ಸಕ್ಕರೆ ಬಾಯಿಗೆ ಸಿಹಿ, ಆರೋಗ್ಯಕ್ಕೆ ಕಹಿ, ಸ್ವೀಟ್ಸ್ ಇಷ್ಟಪಟ್ಟು ತಿನ್ನುವವರು ಇದನ್ನೊಮ್ಮೆ ಓದಿ ನೋಡಿ
source and pic credit: https://ift.tt/2gkx8oB
ಸಕ್ಕರೆ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸ್ವೀಟ್ಸ್ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತದೆ. ಭಾರತೀಯರು ಅಂದ್ರೆ ಸಕ್ಕರೆ ಹಾಕಿದ ಟೀ ಕುಡಿದ್ರೇನೆ ಬೆಳಗಾಗೋದು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ. ಇನ್ನು ಸಂಜೆ ಹೊತ್ತಂತೂ ಟೀ, ಕಾಫಿ ಇಲ್ಲದೇ ಆಗೋದೆ ಇಲ್ಲ. ಇವಿಷ್ಟೇ ಅಲ್ಲ, ರಿಸಲ್ಟ್ ಬಂತು ಪ್ರಮೋಶನ್ ಆಯ್ತು, ಗಂಡು ಮಗು ಆಯ್ತು ಹೀಗೆ ನಾನಾ ನೆಪವೊಡ್ಡಿ ಸ್ವೀಟ್ ಅಂದ್ರೆ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವವರೇ. ಸಿಹಿ ಎಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚು.
source and pic credit: gogole.com
ಇನ್ನು ಹಬ್ಬ ಹರಿದಿನಗಳು ಬಂತು ಅಂದ್ರೆ ಹೇಳ್ಬೇಕಾ, ದೇವ್ರೇ ಬಂದು ನನ್ಗೆ ಸಾಕಪ್ಪಾ ಸಾಕು ಅನ್ನುವಷ್ಟು ದೇವರಿಗ ಸಿಹಿ ತಿಂಡಿಗಳ ನೈವೇದ್ಯ. ದೇವರ ಹೆಸರಲ್ಲಿ ಮತ್ತೆ ಅದನ್ನು ನಾವೇ ತಿನ್ನೋದು ಇದ್ದೇ ಇದ್ಯಲ್ಲಾ. ಇನ್ನು ಗೊತ್ತಿರದ ವಿಷ್ಯ ಒಂದಿದೆ ಕೇಳಿ, ಎಲ್ರೂ ವಾವ್ಹ್ ಅಂತ ಚಪ್ಪರಿಸಿ ತಿನ್ನೋ ಸಕ್ಕರೆ ಅತಿಯಾದರೆ ಇದು ಆರೋಗ್ಯದ ಮೇಲೆ ಅತಿಕೆಟ್ಟ ಪರಿಣಾಮ ಬೀರುತ್ತದೆ. ಸಕ್ಕರೆ, ಸಕ್ಕರೆ ಪದಾರ್ಥಗಳ ಅತಿಯಾದ ಸೇವನೆ ಮಿದುಳಿನ ಮೇಲೂ ಪ್ರಭಾವ ಬೀರುವುದಲ್ಲದೆ ನೆನಪಿನ ಶಕ್ತಿಯನ್ನೂ ಕುಂಠಿತಗೊಳಿಸುತ್ತದೆ.
source and pic credit: https://www.123rf.com
ಬಾಯಿಗೆ ಸಿಹಿ, ಆರೋಗ್ಯಕ್ಕೆ ಕಹಿ
ಸಕ್ಕರೆ ಸೇವನೆಯಿಂದ, ಅಥವಾ ಸಕ್ಕರೆಯ ಅಂಶವುಳ್ಳ ಪಾನೀಯ, ತಿಂಡಿ ತಿನಿಸುಗಳ ಸೇವನಯಿಂದ ಹುಳುಕುಹಲ್ಲು, ಮಧುಮೇಹ, ಬೊಜ್ಜು ಬರುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ ಪ್ರೌಢಾವಸ್ಥೆಯಲ್ಲಿ ಸಕ್ಕರೆ ಸೇವನೆ ಅತಿಯಾದರೆ ಮೆದುಳಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಜಾರ್ಜಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ.
source and pic credit:https://ift.tt/2sLcRur
ಸಕ್ಕರೆಯ ಸೇವನೆ ಹಿಪ್ಪೋಕ್ಯಾಂಪಸ್ ಎಂಬ ಮೆದುಳಿನ ಭಾಗದ ಸ್ಮರಣಶಕ್ತಿ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ ಹೊಟ್ಟೆಯಲ್ಲಿ ಪ್ಯಾರಾಬ್ಯಾಕ್ಟೀರೊಯ್ಡ್ ಎಂಬ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಳಕ್ಕೂ ಸಕ್ಕರೆ ಕಾರಣವಾಗುತ್ತದೆ ಎಂಬುದನ್ನು ಅಧ್ಯಯನದ ವರದಿ ತಿಳಿಸಿದೆ.
source and pic credit: https://www.popsci.com
ಸಕ್ಕರೆ ಸೌಂದರ್ಯಕ್ಕೆ ಮಾರಕ
source and pic credit:https://www.eatthis.com
ಸಕ್ಕರೆ ಸೇವನೆಯಿಂದ ತೂಕ ಹೆಚ್ಚುತ್ತದೆ. ಕಣ್ಣಿನ ಸುತ್ತಲು ಡಾರ್ಕ್ ಸರ್ಕಲ್ ಮೂಡುತ್ತದೆ. ಹೀಗಾಗಿ ಸಕ್ಕರೆಯ ಅತಿಯಾದ ಸೇವನೆ ಬೇಗ ವಯಸ್ಸಾದಂತೆ ಕಾಣಿಸುವಂತೆ ಮಾಡುತ್ತದೆ ಎನ್ನುತ್ತಾರೆ ಆಹಾರತಜ್ಞರು. ಕೇಕ್, ಡಾರ್ಕ್ ಚಾಕೋಲೇಟ್, ಕ್ಯಾಂಡಿಗಳು, ಐಸ್ ಕ್ರೀಂ ಇವೆಲ್ಲರ ಸೇವನೆ ಬಿಟ್ಟರೆ ತ್ವಚೆ ಆರೋಗ್ಯಯುತವಾಗಿ ಹೊಳೆಯುತ್ತದೆ. ತಿನ್ನಲೇಬೇಕೆನಿಸಿದಲ್ಲಿ ಬೆಲ್ಲದಿಂದ ತಯಾರಿಸಿದ ಆಹಾರಗಳ ಸೇವನೆ ಅಭ್ಯಾಸ ಮಾಡಿಕೊಳ್ಳಬಹುದು.
source and pic credit: https://www.eatthis.com
ಅಧ್ಯಯನದ ವರದಿಯಲ್ಲೇನಿದೆ..?
ಸಕ್ಕರೆಗೂ ಕ್ಯಾನ್ಸರ್ಗೂ ನಂಟಿದೆ ಅನ್ನೋದು ಯಾವತ್ತೋ ಅಧ್ಯಯನದಲ್ಲಿ ಸಾಬೀತಾಗಿರೋ ವಿಷಯ. ಸಕ್ಕರೆ ಸೇವನೆಯ ಅಡ್ಡ ಪರಿಣಾಮ ತಕ್ಷಣಕ್ಕೆ ಕಾಣಿಸುವುದಿಲ್ಲ. ಬದಲಾಗಿ ನಿಧಾನವಾಗಿ ದೇಹದ ಆರೋಗ್ಯ ಕೆಡುತ್ತಾ ಹೋಗುತ್ತದೆ.ಅಲ್ಲದೆ ಸಕ್ಕರೆಯನ್ನು ಹೆಚ್ಚಾಗಿ ಸೇವಿಸುವುದರಿಂದ ಸುಸ್ತು, ಸೋಮಾರಿತನ, ಖಿನ್ನತೆ ಹೆಚ್ಚುತ್ತಾ ಹೋಗುತ್ತದೆ. ಭಾರತದಲ್ಲಿ ಸುಮಾರು 6.2 ಕೋಟಿಯಷ್ಟು ಜನರು ಟೈಪ್ 2 ಡಯಾಬಿಟೀಸ್ನಿಂದ ಬಳಲುತ್ತಿದ್ದಾರೆ. ಸುಮಾರು 10 ಲಕ್ಷ ಜನ ವಾರ್ಷಿಕ ಡಯಾಬಿಟೀಸ್ ಸಂಬಂಧಿ ಸಮಸ್ಯೆಗಳಿಂದ ಸಾಯುತ್ತಿದ್ದಾರೆಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.

source and pic credit: Times of India
ಭಾರತೀಯ ಸಂಸ್ಕೃತಿಯಲ್ಲಿ ಬೆಲ್ಲಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಮ್ಮ ಹಿರಿಯರು ಬೆಲ್ಲದ ಆರೋಗ್ಯಕರ ಅಂಶಗಳನ್ನು ಅರಿತಿದ್ದರು. ಹೀಗಾಗಿಯೇ ಇವತ್ತಿಗೂ ಹಲವು ಮನೆಗಳಲ್ಲಿ ಹಿರಿಯರು ಬೆಲ್ಲ ಹಾಕಿದ ಟೀ, ಕಾಫಿ ಸೇವಿಸಲು ಇಷ್ಟಪಡುತ್ತಾರೆ. ಬೆಲ್ಲ ಅನೇಕ ಕಾಯಿಲೆಗಳನ್ನು ಗುಣಪಡಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿಯೇ ಮಕ್ಕಳಿಗೆ ಚಿಕ್ಕಂದಿನಿಂದಲೇ ದೋಸೆ, ಇಡ್ಲಿ ಜತೆ ಸಕ್ಕರೆ ನೀಡುವ ಬದಲು ಬೆಲ್ಲ ನೀಡಿ ರೂಢಿ ಮಾಡಿಸೋದು ಎಲ್ಲಾ ರೀತಿಯಲ್ಲೂ ಉತ್ತಮ.
source and pic credit: https://ift.tt/3uDDAI4
ಸಕ್ಕರೆಯ ತಿಂಡಿ ಬಾಯಿಗೆ ರುಚಿ ನಿಜ. ಆದ್ರೆ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಹಾನಿಕಾರಿ. ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಉಂಟಾಗುವ ಹಾನಿಯ ಕಾರಣಕ್ಕೇ ಇದಕ್ಕೆ ಬಿಳಿ ವಿಷ ಅಂತಾನೂ ಹೆಸರಿದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ಇರೋರು ಇನ್ಮುಂದೆ ಸಕ್ಕರೆ, ಸಕ್ಕರೆ ಪದಾರ್ಥಗಳನ್ನು ತಿನ್ನೋ ಮುನ್ನ ಸ್ಪಲ್ಪ ಯೋಚಿಸಿ.
from ಸುದ್ದಿ - Planet Tv
May 11, 2021 at 03:17PM