Featured Image Credits : wikipedia
ಪ್ರಪಂಚದಲ್ಲಿರುವ ನಿಗೂಢತೆಗಳು ಒಂದಲ್ಲ..ಎರಡಲ್ಲ..ಪ್ರಕೃತಿಯಲ್ಲಿರುವ ಕೆಲವೊಂದು ವೈಚಿತ್ರಗಳು ನಮಗೆ ಇಂದಿಗೂ ಉತ್ತರ ಸಿಗದ ಪ್ರಶ್ನೆಗಳಾಗಿ ಕುತೂಹಲಕಾರಿಯಾಗಿಯೇ ಉಳಿದುಕೊಂಡಿವೆ. ಪ್ರಾಚೀನ ಕುರುಹುಗಳು, ಆಧುನಿಕ ಅಧ್ಯಯನಗಳಿಂದಲೂ ಇಂಥಹಾ ರಹಸ್ಯಗಳು ಬಗೆಹರಿದಿಲ್ಲ. ಅಂಥಹಾ ನಿಗೂಢ ರಹಸ್ಯಗಳಲ್ಲೊಂದು ಕುಮರಿ ಖಂಡಂ..
ಕುಮರಿ ಖಂಡಂನ್ನು ಸಮುದ್ರದಲ್ಲಿ ಮುಳುಗಿಹೋದ ಖಂಡ. ಹಿಂದೂ ಮಹಾಸಾಗರದಲ್ಲಿ ಸಮುದ್ರದ ಮಟ್ಟ ಹಿಂದೆಂದಿಗಿಂತಲೂ ಹೆಚ್ಚಾದಾಗ ಮುಳುಗಿದ ಪ್ರದೇಶವೆಂದು ಗುರುತಿಸಲಾಗುತ್ತದೆ. ಆದರೆ ಅದು ಎಷ್ಟರಮಟ್ಟಿಗೆ ನಿಜ ಎಂಬುದು ಇವತ್ತಿನ ಮಟ್ಟಿಗೂ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿದೆ. ಹಾಗಿದ್ರೆ ಕುಮರಿ ಖಂಡಂ ಎಂದರೇನು..? ನಿಜವಾಗಲೂ ಸಮುದ್ರದಲ್ಲಿ ಮುಳುಗಿರುವ ಖಂಡನಾ ಎಂಬುದನ್ನು ತಿಳಿಯೋಣ..
ಇದನ್ನು ಓದಿ : ರಕ್ತದ ಬಣ್ಣಕ್ಕೆ ತಿರುಗಿದ ನದಿಯ ನೀರು..!
ಕುಮರಿ ಖಂಡಂ ಎಂದರೇನು..?
Image Credits : Medium
ಭಾರತದ ದಕ್ಷಿಣ ಭಾಗದ ಹಿಂದೂ ಮಹಾಸಾಗರದಲ್ಲಿರುವ ಕುಮರಿ ಖಂಡಂ ಪ್ರಾಚೀನ ತಮಿಳು ನಾಗರೀಕತೆಯ ಖಂಡವೆಂದು ಹೇಳಲಾಗುತ್ತದೆ. ತಮಿಳು ಪುರಾಣದಲ್ಲಿ ಇದನ್ನು ಸಮುದ್ರದಲ್ಲಿ ಮುಳುಗಿ ಹೋದ ಖಂಡವೆಂದು ಉಲ್ಲೇಖಿಸಲಾಗಿದೆ. ಇದಕ್ಕೆ ಕುಮರಿಕ್ಕಂಟಂ ಹಾಗೂ ಕುಮರಿ ನಾಡು ಎಂಬ ಹೆಸರುಗಳು ಸಹ ಇವೆ. ಹಿಂದೂ ಮಹಾಸಾಗರ ಹಾಗೂ ಫೆಸಿಫಿಕ್ ಮಹಾಸಾಗರದ ನಡುವಿನ ಈ ನಿಗೂಢ ಭೂಮಿಯನ್ನು ಪಾಶ್ಚಾತ್ಯ ಭೂವಿಜ್ಞಾನಿಗಳು ಲೆಮೂರಿಯಾ ಎಂದು ಸಹ ಕರೆಯುತ್ತಾರೆ.
ಭಾರತದ ದಕ್ಷಿಣ ಗಡಿಯಲ್ಲಿರುವ ಕನ್ಯಾಕುಮಾರಿ ಪ್ರದೇಶವು ಮೂಲತಃ ಕುಮರಿ ಖಂಡದ ಒಂದು ಭಾಗವೇ ಎಂದು ಪ್ರತಿಪಾದಕರು ವಾದಿಸಿದ್ದರು. ಕೆಲವರು ಇಡೀ ತಮಿಳುನಾಡು, ಇಡೀ ಭಾರತ ಪರ್ಯಾಯದ್ವೀಪ ಹಾಗೂ ಇಡೀ ಭಾರತ ದೇಶವೇ ಕುಮರಿ ಖಂಡದ ಒಂದು ಭಾಗವಾಗಿತ್ತೆಂದು ವಾದಿಸುತ್ತಿದ್ದರು. ಈ ಮೂಲಕ ತಮಿಳು ಭಾಷೆ ಹಾಗೂ ಅಲ್ಲಿನ ಸಂಸ್ಕೃತಿ ಜಗತ್ತಿನ ಅತ್ಯಂತ ಪ್ರಾಚೀನ ನಾಗರೀಕತೆಯೆಂದು ಪ್ರತಿವಾದಿಸಿದರು. ಆದರೆ ಈ ಬಗೆಗಿನ ಕುತೂಹಲ ದಿನೇ ದಿನೇ ಹೆಚ್ಚುತ್ತಿದ್ದರೂ ಕುಮರಿ ಖಂಡದ ರಹಸ್ಯ ಈವರೆಗೂ ಏನೆಂಬುದು ಸಾಬೀತಾಗಿಲ್ಲ.
ಇದನ್ನು ಓದಿ : ಸೀತಾ ಮಾತೆ ಹೆಸರಿನಲ್ಲಿದೆ ಭವ್ಯ ದೇಗುಲ! ನೇಪಾಳದ ಜಾನಕಿ ಮಂದಿರದ ವಿಶೇಷತೆ ಗೊತ್ತಾ?
ಸಮುದ್ರದ ಮಟ್ಟ ಏರಿಕೆಯಾದಾಗ ಈ ಖಂಡವು ಮುಳುಗಿ ಹೋಯಿತೆಂದೂ ಆ ಬಳಿಕ ಇಲ್ಲಿದ್ದ ತಮಿಳು ಭಾಷಿಗರು ಬೇರೆಡೆಗೆ ಸ್ಥಳಾಂತರಗೊಂಡರೂ ಎಂದು ಹೇಳಲಾಗುತ್ತದೆ. ಖಂಡವು ಮುಳುಗಿಹೋದ ಬಳಿಕ ತಮಿಳು ಭಾಷೆಯನ್ನಾಡುವ ಜನರು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ಜನರೊಂದಿಗೆ ಬೆರೆತರು. ಇದು ನಮ್ಮ ದೇಶದಲ್ಲಿ ಹೊಸ ಜನಾಂಗ, ಭಾಷೆ, ಸಂಸ್ಕೃತಿ ಹಾಗೂ ಹೊಸ ನಾಗರೀಕತೆಗಳ ಉಗಮಕ್ಕೆ ಸಾಕ್ಷಿಯಾಯಿತು ಎಂದು ಹೇಳಲಾಗುತ್ತದೆ.
ಕುಮರಿ ಖಂಡ ಮಾನವ ಕುಲದ ಮೂಲ ಎಂಬುದು ನಿಜಾನ..?
Image Credits : Tamilyouth.ca
ಕುಮರಿ ಖಂಡ ಮಾನವ ಕುಲದ ಮೂಲವೆಂಬ ಮಾತು ಸಹ ಕೇಳಿ ಬಂದಿದೆ. ಹಲವಾರು ಉಲ್ಲೇಖಗಳು ಜಗತ್ತಿನ ಎಲ್ಲ ನಾಗರಿಕತೆಗಳ ಮೂಲ ತಮಿಳು ಸಂಸ್ಕೃತಿಯೇ ಎಂದು ಒಪ್ಪಿದೆ. ಜಗತ್ತಿನ ಎಲ್ಲ ಭಾಷೆಗಳ ತಾಯಿ ಭಾಷೆ ತಮಿಳು ಎಂದು ಒಪ್ಪಿದೆ. ಕುಮರಿ ಖಂಡನಂ ಜನರ ಪರಂಪರೆ, ಸಂಸ್ಕೃತಿ ಸಂಪ್ರದಾಯಗಳೆಲ್ಲವೂ ಬಹುಪಾಲು ಈಗಿನ ತಮಿಳುನಾಡಿನಲ್ಲಿ ಬದುಕುಳಿದುಕೊಂಡಿದೆ ಎಂದು ಇವು ಹೇಳುತ್ತಿದೆ.
ಮಾನವ ಕುಲದ ಮೂಲ ಸ್ಥಳ ಆಫ್ರಿಕಾ ಖಂಡವಲ್ಲ, ಬದಲಾಗಿ ಅದು ಸುಮಾರು 14,000 ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಿಹೋದ ಕುಮರಿ ಖಂಡಂ ಎಂದು ಹೇಳಲಾಗುತ್ತದೆ. ಭಾರತಕ್ಕೂ ಆಫ್ರಿಕಾಗೂ ಮಧ್ಯಭಾಗದಲ್ಲಿದ್ದ ಈ ಪ್ರದೇಶದಲ್ಲಿ ಕಾಣಿಸಿಕೊಂಡ ಮನುಷ್ಯರಿಗೆ ಎರಡು ಕಡಲ ಮಾರ್ಗವಿತ್ತು. ಒಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣ ಮಾಡಿ ಆಫ್ರಿಕಾ ಸೇರುವುದು. ಮತ್ತೊಂದು ಪೂರ್ವ ದಿಕ್ಕಿನಲ್ಲಿ ಹೋಗಿ ಭಾರತ ಸೇರುವುದು. ಭಾರತಕ್ಕೆ ವಲಸೆ ಹೋದ ಜನ ಮತ್ತೆ ಉತ್ತರದಿಕ್ಕಿನೆಡೆಗೆ ಪ್ರಯಾಣ ಮಾಡಿ, ವಿಶ್ವದ ಇತರ ಖಂಡಗಳಲ್ಲಿ ನೆಲೆಯಾದರೆಂದು ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿ : ಸರೋವರದ ಮಧ್ಯೆಯಿರುವ ಕ್ಷೇತ್ರ ಕೇರಳದ ಅನಂತಪುರ ದೇವಸ್ಥಾನ
ಕಾಚಿಯಪ್ಪ ಶಿವಾಚಾರ್ಯರು ಸ್ಕಂದ ಪುರಾಣದ ತಮಿಳು ಆವೃತ್ತಿಯಾದ ಕಂದ ಪುರಾಣದಲ್ಲಿ ಕುಮರಿ ಖಂಡಂ ಎಂಬ ಪದವನ್ನು ಮೊದಲಿಗೆ ಬಳಸಿದ್ದರು. ತಮಿಳು ಪುನರುಜ್ಜೀವಕರು ಇದನ್ನು ತಮಿಳು ಭಾಷೆಯ ಪದವೆಂದು ಹೇಳಿದರೂ, ಆದರೆ ಕುಮರಿ ಖಂಡಂ ಅನ್ನೋ ಈ ಪದ ಕುಮರಿಕ ಖಂಡ ಎಂಬ ಸಂಸ್ಕೃತ ಪದದಿಂದ ಬಂದಿದೆ ಎಂದು ತಿಳಿದುಬಂದಿದೆ.
ಕಂದ ಪುರಾಣದ ಒಂದು ಭಾಗವಾದ ‘ಅಂದಕೊಸಪ್ಪಡಲಂ’ ಬ್ರಹ್ಮಾಂಡವನ್ನು ಈ ರೀತಿ ವರ್ಣಿಸಿದೆ. ಈ ಬ್ರಹ್ಮಾಂಡದಲ್ಲಿ ಹಲವಾರು ಜಗತ್ತುಗಳಿವೆ. ಪ್ರತಿಯೊಂದು ಜಗತ್ತಿನಲ್ಲೂ ಹಲವಾರು ಖಂಡಗಳಿವೆ. ಪ್ರತಿಯೊಂದು ಖಂಡದಲ್ಲೂ ನೂರಾರು ಸಾವಿರಾರು ರಾಜ್ಯಗಳಿವೆ ಎಂದು ಇದರಲ್ಲಿ ಹೇಳಲಾಗಿದೆ. ಪರಟನ್ ಎಂಬವನು ಇಂತಹ ಒಂದು ರಾಜ್ಯದ ಅರಸನಾಗಿದ್ದ. ಅವನಿಗೆ ಎಂಟು ಪುತ್ರರು ಹಾಗೂ ಒಬ್ಬ ಮಗಳಿದ್ದಳು. ಅವನು ತನ್ನ ರಾಜಾಂಗವನ್ನು ಒಂಬತ್ತಾಗಿ ಭಾಗಿಸಿ ತನ್ನ ಮಕ್ಕಳಿಗೆ ಹಂಚಿದನು. ಅವನ ಮಗಳಾದ ಕುಮರಿ ಆಳುತ್ತಿದ್ದ ಪ್ರದೇಶವೇ ಕುಮರಿ ಖಂಡಂ ಎಂದು ಕರೆಯಲಾಗಿದೆ.
ಅಲ್ಲಿ ಮಹಿಳೆಯರಿಗೆ ಗಂಡನನ್ನು ಆಯ್ಕೆ ಮಾಡುವ ಹಾಗು ಇಡೀ ಆಸ್ತಿಯನ್ನು ಕಟ್ಟಿ ಆಳುವ ಹಕ್ಕಿತ್ತೆಂದು ಹೇಳುತ್ತಾರೆ. ಅದರ ಪರಿಣಾಮವಾಗಿಯೇ ಆ ನೆಲವನ್ನು ಕುಮರಿ ನಾಡು ಎಂದು ಜನ ಕರೆಯಲಾರಂಭಿಸಿದರು. ಇದೇ ಕಾರಣಕ್ಕೆ ಕನ್ಯಾಕುಮರಿಯಲ್ಲಿ ದೇವಾಲಯದ ನಿರ್ಮಾಣವಾಯಿತು ಎಂದು ಹೇಳುತ್ತಾರೆ. ಅದೇನೆ ಇರ್ಲಿ ಕುಮರಿ ಖಂಡಂ ಎಂಬುದು ಇಂದಿಗೂ ನಿಗೂಢ ರಹಸ್ಯವಾಗಿಯೇ ಉಳಿದುಕೊಂಡಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/365MUtF
July 02, 2021 at 11:36AM