ಆದಿಮಾನವನ ಯುಗದಿಂದ ಆರಂಭವಾಗಿ ಮನುಷ್ಯ ರೂಪುಗೊಂಡ ನಂತರ ದಿನನಿತ್ಯದ ಅಗತ್ಯಕ್ಕೆ ತಕ್ಕಂತೆ ಒಂದಿಲ್ಲೊಂದು ವಸ್ತುಗಳು ಸಂಶೋಧನೆಯಾಗುತ್ತಲೇ ಬಂದಿವೆ. ಅನಿವಾರ್ಯ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಮಾನವ ತಂತ್ರಜ್ಞಾನಗಳನ್ನು ಆವಿಷ್ಕರಿಸಿಕೊಂಡು ಬಂದಿದ್ದಾನೆ. ಹೀಗಾಗಿ ಹಲವು ಉಪಕರಣಗಳ, ಯಂತ್ರಗಳ ಆವಿಷ್ಕಾರವಾಯಿತು. ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಆಯುಧಗಳು, ಮನೆ ಕಟ್ಟಿಕೊಳ್ಳಲು ಮರ ಕಡಿಯಲು ಸಲಕರಣೆಗಳು, ದೂರ ದೂರಕ್ಕೆ ಪ್ರಯಾಣಿಸಲು ಬಸ್ಸನ್ನು ಆವಿಷ್ಕರಿಸಲಾಯಿತು.
ಮನುಷ್ಯನ ತನ್ನ ಜೀವನದಲ್ಲಿ ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ಸಂಶೋಧನೆ ಮಾಡಿದ್ದು ಮೊದಲ ಘಟ್ಟ. ಆ ಬಳಿಕ ಮನುಷ್ಯನ ಗಮನ ಐಷಾರಾಮತನದತ್ತ ಹೊರಳಿತು. ದಿನನಿತ್ಯದ ಜೀವನವನ್ನು ಮತ್ತಷ್ಟು ಸುಲಭಗೊಳಿಸಲು ಹೊಸ ಹೊಸ ಯಂತ್ರಗಳ ಆವಿಷ್ಕಾರ ಮಾಡಲು ತೊಡಗಿದ. ಪ್ರಯಾಣಿಸಲು ಬಸ್ಸು ಮಾತ್ರವಲ್ಲದೆ ಕಾರು, ಬೈಕುಗಳು ಬಂದವು. ಈ ಮಧ್ಯೆ ಜಲದಲ್ಲಿ, ಗಾಳಿಯಲ್ಲಿ ಸಂಚರಿಸಲು ವಾಹಕವೊಂದು ಅಗತ್ಯ ಎಂಬುದನ್ನು ಮನಗಂಡು ಅದನ್ನೂ ತಯಾರಿಸುವ ಪ್ರಯತ್ನ ಆರಂಭಗೊಂಡಿತು. ಹಾಗೇ ಸಂಶೋಧನೆಗೊಂಡದ್ದೇ ವಿಮಾನ.
ರೈಟ್ ಸಹೋದರರು ಮೊತ್ತ ಮೊದಲ ಬಾರಿಗೆ ವಿಮಾನವನ್ನು ತಯಾರಿಸಿದರು ಎಂದು ಹೇಳಲಾಗುತ್ತದೆ. ಹೆಚ್ಚಾಗಿ ಎಲ್ಲಾ ಪುಸ್ತಕಗಳಲ್ಲೂ ವಿಮಾನವನ್ನು ಕಂಡು ಹುಡುಕಿದವರು ರೈಟ್ ಸಹೋದರರು ಎಂದೇ ದಾಖಲಿಸಲ್ಪಟ್ಟಿದೆ. ಅದೇ ಕೆಲವೊಂದು ಅಧ್ಯಯನಗಳ ಪ್ರಕಾರ, ರೈಟ್ ಸಹೋದರರು ವಿಮಾನವನ್ನು ಕಂಡು ಹುಡುಕುವ ಮೊದಲೇ ಭಾರತೀಯ ಮೂಲದವರೊಬ್ಬರು ವಿಮಾನವನ್ನು ಕಂಡುಹುಡುಕಿದ್ದರಂತೆ.
ರೈಟ್ ಸಹೋದರರು ವಿಮಾನವನ್ನು ಕಂಡುಹುಡುಕಿದ್ದಲ್ಲ ಅನ್ನೋದು ಎಷ್ಟರಮಟ್ಟಿಗೆ ನಿಜ. ನಿಜವಾಗಿಯೂ ವಿಮಾನವನ್ನು ಕಂಡು ಹುಡುಕಿದ್ಯಾರು. ಅದಕ್ಕೆ ದಾಖಲೆಗಳಿವೆಯಾ ಈ ಮೊದಲಾದ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ..
ಮೊದಲಿಗೆ ವಿಮಾನ ತಯಾರಿಸಿದ್ದು ರೈಟ್ ಸಹೋದರರಲ್ಲ..!
ಮೊತ್ತ ಮೊದಲ ಬಾರಿಗೆ ವಿಮಾನ ತಯಾರಿಸಿದ್ದು ರೈಟ್ ಸಹೋದರರಲ್ಲ ಎಂಬ ವಾದ ಶುರುವಾಗಿದ್ದು ಇತ್ತೀಚಿಗಲ್ಲ. ಹಲವು ವರ್ಷಗಳಿಂದಲೂ ಹಲವು ಸಂಶೋಧಕರು ಇದನ್ನು ವಾದಿಸುತ್ತಲೇ ಬಂದಿದ್ದಾರೆ. 1906ರಲ್ಲಿ, ಪ್ಯಾರಿಸ್ ಹೆರಾಲ್ಡ್, ರೈಟ್ ಸಹೋದರರು ವಿಮಾನ ನಿರ್ಮಾತೃಗಳಲ್ಲ ಎಂದು ಹೇಳಿತ್ತು. ಗಾಳಿಗಿಂತ ಭಾರವಾದ ಯಂತ್ರವು ಸ್ವಂತವಾಗಿ ಹೊರಹೊಮ್ಮಬಹುದೆಂದು ಸಾಬೀತುಪಡಿಸಿದವರಲ್ಲಿ ಬ್ರೆಜಿಲ್ನ ಏವಿಯೇಟರ್ ಆಲ್ಬರ್ಟೊ ಸ್ಯಾಂಟೋಸ್-ಡುಮಾಂಟ್ ಮೊದಲಿಗರು ಎಂದು ಹೇಳಲಾಗುತ್ತದೆ. ಮತ್ತೊಬ್ಬ ಏವಿಯೇಟರ್, ಗುಸ್ಟಾವ್ ವೈಟ್ಹೆಡ್, ತಾವು 1901ಕ್ಕಿಂತಲೂ ಹಿಂದೆಯೇ ಚಾಲಿತ ಯಂತ್ರಗಳನ್ನು ಪರೀಕ್ಷಿಸಿದ್ದಾಗಿ ವಾದಿಸಿದರು.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಭಾರತೀಯ ಮೂಲದ ಶಿವಕರ್ ಬಾಪೂಜಿ ತಲ್ಪಡೆ ಎಂಬವರು ರೈಟ್ ಸಹೋದರರಿಗೆ ಎಂಟು ವರ್ಷಗಳ ಮೊದಲು ಆಧುನಿಕ ವಿಮಾನವನ್ನು ಕಂಡುಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಮುಂಬೈನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಭೆಯಲ್ಲಿ ಈ ವಾದವನ್ನು ಮಂಡಿಸಲಾಯಿತು. ಪಾದರಸ ಮತ್ತು ಸೌರ ಶಕ್ತಿಯಿಂದ ಕಾರ್ಯನಿರ್ವಹಿಸುವ ಹಾರುವ ಯಂತ್ರವನ್ನು ತಲ್ಪಡೆ ಕಂಡು ಹುಡುಕಿದ್ದರು ಎಂದು ಹೇಳಲಾಯಿತು. ಈ ಬಗ್ಗೆ ಹಳೆಯ ದಾಖಲೆಗಳಲ್ಲಿ ಅಚ್ಚಾಗಿರುವ ಮಾಹಿತಿಯನ್ನು ಸಹ ಸಭೆಯಲ್ಲಿ ಮಂಡಿಸಲಾಯಿತು.
ಮೊದಲ ಬಾರಿ ಹಾರುವ ಯಂತ್ರ ತಯಾರಿಸಿದ್ದು ಯಾರು..?
ಶಿವಕರ್ ಬಾಪೂಜಿ ತಲ್ಪಡೆ ಈ ಹಾರುವ ಯಂತ್ರಕ್ಕೆ ಮಾರುತ್ಸಾಖಾ ಎಂದರೆ ಗಾಳಿಯ ಸ್ನೇಹಿತ ಎಂದು ಹೆಸರಿಟ್ಟರು. ಮತ್ತು ಅದನ್ನು 1895ರಲ್ಲಿ ಮುಂಬೈನ ಚೌಪಟ್ಟಿ ಬೀಚ್ನಲ್ಲಿ ಇದನ್ನು ಹಾರಿಸಿದರು ಎಂದು ದಾಖಲೆಗಳಿಂದ ತಿಳಿದುಬರುತ್ತದೆ. ವಿಜ್ಞಾನ ಕಾಂಗ್ರೆಸ್ ಸಭೆಯಲ್ಲಿ ಈ ಕುರಿತಾಗಿ ವಾದ ಮಂಡಿಸಿದ ಆನಂದ್ ಬೋಡಾಸ್ ಈ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಪ್ರಾಚೀನ ಸಂಸ್ಕೃತ ಗ್ರಂಥದಲ್ಲಿ ತಿಳಿಸಿದ್ದ ವಿವಿಧ ದೇಶಗಳು, ಖಂಡಗಳಲ್ಲಿ ಓಡಾಡಿದ್ದ ವಿಮಾನಗಳ ಬಗ್ಗೆ ವಿವರಣೆಯನ್ನು ನೀಡಿದರು. ವಿಮಾನ ತಯಾರಿಕೆಗೆ ಸಂಬಂಧಿಸಿದ ವಿವಿಧ ಮಿಶ್ರಲೋಹ ಬಳಕೆಯ ಕುರಿತು ಮಹರ್ಷಿ ಭಾರದ್ವಾಜ್ ಅವರ ವಿಮಾನ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಹ ಅವರು ತಿಳಿಸಿದರು.
ದಾಖಲೆಗಳ ಮೂಲಕ ಶಿವಕರ್ ಬಾಪೂಜಿ ತಲ್ಪಡೆ ವಿಮಾನವನ್ನು ಮೊತ್ತ ಮೊದಲ ಬಾರಿಗೆ ತಯಾರಿಸಿದರು ಎಂದು ನಂಬಲಾಯಿತಾದರೂ ಅದನ್ನು ಎಲ್ಲಿಯೂ ಅಧಿಕೃತಗೊಳಿಸಿಲ್ಲ. ಕೆಲವೊಬ್ಬರು ವಾಸ್ತವವಾಗಿ, ಎರಡು ಆವಿಷ್ಕಾರಗಳನ್ನು ಹೋಲಿಸಲಾಗುವುದಿಲ್ಲ ಎಂದು ಹೇಳಿದರು. ಏಕೆಂದರೆ ಅಮೆರಿಕನ್ ಏವಿಯೇಟರ್ಸ್ ಪ್ರಕರಣಕ್ಕಿಂತ ಭಿನ್ನವಾಗಿ, ತಲ್ಪಡೆ ತಯಾರಿಸಿದ ಯಂತ್ರವು ಮಾನವರಹಿತವಾಗಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಮಾನವರಹಿತ ಹಾರುವ ಯಂತ್ರದ ಮೊದಲ ದಾಖಲೆಯ ಉದಾಹರಣೆಯೆಂದರೆ 1848 ರಲ್ಲಿ ಜಾನ್ ಸ್ಟ್ರಿಂಗ್ಫೆಲೋ ಅವರ ಉಗಿ-ಚಾಲಿತ ಯಂತ್ರವಾಗಿದೆ..
ಶಿವಕರ್ ಬಾಪೂಜಿ ತಲ್ಪಡೆ ಯಾರು..?
1864ರಲ್ಲಿ ಜನಿಸಿದ ಶಿವಕರ್ ಬಾಪೂಜಿ ತಲ್ಪಡೆ ಮುಂಬೈನ ಸರ್ ಜೆಜೆ ಸ್ಕೂಲ್ ಆಫ್ ಆರ್ಟ್ನ ಕಲೆ ಮತ್ತು ಕರಕುಶಲ ವಿಭಾಗದಲ್ಲಿ ತಾಂತ್ರಿಕ ಬೋಧಕರಾಗಿದ್ದರು. ಅವರು ಆರ್ಯ ಸಮಾಜದ ಸದಸ್ಯರಾಗಿದ್ದರು ಮತ್ತು ಸಂಸ್ಕೃತವನ್ನು ಕಲಿಯಲು ತೀವ್ರ ಆಸಕ್ತಿಯನ್ನು ಹೊಂದಿದ್ದರು. ಶಿವಕರ್ ಪಾಠಾರೆ ಪ್ರಭುಂಚ ಇತಿಹಾಸ್ ಎಂಬ ಮರಾಠಿ ಪುಸ್ತಕವನ್ನು ಸಹ ಬರೆದಿದ್ದಾರೆ. ವೈದಿಕ ಗ್ರಂಥಗಳಿಂದ ಪ್ರಭಾವಿತರಾಗಿ ತಲ್ಪಡೆ ಹಾರುವಯಂತ್ರ ನಿರ್ಮಿಸಿದರು ಎಂದು ನಂಬಲಾಗಿದೆ.
ಕಲಾ ಶಾಲೆಯಲ್ಲಿನ ತನ್ನ ಕರಕುಶಲ ಕಾರ್ಯಾಗಾರದಲ್ಲಿ, ತಲ್ಪಡೆ ಮಾದರಿ ಕಾರುಗಳನ್ನು ಮಾಡುವಾಗ ಚಕ್ರಗಳ ಚಲನೆಯ ಬಗ್ಗೆ ಮತ್ತು ಹಕ್ಕಿಗಳನ್ನು ಚಿತ್ರಿಸುವಾಗ ರೆಕ್ಕೆಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಇದೇ ರೀತಿ ಟೇಕ್ ಆಫ್ ಆಗುವಂತಹ ಯಂತ್ರಗಳನ್ನು ರಚಿಸಲು ಪ್ರಯತ್ನಿಸಲು ಇದು ಕಾರಣವಾಯಿತು ಎಂದು ಸಂಶೋಧಕರು ಬರೆದುಕೊಂಡಿದ್ದಾರೆ. ವಾಸ್ತುಶಿಲ್ಪಿ-ಇತಿಹಾಸಕಾರ, ವೆಲ್ಕರ್ ಎಂಬವರು ಕೆಲವು ಪ್ರಬಂಧಗಳೊಂದಿಗೆ ಸಂದರ್ಶನಗಳ ಮೂಲಕ ತಲ್ಪಡೆ ಬಗ್ಗೆ ಮಾಹಿತಿಯನ್ನು ಒಟ್ಟುಗೂಡಿಸಿದ್ದಾರೆ.
ತಲ್ಪಡೆ ಅವರ ಹಳೆಯ ನಿವಾಸದಲ್ಲಿ ಧೂಳು ಹಿಡಿದ ಆ ವಿಮಾನವಿದೆ ಎಂಬುದನ್ನು ವೆಲ್ಕರ್ ತಿಳಿದುಕೊಂಡರು. ಈ ವಿಮಾನವನ್ನು ನಂತರ ರಾಲಿಸ್ ಬ್ರದರ್ಸ್ಗೆ ಮಾರಾಟ ಮಾಡಲಾಯಿತು ಎಂದು ಹೇಳಲಾಗುತ್ತದೆ. 1917ರಲ್ಲಿ ಶಿವಕರ್ ಬಾಪೂಜಿ ತಲ್ಪಡೆ ಅವರ ಮರಣದ ವರ್ಷಗಳ ನಂತರ, ತಲ್ಪಡೆ ಅವರ ರೇಖಾಚಿತ್ರಗಳು ಮತ್ತು ಸಂಶೋಧನಾ ಸಾಮಗ್ರಿಗಳನ್ನು ನವದೆಹಲಿಯ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಅಧಿಕಾರಿ ಜಿ.ಎಚ್.ಬೆಡೆಕರ್ ಪರಿಶೀಲಿಸಿದರು. ಅಲ್ಲಿ ಲಭ್ಯವಾದ ಕೆಲವು ಉಪಕರಣಗಳ ಭಾಗಗಳನ್ನು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಗೆ ಕಳುಹಿಸಿಕೊಡಲಾಯಿತು ಎಂದು ಹೇಳಲಾಗುತ್ತದೆ.
ಪರಿಶೀಲನೆಯಲ್ಲಿ ತಲ್ಪಡೆ ನಿರ್ಮಿಸಿದ ಹಾರುವ ಯಂತ್ರದ ಬಗ್ಗೆ ಹಲವು ಆಸಕ್ತಿದಾಯಕ ವಿಚಾರಗಳು ತಿಳಿದುಬಂದವು. ಮಾರುತ್ಸಾಖಾದಲ್ಲಿನ ದ್ರವ ಪಾದರಸವು ಸೂರ್ಯನ ಬೆಳಕಿನಿಂದ ಪ್ರತಿಕ್ರಿಯಿಸಿದಾಗ, ಅದು ಹೈಡ್ರೋಜನ್ ಅನ್ನು ಬಿಡುಗಡೆ ಮಾಡಿತು. ಇದು ಗಾಳಿಗಿಂತ ಹಗುರವಾಗಿರುವುದು ವಿಮಾನವನ್ನು ಮುಂದೂಡಲು ಸಹಾಯ ಮಾಡಿತು ಎಂದು ತಿಳಿದು ಬಂತು. ತಲ್ಪಡೆ ಬಗ್ಗೆ ಮಾಹಿತಿ ಕಲೆ ಹಾಕಿದ ವೆಲ್ಕರ್ ಸಹ ಈ ಮಾಹಿತಿಯನ್ನು ಒಪ್ಪಿದರು. ತಲ್ಪಡೆ ನಿರ್ಮಿಸಿದ ವಿಮಾನವು ಗಸದಲ್ಲಿ 1,500 ಅಡಿ ಎತ್ತರಕ್ಕೆ ಹಾರಿ ಕೆಲವು ನಿಮಿಷಗಳ ಕಾಲ ಉಳಿಯಿತು ಎಂದು ಹೇಳುತ್ತಾರೆ.
ಶಂಕುವಿನಾಕಾರದಲ್ಲಿದ್ದ ಹಾರುವ ಯಂತ್ರ
Image Source : shortpediavoices
ವಿಮಾನ ಶಂಕುವಿನಾಕಾರದಲ್ಲಿತ್ತು ಎಂದು ತಿಳಿದುಬಂದಿದೆ. ಇನ್ನು ಕೆಲವರು ಈ ವಿಮಾನ ಬಾಹ್ಯಾಕಾಶ ನೌಕೆಯನ್ನು ಹೋಲುತ್ತದೆ ಎಂದು ಹೇಳುತ್ತಾರೆ. ಆದರೆ ಯಂತ್ರದಲ್ಲಿ ಪಾದರಸವನ್ನು ಇಂಧನವಾಗಿ ಬಳಸಲಿಲ್ಲ ಎಂಬ ಹೇಳಿಕೆಯೂ ಇದೆ. 1904ರ ನಂತರ ಪ್ರಕಟವಾದ ಕೆಲವು ಬರಹಗಳಲ್ಲಿ ತಲ್ಪಡೆ ವಿಮಾನವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವುಗಳನ್ನು ಹಾರಿಸುವಲ್ಲಿ ಯಶಸ್ವಿಯಾಗಲಿಲ್ಲ ಎಂದು ತಿಳಿಸಲಾಗಿದೆ. 1974 ರ ಭಾರತೀಯ ವಿಜ್ಞಾನ ಸಂಸ್ಥೆಯ ತತ್ವಗಳ ವಿಶ್ಲೇಷಣೆಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.
ವಿಮಾನಗಳ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಅಧ್ಯಯನ ಮಾಡಿದ ಇಟಾಲಿಯನ್ ಪತ್ರಕರ್ತ ಎನ್ರಿಕೊ ಬಕಾರಿನಿ ತಲ್ಪಡೆ ಬಗ್ಗೆ ಸಂಶೋಧನೆ ನಡೆಸಿದರು. ‘ಹಿಂದೂ ಧರ್ಮದ ಪ್ರಾರಂಭದ ಬಗ್ಗೆ, ಪ್ರಾಚೀನ ಭಾರತೀಯ ಗ್ರಂಥಗಳು ಮತ್ತು ಸಂಪ್ರದಾಯಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ.. ಕೆಲವು ಸಂದರ್ಭಗಳಲ್ಲಿ, ಹೆಚ್ಚು ತಾಂತ್ರಿಕವಾಗಿರುವ ಜ್ಞಾನ ಭಾರತೀಯರಲ್ಲಿತ್ತು. ಹೀಗಾಗಿ ಹಾರುವ ಯಂತ್ರಗಳ ನಿರ್ಮಾಣಕ್ಕೆ ಪ್ರಯತ್ನಿಸಿದ ಮೊದಲ ಭಾರತೀಯ ತಲ್ಪಡೆ ಎಂದು ತೋರುತ್ತದೆ ಆದರೆ ಆ ಪ್ರಯೋಗಗಳ ಸ್ವರೂಪ ಅಥವಾ ಅವುಗಳ ಯಶಸ್ಸಿನ ವ್ಯಾಪ್ತಿಯನ್ನು ಖಚಿತವಾಗಿ ವಿವರಿಸಲು ಕಷ್ಟ’ ಎಂದು ಅವರು ಹೇಳಿದರು..
1903ರಲ್ಲಿ ರೈಟ್ ಸಹೋದರರು ಮಾನವಸಹಿತ ವಿಮಾನವನ್ನು ಹಾರಾಟ ನಡೆಸಿದರು ಮತ್ತು ಭಾರತದಲ್ಲಿ ಅಂತಹ ಮೊದಲ ಹಾರಾಟವು 1910ರಲ್ಲಿ ಆಗಿತ್ತು ಎಂದು ಇತಿಹಾಸಕಾರ ರೆಡ್ಡಿ ತಿಳಿಸಿದರು. ಅದೇನೆ ಇರ್ಲಿ, ಮೊತ್ತ ಮೊದಲ ಬಾರಿ ವಿಮಾನ ಕಂಡು ಹುಡುಕಿದವರು ಯಾರೆಂಬ ಗೊಂದಲ ಹಾಗೆಯೇ ಮುಂದುವರಿದಿದೆ. ಮರುಶೋಧಿಸಲು ಎಚ್ಚರಿಕೆಯ ಸಂಶೋಧನೆ ಅಗತ್ಯವಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3hP9X1Z
September 19, 2021 at 02:54PM