೀರದಲ್ಲಿ ಸತುವಿನ ಕೊರತೆಯನ್ನು ಎದ್ದು ತೋರಿಸುತ್ತದೆ. ಸತುವಿನ ಕೊರತೆಯಿಂದ ಉಗುರುಗಳ ಕೆಳಗೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ ಹಾಗೂ ಸೋಂಕು ತಗಲಿಸಬಹುದಾದ ಬ್ಯಾಕ್ಟೀರಿಯಾಗಳ ಇರುವಿಕೆಯನ್ನು ಪ್ರಕಟಿಸುತ್ತದೆ.
ಇದನ್ನು ಓದಿ : ಹೆಚ್ಚು ಸಮಯ ಕಂಪ್ಯೂಟರ್ ಮುಂದೆ ಇರ್ತೀರ..? ಇರಲಿ ಕಣ್ಣಿನ ಬಗ್ಗೆ ಕಾಳಜಿ..!
ದೇಹದಲ್ಲಿ ರಕ್ತದ ಕೊರತೆ ಇದ್ದರೆ ಲುನುಲಾ ಉಗುರುಗಳಲ್ಲಿ ಗೋಚರಿಸುವುದಿಲ್ಲ. ಇದಲ್ಲದೆ, ವ್ಯಕ್ತಿಯ ಉಗುರಿನಲ್ಲಿ ಕಂಡುಬರುವ ಲುನುಲಾ ಬಿಳಿ ಬಣ್ಣಕ್ಕೆ ಬದಲಾಗಿ ಹಳದಿ ಅಥವಾ ನೀಲಿ ಬಣ್ಣದ್ದಾಗಿ ಕಾಣುತ್ತಿದ್ದರೆ, ಆ ವ್ಯಕ್ತಿ ಮಧುಮೇಹಕ್ಕೆ ಬಲಿಯಾಗುವ ಸಾಥ್ಯತೆ ಇರುತ್ತದೆ.
ಯಾರಲ್ಲಿ ಉಗುರುಗಳ ಮೇಲೆ ಲುನುಲಾ ಇರುವುದಿಲ್ಲವೋ ಅಂತಹವರು ಸದಾ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಅರ್ಥವಲ್ಲ. ಕೆಲವರಲ್ಲಿ ಲುನುಲಾ ಚರ್ಮದ ಕೆಳಭಾಗದಲ್ಲಿಯೇ ಅಡಗಿರಬಹುದು. ಇಲ್ಲವೇ ಸ್ವಲ್ಪ ಮಾತ್ರವೇ ಗೋಚರಿಸಿರಬಹುದು. ಹೀಗಾಗಿ ಉಗುರಿನಲ್ಲಿ ಲುನುಲಾ ಕಾಣಿಸಿಕೊಳ್ಳದಿದ್ದರೆ ಗಾಬರಿಯಾಗುವುದು ಬೇಕಿಲ್ಲ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಅಗತ್ಯ ಬಿದ್ದರೆ ಮಾತ್ರ ಚಿಕಿತ್ಸೆ ಪಡೆದುಕೊಳ್ಳಬಹುದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2UJLmmD
June 27, 2021 at 10:07AM