ಬೆಳಗ್ಗೆದ್ದು ಹೀಗೆ ಮಾಡಲೇಬೇಡಿ..ನಿಮ್ಮ ದಿನ ಹಾಳು ಮಾಡೋ ಅಭ್ಯಾಸಗಳಿವು..!
ಬೆಳಗ್ಗೆ ಎದ್ದು ನಾವೇನು ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೋ, ಪೂರ್ತಿ ದಿನ ಅದೇ ಗುಂಗು ನಮ್ಮನ್ನು ಆವರಿಸಿಕೊಂಡಿರುತ್ತದೆ. ಕೆಲವೊಮ್ಮೆ ಬೆಳಗ್ಗೆ ಖುಷಿಯಾಗಿದ್ದವರು ಪೂರ್ತಿ ದಿನ ಬೇಸರದಲ್ಲಿರುತ್ತಾರೆ ಅಥವಾ ಆಲಸಿಯಾಗಿರುತ್ತಾರೆ. ಹಲವರು ಇದನ್ನು ಗಮನಿಸಿರಬಹುದು. ಹೀಗಾಗಿ ನಾವು ಬೆಳಗ್ಗೆದ್ದು ಏನು ಕೆಲಸ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ನಾವು ಬೆಳಗ್ಗೆ ಮಾಡುವ ಚಟುವಟಿಕೆಗಳು ನಮ್ಮ ಪೂರ್ತಿ ದಿನದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನಾವು ಮುಂಜಾನೆ ಏನು ಮಾಡಿದರೆ ಸೂಕ್ತ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಬೆಳಗ್ಗೆದ್ದು ಯಾವ ಮಗ್ಗುಲಲ್ಲಿ ಎದ್ದೆನೋ ಏನೋ, ಒಂದು ಕೆಲಸವೂ ಸುಸೂತ್ರವಾಗಿ ಆಗುತ್ತಿಲ್ಲ ಎಂದು ಸಾಮಾನ್ಯವಾಗಿ ಜನ ಮಾತನಾಡಿರುವುದು ಕೇಳಿರಬಹುದು. ಹೀಗಾಗಿಯೇ ಮುಂಜಾನೆ ನಾವು ಯಾವ ದಿಕ್ಕಿನಿಂದ ಏಳುತ್ತೇವೆ. ಎದ್ದು ಯಾವ್ಯಾವ ಕೆಲಸವನ್ನು ಮಾಡುತ್ತೇವೆ ಅನ್ನೋದು ಬಹಳ ಮುಖ್ಯವಾಗಿದೆ. ಬೆಳಗ್ಗೆದ್ದು ನಾವು ಅನುಸರಿಸುವ ರೊಟೀನ್ ಚಟುವಟಿಕೆಗಳು ನಮ್ಮ ಸಂಪೂರ್ಣ ದಿನವನ್ನು ನಿರ್ಧರಿಸುತ್ತದೆ. ಮಾರ್ನಿಂಗ್ ರೊಟೀನ್ ಚೆನ್ನಾಗಿದ್ದರೆ, ಫುಲ್ ಡೇ ಹೆಚ್ಚು ಪ್ರೊಡಕ್ಟೀವ್ ಆಗಿರುತ್ತದೆ. ಹೀಗಾಗಿ ನಾವು ಬೆಳಗ್ಗೆದ್ದು ಏನು ಮಾಡಬೇಕು. ಏನು ಮಾಡಬಾರದು ಅನ್ನೋದನ್ನು ಮೊತ್ತ ಮೊದಲಾಗಿ ತಿಳಿದುಕೊಳ್ಳಬೇಕು.
ಪದೇ ಪದೇ ಅಲಾರಂ ಆಫ್ ಮಾಡುವುದು ಮಾಡಬೇಡಿ
Featured Image Credits : Freepik.com
ಇದು ಸಾಮಾನ್ಯವಾಗಿ ಎಲ್ಲರೂ ಅನುಸರಿಸುವ ಅಭ್ಯಾಸ. ಹಿಂದಿನ ದಿನ ನಾಳೆ ಬೆಳಗ್ಗೆ ಬೇಗ ಏಳಬೇಕು. ಎಲ್ಲಾ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಬೇಕು ಎಂದು ಅಂದುಕೊಳ್ಳುವುದು. ಮುಂಜಾನೆ ಬೇಗ ಏಳಲು ಉತ್ಸಾಹದಿಂದ ಅಲಾರಂ ಸೆಟ್ ಮಾಡಿಕೊಳ್ಳುವುದು. ಆದರೆ ಬೆಳಗ್ಗೆ ಅಲಾರಂ ಆಫ್ ಮಾಡಿ ಏಳದೆ ಆಲಸಿಯಂತೆ ಮತ್ತೆ ಮಲಗಿರುವುದು. ಕೆಲವರು ಅಲಾರಂ ಆಫ್ ಮಾಡಿ ಅರ್ಧ ಗಂಟೆ, 1 ಗಂಟೆ ಮುಂದೆ ಹಾಕಿ ಮಲಗಿಬಿಡುತ್ತಾರೆ. ಇನ್ನು ಕೆಲವರು ಪದೇ ಪದೇ ಅಲಾರಂ ಎಷ್ಟು ಸಾರಿ ಬಡಿದುಕೊಂಡರೂ ಏಳದೆ ಆಫ್ ಮಾಡಿ ಮಲಗಿಬಿಡುತ್ತಾರೆ. ಈ ಎರಡೂ ಅಭ್ಯಾಸಗಳೂ ಒಳ್ಳೆಯದಲ್ಲ.
ಅಲಾರಂನ್ನು ಆಗಿಂದಾಗೆ ಸ್ನೂಜ್ ಮಾಡುವುದರಿಂದ ಮೆದುಳು ಮತ್ತೆ ನಿದ್ರಾವಸ್ಥೆಗೆ ಜಾರುತ್ತದೆ. ಅಧ್ಯಯನಗಳ ಪ್ರಕಾರ ನೀವು ಒಂದು ಸಾರಿ ಅಲಾರಂ ಸ್ನೂಜ್ ಮಾಡಿ ಮತ್ತೆ ಸ್ಪಲ್ಪ ಹೊತ್ತಿನ ನಂತರ ಏಳುವುದರಿಂದ ಆರೋಗ್ಯಕ್ಕೂ ತೊಂದರೆಯಿದೆ. ಯಾಕೆಂದರೆ ನೀವು ಈ ಸಂದರ್ಭದಲ್ಲಿ ಗಾಢನಿದ್ರೆಯಿಂದ ಎದ್ದಿರುತ್ತೀರಿ. ಹೀಗಾಗಿ ಇದು ಮೆದುಳಿನ ಮೇಲೆ ಒತ್ತಡ ಹೇರಿ ಸಂಪೂರ್ಣ ದಿನ, ಟೆನ್ಶನ್, ಅಸಹನೆಯಿಂದ ನರಳುವಂತೆ ಮಾಡಿರುತ್ತದೆ. ಹೀಗಾಗಿ ಅಲಾರಂ ಸ್ನೂಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ.
ಅಲಾರಾಂ ಇಟ್ಟುಕೊಂಡರೆ ಬೇಗ ಏಳಬೇಕು. ಇಲ್ಲವಾದರೆ ತಾವೇ ಸ್ವತಃ ಬೇಗ ಏಳಬೇಕು. ಅದು ಬಿಟ್ಟು ಅಲಾರಂ ಸೌಂಡ್ ಮಾಡಿದಾಗಲ್ಲೆಲ್ಲಾ ಅದರ ತಲೆಗೆ ಬಡಿಯುತ್ತಿದ್ದರೆ ನಿದ್ದೆಯೂ ಅರ್ಧಂಬರ್ಧ ಆಗುತ್ತದೆ. ದಿನವಿಡೀ ಇದೇ ಆಲಸಿತನ ಇರುತ್ತದೆ. ಹೀಗಾಗಿ ಎಷ್ಟು ಗಂಟೆಗೆ ಏಳಲು ಸಾಧ್ಯವೋ ಸರಿಯಾಗಿ ಅಷ್ಟೇ ಸಮಯಕ್ಕೆ ಅಲಾರಂ ಇಟ್ಟು ಸಮಯಕ್ಕೆ ಸರಿಯಾಗಿ ಏಳುವ ಅಭ್ಯಾಸ ಒಳ್ಳೆಯದು.
ಬೆಡ್ ನಲ್ಲೇ ಬಿದ್ದುಕೊಂಡು ಮೊಬೈಲ್ ಬಳಸುತ್ತಿರಬೇಡಿ
Image Credits : Shape magazine
ನ್ಯೂ ಜನರೇಷನ್ ನ ನ್ಯೂ ಹ್ಯಾಬಿಟ್ ಇದು. ಎಷ್ಟು ಬೆಳಗ್ಗೆ ಎದ್ದರೂ ಅರ್ಧ ಗಂಟೆ, ಒಂದು ಗಂಟೆ ಬೆಡ್ ನಲ್ಲೇ ಬಿದ್ದುಕೊಂಡು ಮೊಬೈಲ್ ನೋಡುತ್ತಿರುವುದು. ಅಗತ್ಯವಿದೆಯೋ ಇಲ್ಲವೋ ಸುಮ್ಮನೆ ಸೋಷಿಯಲ್ ಮೀಡಿಯಾಗಳನ್ನು ಸ್ಕ್ರಾಲ್ ಮಾಡುವುದು. ರೀಲ್ಸ್ ನೋಡುವುದು, ಯೂಟ್ಯೂಬ್ ವೀಡಿಯೋಗಳನ್ನು ನೋಡುವುದು, ಟ್ರೆಂಡಿಂಗ್ ಟ್ವಿಟರ್ಗಳನ್ನು ನೋಡುವುದು. ಹೀಗೆ ಹಲವರದ್ದು ಹಲವು ಅಭ್ಯಾಸ, ಹೀಗೆ ಬೆಳಗ್ಗೆದ್ದು ಫುಲ್ ಸಿನೆಮಾ ನೋಡುವವರೂ ಇದ್ದಾರೆ. ಗೇಮ್ ಗೆ ಅಡಿಕ್ಟ್ ಆದವರಿಗಂತೂ ಹೊತ್ತು ಗೊತ್ತಿನ ಪರಿವೆಯಿಲ್ಲ. ಬೆಳಗ್ಗೆದ್ದು ಸಹ ಮೊಬೈಲ್ ಗೇಮಿಂಗ್ ನಲ್ಲಿ ಮುಳುಗಿಬಿಡುತ್ತಾರೆ.
ಬೆಳಗ್ಗೆದ್ದು ಫೇಸ್ಬುಕ್ ಪೇಜ್ ನಲ್ಲಿ ಮತ್ತೊಬ್ಬರು ಏನು ಪೋಸ್ಟ್ ಮಾಡಿದ್ದಾರೆ ಅನ್ನೋದು ನೋಡುವುದು. ಸೆಲೆಬ್ರಿಟಿಗಳು ಎಲ್ಲಿ ಹೋಗಿದ್ದಾರೆ. ಯಾವ ತರದ ಬಟ್ಟೆ, ಬ್ಯಾಗ್ ಇಟ್ಟುಕೊಂಡಿದ್ದಾರೆ ಎಂಬುದನ್ನು ಗಮನಿಸುವುದು. ಅಥವಾ ನಟ-ನಟಿಯರ ಬರ್ತ್ಡೇ, ಡ್ಯಾನ್ಸ್ ವೀಡಿಯೋಗಳನ್ನು ನೋಡುವುದು. ಇದ್ಯಾವುದರಿಂದಲೂ ಯಾರಿಗೂ ಪ್ರಯೋಜನವಿಲ್ಲ. ಬದಲಾಗಿ ಹೈಫೈ ಲೈಫ್ ನ್ನು ಮೆದುಳಿಗೆ ಪ್ರೋಗ್ರಾಂ ಮಾಡಿಟ್ಟಂತೆ ಆಗುತ್ತದೆ. ಆ ವೀಡಿಯೋಗಳಿಂದ ಇಡೀ ದಿನ ಯಾರಿಗೂ ಯಾವುದೇ ರೀತಿಯ ಪ್ರಯೋಜನ ಇಲ್ಲ. ಹೀಗಿದ್ದೂ ಪದೇ ಪದೇ ಅಂಥಹದ್ದೇ ವೀಡಿಯೋ ನೋಡುವುದು ಟೈಂ ವೇಸ್ಟ್ ಅಲ್ಲದೆ ಮತ್ತೇನು ಅಲ್ಲ.
ಇಮೇಲ್, ವಾಟ್ಸಾಪ್ ಬಳಸಬೇಡಿ
Image Credits : https://ift.tt/3g1gLsK
ಬೆಳಗ್ಗೆ ಎದ್ದ ತಕ್ಷಣ ಇಮೇಲ್, ವಾಟ್ಸಾಪ್ ಚೆಕ್ ಮಾಡುತ್ತಾ ಕೂರುವ ಅಭ್ಯಾಸವೂ ಒಳ್ಳೆಯದಲ್ಲ. ಇದರಿಂದ ನಿಮ್ಮ ದಿನದ ಆರಂಭವನ್ನೇ ಮತ್ತೊಬ್ಬರಿಗೆ ಕೊಟ್ಟಂತಾಗುತ್ತದೆ. ಇಮೇಲ್ ಗೆ ಪ್ರತಿಕ್ರಿಯೆ ನೀಡುವುದು, ಮೆಸೇಜ್ ಗಳಿಗೆ ರಿಪ್ಲೈ ಕಳುಹಿಸುವುದರಲ್ಲೇ ಸಮಯ ಹೋಗಿಬಿಡುತ್ತದೆ. ಇದು ನೀವು ದಿನವಿಡೀ ಆಕ್ಟಿವ್ ಆಗಿರುವುದನ್ನುಶೇ.30ರಷ್ಟು ತಗ್ಗಿಸುತ್ತದೆ. ಹೀಗಾಗಿ ತೀರಾ ಅನಿವಾರ್ಯವಾದರೆ ಮಾತ್ರ ಬೆಳಗ್ಗೆದ್ದು ಸೋಷಿಯಲ್ ಮೀಡಿಯಾಗಳನ್ನು ಬಳಸಿ. ಅಥವಾ ಬೆಡ್ ಮೇಲೆಯೇ ಮೊಬೈಲ್ ಫೋನಿಡುವ ಅಭ್ಯಾಸ ಇಟ್ಟುಕೊಳ್ಳಬೇಡಿ
ಬೆಳಗ್ಗೆದ್ದು ಕಾಫಿ ಕುಡಿಯುವುದು ಒಳ್ಳೆಯದಲ್ಲ
Image Credits : Freepik.com
ಗುಡ್ ಮಾರ್ನಿಂಗ್ ಜತೆ ಬಿಸಿಬಿಸಿ ಕಾಫಿ ಕುಡಿಯುವುದು ಹಲವರ ರೂಢಿ. ಇದು ಫುಡ್ ಡೇ ರಿಫ್ರೆಶ್ ಆಗಿರಲು ಸಹಾಯ ಮಾಡುತ್ತದೆ ಅನ್ನೋದು ಹಲವರ ಅಭಿಪ್ರಾಯ. ಆದರೆ ಆರೋಗ್ಯದ ದೃಷ್ಟಿಯಿಂದ ಬೆಳಗ್ಗೆದ್ದು ಕಾಫಿ ಕುಡಿಯವುದು ಒಳ್ಳೆಯದಲ್ಲ. ನಾವು ದಿನವಿಡೀ ಉಲ್ಲಸಿತವಾಗಿರಲು ದೇಹದಲ್ಲಿ ಕೋರ್ಟಿಸೋಲ್ ಅನ್ನೋ ಹಾರ್ಮೋನ್ ಉತ್ಪತ್ತಿಯಾಗಿರುತ್ತದೆ. ಆದರೆ ಕಾಫಿಯಲ್ಲಿರುವ ಕೆಫೀನ್ ಅಂಶ ಈ ಹಾರ್ಮೋನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಕಾಫಿಯಲ್ಲಿರುವ ಕೆಫೀನ್ ಅಂಶ ನಮ್ಮನ್ನು ಮತ್ತೆ ಮತ್ತೆ ಕಾಫಿ ಕುಡಿಯುವಂತೆ ಮಾಡಿ, ಕಾಫಿ ಅಡಿಕ್ಟ್ ಮಾಡಿಬಿಡುತ್ತದೆ. ಇದರಿಂದ ಸಹಜವಾಗಿ ದೇಹದಲ್ಲಿ ಕೋರ್ಟಿಸೋಲ್ ಅಂಶ ಕಡಿಮೆಯಾಗುತ್ತದೆ.
ಯೋಗ, ಧ್ಯಾನ ಮಾಡಿ
Image Credits : incredibleluxuryholidays.com
ಬೆಳಗ್ಗೆದ್ದಾಗ ನಾವು ಮನಸ್ಸು ಶಾಂತವಾಗಿರುತ್ತದೆ. ಹೀಗಾಗಿ ಬೆಳಗ್ಗೆದ್ದು ಯೋಗ, ಧ್ಯಾನ ಮಾಡುವ ಅಭ್ಯಾಸ ಒಳ್ಳೆಯದು. ಇದರಿಂದ ಮನಸ್ಸಿನಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇಡೀ ದಿನಕ್ಕೆ ಬೇಕಾಗುವ ಉತ್ಸಾಹ ಮೂಡುತ್ತದೆ. ಕೋಪ, ಸಿಟ್ಟು ನಿಯಂತ್ರಣದಲ್ಲಿದ್ದು, ಪೂರ್ತಿ ದಿನ ಖುಷಿಯಿಂದ ಕಳೆಯಲು ಸಾಧ್ಯವಾಗುತ್ತದೆ. ಈ ರೀತಿ ಧ್ಯಾನ ಮಾಡಿದ ಬಳಿಕ, ಇಡೀ ದಿನ ನೀವು ಯಾವ ಕೆಲಸ ಮಾಡಬೇಕು. ಯಾವ ಕೆಲಸ ಮಾಡಿದರೆ ಉತ್ತಮ ಅನ್ನೋದನ್ನು ಲಿಸ್ಟ್ ಮಾಡಿಕೊಳ್ಳಿ. ಸುಮ್ಮನೆ ದಿನಗಳು ಬಂದ ಹಾಗೇ ಕಳೆಯುವುದಲ್ಲ. ಆಯಾ ದಿನಕ್ಕೆ ತಕ್ಕಂತೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3550JYx
June 08, 2021 at 10:54AM