Image Source : Loreal Paris USA
ಮೇಕಪ್ ಅಂದಾಗ ಯಾವುದು ಇಷ್ಟ ಇದೆಯೋ ಇಲ್ವೋ ಲಿಪ್ ಸ್ಟಿಕ್ ಅಂತೂ ಹಲವರ ಫೇವರಿಟ್. ಮೇಕಪ್ ಪರ್ಫೆಕ್ಟ್ ಆಗಿದೆಯೋ ಇಲ್ಲವೋ ಲಿಪ್ ಸ್ಟಿಕ್ ಹಚ್ಚಿಬಿಟ್ಟರೆ ಲುಕಿಂಗ್ ಗುಡ್ ಅನ್ನೋದು ಹಲವರ ಅಭಿಪ್ರಾಯ. ಆದರೆ, ಲಿಪ್ ಸ್ಟಿಕ್ ಹಚ್ಚುವಾಗ ಕೆಲವೊಂದು ವಿಷಯಗಳನ್ನು ಗಮನಿಸದಿದ್ದರೆ ನೀವು ಇನ್ನಷ್ಟು ಸುಂದರವಾಗಿ ಕಾಣುವ ಬದಲು, ಮುಖದ ಅಂದ ಕೆಡುವ ಸಾಧ್ಯತೆಯಿದೆ. ಹಾಗಾಗಿ ಲಿಪ್ ಸ್ಟಿಕ್ ಹಚ್ಚುವಾಗ ಈ ಕೆಲವು ಮಿಸ್ಟೇಕ್ ಗಳನ್ನು ಮಾಡದಿರಿ.
ಒಡೆದ ತುಟಿಗೆ ಲಿಪ್ ಸ್ಟಿಕ್ ಹಚ್ಚಬೇಡಿ
Image Source : Readers Digest
ಚಳಿಗಾಲದಲ್ಲಿ ಸಾಮಾನ್ಯವಾಗಿ ಹಲವರಲ್ಲಿ ತುಟಿ ಒಡೆಯುವ ಸಮಸ್ಯೆ ಕಂಡು ಬರುತ್ತದೆ. ಹೀಗಾಗಿ ಇಂಥಹಾ ಸಂದರ್ಭದಲ್ಲಿ ಲಿಪ್ ಸ್ಟಿಕ್ ಹಚ್ಚುವುದನ್ನು ಕಡಿಮೆ ಮಾಡಿ. ಯಾಕೆಂದರೆ ಒಡೆದ ತುಟಿಯ ಮೇಲೆ ಲಿಪ್ ಸ್ಟಿಕ್ ಕಲರ್ ಸ್ಪ್ರೆಡ್ ಆಗುವ ಕಾರಣ ಚೆನ್ನಾಗಿ ಕಾಣುವುದಿಲ್ಲ. ಹೀಗಾಗಿ ಲಿಪ್ ಸ್ಟಿಕ್ ಬದಲಿಗೆ ಲಿಪ್ ಬಾಮ್ ಅಥವಾ ಲಿಪ್ ಗ್ಲೋಸ್ ಬಳಸಿ.
ಇದನ್ನು ಓದಿ : ಹಳೆ ಫ್ಯಾಷನ್ ಈಗ ಫುಲ್ ಟ್ರೆಂಡ್..
ತ್ವಚೆಗೆ ಹೊಂದುವ ಲಿಪ್ ಸ್ಟಿಕ್ ಕಲರ್ ಬಳಸಿ
Image Source : Beauty Hooked
ನಿಮ್ಮ ಫೇವರಿಟ್ ಕಲರ್, ಮಾಡೆಲ್ ಆ ಕಲರ್ ಲಿಪ್ ಸ್ಟಿಕ್ ನಲ್ಲಿ ಜಾಹೀತಾತಿನಲ್ಲಿ ಕಾಣಿಸಿಕೊಂಡರು ಅನ್ನೋ ಕಾರಣಕ್ಕೆ ಲಿಪ್ ಸ್ಟಿಕ್ ಸೆಲೆಕ್ಟ್ ಮಾಡಬೇಡಿ. ಲಿಪ್ ಸ್ಟಿಕ್ ಹಚ್ಚುವ ಮುನ್ನ ಆ ಲಿಪ್ ಸ್ಟಿಕ್ ಹೊಂದುತ್ತದೆಯೋ ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳಿ. ಹೆಚ್ಚು ಬೆಳ್ಳಗಿದ್ದವರಿಗೆ ಡಾರ್ಕ್ ಕಲರ್ಸ್ , ಗೋಧಿ ಮೈ ಬಣ್ಣದವರಿಗೆ, ಕಪ್ಪಗಿರುವವರಿಗೆ ಸ್ಪಲ್ಪ ತಿಳಿಯಾದ ಬಣ್ಣಗಳು ಹೆಚ್ಚು ಒಪ್ಪುತ್ತದೆ.
ಡ್ರೆಸ್ ಗೆ ತಕ್ಕುದಾದ ಲಿಪ್ ಸ್ಟಿಕ್ ಕಲರ್ ಆಯ್ಕೆ ಮಾಡಿ
Image Source : Stylecheer.com
ನೀವು ಧರಿಸುವ ಉಡುಪಿಗೆ ಸೂಕ್ತ ಎನಿಸುವ ಲಿಪ್ ಸ್ಟಿಕ್ ಕಲರ್ ಆಯ್ಕೆ ಮಾಡಿಕೊಳ್ಳಿ. ಗಾಢವಾದ ಬಣ್ಣದ ದಿರಿಸಿಗಳಿಗೆ ಡಾರ್ಕ್ ಲಿಪ್ ಸ್ಟಿಕ್, ತಿಳಿಬಣ್ಣದ ಉಡುಪುಗಳಿಗೆ ತಿಳಿಯಾದ ತುಟಿಬಣ್ಣವನ್ನು ಆಯ್ಕೆ ಮಾಡಿ. ಲಿಪ್ಸ್ಟಿಕ್ ಟ್ರೆಂಡ್ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ, ಕೆಲವೊಮ್ಮೆ ಕಡು ಬಣ್ಣದ ಲಿಪ್ಸ್ಟಿಕ್ ಟ್ರೆಂಡ್ ಬಂದರೆ, ಇನ್ನು ಸ್ವಲ್ಪ ದಿನದಲ್ಲಿ ಗ್ಲೋಸಿ ಟ್ರೆಂಡ್ ಬರಬಹುದು. ಹೀಗಾಗಿ ಬದಲಾಗುತ್ತಿರುವ ಟ್ರೆಂಡ್ ನ್ನು ಸಹ ಗಮನಿಸಿ.
ಇದನ್ನು ಓದಿ : ಕಬ್ಬು ಬಾಯಿಗಷ್ಟೇ ಸಿಹಿಯಲ್ಲ ಆರೋಗ್ಯಕ್ಕೂ ಹಿತ..!
ಲಿಪ್ಲೈನರ್ ಬಳಸದೆ ಲಿಪ್ಸ್ಟಿಕ್ ಹಚ್ಚಬೇಡಿ
Image Source : NaukriNama
ಜಸ್ಟ್ ಲಿಪ್ ಸ್ಟಿಕ್ ಮಾತ್ರ ಹಚ್ಚುವುದರಿಂದ ತುಟಿ ಅಂದವಾಗಿ ಕಾಣಲು ಸಾಧ್ಯವಿಲ್ಲ. ಬದಲಾಗಿ ಲಿಪ್ ಸ್ಟಿಕ್ ಹಚ್ಚಿಕೊಳ್ಳುವಾಗ ಲಿಪ್ ಲೈನರ್ ಬಳಸಲು ಮರೆಯದಿರಿ. ಲಿಪ್ ಸ್ಟಿಕ್ ಹಚ್ಚಿಯಾದ ಬಳಿಕ ತುಟಿಯ ಹೊರಗಿನಿಂದ ಲಿಪ್ ಲೈನರ್ ನಲ್ಲಿ ಶೇಪ್ ನೀಡಿ. ಇದರಿಂದ ಲಿಪ್ ಸ್ಟಿಕ್ ಮತ್ತಷ್ಟು ಎದ್ದು ಕಾಣುತ್ತದೆ.
ಇದನ್ನು ಓದಿ : ಹೇರ್ ಫಾಲ್ ಹೆಚ್ಚಾಗಿದ್ಯಾ..? ಮನೆಯಲ್ಲೇ ಕೂದಲ ಆರೈಕೆ ಹೇಗೆ..?
ಲಿಪ್ಸ್ಟಿಕ್ ಬಣ್ಣಕ್ಕಿಂತ ಲಿಪ್ಲೈನರ್ ಬಣ್ಣ ಹೆಚ್ಚು ಗಾಢವಾಗಿರಲಿ.
Image Credits : Zigzacmania
ಇನ್ನು ತುಂಬಾ ಗಾಢವಾಗಿ ಲಿಪ್ಸ್ಟಿಕ್ ಹಚ್ಚಿದರೆ ಮಿತಿಮೀರಿ ಮೇಕಪ್ ಮಾಡಿದಂತೆ ಕಾಣುವುದು. ಹಾಗಾಗಿ ಮೇಕಪ್ ಗೆ ತಕ್ಕಂತೆ ಲಿಪ್ ಸ್ಟಿಕ್ ಹಚ್ಚಿ. . ಲಿಪ್ಸ್ಟಿಕ್ ಹಚ್ಚಿದ ಬಳಿಕ ಜಾಸ್ತಿಯಾದರೆ ಟಿಶ್ಯೂ ಪೇಪರ್ನಲ್ಲಿ ಸ್ವಲ್ಪ ಮೆಲ್ಲನೆ ಒತ್ತಿ ತೆಗೆಯಿರಿ. ಇವಿಷ್ಟು ಟಿಪ್ಸ್ ಗಳನ್ನು ಲಿಪ್ ಸ್ಟಿಕ್ ಹಚ್ಚಿಕೊಳ್ಳುವಾಗ ಅಳವಡಿಸಿದಲ್ಲಿ ಲಿಪ್ ಸ್ಟಿಕ್ ನಿಮ್ಮ ಲುಕ್ ನ್ನು ಇನ್ನಷ್ಟು ಚಂದ ಕಾಣಿಸುವುದಲ್ಲಿ ನೋ ಡೌಟ್.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3httKTF
July 02, 2021 at 07:57PM