ಗ್ರೀನ್ ಟೀ ಎಂದೆಂದಿಗೂ ಎವರ್ ಗ್ರೀನ್
source and pic credit: https://www.insider.com
ಚಹಾಗೂ ಭಾರತೀಯರಿಗೆ ಬಿಟ್ಟೂ ಬಿಡದ ನಂಟಿದೆ. ಏನಿಲ್ಲದಿದ್ದರೂ ಸರಿ, ಬೆಳಗ್ಗೆ ಸಂಜೆ ಹೊತ್ತು 1 ಕಪ್ ಚಹಾ ಅಂತೂ ಕುಡಿಯಲೇಬೇಕು. ಅದರಲ್ಲೂ ಕೆಲವರು ಬ್ಲ್ಯಾಕ್ ಟೀ, ಲೆಮನ್ ಟೀ, ಮಸಾಲ ಟೀ ಅಂತ ವೆರೈಟಿ ಟೀಗೆ ಅಡಿಕ್ಟ್ ಆಗಿರುತ್ತಾರೆ. ಕಾಫಿಯನ್ನು ಇಷ್ಟಪಡುವ ಕಾಫಿಪ್ರಿಯರು ಬೇರೆಯೇ ಇದ್ದಾರೆ. ಆದರೆ ಅದೆಲ್ಲಕ್ಕಿಂತೂ ಟೀಯನ್ನು ಇಷ್ಟಪಡುವ ಮಂದಿ ಹೆಚ್ಚು. ಸ್ಪಲ್ಪ ನೀರು, ಹದವಾಗಿ ಬೆರೆಸಿದ ಹಾಲು, ಇಷ್ಟೇ ಸಕ್ಕರೆ, ಚೆನ್ನಾಗಿ ಕುದಿದ ಚಹಾ ಪುಡಿ..ಆಹಾ..ಹಬೆಯಾಡುವ ಆ ಟೀ ಕುಡಿದರೆ ಮತ್ತೇನೂ ಬೇಡ.
source and pic credit: google.com
ಬೆಳಗ್ಗಿನ ಹೊತ್ತು ಎದ್ದು ಟೀ ಕುಡಿಯುವುದು ಹಲವರ ರೂಢಿ. ಅದರಲ್ಲಿ ಕೆಲವರು ಬ್ಲ್ಯಾಕ್ ಟೀ ಕುಡಿದರೆ, ಇನ್ನು ಕೆಲವರು ಸಾದಾ ಹಾಲಿನ ಟೀ, ಮತ್ತೆ ಕೆಲವರು, ಮಸಾಲ ಟೀ, ಶುಂಠಿ ಟೀ ಹೀಗೆ ವೆರೈಟಿ ಟೀಗಳನ್ನು ಕುಡಿಯುತ್ತಾರೆ. ಆದರೆ ನಿಮಗೆ ಗೊತ್ತಾ..ಈ ಎಲ್ಲಾ ಟೀಗಿಂತಲೂ ಗ್ರೀನ್ ಟಿ ದಿ ಬೆಸ್ಟ್. ನಿಮ್ಮ ಇಷ್ಟಕಷ್ಟ ಪಕ್ಕಕ್ಕಿರಲಿ. ಗ್ರೀನ್ ಟೀ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಉತ್ತಮ ಎಂದು ಆಹಾರತಜ್ಞರು ಹೇಳುತ್ತಾರೆ.
source and pic credit:https://ift.tt/2qVFjua
ಎವರ್ ‘ಗ್ರೀನ್’ ಟೀ
ಬರೀ ಶ್ರೀಮಂತರ ಮನೆಯಲ್ಲಿ, ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಗ್ರೀನ್ ಟೀ ಈಗ ಜನಸಾಮಾನ್ಯರ ಮಧ್ಯೆಯೂ ಹೆಚ್ಚು ಪ್ರಚಲಿತದಲ್ಲಿದೆ. ಇದಕ್ಕೆ ಕಾರಣ, ಇದರಲ್ಲಿರುವ ಆರೋಗ್ಯಕರ ಗುಣಗಳು. ಇತ್ತೀಚಿನವರೆಗೂ ಎಲ್ಲರಿಗೂ ಅಪರಿಚಿತವಾಗಿದ್ದ ಹಸಿರು ಚಹಾ ಅಥವಾ ಗ್ರೀನ್ ಟೀ ಈಗ ಎಲ್ಲೆಡೆ ಲಭ್ಯವಾಗುತ್ತಿದೆ. ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಕುಡಿಯುತ್ತಾ ಬಂದಿರುವ ಚೀನೀಯರ ಆರೋಗ್ಯದ ಗುಟ್ಟು ಇದೇ ಗ್ರೀನ್ ಟೀ ಎಂದು ತಿಳಿದುಬಂದಿದೆ.
source and pic crdit: https://ift.tt/3tFXEIo
ಪಾನೀಯಗಳಲ್ಲಿ ಗ್ರೀನ್ ಟೀ ಅತ್ಯುತ್ತಮ ಆರೋಗ್ಯಕರ ಪಾನೀಯ ಎಂದು ಪರಿಗಣಿಸಲಾಗಿದೆ.ಗ್ರೀನ್ ಟೀ ಕುಡಿಯುವುದು ಬರೀ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವೃದ್ಧಿಗೂ ಉಪಕಾರಿಯಾಗಿದೆ. ಗ್ರೀನ್ ಟೀಯಲ್ಲಿರುವ ಫ್ಲೇವನಾಯ್ಡ್, ಕ್ಯಾಟೆಚಿನ್ ಎಂಬ ಪಾಲಿಫಿನಾಲು (polyphenols) ಗಳು ಪ್ರಬಲವಾದ ಆಂಟಿ ಆಕ್ಸಿಡೆಂಟುಗಳಂತೆ ಕೆಲಸ ಮಾಡುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಜೀವಕೋಶಗಳ ಸವೆತದ ಪ್ರಮಾಣವನ್ನು ತಡೆಯುತ್ತದೆ.
source and pic credit: https://www.eatthis.com
ಜ್ವರ, ಕೆಮ್ಮಿಗೆ ಮದ್ದು ಗ್ರೀನ್ ಟೀ
ಗ್ರೀನ್ ಟೀನಲ್ಲಿ ಸಕ್ಕರೆ ಬದಲು, ಸ್ಪಲ್ಪ ಜೇನುತುಪ್ಪ ಮಿಶ್ರ ಮಾಡಿ ಕುಡಿಯುವುದು ಕೂಡ ಆರೋಗ್ಯಕ್ಕೆ ಉತ್ತಮ. ಗ್ರೀನ್ ಟೀನಲ್ಲಿ ಜೇನುತುಪ್ಪ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.ಗ್ರೀನ್ ಟೀಯಲ್ಲಿರುವ ಅಂಟಿ-ಆಕ್ಸಿಡೆಂಟ್ಸ್ಗಳು ಜ್ವರ, ನೆಗಡಿ, ಕೆಮ್ಮಿಗೆ ಕಾರಣವಾಗುವ ವೈರಸ್ಗಳ ವಿರುದ್ದ ಹೋರಾಡುತ್ತದೆ. ಈ ಮೂಲಕ ಅನಾರೋಗ್ಯ ಬಾಧಿಸದಂತೆ ತಡೆಯುತ್ತವೆ. ಗ್ರೀನ್ ಟೀನಲ್ಲಿ ಸಕ್ಕರೆ ಬದಲು, ಸ್ಪಲ್ಪ ಜೇನುತುಪ್ಪ ಮಿಶ್ರ ಮಾಡಿ ಕುಡಿಯುವುದು ಕೂಡ ಆರೋಗ್ಯಕ್ಕೆ ಉತ್ತಮ. ಗ್ರೀನ್ ಟೀನಲ್ಲಿ ಜೇನುತುಪ್ಪ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
source and pic credit: https://parade.com
ತಲೆನೋವು ಫಟಾಫಟ್ ಮಾಯ
ತಲೆನೋವಿನ ಸಂದರ್ಭ ಗ್ರೀನ್ ಟೀ ಕುಡಿದರೆ ಥಟ್ಟಂತ ರಿಲ್ಯಾಕ್ಸ್ ಆಗಬಹುದು. ಹಸಿರು ಟೀಯಲ್ಲಿ ಕೊಂಚವೇ ಸಕ್ಕರೆ ಸೇರಿಸಿ ಕುದಿಸಿ ಕುಡಿಯಬಹುದು ಅಥವಾ ಕೊಂಚ ಲಿಂಬೆರಸ ಸೇರಿಸಿ ಕುಡಿಯುವುದರಿಂದ ತಲೆನೋವು ಬೇಗನೇ ಕಡಿಮೆಯಾಗುತ್ತದೆದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.ಗಂಟಲು ಕೆರೆತ, ತಲೆನೋವು ಸಮಸ್ಯೆಗಳಿದ್ದರೂ ಗ್ರೀನ್ ಟೀ ಉತ್ತಮ ಪರಿಹಾರ. ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬಹುದು.
source and pic credit: https://ift.tt/3eG1Fbv
ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ
ಅಲ್ಲದೆ, ಗ್ರೀನ್ ಟೀ ಸೇವಿಸುವುದು ಕ್ಯಾನ್ಸರ್ ಬರುವುದನ್ನೂ ತಡೆಯುತ್ತದೆ. ದೇಹದಲ್ಲಿ ಅನಿಯಂತ್ರಿತವಾಗಿ ಬೆಳವಣಿಗೆಯಾಗುವಫ್ರೀ ರ್ಯಾಡಿಕಲ್ ಎಂಬ ಕಣಗಳುಕ್ಯಾನ್ಸರ್ ರೋಗವನ್ನು ಹುಟ್ಟುಹಾಕುತ್ತವೆ. ಹಸಿರು ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಕಣಗಳನ್ನು ಹಿಮ್ಮೆಟ್ಟಿಸಿ ಕ್ಯಾನ್ಸ್ರರ್ ತಗಲುವ ಸಂಭವವನ್ನು ಕಡಿಮೆಗೊಳಿಸುತ್ತವೆ.ವಿಶೇಷವಾಗಿ ಸ್ತನಕ್ಯಾನ್ಸರ್, ಕರುಳು ಕ್ಯಾನ್ಸರ್ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ಸಮರ್ಥವಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.
source and pic credit: The Economic Times
ಮಧುಮೇಹ ಬರುವ ಸಾಧ್ಯತೆ ದೂರವಾಗಿಸುತ್ತದೆ
ಮಧುಮೇಹಬರಲು ಅನುವಂಶೀಯ ಕಾರಣಗಳಿದ್ದು ಯಾವುದೇ ವಯಸ್ಸಿನಲ್ಲಿ ಬರಬಹುದು. ಆದರೆ, ನಿಯಮಿತ ಹಸಿರು ಟೀ ಸೇವನೆಯಿಂದ ಮಧುಮೇಹಸಣ್ಣ ವಯಸ್ಸಿನಲ್ಲೇ ಬರುವುದನ್ನು ತಡೆಯಬಹುದು. ಅಲ್ಲದೇ ಹಸಿರು ಟೀ ಸೇವನೆಯಿಂದ ಮಧುಮೇಹಿಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿರುವುದು ಕೆಲವು ಪ್ರಯೋಗಗಳಿಂದ ದೃಢಪಟ್ಟಿದೆ.
source and pic credit: https://www.thelist.com
ಕೊಬ್ಬು ಕರಗಿಸಲು ನೆರವಾಗುತ್ತದೆ
ಗ್ರೀನ್ ಟೀ ಸೇವನೆ ಹಸಿವನ್ನು ನಿಯಂತ್ರಿಸುತ್ತದೆ. ಊಟದ ಮುಂಚೆ ಒಂದು ಕಪ್ನಷ್ಟು ಹಸಿರು ಚಹಾವನ್ನು ನೀವು ಸೇವಿಸಿದಲ್ಲಿ ಹೆಚ್ಚು ಊಟ ಮಾಡಲು ಸಾಧ್ಯವಾಗುವುದಿಲ್ಲ. ಊಟದ ನಂತರ ಕೂಡ ಒಂದು ಕಪ್ನಷ್ಟು ಹಸಿರು ಚಹಾವನ್ನು ಸೇವಿಸಿ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸುತ್ತದೆ.ನಿತ್ಯದ ಹಸಿರು ಟೀ ಸೇವನೆಯಿಂದ ನಿಧಾನವಾಗಿಯಾದರೂ ಆರೋಗ್ಯಕರವಾಗಿ ಕೊಬ್ಬು ಕರಗುತ್ತದೆ.ಇನ್ನು, ಹೊಟ್ಟೆ ನೋವಿನ ಶಮನಕ್ಕಾಗಿ ಹೊಟ್ಟೆ ನೋವಿನ ಶಮನಕ್ಕಾಗಿ ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ..

source and pic credit: https://ift.tt/2p1REe5
ಸೌಂದರ್ಯ ವರ್ಧನೆಗೆ ಉಪಕಾರಿ
ಬಿಸಿನೀರಿನಲ್ಲಿ ಎರಡು ಅಥವಾ ಮೂರು ಹಸಿರು ಚಹಾ ಪುಡಿಯ ಚೀಲಗಳನ್ನು ಕೊಂಚಕಾಲ ಮುಳುಗಿಸಿಡಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಪಾತ್ರೆಗೆ ಹಾಕಿ, ಸ್ಪಲ್ಪ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ ಐದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದಮುಖ ತೊಳೆದುಕೊಳ್ಳಿ. ಈ ರೀತಿ ವಾರಕ್ಕೆರಡು ಮಾಡುವುದರಿಂದ ತ್ವಚೆ ಆರೋಗ್ಯಯುತವಾಗಿ ಕಂಗೊಳಿಸುತ್ತದೆ.
from ಸುದ್ದಿ - Planet Tv https://ift.tt/3o8HwOu
May 12, 2021 at 05:24PM