ಸೆಪ್ಟೆಂಬರ್17, ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟಿದ ಹಬ್ಬ. ದೇಶದ ಪ್ರಧಾನ ಸೇವಕರಾಗಿ ಕಾರ್ಯ ನಿರ್ವಹಿಸುತ್ತಾ, ಜಾಗತಿಕ ಮಟ್ಟದಲ್ಲಿ ಭಾರತವು ಪ್ರಜ್ವಲಿಸುವಂತೆ ಮಾಡುತ್ತಿರುವ ನರೇಂದ್ರ ಮೋದಿ ಅವರ ಜೀವನ ಬಹಳ ಸರಳ. ಅವರ ಜೀವನಾಧಾರಿತ ಕಥೆಗಳು ನಿಮ್ಮೆಲ್ಲರಿಗೂ ಗೊತ್ತೇ ಇರುತ್ತೆ. ಆದರೂ, ಯಾರಿಗೂ ಗೊತ್ತಿಲ್ಲದ ಮೋದಿ ಅವರ ಜೀವನದ 20 ಸೀಕ್ರೆಟ್ಗಳನ್ನು ಪ್ಲಾನೆಟ್ಟಿವಿ ನಿಮ್ಮ ಮುಂದೆ ಇಡುತ್ತಿದೆ.
1. ಮೋದಿ ಅವರ ಪೂರ್ಣ ಹೆಸರು ನರೇಂದ್ರ ದಾಮೋದರ್ದಾಸ್ಮೋದಿ. ಅವರು ಹುಟ್ಟಿದ್ದು 1950ರಲ್ಲಿ. ಅವರ ತಂದೆ ದಾಮೋದರ್ದಾಸ್ಮುಲ್ಚಂದ್ಮೋದಿ. ತಾಯಿ ಹಿರಾಬೆನ್ಮೋದಿ. ನರೇಂದ್ರ ಮೋದಿ ಹುಟ್ಟಿದ್ದು ಗುಜರಾತ್ನ ವಾಡ್ನಗರ್ನಲ್ಲಿ.
2. ಮೋದಿ ಅವರಿಗೆ 8 ವರ್ಷ ವಯಸ್ಸಿದಾಗ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಬಗ್ಗೆ ತಿಳಿಯಿತು. ಅವರು ನಿತ್ಯ ಶಾಖೆಗೆ ಹೋಗಲು ಆರಂಭಿಸಿದರು. ಅಲ್ಲಿ ಅವರಿಗೆ ವಕೀಲ್ಸಾಬ್ಎಂದೇ ಖ್ಯಾತರಾಗಿದ್ದ ಲಕ್ಷ್ಮಣರಾವ್ಇನಾಂದಾರ್ಅವರ ಪರಿಚಯವಾಯಿತು.
3. ಲಕ್ಷ್ಮಣರಾವ್ಇನಾಂದಾರ್ಅವರು ನರೇಂದ್ರ ಮೋದಿ ಅವರನ್ನು ಬಾಲಸೇವಕ (ಆರ್ಎಸ್ಎಸ್ನ ಕಿರಿಯರ ವಿಭಾಗ)ಗೆ ಸೇರಿಸಿದರು. ಅಷ್ಟೇ ಅಲ್ಲ, ಮೋದಿ ಅವರ ರಾಜಕೀಯ ಮಾರ್ಗದರ್ಶಕರೂ ಆದರು.
4. ಒಮ್ಮೆ ನರೇಂದ್ರ ಮೋದಿ ಅವರು ರಸಿಕ್ಭಾಯ್ದಾವೆ ಅವರ ಮುಂದಾಳತ್ವದ ಕಾಂಗ್ರೆಸ್ಕಾರ್ಯಕ್ರಮವೊಂದರಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದರು. ಆರಂಭದಲ್ಲಿ ಸಣ್ಣ ಹುಡುಗ ಎನ್ನುವ ಕಾರಣಕ್ಕೆ ಮೋದಿ ಅವರನ್ನು ದಾವೆ ಕಾರ್ಯಕ್ರಮದ ಸ್ವಯಂ ಸೇವಕರಾಗಿ ಸೇರಿಸಿಕೊಳ್ಳಲು ಹಿಂದೇಟು ಹಾಕಿದ್ದರಂತೆ. ಆದರೆ ಬ್ಯಾಡ್ಜ್ಗಳನ್ನು ಮಾರಾಟ ಮಾಡಿ ಹಣ ಸಂಗ್ರಹ ಮಾಡಿಕೊಡುವುದಾಗಿ ಮೋದಿ ಅವರು, ದಾವೆ ಅವರ ಮನವೊಲಿಸಿ, ಸ್ವಯಂ ಸೇವಕರಾಗಿ ದುಡಿದಿದ್ದರು.
5. ಮೋದಿ ಅವರಿಗೆ 12 ವರ್ಷ ವಯಸ್ಸಿದಾಗ ಅವರ ತಾಯಿ ಹೀರಾಬೆನ್ಅವರು,ತಮ್ಮ ಮಗನ ಜಾತಕವನ್ನು ಜ್ಯೋತಿಷಿ ಒಬ್ಬರಲ್ಲಿ ತೋರಿಸಿದ್ದರಂತೆ. ಆಗ ಆ ಜ್ಯೋತಿಷಿ, ಈತ ಭವಿಷ್ಯದಲ್ಲಿ ಶಂಕರಾಚಾರ್ಯರಂತೆ ಒಬ್ಬ ಮಹಾನ್ಸಂತನಾಗುತ್ತಾನೆ ಇಲ್ಲವೇ ರಾಜನಾಗುತ್ತಾನೆ ಎಂದಿದ್ದರಂತೆ.
6. ಮೋದಿ ಅವರು ಒಂದು ರಾತ್ರಿ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿ 2 ವರ್ಷಗಳ ಕಾಲ ಸಾಧುಗಳ ರೀತಿಯಲ್ಲಿ ಗುಹೆಗಳಲ್ಲಿ ತಪಸ್ಸು ಮಾಡುತ್ತಾ ಕಾಲ ಕಳೆದಿದ್ದರಂತೆ.
7. ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಪರಮ ಅನುಯಾಯಿ. ವಿವೇಕಾನಂದರ ಅನೇಕ ಪುಸ್ತಕಗಳನ್ನು ಮೋದಿ ಅವರು ಓದಿದ್ದಾರೆ. ಆ ಪುಸ್ತಕದಲ್ಲಿರುವ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವುದಾಗಿ ಮೋದಿ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.
8. ಮೋದಿ ಅವರು ಸಾತ್ವಿಕ ಆಹಾರ ಸೇವನೆ ಮಾಡುವುದನ್ನು ಬಹಳ ಸಣ್ಣ ವಯಸ್ಸಿನಲ್ಲಿಯೇ ಆರಂಭಿಸಿದ್ದರು. ಅವರು ಉಪ್ಪು, ಎಣ್ಣೆ, ಹಸಿ ಮೆಣಸಿನಕಾಯಿ ಸೇವನೆ ಮಾಡುವುದಿಲ್ಲ. ಇದರಿಂದಾಗಿಯೇ ಅವರು 72ನೇ ವಯಸ್ಸಿನಲ್ಲಿಯೂ ತರುಣರಂತೆ ಓಡಾಡಿಕೊಂಡು ಇದ್ದಾರೆ.
9. 1971ರ ಯುದ್ಧದ ಬಳಿಕ ಮೋದಿ ಅವರು ತಮ್ಮ ಮಾವನೊಂದಿಗೆ ಕೆಲಸ ಮಾಡುವುದನ್ನು ಬಿಟ್ಟು ಆರ್ಎಸ್ಎಸ್ನ ಪೂರ್ಣಾವಧಿ ಪ್ರಚಾರಕರಾಗಿ ಕೆಲಸ ಮಾಡಲು ಆರಂಭಿಸಿದರು.
10. ಇಂದಿರಾ ಗಾಂಧಿ ಪ್ರಧಾನ ಮಂತ್ರಿ ಆಗಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾರಣ, ಮೋದಿ ಅವರು ಅನೇಕ ದಿನಗಳ ಕಾಲ ಅಜ್ಞಾತವಾಸ ಅನುಭವಿಸಿದ್ದರಂತೆ.
11. 1975ರ ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಮೋದಿ ಅವರು ಗುಜರಾತಿಯಲ್ಲಿ ಪುಸ್ತಕವೊಂದನ್ನೂ ಬರೆದಿದ್ದಾರೆ. ಆ ಪುಸ್ತಕದ ಹೆಸರು ಸಂಘರ್ಷ್ಮಾ ಗುಜರಾತ್(ಗುಜರಾತ್ನಲ್ಲಾದ ಸಂಘರ್ಷಗಳು).
12. 1985ರಲ್ಲಿ ಮೋದಿ ಅವರನ್ನು ಆರ್ಎಸ್ಎಸ್ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ನಿಯೋಜಿಸಿತು.
13. 1990ರಲ್ಲಿ ನರೇಂದ್ರ ಮೋದಿ ಅವರು ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು. 1990ರಲ್ಲಿ ಲಾಲ್ಕೃಷ್ಣ ಅಡ್ವಾಣಿ ಅವರ ರಥ ಯಾತ್ರ ಆಯೋಜಿಸುವಲ್ಲಿ ಮೋದಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ 1991-92ರಲ್ಲಿ ಮುರಳಿ ಮನೋಹರ್ಜೋಶಿ ಅವರ ಏಕತಾ ಯಾತ್ರೆ ಆಯೋಜನೆಯಲ್ಲೂ ಮೋದಿ ಅವರ ಪಾತ್ರ ಬಹು ಮುಖ್ಯವಾಗಿತ್ತು.
14. ಮೋದಿ ಅವರು ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಆಶ್ರಮಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಕೋಲ್ಕತಾದಲ್ಲಿರುವ ಬೇಲೂರು ಮಠ, ಅಲ್ಮೋರಾದಲ್ಲಿರುವ ಅದ್ವೈತ ಆಶ್ರಮ, ರಾಜಕೋಟ್ನಲ್ಲಿರುವ ರಾಮಕೃಷ್ಣ ಮಠಕ್ಕೆ ಮೋದಿ ಭೇಟಿ ನೀಡುತ್ತಾರೆ.
15. 2001ರಲ್ಲಿ ಕೇಶುಭಾಯ್ಪಟೇಲ್ಅವರ ಆರೋಗ್ಯ ಹದಗೆಟ್ಟ ಕಾರಣ, ರಾಷ್ಟ್ರೀಯ ಬಿಜೆಪಿ ಗುಜರಾತ್ಗೆ ಹೊಸ ಮುಖ್ಯಮಂತ್ರಿಯ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದಿದ್ದು ನರೇಂದ್ರ ಮೋದಿ. ಇದಕ್ಕೂ ಮೊದಲೇ ಮೋದಿ ಅವರನ್ನು ಉಪಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಕೋರಲಾಗಿತ್ತು. ಆದರೆ ಮೋದಿ ನಿರಾಕರಿಸಿದ್ದರು. ನಾನು ಗುಜರಾತ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳುತ್ತೇನೆ ಇಲ್ಲವಾದರೆ ಇಲ್ಲ ಎಂದು ಅಡ್ವಾಣಿ, ಅಟಲ್ಬಿಹಾರಿ ವಾಜಪೇಯಿ ಅವರಿಗೆ ತಿಳಿಸಿದ್ದರಂತೆ.
16. ಅಕ್ಟೋಬರ್ 3, 2001ರಂದು ಮೋದಿ ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡರು. ವಿಶೇಷ ಎಂದರೆ ಮೋದಿ ಅವರು, ಅಲ್ಲಿಯ ತನಕ ಒಮ್ಮೆಯೂ ಶಾಸಕರಾಗಿರಲಿಲ್ಲ. ನೇರವಾಗಿ ಮುಖ್ಯಮಂತ್ರಿ ಆದರು. ಬಳಿಕ 2002ರ ಫೆಬ್ರವರಿಯಲ್ಲಿ ರಾಜಕೋಟ್ಪಶ್ಚಿಮ ಮತಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿ, ಕಾಂಗ್ರೆಸ್ನ ಅಶ್ವಿನ್ಮೆಹ್ತಾ ಅವರ ವಿರುದ್ಧ 14,728 ಮತಗಳಿಂದ ಜಯಗಳಿಸಿದರು.
17. ಟ್ವೀಟರ್ನಲ್ಲಿ 2ನೇ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕೀಯ ನಾಯಕ ನರೇಂದ್ರ ಮೋದಿ. 5 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.
18. ಮೋದಿ 2001ರಿಂದ 2014ರ ವರೆಗೂ ಸುದೀರ್ಘ 13 ವರ್ಷಗಳ ಕಾಲ ಗುಜರಾತ್ನ ಮುಖ್ಯಮಂತ್ರಿ ಆಗಿದ್ದರು.
19. 2014, 2015, 2017ರಲ್ಲಿ ಪ್ರತಿಷ್ಠಿತ ಟೈಮ್ಮ್ಯಾಗಜೀನ್ನ ವರ್ಷದ ವ್ಯಕ್ತಿ ಗೌರವಕ್ಕೆ ಮೋದಿ ಪಾತ್ರರಾಗಿದ್ದರು.
20. 2016ರಲ್ಲಿ ಮೇಡಂ ಟ್ಯುಸಾಡ್ಸ್ಮ್ಯೂಸಿಯಂನಲ್ಲಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2VRLKR0
September 17, 2021 at 01:06PM