ಕೊರೋನಾ ಲಸಿಕೆಯನ್ನು ತೋಳಿಗೇ ಏಕೆ ಕೊಡ್ತಾರೆ ಗೊತ್ತಾ?
Image Credits : The Indian Express
ವಿಶ್ವಾದ್ಯಂತ ಕೊರೋನಾ ಲಸಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಜನರು ಲಸಿಕೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಭಾರತದಲ್ಲಂತೂ ಎಲ್ಲೆಡೆ ಕ್ಯೂ ಇದೆ. ಕೆಲವು ತಿಂಗಳುಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ.
ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಕಂಪನಿಯ ಲಸಿಕೆಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿ ಕೋವಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ವಿ ಹೀಗೆ 3 ಕಂಪನಿಗಳ ಲಸಿಕೆ ನೀಡಲಾಗುತ್ತಿದೆ. ಅಮೆರಿಕದಲ್ಲಿ ಫೈಜರ್, ಮಾಡೆರ್ನಾ ಲಸಿಕೆಗಳನ್ನು ಕೊಡುತಿದ್ದಾರೆ.
ಲಸಿಕೆಗಳು ಬೇರೆ ಬೇರೆಯಾದರೂ ಅವನ್ನು ಕೊಡುವ ಜಾಗ ಮಾತ್ರ ಒಂದೇ. ಅದು ಜನರ ತೋಳು. ಬೇರೆ ಸಂದರ್ಭದಲ್ಲಿ ಕುಂಡಿಗೆ ಇಂಜೆಕ್ಷನ್ ನೀಡುವ ವೈದ್ಯರು ಕೊರೋನಾ ಲಸಿಕೆಯನ್ನೇಕೆ ತೋಳಿಗೆ ಕೊಡುತ್ತಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿದೆಯೇ? ಅದಕ್ಕೆ ಇಲ್ಲಿದೆ ಉತ್ತರ.
ರೋಗನಿರೋಧಕ ಜೀವಕೊಶಗಳಿಗೆ ಅನುಕೂಲ
ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಲಿಬ್ಬಿ ರಿಚರ್ಡ್ಸ್ ಇದಕ್ಕೆ ಕಾರಣಗಳನ್ನು ನೀಡಿದ್ದಾರೆ. ಬಹುತೇಕ ಲಸಿಕೆಗಳನ್ನು ಮಾಂಸಖಂಡಗಳಿಗೆ ನೀಡಬೇಕು. ಏಕೆಂದರೆ ಮಾಂಸಖಂಡಗಳ ಅಂಗಾಂಶದಲ್ಲಿ ಮಹತ್ವದ ರೋಗನಿರೋಧಕ ಜೀವಕೋಶಗಳು ಇರುತ್ತವೆ.
ಈ ಕೋಶಗಳು ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಲು ನೀಡುವ ಲಸಿಕೆಯಲ್ಲಿನ ಪ್ರತಿಜನಕ (ಆ್ಯಂಟಿಜೆನ್)ಗಳನ್ನು ಗುರುತಿಸುತ್ತವೆ. ಕೊರೋನಾ ಲಸಿಕೆಯ ಮೂಲಕ ಆ್ಯಂಟಿಜೆನ್ಗಳನ್ನು ನೀಡುವುದಿಲ್ಲ. ಬದಲಿಗೆ ಅದನ್ನು ದೇಹದಲ್ಲೇ ಉತ್ಪಾದಿಸಲು ನೀಲನಕ್ಷೆಯನ್ನು ರವಾನಿಸಲಾಗುತ್ತದೆ.
ಮಾಂಸಖಂಡದಲ್ಲಿನ ರೋಗ ನಿರೋಧಕ ಕೋಶಗಳು ಆ್ಯಂಟಿಜೆನ್ ಅಥವಾ ಸಂದೇಶ ಸ್ವೀಕರಿಸಿ ದುಗ್ಧರಸ ಗ್ರಂಥಿಗಳಿಗೆ ರವಾನಿಸುತ್ತವೆ. ಆನಂತರ ಹಲವು ಪ್ರಕ್ರಿಯೆ ನಡೆದು ದೇಹದಲ್ಲಿ ಪ್ರತಿಕಾಯ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
Image Credts : DNA India
ತೋಳಿಗೇ ಲಸಿಕೆ ನೀಡುವುದು ಬೆಸ್ಟ್
ತೋಳಿಗೇ ಲಸಿಕೆ ನೀಡುವುದು ಏಕೆಂದರೆ ದುಗ್ಧರಸ ಗ್ರಂಥಿ (ಲಿಂಫ್ ನೋಡ್)ಯ ಗುಚ್ಛ ತೋಳಿನ ಬಳಿ ಇರುತ್ತವೆ. ಅದೇ ತೊಡೆಗೆ ಲಸಿಕೆ ನೀಡಿದರೆ, ಇಂಥ ಗುಚ್ಛಕ್ಕಾಗಿ ಸ್ವಲ್ಪ ದೂರ (ತೊಡೆ ಸಂದು) ಕ್ರಮಿಸಬೇಕಾಗುತ್ತದೆ.
ತೋಳಿಗೆ ಲಸಿಕೆ ನೀಡುವುದರಿಂದ ಆ ಭಾಗದಲ್ಲಿ ಮಾತ್ರ ಊತ ಕಾಣಿಸಿಕೊಳ್ಳಬಹುದು. ಅದೇ ಕೊಬ್ಬಿನಂಶ ಇರುವ ಅಂಗಾಂಶಗಳಿಗೆ ನೀಡಿದರೆ ಊತ, ಕಿರಿಕಿರಿಯಾಗಬಹುದು. ಏಕೆಂದರೆ, ಅಲ್ಲಿಗೆ ರಕ್ತ ಸಂಚಾರ ಕಡಿಮೆ ಇರುತ್ತದೆ. ಲಸಿಕೆಯ ಅಂಶ ಸೇರುವ ಸಾಧ್ಯತೆ ಕಡಿಮೆ ಇರುತ್ತದೆ.
ಸಮಯವೂ ಉಳಿತಾಯವಾಗುತ್ತೆ!
ಮತ್ತೊಂದು ಮಹತ್ವದ ಕಾರಣ ಎಂದರೆ, ಲಸಿಕೆ ಅಭಿಯಾನವನ್ನು ಸಾಮೂಹಿಕವಾಗಿ ನಡೆಸಲಾಗುತ್ತದೆ. ಪ್ಯಾಂಟ್ ಕಳಚಿಸಿ ಲಸಿಕೆ ನೀಡುವುದಕ್ಕಿಂತ ಶರ್ಟ್ ತೋಳು ಮೇಲೆತ್ತಿ ಲಸಿಕೆ ಪಡೆಯುವುದು ಸುಲಭ. ಹೆಚ್ಚು ಜನರಿಗೆ ಲಸಿಕೆ ಕೊಡಬೇಕಿರುವ ಈ ಹಿನ್ನೆಲೆಯಲ್ಲಿ ಇದು ಸಮಯ ಉಳಿತಾಯ ದೃಷ್ಟಿಯಿಂದಲೂ ಸಹಕಾರಿ.
ಇಂತಹ ಕುತೂಹಲಕಾರಿ ವಿಷಯವನ್ನು ಮತ್ತಷ್ಟು ಜನರಿಗೆ ತಲುಪಿಸಿ. ಈ ವಿಷಯವನ್ನು ಹೆಚ್ಚೆಚ್ಚು ಜನರಿಗೆ ಶೇರ್ ಮಾಡಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/34bTyxk
May 23, 2021 at 01:15PM