ಕರ್ನಾಟಕದಲ್ಲೂ ಕೊರೋನಾ ದೇವಿ ದೇಗುಲ!
ಎರಡೇ ತಿಂಗಳಲ್ಲಿ ಕೊರೋನಾ ಹೋಗುತ್ತಂತೆ!
ಕೊರೋನಾ ಮಹಾಮಾರಿ ಜಗತ್ತನ್ನೇ ಅಲುಗಾಡಿಸುತ್ತಿದೆ. ಎವರೆಸ್ಟ್ ಪರ್ವತಕ್ಕೂ ಕಾಲಿಟ್ಟಿರುವ ಈ ಚೀನಾದ ವೈರಸ್, ಯಾರನ್ನೂ ಬಿಡುತ್ತಿಲ್ಲ. ಈ ಸೋಂಕಿನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಜೀವ, ಜೀವನ ಉಳಿಸಿಕೊಳ್ಳಲು ಜನ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ.
ಜನ ಆಸ್ಪತ್ರೆ, ಆಕ್ಸಿಜನ್, ಔಷಧಿ, ಲಸಿಕೆ ಹೀಗೆ ನಾನಾ ವೈದ್ಯಕೀಯ ಸೌಲಭ್ಯಗಳಿಗಾಗಿ ಅಲೆಯುತ್ತಿರೋದನ್ನ ಪ್ರತಿ ದಿನ ನೋಡುತ್ತಿದ್ದೇವೆ. ಕೊರೋನಾ ಓಡಿಸಲು ಏನೇನೋ ಸಾಹಸಗಳು ನಡೆಯುತ್ತಿವೆ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಭಾರೀ ಅಪಾಯ ಎಂದು ವೈದ್ಯರು, ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ.
ಇದೆಲ್ಲದರ ನಡುವೆ ಜನ ದೇವರ ಮೊರೆ ಹೋಗುವುದನ್ನು ಮರೆತಿಲ್ಲ. ರಾಮ, ಕೃಷ್ಣ, ಯೇಸು, ಅಲ್ಲಾ ಕಾಪಾಡು ಎಂದು ನಿತ್ಯ ಪ್ರಾರ್ಥನೆಗಳು ನಡೆಯುತ್ತಿವೆ. ಆದರೆ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಕೊರೋನಾ ಹೆಸರಲ್ಲೇ ಒಂದು ದೇವರನ್ನು ಸೃಷ್ಟಿಸಿ ಪೂಜಿಸಲು ಶುರು ಮಾಡಿದ್ದಾರೆ.
ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ದೇವಸ್ಥಾನವನ್ನು ಕಟ್ಟಿ, ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳ ನಡೆಸಲಾಗುತ್ತಿದೆ ಎನ್ನುವ ವಿಷಯವನ್ನು ನಿಮ್ಮ `ಪ್ಲಾನೆಟ್ ಟಿವಿ ಕನ್ನಡ' ವೆಬ್ಸೈಟ್ನಲ್ಲೇ ಓದಿದ್ದಿರಿ. ಈಗ ಅಂತದ್ದೇ ದೇವಾಲಯ ನಮ್ಮ ಕರ್ನಾಟಕದಲ್ಲೂ ತಲೆ ಎತ್ತಿದೆ.
Image credits : news18
ಚಾಮರಾಜನಗರದಲ್ಲಿ ಕೊರೋನಾ ಅಮ್ಮನ ಗುಡಿ!
ಇದು ಮೂಢನಂಬಿಕೆಯ ಪರಾಕಾಷ್ಠೆಯೋ, ದೇವರ ಮೇಲಿರುವ ಅಪಾರವಾದ ನಂಬಿಕೆಯೋ ಗೊತ್ತಿಲ್ಲ. ಆದರೆ ಈಗ ನಮ್ಮ ರಾಜ್ಯದಲ್ಲೂ ಕೊರೋನಾ ದೇವಿಗೆ ದೇವಸ್ಥಾನವನ್ನು ಕಟ್ಟಿಯಾಗಿದೆ. ಹಾಗಂತ ಇದು ಮೊದಲೇನಲ್ಲ. ಕಳೆದ ವರ್ಷ ಕೊರೋನಾ ಮೊದಲ ಅಲೆ ವೇಳೆಯೂ `ಕೊರೋನಾ ದೇವಿ'ಯನ್ನು ಜನ ಪೂಜಿಸಿದ್ದರು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾರ ತಾಲೂಕು ಮಧುವನಹಳ್ಳಿ ಬಳಿ ಬೋಳು ಗುಡ್ಡೆ ಎನ್ನುವ ಸ್ಥಳದಲ್ಲಿ ಚಾಮುಂಡಿ ದೇವಾಲಯವೊಂದಿದೆ. ಅಲ್ಲಿ ಚಾಮುಂಡಿ ದೇವಿಯನ್ನು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯೆ ಯಶೋಧಮ್ಮ ಎನ್ನುವವರು ಪೂಜಿಸಲು ಶುರು ಮಾಡಿದ್ದಾರೆ.
`ನನ್ನ ಕನಸಿನಲ್ಲಿ ಚಾಮುಂಡಿ ದೇವಿ ಪ್ರತ್ಯಕ್ಷಳಾಗಿ, ಪೂಜೆ ಮಾಡಲು ಹೇಳಿದಳು' ಎಂದಿರುವ ಯಶೋಧಮ್ಮ, `ಕೊರೋನಾ ಮಾರಮ್ಮನನ್ನು ಪ್ರತಿಷ್ಠಾಪಿಸುವಂತೆ ದೇವಿಯೇ ನನಗೆ ಸೂಚಿಸಿದಳು' ಎಂದಿದ್ದಾರೆ.
Image credits : Deccanherald
೨ ತಿಂಗಳಲ್ಲಿ ಕೊರೋನಾ ಮಾಯವಾಗುತ್ತಂತೆ!
ಚಾಮುಂಡಿ ದೇವಿಯ ಆರಾಧಕಿ ಯಶೋಧಮ್ಮನವರ ಪ್ರಕಾರ, ಕೊರೋನಾ ಸೋಂಕು ಇನ್ನೆರಡು ತಿಂಗಳಲ್ಲಿ ಮಾಯವಾಗುತ್ತಂತೆ. ಮಹಾಮಾರಿಯನ್ನು ಓಡಿಸಲು ಅವರು ವಿಶೇಷ ಪೂಜೆ, ಹೋಮ, ಹವನಗಳನ್ನು ಕೈಗೊಳ್ಳುತ್ತಿದ್ದಾರಂತೆ.
ಪೂಜೆಯೋ, ಹೋಮವೋ, ಔಷಧಿಯೋ, ಲಸಿಕೆಯೋ ಮತ್ತೊಂದೋ ಮಗದೊಂದೋ... ಒಟ್ಟಿನಲ್ಲಿ ಕೊರೋನಾ ಸೋಂಕು ಈ ಭೂಮಿಯನ್ನು ಬಿಟ್ಟು ತೊಲಗಿದರೆ ಸಾಕು ಎನ್ನುವಂತಾಗಿದೆ ಜನರ ಪರಿಸ್ಥಿತಿ. ಆ ಚಾಮುಂಡೇಶ್ವರಿ ತಾಯಿ ಕೊರೋನಾವನ್ನು ಹೋಗಲಾಡಿಸಲಿ ಎಂದು ನಾವೂ ಪ್ರಾರ್ಥಿಸೋಣ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3wtDrHQ
May 22, 2021 at 07:48PM