ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಗೊತ್ತಿಲ್ಲದ 8 ವಿಷಯಗಳು!
Image credits : vedicfeed
ಶ್ರೀ ಕೃಷ್ಣ, ವಾಸುದೇವ, ಕರುಣಾಸಾಗರ ಹೀಗೆ ನಾನಾ ಹೆಸರುಗಳಿಂದ ಭಕ್ತರಿಂದ ಕರೆಯಲ್ಪಡುವ ವಿಷ್ಣುವಿನ ಅವತಾರವಾದ ಕೃಷ್ಣ ಪರಮಾತ್ಮನ ಬಗ್ಗೆ ಅನೇಕ ವಿಚಾರಗಳು ಅನೇಕರಿಗೆ ಗೊತ್ತಿಲ್ಲ. ಈ ಬ್ರಹ್ಮಾಂಡದ ರಕ್ಷಕನ ಬಗ್ಗೆ ಕೆಲ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ ಓದಿ.
1. ಶ್ರೀ ಕೃಷ್ಣನ ಬಣ್ಣ ನೀಲಿ ಎಂದು ನಂಬಲಾಗಿದೆ. ಎಲ್ಲಾ ಫೋಟೋಗಳಲ್ಲೂ ಶ್ರೀ ಕೃಷ್ಣನನ್ನು ನೀಲಿ ಬಣ್ಣದಲ್ಲೇ ತೋರಿಲಾಗಿರುತ್ತದೆ!. ಆದರೆ ಶ್ರೀ ಕೃಷ್ಣನ ಬಣ್ಣ ಕಪ್ಪು.
2. ಶ್ರೀ ಕೃಷ್ಣ ಎಂದಾಕ್ಷಣ ನೆನಪಾಗುವ ಮತ್ತೊಂದು ಹೆಸರೇ ರಾಧಾ. ರಾಧಾ, ಶ್ರೀ ಕೃಷ್ಣನ ಮತ್ತೊಂದು ಭಾಗ. ರಾಧಾ, ಶ್ರೀ ಕೃಷ್ಣನ ಅಹ್ಲಾದಿನಿ ಶಕ್ತಿ ಎಂದೇ ಪ್ರಸಿದ್ಧಿ. ರಾಧಾ ಮಹಾಲಕ್ಷ್ಮೀಯ ಅವತಾರ.
3. ಶ್ರೀ ಕೃಷ್ಣನ ನಿಧನ, ಅವನ ಲೀಲೆಗಳಲ್ಲಿ ಒಂದು. ಮನುಷ್ಯನ ದೇಹವನ್ನು ತ್ಯಜಿಸಲು ಸ್ವತಃ ಶ್ರೀ ಕೃಷ್ಣನೇ ತೋರಿದ ಲೀಲೆಯದು.
Image Credits : wallpapercave
4. ಶ್ರೀ ಕೃಷ್ಣನಿಗೆ ರುಕ್ಮಿಣಿ ಸೇರಿ ಒಟ್ಟು 8 ಪತ್ನಿಯರು ಇದ್ದರು. ಅವರನ್ನು ಅಷ್ಟಭಾರ್ಯರು ಎಂದು ಕರೆಯಲಾಗುತ್ತದೆ. ರುಕ್ಮಿಣಿಯು ಶಿಶುಪಾಲನನ್ನು ವಿವಾಹವಾಗಲು ಇಷ್ಟವಿರದ ಕಾರಣ, ಆಕೆಯೇ ತನ್ನನ್ನು ಅಪಹರಿಸಲು ಶ್ರೀ ಕೃಷ್ಣನನ್ನು ಕೋರಿಕೊಳ್ಳುತ್ತಾಲೆ. ಶ್ರೀ ಕೃಷ್ಣನ ಉಳಿದ 7 ಪತ್ನಿಯರೆಂದರೆ, ಸತ್ಯಭಾಮಾ, ಜಾಂಬವತಿ, ಕಲಿಂದಿ, ಮಿತ್ರವೃಂದ, ನಗ್ನಜಿತಿ, ಭದ್ರಾ ಹಾಗೂ ಲಕ್ಷಣ.
5. ರಾಸಲೀಲೆ ವೇಳೆ ಶ್ರೀ ಕೃಷ್ಣನು ಗೋಪಿಕೆಯರ ಜೊತೆ ನೃತ್ಯ ಮಾಡಿದನು. ಈ ವೇಳೆ ಪ್ರತಿ ಗೋಪಿಕೆಯರಿಗೂ ತಾವು ಶ್ರೀ ಕೃಷ್ಣನೊಂದಿಗೆ ಏಕಾಂಗಿಯಾಗಿ ನರ್ತಿಸುತ್ತಿರುವುದಾಗಿ ಅನುಭವವಾಗಿತ್ತು. ಇದು ಶ್ರೀಕೃಷ್ಣನ ಮಹಿಮೆ.
6. ಕೃಷ್ಣ ಎಂದರೆ ಕಪ್ಪು ಎಂಬುದೊಂದೇ ಅರ್ಥವಲ್ಲ. ಕೃಷ್ಣ ಎಂದರೆ ಎಲ್ಲರನ್ನೂ ಆಕರ್ಷಿಸುವವನು ಎಂಬ ಅರ್ಥವೂ ಇದೆ.
Image credits : Indiafacts
7. ಶ್ರೀ ಕೃಷ್ಣನಿಗೆ ಒಟ್ಟು 108 ಹೆಸರುಗಳಿವೆ!
8. ಶ್ರೀ ಕೃಷ್ಣನು ಮಹಾ ವಿಷ್ಣುವಿನ ಅವತಾರ. ಕೃಷ್ಣನ ಪತ್ನಿಯರಾದ ರುಕ್ಮಿಣಿ, ಸತ್ಯಭಾಮಾ ಸೇರಿ ಅಷ್ಟಭಾರ್ಯರೆಲ್ಲರೂ ಮಹಾಲಕ್ಷ್ಮೀಯ ಅವತಾರ.
from ಸುದ್ದಿ - Planet Tv https://ift.tt/3hjYHv8
May 11, 2021 at 07:02PM