
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಯ ಸೆಕೆಂಡ್ ಡೋಸ್ ಅಭಾವ ಎದುರಾಗಿತ್ತು. ಈ ನಡುವೆಯೇ ಸರ್ಕಾರ 18 ರಿಂದ 44 ವರ್ಷ ವಯೋಮಾನದವರಿಗೂ ಲಸಿಕೆ ನೀಡಲು ಮುಂದಾಗಿತ್ತು. ಈ ಸಂಬಂಧ ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ 18 - 44 ವಯೋಮಾನದವರ ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ 45 ವರ್ಷ ಮೇಲ್ಪಟ್ಟವರ ಎರಡನೇ ಡೋಸ್ ಲಸಿಕೆ ಬಾಕಿ ಇದ್ದು, ಆ ಲಸಿಕಾ ಕಾರ್ಯಕ್ರಮ ಮುಗಿದ ನಂತರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ.
from ಸುದ್ದಿ - Planet Tv https://ift.tt/3faWvDG
May 13, 2021 at 01:16AM