ಗಾಯತ್ರಿ ಮಂತ್ರ ಜಪಿಸಿದ್ರೆ ಕೊರೋನಾ ಹೋಗುತ್ತಾ?
Image Credits : religionworld.in
ಕೊರೋನಾ ಸೋಂಕಿನ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ವಿಜ್ಞಾನಿಗಳು ಲಸಿಕೆಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ. ಆದರೆ ಯಾವ ಲಸಿಕೆಯೂ ಸಂಪೂರ್ಣವಾಗಿ ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಆಯುರ್ವೇದ, ಸಿದ್ಧೌಷಧ, ಮನೆ ಮದ್ದು ಹೀಗೆ ಯಾವೆಲ್ಲಾ ಔಷಧಗಳು ಸಾಧ್ಯವೋ ಅವೆಲ್ಲವನ್ನೂ ಜನರು ತೆಗೆದುಕೊಳ್ಳುತ್ತಾ ಇದ್ದಾರೆ.
ಇದೀಗ ಆಧ್ಯಾತ್ಮಿಕವಾಗಿ ಕೊರೋನಾ ಸೋಂಕನ್ನು ತೊಲಗಿಸಲು ಪ್ರಯೋಗವೊಂದನ್ನು ರಿಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಕೇಂದ್ರ (ಏಮ್ಸ್) ಆರಂಭಿಸಿದೆ. ಅದುವೇ, ಕೊರೋನಾ ಸೋಂಕಿನ ವಿರುದ್ಧ ಗಾಯತ್ರಿ ಮಂತ್ರ ಹಾಗೂ ಪ್ರಾಣಾಯಾಮದ ಪ್ರಯೋಗ.
ಭಾರತ ಸರ್ಕಾರವೇ ಪ್ರಾಯೋಜಕತ್ವ ನೀಡುತ್ತಿದೆ!
Image Credits : Scroll.in
ಈ ಪ್ರಯೋಗಕ್ಕೆ ಭಾರತ ಸರ್ಕಾರವೇ ಪ್ರಾಯೋಜಕತ್ವ ನೀಡುತ್ತಿರುವುದು ವಿಶೇಷ. ಕೇಂದ್ರ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗವೂ ಈ ಪ್ರಯೋಗಕ್ಕೆ ಆಗುವ ಖರ್ಚನ್ನು ವಹಿಸಿಕೊಂಡಿದೆ.
ತಲಾ 10 ಮಂದಿಯ 2 ತಂಡ
ಈ ಆಸ್ಪತ್ರೆಯಲ್ಲಿರುವ ಕೊರೋನಾ ಸೋಂಕಿತರ ಪೈಕಿ 20 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ತಲಾ 10 ಮಂದಿಯನ್ನು ಒಂದೊಂದು ತಂಡವಾಗಿ ವಿಭಜಿಸಲಾಗಿದೆ. ಒಂದು ತಂಡಕ್ಕೆ ಅಂದರೆ `ಎ' ತಂಡಕ್ಕೆ ಗಾಯತ್ರಿ ಮಂತ್ರ ಹಾಗೂ ಪ್ರಾಣಾಯಾಮವನ್ನು ಹೇಳಿಕೊಡಲಾಗುತ್ತಿದೆ. ಮತ್ತೊಂದು ತಂಡ ಅಂದರೆ `ಬಿ' ತಂಡಕ್ಕೆ ಬರೀ ಔಷಧಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ.
Image credits : DNA India
ಎರಡೂ ತಂಡಗಳಲ್ಲಿರುವ ಸೋಂಕಿತರ ಎದೆಯ ಎಕ್ಸ್-ರೇ, ವೈರಸ್ ಲೋಡ್, ವೈರಸ್ನಿಂದ ಎದೆ ಭಾಗದಲ್ಲಿ ಆಗಿರುವ ಊತದ ಪ್ರಮಾಣ ಇದೆಲ್ಲವನ್ನೂ ಪರೀಕ್ಷಿಸಿ ದಾಖಲಿಸಿಕೊಳ್ಳಲಾಗಿದೆ. 14 ದಿನಗಳ ಪ್ರಯೋಗದ ಬಳಿಕ ಮತ್ತೆ ಎಲ್ಲರ ಎಕ್ಸ್-ರೇ, ಊತದ ಪ್ರಮಾಣ ಸೇರಿ ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗುತ್ತದೆ.
ಗಾಯತ್ರಿ ಮಂತ್ರ ಜಪಿಸಿ, ಪ್ರಾಣಾಯಾಮವನ್ನು ಮಾಡಿದ್ದ `ಎ' ತಂಡದ ಸದಸ್ಯರ ವರದಿಗಳನ್ನು ಬರೀ ಔಷಧಗಳನ್ನು ಪಡೆದಿದ್ದ `ಬಿ' ತಂಡದ ಸದಸ್ಯರೊಂದಿಗೆ ಹೋಲಿಕೆ ಮಾಡಿ, ಯಾರು ಎಷ್ಟರ ಮಟ್ಟಿಗೆ ಗುಣಮುಖರಾಗಿದ್ದಾರೆ ಎಂಬುವುದನ್ನು ಪರಿಶೀಲಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಾಯತ್ರಿ ಮಂತ್ರ, ಪ್ರಾಣಾಯಾಮ ಸಾವಿರಾರು ವರ್ಷಗಳಿಂದ ಅನೇಕ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿಯಾಗಿದೆ. ಈಗ ಕೋವಿಡ್ ವಿರುದ್ಧ ಹೋರಾಡಲು ಸಹ ಈ ಪ್ರಯೋಗ ಯಶಸ್ವಿಯಾಗಲಿ ಎನ್ನುವುದು ಭಾರತೀಯರ ಆಶಯ.
from ಸುದ್ದಿ - Planet Tv
May 11, 2021 at 06:18PM