ಕ್ಯಾಪ್ಟನ್ ಕೊಹ್ಲಿ ನಡೆಗೆ ಪಾಕಿಸ್ತಾನಿಯರಿಂದಲೂ ಮೆಚ್ಚುಗೆ
ವಿಶ್ವಕಪ್ನಲ್ಲಿ ಭಾರತ ತನ್ನ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೋತಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಹಿಸಲಾಗದ ನೋವು ನೀಡಿದೆ ನಿಜ. ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ದಾಖಲೆ ಮುರಿದುಬಿದ್ದಿದ್ದನ್ನು ಕಂಡು ಭಾರತ ತಂಡದ ಆಟಗಾರರೂ ಮಂಕಾಗಿದ್ದಾರೆ. ಆದರೆ ಸೋಲಿನ ನೋವಿನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೋರಿದ ಕ್ರೀಡಾ ಸ್ಫೂರ್ತಿಗೆ ಕ್ರೀಡಾ ಜಗತ್ತಿನಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪಾಕಿಸ್ತಾನ ಅತ್ಯಂತ ವೃತ್ತಿಪರವಾಗಿ ಆಡಿ 10 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು. ಸೋತಿದ್ದು ಭಾರತೀಯ ಆಟಗಾರರ ಮನಸಿನಲ್ಲಿ ಗಾಯ ಉಂಟು ಮಾಡಿದರೆ, 10 ವಿಕೆಟ್ಗಳಿಂದ ಸೋತಿದ್ದು ಆ ಗಾಯದ ಮೇಲೆ ಉಪ್ಪು ಸವರಿದಂತ್ತಿತ್ತು.
Kohli sportsmanship is always remain encourage that's why he's remain remarkable personality enforced. pic.twitter.com/Od1KaYbAkZ
— Salim Shaikh (@Salim_11170) October 25, 2021
ಸೋಲಿನ ಬಳಿಕ ವಿರಾಟ್ ಕೊಹ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ಗಳಾದ ಮೊಹಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಆಜಂ ಬಳಿಕ ಖುದ್ದಾಗಿ ತೆರಳಿ ಅಭಿನಂದನೆ ಸಲ್ಲಿಸಿದರು.
ಅದರಲ್ಲೂ ಮೊಹಮದ್ ರಿಜ್ವಾನ್, ಕೊಹ್ಲಿಯನ್ನು ತಬ್ಬಿಕೊಂಡು ವಿಶ್ವ ಶ್ರೇಷ್ಠ ತಂಡದ ಎದುರು ಸಾಧಿಸಿದ ಗೆಲುವು ಎಂತಹ ಖುಷಿ ನೀಡಿದೆ ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದಾಗ ಕೊಹ್ಲಿ ಅಷ್ಟೇ ಪ್ರೀತಿಯ ಅಪ್ಪುಗೆ ನೀಡಿದರು.
Thalaivan's sportsmanship as always @imVkohli ❤️👌 pic.twitter.com/sXGeMojMu9
— Shiva ⱽᵏ (@thala_kohli_18) October 24, 2021
ಬಾಬರ್, ರಿಜ್ವಾನ್ ಮಾತ್ರ ಇಡೀ ಪಾಕಿಸ್ತಾನ ತಂಡವೇ ಕೊಹ್ಲಿಯ ಕ್ರೀಡಾ ಸ್ಫೂರ್ತಿ ಕಂಡು ಬೆರಗಾಯಿತು. ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಭಾರತೀಯ ಹಾಗೂ ಪಾಕಿಸ್ತಾನಿ ಅಭಿಮಾನಿಗಳು ಕೊಹ್ಲಿಯನ್ನು ಕೊಂಡಾಡಿದ್ದಾರೆ.
ಕೊಹ್ಲಿ, ಪಾಕಿಸ್ತಾನಿ ಆಟಗಾರರನ್ನು ಅಭಿನಂದಿಸುತ್ತಿರುವ ಫೋಟೋಗಳು, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ವಿರಾಟ್ ಕೊಹ್ಲಿ ತಾವೊಬ್ಬ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಮಾತ್ರವಲ್ಲ, ಅಷ್ಟೇ ಒಳ್ಳೆಯ ಮನಸಿರುವ ವ್ಯಕ್ತಿ ಎನ್ನುವುದನ್ನು ಮತ್ತೊಮ್ಮೆ ತೋರಿಸಿದ್ದಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3b65Yun
October 25, 2021 at 06:20PM