ಹಿಂದೂ ದೇವಾಲಯಗಳಲ್ಲಿ ಸರಿಯಾದ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಹೇಗೆ..?
ಹಿಂದೂ ಧರ್ಮ ವಿಶ್ವದಲ್ಲೇ ಅತ್ಯಂತ ಪುರಾತನ ಧರ್ಮವಾಗಿದೆ. ದೇವರು, ದೇವಾಲಯಗಳಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಶಸ್ತ್ರ್ಯವಿದೆ. ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಬಹಳಷ್ಟು ಮಹತ್ವ ಪಡೆದಿದೆ. ಆದರೆ ಹಿಂದೂ ಧರ್ಮದ ಈ ಸಂಪ್ರದಾಯಗಳನ್ನು ಪಾಲಿಸಲು ಇವುಗಳ ಬಗ್ಗೆ ಸಂಪೂರ್ಣ ತಿಳಿದಿರುವುದು ಅಗತ್ಯವಾಗಿದೆ. ದೇವಾಲಯಗಳಿಗೆ ಹೋಗುವ ಮೊದಲು ಅಲ್ಲಿ ಪಾಲಿಸಬೇಕಾದ ನಿಯಮ, ಪದ್ಧತಿ, ಆಚಾರಗಳನ್ನು ತಿಳಿದುಕೊಂಡಿರಬೇಕಿದೆ. ಅವುಗಳು ಯಾವ್ಯಾವು ಎಂದು ತಿಳಿಯೋಣ..
ದೇವರಿಗೆ ಪ್ರಾರ್ಥನೆ ಸಲ್ಲಿಸುವುದು

Image Credits : Pinterest
ಹಿಂದೂ ಧರ್ಮವು ಬಹುದೇವತಾವಾದಿ ಮತ್ತು ಏಕದೇವತಾವಾದಿಯಾಗಿದೆ. ಅಂದರೆ ಹಿಂದೂಗಳು ಅನೇಕ ದೇವರುಗಳನ್ನು ನಂಬುತ್ತಾರೆ, ಆದರೆ ಅವರೆಲ್ಲರೂ ಒಂದೇ ದೇವರ ವಿವಿಧ ರೂಪಗಳಾಗಿವೆ. ಇದರರ್ಥ ಹಿಂದೂ ಧರ್ಮವು ವೈವಿಧ್ಯಮಯವಾಗಿದೆ, ದೇವರುಗಳು ಮತ್ತು ಆಚರಣೆಗಳಲ್ಲಿ ವಿಭಿನ್ನತೆಯಿದೆ. ಆದರೆ ಎಲ್ಲದರ ಪ್ರತಿರೂಪವು ಕೊನೆಗೆ ದೇವರೊಬ್ಬನೇ ಆಗಿದ್ದಾನೆ.
ಹಿಂದೂ ಧರ್ಮವು ಸಾವಿರಾರು ದೇವರುಗಳನ್ನು ಹೊಂದಿದೆ. ಅದರಲ್ಲೂ ಒಂದೇ ದೇವರ ಹಲವು ರೂಪಗಳನ್ನು. ಅವತಾರಗಳನ್ನು ಪೂಜಿಸುವುದನ್ನು ನಾವು ಗಮನಿಸಬಹುದು. ಬ್ರಹ್ಮ ಹಿಂದೂ ಧರ್ಮದ ಪ್ರಮುಖ ದೇವರಾಗಿದ್ದು, ಅಸ್ತಿತ್ವ ಮತ್ತು ಅಸ್ತಿತ್ವವಿಲ್ಲದ್ದು ಎಂಬುದಾಗಿ ಎರಡನ್ನೂ ಪ್ರತಿನಿಧಿಸುತ್ತದೆ. ಬ್ರಹ್ಮ, ವಿಷ್ಣು ಮತ್ತು ಶಿವ, ಬ್ರಹ್ಮನ ಮೂರು ಪ್ರಮುಖ ಅಭಿವ್ಯಕ್ತಿಗಳಾಗಿವೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಸೃಷ್ಟಿಕರ್ತ ದೇವರು. ಸೃಷ್ಟಿಯನ್ನು ಸಂರಕ್ಷಿಸುವ ಜವಾಬ್ದಾರಿ ವಿಷ್ಣುವಿಗೆ ಇದೆ. ಅಂತಿಮವಾಗಿ, ಶಿವನು ವಿನಾಶ ಅಥವಾ ಅಸ್ತಿತ್ವದ ದೇವರು ಎಂದು ಗುರುತಿಸಲ್ಪಡುತ್ತಾನೆ.
ಇದನ್ನು ಓದಿ : ಯಾವ ದೇವರಿಗೆ ಯಾವ ಎಣ್ಣೆಯ ದೀಪ ಹಚ್ಚಬೇಕು..?
ಹಿಂದೂ ಧರ್ಮದಲ್ಲಿ ದೇವರನ್ನುಪೂಜಿಸುವಾಗ ಮಂತ್ರವನ್ನು ಪಠಿಸುತ್ತಾರೆ. ಇಂಥದ್ದೇ ಮಂತ್ರಗಳನ್ನು ಇದೇ ದೇವರಿಗೆ ಭಜಿಸಿದರೆ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಮಂತ್ರವನ್ನು ಪಠಿಸುವ ಮೊದಲು ಆ ಮಂತ್ರ ಪೂಜಿಸುತ್ತಿರುವ ದೇವರಿಗೇ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ‘ಓಂ ನಮೋ ಭಾಗವತ ವಾಸುದೇವ’ ಎಂಬುದು ಹಿಂದೂ ಧರ್ಮದ ಅತ್ಯಂತ ಜನಪ್ರಿಯ ಮಂತ್ರಗಳಲ್ಲಿ ಒಂದಾಗಿದೆ.
ದೇವರ ಮುಂದೆ ಜಪ ಮಾಡುವುದು

Image Credits : Meditation Magazine
ಜಪ, ದೇವರ ಹೆಸರನ್ನು ಮನಸ್ಸಿನಲ್ಲಿ ಕೇಂದ್ರೀಕರಿಸುವ ಮೂಲಕ ಮನಸ್ಸನ್ನು ಶುದ್ಧಿಗೊಳಿಸುವ ಒಂದು ಮಾರ್ಗವಾಗಿದೆ. ಜಪ ಒಂದು ಮಂತ್ರ ಅಥವಾ ಒಂದು ದೈವಿಕ ಶಕ್ತಿಯ ಹೆಸರಿನ ಚಿಂತನಶೀಲ ಪುನರುಕ್ತಿಯನ್ನು ಒಳಗೊಳ್ಳುವ ಒಂದು ಆಧ್ಯಾತ್ಮಿಕ ಕ್ರಿಯೆ. ಮಂತ್ರವನ್ನು ಆದಷ್ಟು ಮೆದುವಾಗಿ ಹೇಳಬಹುದು, ಅಥವಾ ಅದನ್ನು ಸಂಪೂರ್ಣವಾಗಿ ವಾಚಕನ ಮನಸ್ಸಿನಲ್ಲಿ ಹೇಳಿಕೊಳ್ಳಬಹುದು. ಜಪವನ್ನು ಪದ್ಮಾಸನದಲ್ಲಿ ಕುಳಿತುಕೊಂಡು ಹೇಳುತ್ತಾರೆ. ಮಂತ್ರವನ್ನು ಪುನರಾವರ್ತನೆಯಾಗಿ ಹೇಳುತ್ತಾ, ಜಪಮಾಲೆಯಂತೆಯೇ ಮಣಿಗಳ ದಾರದೊಂದಿಗೆ ಎಣಿಸಬೇಕು.
ಮಾಲಾದಲ್ಲಿ 108 ಮಣಿಗಳಿವೆ. ಮಂತ್ರ ಹೇಳುವಾಗ ಇದನ್ನು ಒಂದು ಸಾರಿಯಿಂದ ಹತ್ತು ಸಾರಿ ವರೆಗೆ ಪೂರ್ತಿಯಾಗಿ ತಿರುಗಿಸಲು ಯತ್ನಿಸಬೇಕು. ಜಪ ಮಣಿಯಲ್ಲಿ ದೊಡ್ಡ ಕಾಯಿ ಎಂದು ಕರೆಯಲ್ಪಡುವ ಒಂದು ದೊಡ್ಡ ಮಣಿಯೂ ಇರುತ್ತದೆ. ಜಪ ಮಾಡುವಾಗ ದೊಡ್ಡ ಮಣಿಯ ನಂತರ ನೇರವಾಗಿ ಮಣಿಯನ್ನು ಎಣಿಸಲು ಪ್ರಾರಂಭಿಸಿ ಮತ್ತು ನೀವು ಮಂತ್ರವನ್ನು ಪುನರಾವರ್ತಿಸುವಾಗಲೆಲ್ಲಾ ಅದನ್ನು ಹೆಬ್ಬೆರಳಿನಿಂದ ಸುತ್ತಿಕೊಳ್ಳಿ. ನೀವು ಮತ್ತೆ ದೊಡ್ಡ ಮಣಿಯನ್ನು ತಲುಪಿದಾಗ, ನೀವು ಜಪ ಮಾಡಿ ಮಣಿಗಳನ್ನು ತಿರುಗಿಸುತ್ತಾ ಒಂದು ಸುತ್ತು ಪೂರ್ತಿಗೊಳಿಸಿದ್ದೀರಿ ಎಂದರ್ಥ.
ಇದನ್ನು ಓದಿ : ಮನೆಯೊಳಗೆ ಶಂಖವಿದ್ದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಜಪ ಮಾಡಲು ಒಂದು ಉತ್ತಮ ಭಂಗಿ ಪದ್ಮಾಸನ. ಇದು ಮೂಲಭೂತ ಅಡ್ಡ-ಕಾಲಿನ ಸ್ಥಾನವಾಗಿದ್ದು, ಇದರಲ್ಲಿ ನೀವು ನಿಮ್ಮ ದೇಹದ ಭಂಗಿಯನ್ನು ನೇರವಾಗಿ ಮತ್ತು ನಿಮ್ಮ ಪಾದಗಳನ್ನು ನಿಮ್ಮ ವಿರುದ್ಧ ಕಾಲಿನ ತೊಡೆಯ ಮೇಲೆ ಇಡಬೇಕಾಗಿದೆ. ಜಪವನ್ನು ರೂಪಿಸುವಾಗ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಬಟ್ಟೆಯ ಮೇಲೆ ಕುಳಿತುಕೊಳ್ಳಬೇಕು.
ಪಠಣ ಮಾಡುವಾಗ ಆತುರಪಡಬಾರದು. ಪಠಣವನ್ನು ನಿಧಾನವಾಗಿ ನಿರ್ವಹಿಸಬೇಕು, ಅದರ ಮೇಲೆ ಕೇಂದ್ರೀಕರಿಸಿ, ನಿಮ್ಮ ಉಸಿರಾಟದ ನಿಧಾನಗತಿಯೊಂದಿಗೆ ಸಮಯವನ್ನು ನಿಗದಿಪಡಿಸಿ ಜಪ ಮಾಡುತ್ತಾ ಹೋಗಬೇಕು.
ಗುಂಪಲ್ಲಿ ಭಜನೆ ಸಲ್ಲಿಸುವುದು

Image Credits : weebly
ದೇವರ ಮುಂದೆ ಭಕ್ತಾಧಿಗಳು ಗುಂಪಾಗಿ ಕುಳಿತು ಭಜನೆ ಮಾಡುತ್ತಾರೆ. ಆದರೆ ಭಜನೆಯನ್ನು ಒಬ್ಬನೇ ಕುಳಿತು ಮಾಡುವುದಿಲ್ಲ. ದೇವರ ಮುಂದೆ ಭಕ್ತರ ಗುಂಪು ಕುಳಿತುಕೊಂಡು ದೇವರನ್ನು ಭಜಿಸುತ್ತಾರೆ. ದೇವಾಲಯಗಳು ಸಾಮಾನ್ಯವಾಗಿ ಭಜನೆ ಮಾಡುವ ಸಮಯವನ್ನು ಮುಂಚಿತವಾಗಿ ತಿಳಿಸುತ್ತವೆ. ಕೆಲವು ದೇವಾಲಯಗಳಲ್ಲಿ ಭಜನೆಯ ರೆಕಾರ್ಡ್ಗಳು ಲಭ್ಯವಿರುತ್ತದೆ. ಇದರಿಂದ ನೀವು ಮುಂಚಿತವಾಗಿ ಅಭ್ಯಾಸ ಮಾಡಬಹುದಾಗಿದೆ.
ದೇವಾಲಯಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುವುದು ಹೇಗೆ..?

Image Credits : Indiamart
ದೇವಾಲಯಕ್ಕೆ ತೆರಳುವ ಮುನ್ನ ಶಿಸ್ತುಬದ್ಧವಾಗಿ ಬಟ್ಟೆ ಧರಿಸುವುದು ಮುಖ್ಯವಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಮೈ ಕಾಣದಂತೆ ಮುಚ್ಚಿಕೊಳ್ಳುವ ಬಟ್ಟೆಗಳನ್ನು ಧರಿಸಬೇಕು. ತೋಳು, ಕಾಲುಗಳು ಸಂಪೂರ್ಣವಾಗಿ ಮುಚ್ಚಿರಬೇಕು. ಮಹಿಳೆಯರು ಲೋ ಕಟ್ ಇರುವ ಬ್ಲೌಸ್, ಬಹರಗಳಿರುವ ಬಟ್ಟೆಗಳನ್ನು ಧರಿಸಬಾರದು. ಪುರುಷರು ಪಂಚೆ ಮತ್ತು ಶರ್ಟ್ನ್ನು ಧರಿಸಬಹುದಾಗಿದೆ. ಮಹಿಳೆಯರು ಸೀರೆ, ಲಾಂಗ್ ಕುರ್ತಾ ಟಾಪ್ಗಳನ್ನು ಧರಿಸಬಹುದು. ವೆಸ್ಟರ್ನ್ ಶೈಲಿಯ ಬಟ್ಟೆಗಳನ್ನು ದೇವಾಲಯಗಳಿಗೆ ತೆರಳುವಾಗ ಧರಿಸಬಾರದು.
ಭಾರತದ ಕೆಲವು ದೇವಾಲಯಗಳಲ್ಲಿ ದೇವಾಲಯದ ಒಳಗೆ ವೆಸ್ಟರ್ನ್ ಶೈಲಿಯ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಲೆದರ್ ಬಟ್ಟೆ ಅಥವಾ ಆಭರಣಗಳನ್ನು ದೇವಾಲಯದೊಳಗೆ ಧರಿಸಬಾರದು. ದೇವಾಲಯದೊಳಗೆ ಜೋರಾಗಿ ಮಾತನಾಡುವುದನ್ನು ಅಥವಾ ನಗುವುದನ್ನು ಮಾಡಬೇಡಿ. ದೇವಸ್ಥಾನಗಳಲ್ಲಿ ಸರಸ-ಸಲ್ಲಾಪಗಳೂ ಸೂಕ್ತವಲ್ಲ. ನಿಮಗೆ ಆಹಾರವನ್ನು ನೀಡಿದರೆ, ಮೊದಲು ಇತರರನ್ನು ನೋಡಿ. ಅವರು ಪ್ರಾರ್ಥನೆ ಹೇಳುತ್ತಾರೆಯೇ ಎಂಬುದನ್ನು ಗಮನಿಸಿ ಮತ್ತು ಹಾಗಿದ್ದಲ್ಲಿ, ಆಹಾರವನ್ನು ತೆಗೆದುಕೊಳ್ಳುವ ಮೊದಲು ಅದೇ ರೀತಿ ಮಾಡಿ.
ಇದನ್ನು ಓದಿ : ಬಲಮುರಿ, ಎಡಮುರಿ ಗಣಪನ ಬಗ್ಗೆ ನಿಮಗೆ ತಿಳಿದಿರದ ವಿಷಯ
ದೇವಾಲಯದೊಳಗೆ ಪ್ರವೇಶಿಸುವಾಗ ನಿಮ್ಮ ಶೂಗಳನ್ನು ತೆಗೆಯಬೇಕಾಗುತ್ತದೆ. ಆದ್ದರಿಂದ, ತೆಗೆದುಹಾಕಲು ಸುಲಭವಾದ ಪಾದರಕ್ಷೆಗಳನ್ನು ಧರಿಸಿ ದೇವಾಲಯಗಳಿಗೆ ತೆರಳಿ. ಕೈಯಿಂದ ಮುಟ್ಟಿ ತೆಗೆಯುವ ಚಪ್ಪಲಿಗಳನ್ನು ದೇವಾಲಯಗಳಿಗೆ ಹೋಗುವಾಗ ಹಾಕದಿರಿ. ಚಪ್ಪಲಿ, ಶೂ, ಸಾಕ್ಸ್ ಗಳು ಕ್ಲೀನ್ ಆಗಿವೆ ಎಂದು ಖಚಿತಪಡಿಸಿಕೊಳ್ಳಿ.
ದೇವಾಲಯಗಳಿಗೆ ತೆರಳುವ ಮುನ್ನ ವೆಬ್ಸೈಟ್ಗಳಲ್ಲಿ ಪೂಜೆಯ ಸಮಯವನ್ನು ಗಮನಿಸಿಕೊಳ್ಳಿ. ಇದರಿಂದ ನೀವು ಪೂಜೆ ಸಮಯದಲ್ಲಿ ಸರಿಯಾಗಿ ದೇವಾಲಯಕ್ಕೆ ತಲುಪಬಹುದು. ದೇವಾಲಯದೊಳಗೆ ತೆರಳಿದ ಮೇಲೆ ತಲೆಯನ್ನು ಬಾಗಿಸಿ, ಎರಡೂ ಕೈ ಜೋಡಿಸಿ ಎಲ್ಲಾ ದೇವರಿಗೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿ. ಮೊಣಕಾಲನ್ನು ಬಗ್ಗಿಸಿ ಸಾಷ್ಟಾಂಗ ಬಿದ್ದು ದೇವರಿಗೆ ನಮಸ್ಕರಿಸಿ. ಕೆಲವು ದೇವಸ್ಥಾನದಲ್ಲಿ ಪುರುಷರಿಗೆ, ಮಹಿಳೆಯರಿಗೆ ಪೂಜೆಯ ಸಂದರ್ಭದಲ್ಲಿ ಪ್ರತ್ಯೇಕ ಸಾಲಿರುತ್ತದೆ. ಇದನ್ನು ಗಮನಿಸಿಕೊಳ್ಳಿ. ಜನರನ್ನು ಮಾತನಾಡಿಸುವಾಗ ಆಯಾ ದೇವಸ್ಥಾನದ ವಾತಾವರಣಕ್ಕೆ ತಕ್ಕಂತೆ ಮಾತನಾಡಿ. ದೇವಸ್ಥಾನದಲ್ಲಿ ಪರಸ್ಪರ ಹರಿ ಓಂ, ಸಾಯಿ ರಾಂ ನಮಸ್ತೆ ಎಂದು ಮಾತನಾಡುತ್ತಾರೆ.
ಪೂಜೆಯ ನಂತರ ಆರತಿ ಸ್ವೀಕರಿಸುವುದು ಹೇಗೆ..?

Image Credits : wikipedia
ಪೂಜೆಯ ಬಳಿಕ ಪುರೋಹಿತರು ಭಕ್ತರ ಮುಂದೆ ಆರತಿಯನ್ನು ತೆಗೆದುಕೊಂಡು ಬರುತ್ತಾರೆ. ಈ ಸಂದರ್ಭದಲ್ಲಿ ದೀಪದ ಬೆಳಕಿನ ಶಾಖ ಪಡೆದು ಕಣ್ಣಿಗೆ ಒತ್ತಿಕೊಳ್ಳಿ. ಇದೇ ರೀತಿ ಮೂರು ಬಾರಿ ಮಾಡಿ. ತಲೆಯ ಮೇಲೆ ಕೈಯನ್ನು ಹಿಂದಕ್ಕೆ ನೇವರಿಸಿ. ಈ ಆಚರಣೆಯು ನಿಮ್ಮೊಳಗಿನ ಚೈತನ್ಯವನ್ನು ಪ್ರತಿನಿಧಿಸುತ್ತದೆ. ಪುರೋಹಿತರು ಪ್ರಸಾದವನ್ನು ನೀಡುವಾಗ ಕೈಯನ್ನು ಒಂದರ ಮೇಲೆ ಒಂದರಂತೆ ಕಪ್ ಆಕಾರದಲ್ಲಿ ಹಿಡಿದುಕೊಳ್ಳಿ. ಈ ಸಂದರ್ಭದಲ್ಲಿ ನಿಮ್ಮ ಎಡಗೈ ಮೇಲೆ ನಿಮ್ಮ ಬಲಗೈಯಿರಬೇಕು. ಪುರೋಹಿತರು ನಿಮಗೆ ಪ್ರಸಾದದ ರೂಪದಲ್ಲಿ ತೀರ್ಥ ಅಥವಾ ಯಾವುದೇ ಹಣ್ಣನ್ನು ನೀಡಿದಾಗ ಅದನ್ನು ತಕ್ಷಣ ಸೇವಿಸಿ.
ಇದನ್ನು ಓದಿ : ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವುದು ಯಾಕೆ ? ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು..?
ಪುರೋಹಿತರು ಹಣೆಗೆ ಕುಂಕುಮ, ಬೂದಿ, ಅರಿಶಿನ ಇಡುತ್ತಾರೆ. ಇದು ನಮ್ಮೊಳಗಿನ ಚೇತನವನ್ನು ಶಕ್ತಿ ತುಂಬುವುದಾಗಿದೆ. ನಿಮ್ಮ ಹಣೆಯನ್ನು ಸ್ಪರ್ಶಿಸಲು ಪುರೋಹಿತರಿಗೆ ಅನುಮತಿಸಿ. ಸ್ವಲ್ಪ ಮುಂದಕ್ಕೆ ಬಾಗಿ ಹಣೆಗೆ ಕುಂಕುಮವಿಡಲು ಅನುವಾಗಿ. ದೇವಸ್ಥಾನದೊಳಗಿದ್ದಾಗ ಯಾವುದೇ ಧರ್ಮ, ಆಚಾರಗಳ ಬಗ್ಗೆ ಮಾತನಾಡುವುದು ಮಾಡದಿರಿ. ದೇವಸ್ಥಾನದೊಳಗೆ ಬರುವ ಮುನ್ನ ಮದ್ಯಪಾನ, ಧೂಮಪಾನ ಮಾಡದಿರಿ. ಸ್ನಾನ ಮಾಡಿ ಪರಿಶುದ್ಧರಾಗಿ ದೇವಾಲಯ ಪ್ರವೇಶಿಸಿ. ದೇವಾಲಯವೆಂಬುದು ಒಂದು ಪವಿತ್ರ ಸ್ಥಳ ಅನ್ನೋದನ್ನು ನೆನಪಿನಲ್ಲಿಡಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3jyRjNp
July 01, 2021 at 03:37PM