ಗಣೇಶ ಚತುರ್ಥಿ ಭಾರತದ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲೂ ಆಚರಿಸಲ್ಪಡುವ ಪ್ರಮುಖ ಹಬ್ಬ.ಈ ಹಬ್ಬ ಬಹಳ ಜನಪ್ರಿಯ ಹಬ್ಬವೂ ಹೌದು. ಪೂಜೆಗೆ ಅಧಿಪತಿ, ವಿಘ್ನ ವಿನಾಶಯ, ಗಜಮುಖ ಗಣೇಶನಿಗೆ ತಿಂಡಿಗಳು ಎಂದರೆ ತುಂಬಾ ಪ್ರೀತಿ. ಗಣೇಶ ಚತುರ್ಥಿಯಂದು ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿ ಗಣೇಶನಿಗೆ ಅರ್ಪಿಸಲಾಗುತ್ತದೆ.
ಭಕ್ತಿ, ಭಾವದಿಂಧ ಪೂಜಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಗಣೇಶನಲ್ಲಿ ಕೋರಿಕೆ ಸಲ್ಲಿಸಲಾಗುತ್ತದೆ. ಹಾಗಿದ್ದರೆ ಗಣೇಶನಿಗೆ ಯಾವೆಲ್ಲಾ ನೈವೇದ್ಯಗಳನ್ನು ಇಟ್ಟು ಪೂಜಿಸಬೇಕು ಎನ್ನುವ ವಿವರಗಳು ಇಲ್ಲಿವೆ ನೋಡಿ.
ಗಣಪತಿಗೆ ಅರ್ಪಿಸುವ ನೈವೇದ್ಯಗಳು ಯಾವ್ಯಾವು?
ಮೋದಕ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯವಿರುವ ಒಂದು ಸಿಹಿ ತಿನಿಸು (ಕಣಕದ ಹೊದಿಕೆಯಿರುವ ಹೂರಣ). ಮೋದಕದಲ್ಲಿನ ಸಿಹಿಯಾದ ಹೂರಣವನ್ನು ತಾಜಾ ತುರಿದ ತೆಂಗು ಅಥವಾ ಕೊಬ್ಬರಿ ಹಾಗೂ ಬೆಲ್ಲದಿಂದ ತಯಾರಿಸಲಾಗುತ್ತದೆ ಮತ್ತು ಮೃದುವಾದ ಹೊರಹೊದಿಕೆಯನ್ನು ಅಕ್ಕಿ ಹಿಟ್ಟು, ಅಥವಾ ಖೋವಾ ಮಿಶ್ರಿತ ಗೋಧಿ ಹಿಟ್ಟು ಅಥವಾ ಮೈದಾದಿಂದ ತಯಾರಿಸಲಾಗುತ್ತದೆ.
ಮೋದಕವನ್ನು ಕರಿಯಬಹುದು ಅಥವಾ ಆವಿಯಲ್ಲಿ ಬೇಯಿಸಬಹುದು. ಗಣೇಶನ ಪ್ರಿಯವಾದ ಮೋದಕವನ್ನು ಚತುರ್ಥಿ ಹಾಗೂ ಸಂಕಷ್ಟಿಗೆ ತಯಾರು ಮಾಡುತ್ತಾರೆ. ‘ಮುದ’ ಎಂದರೆ ಆನಂದ ಎಂಬ ಅರ್ಥ ಇದೆ. ಇದರ ಜೊತೆಗೆ ಚಕ್ಕುಲಿ, ಲಾಡು, ಪಂಚಕಜ್ಜಾಯವನ್ನೂ ನೈವೇದ್ಯಕ್ಕೆ ಅರ್ಪಿಸುತ್ತಾರೆ.
ಗಣೇಶನ ವಿಸರ್ಜನೆ ವೇಳೆ ಕಡಲೆ ಕಾಳು ಉಸಲಿ ಮಾಡಿ ಹಂಚುವ ಸಂಪ್ರದಾಯವೂ ಇದೆ. ಅಲ್ಲದೆ ಕೊಬ್ಬರಿ ಸಕ್ಕರೆ, ಕಡಲೆಹಿಟ್ಟು ಹೀಗೆ ಇನ್ನೂ ಕೆಲ ಪದಾರ್ಥಗಳನ್ನು ಪ್ರಸಾದವಾಗಿ ಹಂಚಲಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3lfelbk
September 10, 2021 at 04:02PM