ರಾಮಾಯಣದ ಪಕ್ಷಿ ಬಿದ್ದ ಸ್ಥಳದಲ್ಲಿ ಜಟಾಯು ಅರ್ಥ್ ಸೆಂಟರ್..!
Featured Image Source : Sawdust.online
ಭಾರತ ದೇಶಕ್ಕೆ ಪ್ರಾಚೀನವಾದ, ಅತ್ಯದ್ಭುತವಾದ, ಸಂಸ್ಕೃತಿಯನ್ನೇ ಜೀವಾಳವಾಗಿಸಿಕೊಂಡಿರುವ ಹಿನ್ನಲೆಯಿದೆ. ಹೀಗಾಗಿ ಇಲ್ಲಿನ ಪೌರಾಣಿಕ ಹಿನ್ನಲೆಗಳು, ಚರಿತ್ರೆಗಳು ಈ ಅತ್ಯಮೂಲ್ಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸುವ ಕೆಲಸ ಹಿಂದಿನಿಂದಲೂ ಆಗುತ್ತಲೇ ಇದೆ. ಪುರಾಣದ ಚಿತ್ರಣ, ಸಂಸ್ಕೃತಿಯ ಸೊಬಗು ಪುಸ್ತಕ, ನಾಟಕ, ಪ್ರತಿಮೆ, ರೂಪಕಗಳ ಮೂಲಕ ಜನಮನದಲ್ಲಿ ಉಳಿಸಿ ಬೆಳೆಸುವ ಪ್ರಯತ್ನ ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇಶದ ಹಲವೆಡೆ ಪೌರಾಣಿಕ ಹಿನ್ನಲೆಯ ಚಿತ್ರಣ, ಮಹಾನ್ ನಾಯಕರ ಚಿತ್ರಣವನ್ನು ನೋಡಬಹುದು.
ಅಂಥಹದ್ದೇ ಒಂದು ಅದ್ಭುತ ಚಿತ್ರಣ ಜಟಾಯು ಅರ್ಥ್ ಸೆಂಟರ್.. ಜಟಾಯು ಪ್ರಕೃತಿ ಧಾಮ, ಜಟಾಯು ರಾಕ್ ಎಂದು ಸಹ ಇದನ್ನು ಕರೆಯುತ್ತಾರೆ. ಜಟಾಯು ಅರ್ಥ್ ಸೆಂಟರ್ ಇರುವುದು ಎಲ್ಲಿ..? ಅದರ ನಿರ್ಮಾತೃ ಯಾರು..? ಅದರ ವಿಶೇಷತೆಗಳೇನು..?ಪೌರಾಣಿಕ ಹಿನ್ನಲೆಯೇನು ಮೊದಲಾದ ವಿಚಾರಗಳು ಕುರಿತು ತಿಳಿಯೋಣ..
ಇದನ್ನು ಓದಿ : ಚಮೋಲಿಯ ರೂಪ್’ಕುಂಡ್ನಲ್ಲಿದೆ ಅಸ್ಥಿಪಂಜರಗಳ ಕೆರೆ
ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಆತನನ್ನು ಅಡ್ಡಗಟ್ಟಿ ಸೀತೆಯನ್ನು ರಕ್ಷಿಸಲು ಹೋರಾಡಿದ ಜಟಾಯು ಕತೆ ನೆನಪಿದೆಯಾ? ಹಾಗೆಯೇ ರಾವಣನ ಜತೆ ಯುದ್ಧ ಮಾಡಿ ರೆಕ್ಕೆ ಮುರಿದ ಜಟಾಯು ಬಿದ್ದದ್ದು ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲದಲ್ಲಿ ಎಂಬ ಐತಿಹ್ಯವಿದೆ. ಜಟಾಯು ಬಂದು ಬಿದ್ದ ಆ ಬಂಡೆಯನ್ನು ಜಟಾಯು ಬಂಡೆ ಎಂದೇ ಕರೆಯಲಾಗುತ್ತಿದೆ. ಈ ಜಟಾಯು ಬಂಡೆಯಲ್ಲೇ ಅತ್ಯದ್ಭುತ ಜಟಾಯು ಅರ್ಥ್ ಸೆಂಟರ್ ನಿರ್ಮಾಣವಾಗಿದೆ.
Image Source : Hindupad
ರಾಮಾಯಣದಲ್ಲಿ ಬರುವ ಪಾತ್ರಗಳಲ್ಲಿ ಜಟಾಯು ಎಂಬ ಪಕ್ಷಿಗೂ ಮಹತ್ವವಾದ ಸ್ಥಾನವಿದೆ. ರಾಮ, ಲಕ್ಷ್ಮಣ ಮತ್ತು ಸೀತೆಯರ ವನವಾಸ ಸಂದರ್ಭದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಪುಷ್ಪಕವಿಮಾನದಲ್ಲಿ ಕೊಂಡೊಯ್ಯುತ್ತಿರುತ್ತಾನೆ. ಸೀತಾಪಹರಣದ ಸಂದರ್ಭದಲ್ಲಿ ಜಟಾಯು ಪಕ್ಷಿ ಪುಷ್ಪಕ ವಿಮಾನವನ್ನು ಅಡ್ಡಗಟ್ಟಿ ಸೀತೆಯನ್ನು ರಕ್ಷಿಸಲು ಮುಂದಾದಾಗ ರಾವಣ ಜಟಾಯುವಿನ ರೆಕ್ಕೆಯನ್ನು ತುಂಡರಿಸುತ್ತಾನೆ. ರಾವಣನ ಖಡ್ಗದ ಏಟನ್ನು ತಿಂದ ಜಟಾಯು ಪಕ್ಷಿ ಕೆಳಗೆ ಬೀಳುತ್ತದೆ. ಇಲ್ಲೇ ಆ ನಂತರ ಬಂದ ರಾಮನ ತೊಡೆಯಲ್ಲಿ ಜಟಾಯು ಪಕ್ಷಿ ಪ್ರಾಣ ಬಿಡುತ್ತದೆ ಎಂಬ ಐತಿಹ್ಯವಿದೆ.
ಇದರ ನೆನಪಿಗಾಗಿ ಸಿನಿಮಾ ನಿರ್ದೇಶಕ ರಾಜೀವ್ ಅಂಚಲ್ ಎಂಬ ವ್ಯಕ್ತಿ ಕೇರಳದ ಕೊಲ್ಲಂನ ಚದಯಮಂಗಲಂ ಎಂಬಲ್ಲಿ ನಿರ್ಮಿಸಿದ ಪ್ರತಿಮೆ ಜಟಾಯು ಅರ್ಥ್ ಸೆಂಟರ್. ಬರೋಬ್ಬರಿ ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಈ ಜಟಾಯು ಪಾರ್ಕ್ನ್ನು ಸಿದ್ಧಪಡಿಸಲಾಗಿದೆ. ಆರಂಭಿಕವಾಗಿ ಇದಕ್ಕೆ ನೂರು ಕೋಟಿ ರೂ. ಬಂಡವಾಳವನ್ನು ಹಾಕಿ ಕೆಲಸ ಶುರು ಮಾಡಲಾಗಿತ್ತು.
ಇದನ್ನು ಓದಿ : ಅರಬ್ಬೀ ಸಮುದ್ರದ ಮಧ್ಯೆಯಿದೆ ಅದ್ಭುತ ದೇವಾಲಯ
ಜಟಾಯು ಅರ್ಥ್ ಸೆಂಟರ್ ಕೇರಳದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ರಾವಣನಿಂದ ಘಾಸಿಗೊಂಡು ಜಟಾಯು ಬಿದ್ಧದಂಥಾ ಸ್ಥಿತಿಯಲ್ಲಿಯೇ ಈ ಪಕ್ಷಿ ಶಿಲ್ಪವನ್ನು ನಿರ್ಮಿಸಲಾಗಿದೆ. ರಾವಣನ ಜತೆಗಿನ ಯುದ್ಧದಲ್ಲಿ ಜಟಾಯುವಿನ ಒಂದು ರೆಕ್ಕೆ ತುಂಡಾಗಿ ಹೋಗಿತ್ತು. ಆದ್ದರಿಂದ ಇಲ್ಲಿರುವ ಜಟಾಯುವಿಗೂ ಒಂದೇ ರೆಕ್ಕೆಯಿದೆ. ಕಲ್ಲಿನಲ್ಲಿ ಕೆತ್ತಲಾದ ಈ ದೈತ್ಯ ಜಟಾಯುವನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
65 ಎಕರೆ ಸ್ಥಳದಲ್ಲಿ ಈ ಜಟಾಯು ಪ್ರಕೃತಿ ಧಾಮವನ್ನು ನಿರ್ಮಿಸಲಾಗಿದೆ. 200 ಅಡಿ ಉದ್ದ,150 ಅಡಿ ಅಗಲ ಹಾಗೂ 70 ಅಡಿ ಎತ್ತರವಾಗಿರುವ ಈ ಶಿಲ್ಪ ಪ್ರಪಂಚದಲ್ಲಿರುವ ಅತಿ ದೊಡ್ಡ ಪಕ್ಷಿ ಪ್ರತಿಮೆಯಾಗಿದೆ. ನೆಲ ಭಾಗದಿಂದ 100 ಅಡಿ ಎತ್ತರದಲ್ಲಿ ಈ ನೇಚರ್ ಪಾರ್ಕ್ ಸಿದ್ಧಗೊಂಡಿದೆ. ಅರ್ಥ್ ಸೆಂಟರ್ ನ ಒಳಭಾಗದಲ್ಲಿ ಮ್ಯೂಸಿಯಂ ಹಾಗೂ ಜಟಾಯು-ರಾವಣ ಯುದ್ಧವನ್ನು ತೋರಿಸುವ 6D ಪರದೆಯ ಚಿತ್ರಮಂದಿರವನ್ನು ಹೊಂದಿದೆ. ಗುಡ್ಡದ ಮೇಲಿರುವ ಈ ಪ್ರತಿಮೆಯ ಬಳಿ ತೆರಳಲು ಕೇಬಲ್ ಕಾರ್ ಸೌಲಭ್ಯವಿರುವುದು ಇನ್ನೊಂದು ವಿಶೇಷತೆಯಾಗಿದೆ.
ಜಟಾಯು ಪಾರ್ಕ್ ಸಾಹಸಪ್ರಿಯರಿಗೆ ಅತ್ಯುತ್ತಮವಾಗಿದೆ. ಇಲ್ಲಿ ಶೂಟಿಂಗ್, ರಾಕ್ ಕ್ಲೈಬಿಂಗ್, ರೈಫಲ್ ಶೂಟಿಂಗ್, ಸೈಕ್ಲಿಂಗ್, ಜಮ್ಮರಿಂಗ್ ಮೊದಲಾದವುಗಳನ್ನು ಮಾಡಲು ಅವಕಾಶವಿದೆ. ಕೇಬಲ್ ಕಾರ್ ಮೂಲಕ ಜಟಾಯು ಸೆಂಟರ್ ಪ್ರಯಾಣವು ರೋಚಕರವಾಗಿರುತ್ತದೆ ಎಂದು ಪ್ರವಾಸಿಗರು ಹೇಳುತ್ತಾರೆ. ಕೇಬಲ್ ಕಾರ್ನೊಳಗಿಂದ ಸುತ್ತಮುತ್ತಲಿನ ಕಣಿವೆ ಹಾಗೂ ಪರ್ವತಗಳ ರೋಚಕ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಇದನ್ನು ಓದಿ : ಪಾಪಗಳನ್ನು ಕಳೆಯುವ ಲೋಹಾರ್ಗಲ್ ಕೊಳ..! ಮಹಾಭಾರತಕ್ಕೂ, ಪಾಂಡವರಿಗೂ ಈ ಕೊಳಕ್ಕೂ ನಂಟಿದೆ..!
ಜಟಾಯು ಪಾರ್ಕ್ನ ಇನ್ನೊಂದು ವಿಶಿಷ್ಟತೆಯೆಂದರೆ ಕೆರೆಯೊಂದಿದ್ದು, ಇದು ಜಟಾಯುವು ತನ್ನ ಪ್ರಾಣವನ್ನು ಬಿಡುವಾಗ, ತನ್ನ ಕೊಕ್ಕಿನಿಂದ ಪರ್ವತವನ್ನು ತಿವಿದಾಗ ಉಂಟಾದುದೆಂದು ಹೇಳಲಾಗುತ್ತದೆ. ಈ ಕೆರೆಯ ನೀರು ಎಂಥಹಾ ಬೇಸಗೆಯಲ್ಲೂ ಬತ್ತುವುದಿಲ್ಲವೆಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಇಲ್ಲೇ ಸಮೀಪದಲ್ಲೇ ರಾಮನ ದೇವಾಲಯವೂ ಇದೆ. ಇಲ್ಲಿನ ಮತ್ತೊಂದು ವಿಶೇಷತೆಯೆಂದರೆ, ಇಲ್ಲಿ ಅಳವಡಿಸಲಾಗಿರುವ ಮಳೆನೀರು ಕೊಯ್ಲಿನ ವ್ಯವಸ್ಥೆ. ಇದರಿಂದ ಪ್ರತೀ ವರ್ಷ ಸುಮಾರು 15 ಲಕ್ಷ ಲೀ. ನೀರು ಸಂಗ್ರಹವಾಗುತ್ತದೆ ಎಂದು ಹೇಳುತ್ತಾರೆ.
ಅಚ್ಚರಿಯ ಆಗರವಾಗಿರುವ ಜಟಾಯು ಪ್ರಕೃತಿ ಧಾಮ ಅಥವಾ ಜಟಾಯು ರಾಕ್ ಪೌರಾಣಿಕ ಹಿನ್ನಲೆಯನ್ನು ಉಳಿಸಿಕೊಂಡು ಹೋಗುತ್ತಿರುವ ಮಹತ್ಕಾರ್ಯ ಮಾಡುತ್ತಿರುವುದಂತೂ ನಿಜ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3ww3ldx
July 09, 2021 at 08:10PM