ವ್ರತ ಮಾಡುವುದು ಹೇಗೆ ಗೊತ್ತಾ?
ಯಾವುದೇ ಶುಭ ಕಾರ್ಯ ಆಗಲಿ, ಅದು ಗಣೇಶನ ಪೂಜೆಯೊಂದಿಗೆ ಆರಂಭವಾಗುತ್ತದೆ. ಗಣೇಶನ ಪೂಜೆ ಮಾಡಿದರೆ ಆ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ ಎಂಬುದು ನಂಬಿಕೆ. ಹೀಗಾಗಿ ಗಣೇಶ ಧಾರ್ಮಿಕ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಯಾರು ಗಣಪತಿ ಬಪ್ಪನನ್ನು ಮನೆಗೆ ಕರೆತರುತ್ತಾರೋ ಅವರ ಎಲ್ಲಾ ತೊಂದರೆಗಳನ್ನು ಆತ ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಸದ್ಯ ವಿಘ್ನ ನಿವಾರಕನ ಆರಾಧನೆಗೆ ಕೊರೋನಾ ಕರಿನೆರಳಾಗಿದೆ. ಆದಾಗ್ಯೂ ಗಜಮುಖನ ಪೂಜೆಗೆ ಸಿದ್ಧತೆ ಭರ್ಜರಿಯಾಗಿದೆ. ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯ ಮಹತ್ವ, ಪೂಜಾ ವಿಧಾನ ಮತ್ತಿತರ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗಣೇಶನನ್ನು ಹೇಗೆ ಪೂಜಿಸಬೇಕು?
Image Credits : Artist Vinayak Potdar ( ARTZOLO)
ಚತುರ್ಥಿಯ ದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಉಪವಾಸದ ಸಂಕಲ್ಪ ಮಾಡಿ. ಶಾಸ್ತ್ರಗಳ ಪ್ರಕಾರ, ವಿಘ್ನ ವಿನಾಶಕ ಗಣೇಶ ಮಧ್ಯಾಹ್ನ ಜನಿಸಿದ. ಅದಕ್ಕಾಗಿಯೇ ಈ ದಿನ ಮಧ್ಯಾಹ್ನ ಗಣೇಶನನ್ನು ಪೂಜಿಸುವ ಪದ್ಧತಿಯಿದೆ. ಮೊದಲನೆಯದಾಗಿ, ಗಂಗಾಜಲ ಸಿಂಪಡಿಸುವ ಮೂಲಕ ಪೂಜಾ ಸ್ಥಳವನ್ನು ಶುದ್ಧೀಕರಿಸಿ. ನಂತರ ಗಣೇಶನನ್ನು ಆವಾಹಿಸಿ ಮತ್ತು ಮಂತ್ರಗಳನ್ನು ಪಠಿಸಿ. ಮಧ್ಯಾಹ್ನದ ಶುಭ ಸಮಯದಲ್ಲಿ ಗಣಪತಿಯ ಮೂರ್ತಿಯನ್ನು ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲಿಡಬೇಕು. ಬಳಿಕ ನೀವು ಅನುಸರಿಸುವ ಪೂಜಾ ಪದ್ಧತಿಯ ಪ್ರಕಾರ ಪೂಜಿಸಿ. ಸಿಂಧೂರ ಮತ್ತು ಗಣೇಶನ ನೆಚ್ಚಿನ ಮೋದಕ, ಲಡ್ಡುವನ್ನು ಅರ್ಪಿಸಿ. ಸಂದರ್ಭದಲ್ಲಿ ‘ಓಂ ಗಣಪತಯೇ ನಮಃ’ ಎಂಬ ಮಂತ್ರವನ್ನು ಪಠಿಸಿ. ಪೂಜೆಯ ನಂತರ ಎಲ್ಲಾ ಭಕ್ತರಿಗೆ ಲಡ್ಡು ವಿತರಿಸಿ. ಅಂತೆಯೇ, ಗಣಪತಿ ಬಪ್ಪನನ್ನು 3 ಅಥವಾ 5 ದಿನಗಳ ಕಾಲ ಪೂಜಿಸಿ ನೀರಿನಲ್ಲಿ ಮುಳುಗಿಸಿ.
ಚೌತಿ ಹಬ್ಬದ ಪೌರಾಣಿಕ ಹಿನ್ನೆಲೆ ಏನು?
Image Source : Hindu blog
ಗಣೇಶ ಪಾರ್ವತಿಯ ಮೈಯಿಂದ ಹುಟ್ಟಿದವನು. ಈತ ಸ್ವರ್ಣಗೌರಿಯ ಮಾನಸ ಪುತ್ರ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಶಿವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಗಣಪನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆಯ ತಲೆಯನ್ನು ಕತ್ತರಿಸಿ ಗಣಪನ ಶರೀರಕ್ಕೆ ಅಂಟಿಸುತ್ತಾನೆ. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ಅಂದಿನಿಂದ ಗಣಪತಿ ಜನಿಸಿದ ಆ ದಿನ ಚೌತಿ ಹಬ್ಬ ಆಚರಿಸಲಾಗುತ್ತಿದೆ. ಗಣೇಶನ ಹಬ್ಬದ ಹಿಂದಿನ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಗಣೇಶ ಅಜ್ಜಿ ಮನೆಗೆ ಬಂದು, ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ ಎಂಬ ಪ್ರತೀತಿ ಇದೆ. ಈ ಹಬ್ಬ ಭಾದ್ರಪದ ಶುಕ್ಲ ಚೌತಿಯ ದಿನದಂದು ಬರುತ್ತದೆ.
ಕರ್ನಾಟಕ,ಮಹಾರಾಷ್ಟ್ರ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಗಣೇಶ ಹಬ್ಬವನ್ನು ವೃಜುಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ಹಿಂದೂಗಳು ಮಾತ್ರವಲ್ಲ, ಇತರ ಧರ್ಮದವರಿಂದಲೂ ಆಚರಿಸಲ್ಪಡುವುದು ವಿಶೇಷ.
ಎಲ್ಲರಿಗೂ ಗಣೇಶನ ಹಬ್ಬದ ಶುಭಾಶಯಗಳು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3tv8F0D
September 10, 2021 at 12:51PM