ಕೊರೋನಾ ವೈರಸ್ ಜೊತೆ ಈಗ ನಿಫಾ ವೈರಸ್ ಆರ್ಭಟವೂ ಹೆಚ್ಚಾಗುತ್ತಿದ್ದು, ಜನರಲ್ಲಿ ಬಹಳ ಆತಂಕಕ್ಕೆ ಕಾರಣವಾಗಿದೆ. ನಿಫಾಗೂ ಕೊರೋನಾಗೂ ಬಹಳ ಹೋಲಿಕೆ ಇದ್ದರೂ, ಇವೆರಡು ಬೇರೆ ಬೇರೆ. ಈ ಎರಡು ಡೇಂಜರಸ್ ವೈರಸ್ಗಳ ನಡುವೆ ಇರುವ ವ್ಯತ್ಯಾಸವೇನು? ಇವರೆಡರಲ್ಲಿ ಯಾವುದು ಹೆಚ್ಚು ಅಪಾಯಕಾರಿ? ಆ ಬಗ್ಗೆ ವಿವರ ಇಲ್ಲಿದೆ ನೋಡಿ.
ನಿಫಾ ವೈರಸ್ ಈಗ ಕೇರಳದಲ್ಲಿ ತಾಂಡವ ಆಡುತ್ತಿದೆ. ನಿತ್ಯ 30000 ಕೊರೋನಾ ಕೇಸ್ ಜೊತೆ ನಿಫಾ 2ನೇ ಬಾರಿಗೆ ಕೇರಳವನ್ನು ಕಾಡುತ್ತಿದೆ.
ನಿಫಾ ಮೊದಲು ಪತ್ತೆಯಾಗಿದ್ದು ಎಲ್ಲಿ?
Image Credits : Shutterstock
ನಿಫಾ ವೈರಸ್ ಮೊದಲು ಪತ್ತೆಯಾಗಿದ್ದು 1999ರಲ್ಲಿ. ಮಲೇಷ್ಯಾದ ಸುಂಗೈ ನಿಫಾ ಎನ್ನುವ ಹಳ್ಳಿಯಲ್ಲಿ ಮೊದಲು ಕಾಣಿಸಿಕೊಂಡಿತು. ಇದರಿಂದಾಗಿಯೇ ಈ ವೈರಸ್ಗೆ ನಿಫಾ ಎನ್ನುವ ಹೆಸರು ಬಂದಿದೆ.
ನಿಫಾ ಒಂದು ಝೂನೋಟಿಕ್ ಕಾಯಿಲೆ(ಪ್ರಾಣಿಗಳಿಂದ ಮನುಷ್ಯರಿಗೆ/ಮನುಷ್ಯರಿಂದ ಪ್ರಾಣಿಗಳಿಗೆ) ಹರಡಬಲ್ಲದು. ನಿಫಾ ವೈರಸ್ ಹಂದಿ, ಬಾವಲಿ, ನಾಯಿ, ಬೆಕ್ಕು, ಕುದುರೆ, ಮೇಕೆಗಳಲ್ಲಿ ಕಂಡು ಬರಬಹುದು. ಬಾವಲಿಗಳಲ್ಲಿ ಈ ವೈರಸ್ ಉಳಿಯಲಿದ್ದು, ಪರಿಸರದಲ್ಲಿ ಹರಡಲು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ.
ನಿಫಾ ವೈರಸ್ನ ಮೂಲದ ಬಗ್ಗೆ ತಿಳಿದಿದೆ. ಆದರೆ ಕೊರೋನಾ ವೈರಸ್ನ ಮೂಲ ಇನ್ನೂ ಪತ್ತೆಯಾಗಿಲ್ಲ. ಇದು ನೈಸರ್ಗಿಕವಾಗಿ ಕಾಣಿಸಿಕೊಂಡ ಸೋಂಕೋ ಇಲ್ಲವೇ ಮಾನವ ನಿರ್ಮಿತ ಸೋಂಕೋ ಎನ್ನುವ ಬಗ್ಗೆ ಹಲವು ಅಧ್ಯಯನ ನಡೆದರೂ ಇನ್ನೂ ಯಾವುದೇ ಪರಿಪೂರ್ಣವಾದ ದಾಖಲೆಗಳು ಪತ್ತೆಯಾಗಿಲ್ಲ.
ಒಂದು ಗಮನಿಸಬೇಕಾದ ಅಂಶವೆಂದರೆ ಎರಡೂ ಸೋಂಕಿಗೆ ಚಿಕಿತ್ಸೆಗಳಿಲ್ಲ. ಆದರೆ ಈ ಸೋಂಕಿನ ಲಕ್ಷಣಗಳಿಂದ ಚೇತರಿಕೆ ಕಾಣಲಷ್ಟೇ ಔಷಧಗಳನ್ನು ನೀಡಲಾಗುತ್ತದೆ.
ನಿಫಾ ಸೋಂಕಿನ ಲಕ್ಷಣಗಳೇನು ಗೊತ್ತಾ?
Image Source : WHO
ನಿಫಾ ಸೋಂಕಿಗೆ ತುತ್ತಾದ ಆರಂಭದಲ್ಲಿ ಜ್ವರ, ತಲೆನೋವು, ಮಾಂಸಖಂಡಗಳಲ್ಲಿ ನೋವು, ವಾಂತಿ, ಗಂಟಲು ಕೆರೆತ ಕಾಣಿಸುತ್ತದೆ. ಸೋಂಕಿನ ತೀವ್ರತೆ ಹೆಚ್ಚಾದ ಸಂದರ್ಭದಲ್ಲಿ ತಲೆ ಸುತ್ತುವುದು, ಆಯಾಸ, ಪ್ರಜ್ಞೆ ಹೋದಂಥ ಅನುಭವ, ಕೆಲ ಹೃದಯ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳಲಿವೆ.
ಕೊರೋನಾ ಸೋಂಕಿನ ಬಹುತೇಕ ಲಕ್ಷಣಗಳು ನಿಫಾ ವೈರಸ್ ತಗುಲಿದಾಗಲೂ ಕಾಣಸಿಕೊಳ್ಳಲಿದೆ. ಕೊರೋನಾ ಹಾಗೂ ನಿಫಾ ಎರಡೂ ಸೋಂಕುಗಳ ಪತ್ತೆಗೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ.
ಯಾವುದು ಹೆಚ್ಚು ಅಪಾಯಕಾರಿ?
ಕೊರೋನಾ ಹಾಗೂ ನಿಫಾ ಎರಡರ ನಡುವೆ ನಿಫಾ ಹೆಚ್ಚು ಅಪಾಯಕಾರಿ. ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತದೆ. ಆದರೆ ಸಾವಿನ ದರ ಕಡಿಮೆ. ಅಂದರೆ 100 ಜನರಿಗೆ ಸೋಂಕು ತಗುಲಿದರೆ 10ರಿಂದ 15 ಜನರು ಮಾತ್ರ ಸಾವಿನ ಅಪಾಯದಲ್ಲಿರುತ್ತಾರೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವವರಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಲಕ್ಷಣಗಳು ಪತ್ತೆಯಾದರೂ ಸಾಮಾನ್ಯ ಔಷಧಗಳಿಂದ ಚೇತರಿಕೆ ಕಾಣಬಹುದು.
ನಿಫಾ ಸೋಂಕು ವೇಗವಾಗಿ ಹಬ್ಬುವುದಿಲ್ಲ. ಆದರೆ ಅಪಾಯ ಹೆಚ್ಚು. 100 ಜನರಿಗೆ ನಿಫಾ ಸೋಂಕು ತಗುಲಿದರೆ 40-50 ಜನ ಸಾವಿನ ಅಪಾಯದಲ್ಲಿ ಇರುತ್ತಾರೆ. ಹೀಗಾಗಿ ನಿಫಾ ಸೋಂಕು ತಗುಲಿದರೆ ಚೇತರಿಕೆ ಕಾಣುವುದು ಬಹಳ ಕಷ್ಟ ಎನ್ನುತ್ತಾರೆ ವೈದ್ಯಕೀಯ ಸಿಬ್ಬಂದಿ ಹಾಗೂ ತಜ್ಞರು.
ನಿಫಾದಿಂದ ಯಾವ್ಯಾವ ದೇಶಕ್ಕೆ ಅಪಾಯ?
ನಿಫಾ ಸೋಂಕು ಮಲೇಷ್ಯಾ, ಸಿಂಗಾಪುರ್, ಬಾಂಗ್ಲಾದೇಶ, ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಅಲ್ಲದೇ, ಕಾಂಬೋಡಿಯಾ, ಇಂಡೋನೇಷ್ಯಾ, ಮಡಗಾಸ್ಕರ್, ಥಾಯ್ಲೆಂಡ್ ಹಾಗೂ ಟಿಮೊರ್-ಲೆಸ್ಟೆ ದೇಶಗಳಲ್ಲೂ ಈ ಸೋಂಕು ಹೆಚ್ಚಾಗಿ ಹಬ್ಬುತ್ತಿದೆ.
ಕೊರೋನಾ ಸೋಂಕು ಮಾತ್ರ 221 ದೇಶಗಳಲ್ಲೂ ಕಾಣಿಸಿಕೊಂಡಿದ್ದು, ಈ ಸೋಂಕು ಹಬ್ಬುವ ವೇಗ ವಿಶ್ವವನ್ನೇ ನಡುಗಿಸಿದೆ.
ಎಚ್ಚರಿಕೆ ಅಗತ್ಯ
ಕೊರೋನಾ ಇಲ್ಲವೇ ನಿಫಾ ವೈರಸ್ ತಗುಲದಂತೆ ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕಿದೆ. ಪ್ರಮುಖವಾಗಿ ನಿಫಾ ವೈರಸ್ನಿಂದ ದೂರವಿರಬೇಕಿದ್ದರೆ ಆಹಾರ ಸೇವನೆ ವೇಳೆ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಪಕ್ಷಿಗಳು ತಿಂದು ಬಿಟ್ಟಿರುವ ಹಣ್ಣುಗಳನ್ನು ಸೇವಿಸಬಾರದು ಎಂದು ಎಚ್ಚರಿಸಲಾಗಿದೆ.
ಲಸಿಕೆ ಕೆಲಸ ಮಾಡುತ್ತಾ?
ಕೊರೋನಾ ಸೋಂಕಿಗೆ ಈಗಾಗಲೇ ವಿಶ್ವದಲ್ಲೆಡೆ ಲಸಿಕಾಕರಣ ಆರಂಭಗೊಂಡಿದೆ. ಫೈಝರ್, ಆ್ಯಸ್ಟ್ರಾಜೆನೆಕಾ, ಮಾಡೆರ್ನಾ, ಕೋವ್ಯಾಕ್ಸಿನ್, ಸ್ಪುಟ್ನಿಕ್ ಸೇರಿ ಅನೇಕ ಕಂಪನಿಗಳು ಕೊರೋನಾ ಸೋಂಕಿಗೆ ಲಸಿಕೆ ತಯಾರಿಸಿವೆ. ಭಾರತ ಸೇರಿ ವಿಶ್ವದ ಬಹುತೇಕ ದೇಶಗಳಲ್ಲಿ ಕೋಟ್ಯಂತರ ಜನರಿಗೆ ಲಸಿಕೆ ನೀಡಲಾಗಿದೆ.
ಲಸಿಕೆಯೂ ಕೊರೋನಾ ಸೋಂಕನ್ನು ತಡೆಗಟ್ಟುವಲ್ಲಿ ಉತ್ತಮ ಕೆಲಸ ಮಾಡುತ್ತಿರುವದಾಗಿ ಅಧ್ಯಯನಗಳು ಹೇಳುತ್ತಿವೆ. ಸಾವಿನ ದರ ಕಡಿಮೆಯಾಗಿದೆ. ಎಲ್ಲಾ ದೇಶಗಳೂ ಸಾಮಾನ್ಯ ಜನಜೀವನಕ್ಕೆ ಸಾಕ್ಷಿಯಾಗುತ್ತಿವೆ. ನಿಫಾ ಸೋಂಕಿಗೂ ಕೊರೋನಾ ಸೋಂಕಿಗೆ ಕೊಡುವ ಲಸಿಕೆಯೇ ಕೆಲಸ ಮಾಡುತ್ತದೆಯೇ ಎನ್ನುವ ಅಧ್ಯಯನ ನಡೆಯಬೇಕಿದೆ. ಒಂದೊಮ್ಮೆ ಯಶಸ್ವಿಯಾದರೆ ಲಕ್ಷಾಂತರ ಜೀವ ಉಳಿಯಲಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2YDeYUI
September 08, 2021 at 01:22PM