ಕೊಹ್ಲಿ ನಂತರ ಆರ್ ಸಿಬಿ ಚುಕ್ಕಾಣಿ ಕರ್ನಾಟಕದ ಬ್ಯಾಟ್ಸ್ಮನ್ಗೆ ಸಿಗೋದು ಪಕ್ಕಾ?
Featured Image Source : DNA India
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಹೊತ್ತು ಟೂರ್ನಿಯಲ್ಲಿ ಆಡುತ್ತಿದೆ.
ಕಳೆದ 13 ಆವೃತ್ತಿಗಳಲ್ಲಿ ತಂಡ 3 ಬಾರಿ ಫೈನಲ್ ಪ್ರವೇಶಿಸಿದರೂ ಒಮ್ಮೆಯೂ ಕಪ್ ಗೆಲ್ಲಲು ಆಗಲಿಲ್ಲ.
ಟೀಂ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಆರ್ಸಿಬಿಯ ನಾಯಕನಾಗಿ 8 ವರ್ಷವಾದರೂ ಒಮ್ಮೆಯೂ ಆರ್ ಸಿಬಿ ಚಾಂಪಿಯನ್ ಆಗಲೇ ಇಲ್ಲ.
ಅಭಿಮಾನಿಗಳು ಕಾದ್ದಿದ್ದೇ ಬಂತು. ಆದರೂ ಇನ್ನೂ ತಮ್ಮ ಸಪೋರ್ಟ್ ನಿಲ್ಲಿಸಿಲ್ಲ. ಇದೀಗ 14ನೇ ಆವೃತ್ತಿಯ ಐಪಿಎಲ್ ಭಾಗ-2ರಲ್ಲಿ ಕೊಹ್ಲಿ ದಿಢೀರನೆ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದಾರೆ. ಈ ಸೀಸನ್ ಮುಗಿದ ಮೇಲೆ ಆರ್ಸಿಬಿ ನಾಯಕತ್ವದ ಜವಾಬ್ದಾರಿಯಿಂದ ಬಿಡುಗಡೆ ಪಡೆಯುವುದಾಗಿ ಘೋಷಿಸಿದ್ದಾರೆ.
ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವವನ್ನೂ ಬಿಡಬಹುದು ಎನ್ನುವ ನಿರೀಕ್ಷೆ ಇತ್ತು. ಅದು ನಿಜವಾಗಿದೆ.
ಕೊಹ್ಲಿಯ ಘೋಷಣೆ ನಿರೀಕ್ಷಿತವೇ ಆದರೂ ಆರ್ಸಿಬಿ ಅಭಿಮಾನಿಗಳಿಗೆ ಶಾಕ್ ಆಗಿರುವುದು ಸುಳ್ಳಲ್ಲ. ಜೊತೆಗೆ ಮುಂದಿನ ಕ್ಯಾಪ್ಟನ್ ಯಾರಾಗಬಹುದು ಎನ್ನುವ ಕುತೂಹಲವೂ ಶುರುವಾಗಿದೆ.
ಪಡಿಕ್ಕಲ್ಗೆ ನಾಯಕತ್ವ ನೀಡುತ್ತಾ ಆರ್ಸಿಬಿ?
2022ರಲ್ಲಿ ಐಪಿಎಲ್ನ ಮೆಗಾ ಹರಾಜು ನಡೆಯಲಿದೆ. ವಿರಾಟ್ ಕೊಹ್ಲಿ ಏನೋ ತಾವು ನಿವೃತ್ತಿ ಪಡೆಯುವ ವರೆಗೂ ಆರ್ಸಿಬಿ ಪರವೇ ಆಡುವುದಾಗಿ ಘೋಷಿಸಿದ್ದಾರೆ. 14ನೇ ಆವತ್ತಿ ಮುಗಿಯುತ್ತಿದ್ದಂತೆ 3 ಇಲ್ಲವೇ 4 ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನೆಲ್ಲಾ ತಂಡ ಕೈಬಿಡಬೇಕು.
ಕೊಹ್ಲಿಯನ್ನು ಆರ್ಸಿಬಿ ಉಳಿಸಿಕೊಳ್ಳಲಿದೆ. ಇದರಲ್ಲಿ ಯಾವುದ ಅನುಮಾನವಿಲ್ಲ. ನಾಯಕನಾಗಿ ಇಲ್ಲದಿದ್ದರೂ ಕೊಹ್ಲಿಯೇ ತಂಡದ ನಂ.1 ಬ್ಯಾಟ್ಸ್ಮನ್ ಹಾಗೂ ಬ್ರ್ಯಾಂಡ್. ಎಬಿ ಡಿ ವಿಲಿಯರ್ಸ್ ಅವರನ್ನೂ ಆರ್ಸಿಬಿ ಉಳಿಸಿಕೊಳ್ಳಲೇಬೇಕಿದೆ. ಎಬಿಡಿ ಬೆಂಗಳೂರಿನ ಹುಡುಗ ಎನ್ನುವಷ್ಟರ ಮಟ್ಟಿಗೆ ಆರ್ಸಿಬಿ ಅಭಿಮಾನಿಗಳ ಮನಗಳಲ್ಲಿ ಮನೆ ಮಾಡಿದ್ದಾರೆ.
ಇನ್ನು 3ನೇ ಆಟಗಾರನಾಗಿ ತಂಡದಲ್ಲಿ ಉಳಿದುಕೊಳ್ಳುವುದು ಖಂಡಿತವಾಗಿಯೂ ದೇವದತ್ ಪಡಿಕ್ಕಲ್ ಅವರೇ ಆಗಿರುತ್ತಾರೆ. ಕರ್ನಾಟಕದ ಯುವ ಬ್ಯಾಟ್ಸ್ಮನ್ ದೇಸಿ ಕ್ರಿಕೆಟ್ನಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿದ್ದಾರೆ.
ಪಡಿಕ್ಕಲ್ ಆಟಕ್ಕೆ ಕ್ರಿಕೆಟ್ ಜಗತ್ತು ಮಾರಿ ಹೋಗಿದೆ. ಪಡಿಕ್ಕಲ್ ತಮ್ಮ ಮನಮೋಹಕ ಬ್ಯಾಟಿಂಗ್ನಿಂದ ವಿಶ್ವದ ಬಲಿಷ್ಠ ಬೌಲರ್ಗಳನ್ನು ಚೆಂಡಾಡಿದ್ದಾರೆ. ಅವರಲ್ಲಿ ನಾಯಕತ್ವ ಗುಣಗಳು ಇವೆ ಎನ್ನುವ ಬಗ್ಗೆ ದೊಡ್ಡ ದೊಡ್ಡ ಕ್ರಿಕೆಟಿಗರೇ ಚರ್ಚಿಸಿದ್ದಾರೆ.
ಪಡಿಕ್ಕಲ್, ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಜೊತೆ ಬಹಳ ಸಮಯ ಕಳೆದಿದ್ದು, ನಾಯಕತ್ವಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಕರ್ನಾಟಕ ತಂಡದಲ್ಲೂ ಶ್ರೇಷ್ಠ ಆಟಗಾರರೊಂದಿಗೆ ಸಮಯ ಕಳೆದಿರುವುದು ಅವರಿಗೆ ಅನುಕೂಲವಾಗಲಿದೆ.
ಪಡಿಕ್ಕಲ್ಗೆ ದ್ರಾವಿಡ್ ಮಾರ್ಗದರ್ಶನ
ದೇವದತ್ ಪಡಿಕ್ಕಲ್ ಈಗಾಗಲೇ ಭಾರತ ತಂಡದಲ್ಲೂ ಆಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪಡಿಕ್ಕಲ್ಗೆ ವಿಶ್ವ ಶ್ರೇಷ್ಠ ಕ್ರಿಕೆಟಿಗ, ದಿ ವಾಲ್ ಎಂದೇ ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ದ್ರಾವಿಡ್ ಮಾರ್ಗದರ್ಶನಲ್ಲಿ ಪಡಿಕ್ಕಲ್ ಅನೇಕ ವಿಚಾರಗಳನ್ನು ಕಲಿತುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಪಡಿಕ್ಕಲ್ ಉತ್ತಮ ಆಯ್ಕೆ ಯಾಕೆ?
ಪಡಿಕ್ಕಲ್ಗಿನ್ನೂ 20 ವರ್ಷ ವಯಸ್ಸು. ಆರ್ಸಿಬಿ ಯುವ ಆಟಗಾರನ ಮೇಲೆ ವಿಶ್ವಾಸವಿಟ್ಟು ನಾಯಕತ್ವ ನೀಡಿದರೆ ಹಲವು ವರ್ಷಗಳ ಕಾಲ ಅವರು ತಂಡವನ್ನು ಮುನ್ನಡೆಸಬಹುದು. ಜೊತೆಗೆ ಬೆಂಗಳೂರಿನ ಆಟಗಾರನನ್ನೇ ಬೆಂಗಳೂರು ತಂಡಕ್ಕೆ ನಾಯಕನನ್ನಾಗಿ ಮಾಡಿದರೆ ಅಭಿಮಾನಿಗಳ ಮನ ಗೆದ್ದಂತಾಗುತ್ತದೆ.
ಪಡಿಕ್ಕಲ್ ಬಿಟ್ಟರೆ ಬೇರೆ ಆಯ್ಕ ಯಾವುದು?
ಒಂದು ವೇಳೆ ದೇವದತ್ ಪಡಿಕ್ಕಲ್ರನ್ನು ನಾಯಕನನ್ನಾಗಿ ನೇಮಕ ಮಾಡುವ ಧೈರ್ಯವನ್ನು ಆರ್ಸಿಬಿ ಮಾಡದಿದ್ದರೆ ತಂಡದ ಮಾಲಿಕರಿಗೆ ಉಳಿಯುವ ಆಯ್ಕೆ ಎಬಿ ಡಿ ವಿಲಿಯರ್ಸ್. ಎಬಿಡಿ ನಾಯಕನಾಗಿ ಅನುಭವ ಹೊಂದಿದ್ದಾರೆ.ಆದರೆ ಅವರಿಗಾಗಲೇ 36 ವರ್ಷ ವಯಸ್ಸು. ಇನ್ನು ಹೆಚ್ಚು ಎಂದರೆ 3-4 ವರ್ಷ ಆಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾಯಕತ್ವದ ಜವಾಬ್ದಾರಿ ಅವರ ಬ್ಯಾಟಿಂಗ್ ಪ್ರಾಬಲ್ಯಕ್ಕೆ ತೊಂದರೆ ಮಾಡಬಹುದು ಎನ್ನುವ ಅಂಶವನ್ನು ಮಾಲಿಕರು ಮರೆಯುವ ಹಾಗಿಲ್ಲ. ಎಬಿಡಿ ನಾಯಕತ್ವದ ಕಡೆ ಹೆಚ್ಚು ಗಮನ ಹರಿಸಿ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರೆ ನಷ್ಟ ಆಗುವುದು ತಂಡಕ್ಕೆ.
ಕೊಹ್ಲಿ, ಎಬಿಡಿ,ಪಡಿಕ್ಕಲ್ ಈ ಮೂವರೂ ನಾಯಕರಾಗದೆ ಹೋದರೆ ಆರ್ಸಿಬಿ ಮುಂದೆ ಆಯ್ಕೆಗಳು ಇರುವುದಿಲ್ಲ. ಮುಂದಿನ ವರ್ಷ ನಡೆಯುವ ಮೆಗಾ ಹರಾಜಿನಲ್ಲಿ ನಾಯಕತ್ವ ವಹಿಸಿಕೊಳ್ಳವಂತಹ ಸಾಮರ್ಥ್ಯವಿರುವ ಆಟಗಾರನನ್ನು ಹುಡುಕಿ ಖರೀದಿಸಬೇಕಿದೆ. ಆದರೆ ಇದು ಲಾಟರಿ ಇದ್ದಂತೆ. ಕೈಹಿಡಿಯಲೂಬಹುದು, ಕೈಕೊಡಲೂಬಹುದು. ಈಗಾಗಲೇ ಡೆಲ್ಲಿ, ಪಂಜಾಬ್, ರಾಜಸ್ಥಾನ ತಂಡಗಳು ಹಲವು ಬಾರಿ ನಾಯಕನನ್ನು ಬದಲಾಯಿಸಿ ಕೈಸುಟ್ಟುಕೊಂಡಿವೆ.ಆರ್ಸಿಬಿ ಅಂಥ ತಪ್ಪು ಮಾಡದೆ ಇರಲಿ ಎನ್ನುವುದು ಅಭಿಮಾನಿಗಳ ಆಶಯ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3tZAXkj
September 21, 2021 at 05:01PM