Image credits : Quora
ಗಣೇಶ ಹಬ್ಬದಂದು ಹಲವು ಸಂಪ್ರದಾಯಗಳನ್ನು ಪಾಲಿಸುವ ಪ್ರತೀತಿ ಇದೆ. ನಮ್ಮ ಪ್ರತಿ ಆಚರಣೆಗೂ ಅದ್ದರದ್ದೇ ಆದ ಹಿನ್ನೆಲೆ ಇರಲಿದೆ. ಎಲ್ಲದ್ದಕ್ಕೂ ಸೂಕ್ತ ಕಾರಣ, ಕಥೆಗಳು ಇವೆ. ನಮ್ಮ ಪೂರ್ವಜರು ಏನೇ ಹೇಳಿದರೂ,ಮಾಡಿದರೂ ಅದಕ್ಕೆ ಅರ್ಥ ಇರಲಿದೆ.
ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎಂದು ಹೇಳುತ್ತಾರೆ. ಭಾದ್ರಪದ ಶುಕ್ಲದ ಚೌತಿಯಂದು, ಚಂದಿರನ ನೋಡಿದರೆ ಅಪವಾದ ತಪ್ಪದು ಎನ್ನುವ ಸಾಲುಗಳನ್ನು ಹಾಡಿನಲ್ಲೂ ಕೇಳಿರುತ್ತೀರಿ. ಯಾಕೆ ಹೀಗೆ ಹೇಳುತ್ತಾರೆ ಎನ್ನುವುದಕ್ಕೆ ಪುರಾಣಗಳಲ್ಲಿ ಪ್ರಸಿದ್ಧ ಕಥೆಯೂ ಇದೆ.
ಗಣೇಶ ಎಲ್ಲರ ಮನೆಯ ಕಡುಬು, ಮೋದಕ, ಲಾಡು, ಚಕ್ಕುಲಿ ಹೀಗೆ ಭಕ್ಷ್ಯಗಳನ್ನು ತಿಂದು ರಾತ್ರಿ ತನ್ನ ಮನೆಗೆ ವಾಹನವಾದ ಇಲಿಯ ಮೇಲೆ ಕುಳಿತು ಹೋಗುತ್ತಿದ್ದನಂತೆ. ದಾರಿಯಲ್ಲಿ ಹಾವು ಕಂಡು ಇಲಿಯು ಹೆದರಿ ಗಣೇಶನನ್ನು ಕೆಳಗೆ ಹಾಕಿ ಓಡಿ ಹೋಯಿತು. ದುಡುಂ ಎಂದು ಕೆಳಗೆ ಬಿದ್ದ ಗಣಪನ ಹೊಟ್ಟೆ ಒಡೆಯಿತು. ಕೋಪಗೊಂಡ ಗಣಪ ಹಾವನ್ನು ಎಳೆದು ಹೊಟ್ಟೆಗೆ ಸುತ್ತಿಕೊಂಡನು. ಇದನ್ನೆಲ್ಲಾ ನೋಡಿ ಚಂದ್ರ ನಕ್ಕನಂತೆ. ಗಣೇಶ ಕೋಪಗೊಂಡು ಚಂದ್ರನಿಗೆ ಶಾಪವಿತ್ತನು.
ಚಂದ್ರನು ತನ್ನ ತಪ್ಪನ್ನು ಅರಿತು ಅವನಲ್ಲಿ ಪ್ರಾರ್ಥನೆ ಮಾಡಿದನು. ಗಣಪನು ಶಾಂತನಾಗಿ ಅದಕ್ಕೆ ಪರಿಹಾರವಾಗಿ ಯಾರು ಚೌತಿಯ ಚಂದ್ರನನ್ನು ನೋಡುವರೋ ಅವರ ಮೇಲೆ ಸುಳ್ಳು,ಕಳ್ಳತನದ ಆರೋಪ ಬರಲಿ ಎಂದನಂತೆ. ಅಂದಿನಿಂದ ಚೌತಿ ಚಂದ್ರನ ದರ್ಶನ ಮಾಡಬಾರದು ಎಂದಿದೆ. ಅಕಸ್ಮಾತ್ ನೋಡಿದಲ್ಲಿ ಶಮಂತಕ ಮಣಿಯ ಕತೆ ಕೇಳಿದರೆ ಒಳಿತು ಎನ್ನುವ ಪ್ರತೀತಿ ಇದೆ.
ನೆನಪಿನಲ್ಲಿಡಿ, ಚೌತಿ ಹಬ್ಬದಂದು ಚಂದ್ರನ ದರ್ಶನ ಮಾಡಬೇಡಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3DZqx8Z
September 10, 2021 at 07:00PM