ಭೀಮಾಶಂಕರ ಜ್ಯೋತಿರ್ಲಿಂಗ ದ ಮಹಿಮೆ ಅಪಾರ..!
ಭೀಮಾಶಂಕರ ದೇವಾಲಯವು, ಮಹಾರಾಷ್ಟ್ರದ ಪುಣೆ ಸಮೀಪದ ಖೇಡ್ ಬಳಿಯ ಭೋರ್ ಗಿರಿ ಎಂಬ ಹಳ್ಳಿಯಲ್ಲಿ ಸ್ಥಾಪಿತವಾಗಿದೆ. ಈ ದೇವಾಲಯವು ಸಹ್ಯಾದ್ರಿ ಪರ್ವತಗಳ ಘಟ್ಟ ಪ್ರದೇಶದಲ್ಲಿ, ಪುಣೆಯಿಂದ 110 ಕಿಲೋ ಮೀಟರ್ ದೂರದಲ್ಲಿದೆ.
ಶ್ರಾವಣ ಮಾಸವನ್ನು ಶಿವನಿಗೆ ಬಹಳ ವಿಶೇಷವಾಗಿರುವ ತಿಂಗಳು ಎನ್ನಲಾಗುತ್ತದೆ. ಈ ತಿಂಗಳಲ್ಲಿ ಶಿವನ 12 ಜ್ಯೋತಿಲಿರ್ಂಗದ ದರ್ಶನ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ಈ ಹನ್ನೆರಡು ಜ್ಯೋತಿಲಿರ್ಂಗಗಳಲ್ಲಿ ಭೀಮಶಂಕರನ ಸ್ಥಾನ ಆರನೇಯದಾಗಿದೆ.
ಭೀಮಾ ನದಿಯ ಉಗಮ ಸ್ಥಾನವಿದು: ಭೀಮಾಶಂಕರ ದೇವಾಲಯದ ತಟದಲ್ಲಿ ಭೀಮಾನದಿಯ ಉಗಮವಾಗುತ್ತದೆ. ಇದು ಆಗ್ನೇಯ ದಿಕ್ಕಿನಲ್ಲಿ ಹರಿಯುವುದರ ಜೊತೆಗೆ ನಮ್ಮ ರಾಯಚೂರು ಸಮೀಪದ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ.
ಭಗವಾನ್ ಶಂಕರ ಕೋಪೆÇೀದ್ರಿಕ್ತನಾದಾಗ, ರಾಕ್ಷಸ ತ್ರಿಪುರಾಸುರನನ್ನು ಸಂಹಾರ ಮಾಡಿದನೆಂದು ಹೇಳಲಾಗುತ್ತದೆ. ಇವರಿಬ್ಬರ ಕಾಳಗದಿಂದ ಉಂಟಾದ ಶಾಖವು ಭೀಮಾ ನದಿಯ ಹುಟ್ಟಿಗೆ ಕಾರಣವಾಯಿತು. ಇದೆ ಕಾರಣದಿಂದಾಗಿ ಇದನ್ನು ಭೀಮಾಶಂಕರ ಎಂದು ಕರೆಯಲಾಗುತ್ತದೆ.
ಭೀಮಾಶಂಕರ ಸಮೀಪದ ಮನ್ಮೋಡ್ ಪರ್ವತದಲ್ಲಿ ಅಂಬಾ-ಅಂಬಿಕ, ಭೂತಲಿಂಗ ಹಾಗು ಭೀಮಾಶಂಕರರ ಬೌದ್ಧ ಶೈಲಿಯ ಕೆತ್ತನೆಗಳಿವೆ. ಇದು 1034 ಅಡಿ ಎತ್ತರದಲ್ಲಿದೆ. ಭೀಮಾಶಂಕರದ ಮತ್ತೊಂದು ವೈಶಿಷ್ಟ್ಯವೆಂದರೆ ನಾನಾ ಫಾಡ್ನಾವಿಸ್ ಹೆಮದ್ಪಂಥಿ ವಿನ್ಯಾಸದಲ್ಲಿ ನಿರ್ಮಿಸಿದ ಒಂದು ಭಾರಿ ಗಾತ್ರದ ಘಂಟೆ.
ಭೀಮಾಶಂಕರ ದೇವಾಲಯವು ಪ್ರಾಚೀನ ಹಾಗು ಆಧುನಿಕ ಶೈಲಿಗಳ ಒಂದು ಮಿಶ್ರಿತ ವಿನ್ಯಾಸವಾಗಿದೆ ಜೊತೆಗೆ ಇದನ್ನು ನಾಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ನಿರಾಡಂಬರವಾದರೂ ದೇವಾಲಯವು ಆಕರ್ಷಕವಾಗಿದೆ ಜೊತೆಗೆ ಇದರ ನಿರ್ಮಾಣವು 18ನೇ ಶತಮಾನದ ಮಧ್ಯಭಾಗದಲ್ಲಿ ನಡೆದಿದೆ.
ಈ ದೇವಾಲಯಕ್ಕೆ ಶಿವಾಜಿ ಮಹಾರಾಜನೂ ಬರುತ್ತಿದ್ದ!: ದೇವಾಲಯದ ಗೋಪುರವನ್ನು ನಾನಾ ಫಡ್ನಾವಿಸ್ ನಿರ್ಮಿಸಿದ್ದಾರೆ. ಮರಾಠರ ನಾಯಕ ಶಿವಾಜಿ ಸಹ ಪೂಜಾ ಕೈಂಕರ್ಯಗಳು ಸುಲಭವಾಗಿ ನಡೆಸಲು ಅನುಕೂಲವಾಗುವಂತೆ ದೇವಾಲಯಕ್ಕೆ ದತ್ತಿಯನ್ನು ನೀಡಿದನೆಂದು ಹೇಳಲಾಗುತ್ತದೆ.
ಈ ಪ್ರದೇಶದಲ್ಲಿರುವ ಇತರ ಶಿವ ದೇವಾಲಯಗಳಂತೆ, ಗರ್ಭ ಗುಡಿಯು ತಗ್ಗಾದ ಪ್ರದೇಶದಲ್ಲಿದೆ. ಆದಾಗ್ಯೂ, ವಿನ್ಯಾಸವು ಬಹಳ ಆಧುನಿಕವಾಗಿದ್ದರೂ, ಇತಿಹಾಸದಲ್ಲಿ ಭೀಮಾಶಂಕರ ದೇವಾಲಯವು ಸುಮಾರು 13ನೇ ಶತಮಾನದಷ್ಟು ಹಳೆಯದೆನಿಸಿದೆ.
ಭೀಮಾಶಂಕರ ದೇವಾಲಕ್ಕೆ ಸಮೀಪದಲ್ಲಿ ಕಮಲಜ ಪುಣ್ಯಕ್ಷೇತ್ರವಿದೆ. ಕಮಲಜ ಎಂಬುದು ಪಾರ್ವತಿಯ ಒಂದು ಅವತಾರವಾಗಿದೆ, ಈಕೆ ಶಿವನಿಗೆ ತ್ರಿಪುರಾಸುರನನ್ನು ಸಂಹಾರ ಮಾಡಲು ನೆರವಾಗುತ್ತಾಳೆ. ಬ್ರಹ್ಮನು ತಾವರೆ ಹೂವಿನಿಂದ ಕಮಲಜಳಿಗೆ ಪೂಜೆಯನ್ನು ಸಲ್ಲಿಸುತ್ತಾನೆ. ಅಸುರನನ್ನು ಸಂಹಾರ ಮಾಡಲು ಶಿವನಿಗೆ ನೆರವಾದ ಶಿವಗಣಗಳಾದ ಶಾಕಿನಿ ಹಾಗು ಡಾಕಿಣಿಯರನ್ನೂ ಸಹ ಇಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.
ಭೀಮಾಶಂಕರ ದೇವಾಲಯದ ಹಿಂಭಾಗದಲ್ಲಿ ಮೋಕ್ಷಕುಂಡ ತೀರ್ಥವು ನೆಲೆಯಾಗಿದೆ, ಜೊತೆಗೆ ಇದು ಕೌಶಿಕ ಋಷಿಯ ಜೊತೆ ಅನುಬಂಧವನ್ನು ಹೊಂದಿದೆ. ಇಲ್ಲಿ ಸರ್ವರ್ತೀರ್ಥ, ಕುಶಾರಣ್ಯ ತೀರ್ಥವೂ ಸಹ ಇದೆ, ಇಲ್ಲಿಂದ ಭೀಮಾ ನದಿಯು ಪೂರ್ವಾಭಿಮುಖವಾಗಿ ಹರಿಯುತ್ತದೆ, ಜೊತೆಗೆ ಜಯನಕುಂಡಗಳೂ ಸಹ ಇವೆ.
ಕುಂಭಕರ್ಣನ ಮಗನನ್ನು ಶಿವನು ಸಂಹರಿಸಿದ್ದೇಕೆ?: ಭೀಮಾಶಂಕರವು ಒಂದು ಅತ್ಯಂತ ಪುರಾತನವಾದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರದ ಬಗ್ಗೆ ಪುರಾಣಗಳಲ್ಲಿ ಬಹಳ ಆಸಕ್ತಿದಾಯಕ ಕಥೆ ಇದೆ.
ಅನಂತ ಕಾಲದಲ್ಲಿ ಡಾಕಿನಿಯ ದಟ್ಟ ಅರಣ್ಯಗಳಲ್ಲಿ, ಸಹ್ಯಾದ್ರಿಯ ಎತ್ತರವಾದ ಶ್ರೇಣಿಗಳಲ್ಲಿ ಭೀಮ ಎಂಬ ಅಸುರನು ತನ್ನ ತಾಯಿ ಕರ್ಕತಿಯ ಜೊತೆಗೆ ವಾಸವಿದ್ದನು. ಭೀಮನಿಗೆ ಕರುಣೆ ಹಾಗು ದಯೆ ಎಂಬುದೇ ಇರಲಿಲ್ಲ. ಅಂತೆಯೇ ದೇವತೆಗಳು ಹಾಗು ಮನುಷ್ಯರು ಅವನನ್ನು ಕಂಡು ಹೆದರುತ್ತಿದ್ದರು. ಆದರೆ ಅವನಿಗೆ ತನ್ನ ಅಸ್ತಿತ್ವದ ಬಗ್ಗೆ ಕೆಲವು ಪ್ರಶ್ನೆಗಳು ಎದುರಾದವು, ಇದು ಅವನನ್ನು ಸತತವಾಗಿ ಕಾಡ ಹತ್ತಿದವು. ಭೀಮನು ತನ್ನ ಸಂಕಟ ಹಾಗು ಕುತೂಹಲವನ್ನು ಹೆಚ್ಚು ಕಾಲ ತಡೆದುಕೊಳ್ಳಲು ಆಗಲಿಲ್ಲ.
ಆಗ ಅವನು ತನ್ನ ಜೀವನದ ರಹಸ್ಯಗಳ ಬಗ್ಗೆ ತಿಳಿಸುವಂತೆ ತನ್ನ ತಾಯಿಯನ್ನು ಕೇಳುತ್ತಾನೆ. ಅವನು ತನ್ನ ತಾಯಿಗೆ ತನ್ನ ತಂದೆಯ ಯಾರೆಂದು ಹಾಗು ತಮ್ಮನ್ನು ಈ ಕಾಡಿನಲ್ಲಿ ಏಕೆ ಬಿಟ್ಟು ಬಿಟ್ಟಿದ್ದಾನೆಂದು ಹೇಳುವಂತೆ ಒತ್ತಾಯಿಸುತ್ತಾನೆ. ಬಹಳ ಸಂಕೋಚ ಹಾಗು ಬಹಳ ಸಮಯದ ನಂತರ ಭಯದಿಂದ ಕರ್ಕತಿಯು, ಅವನು ಬಲಿಷ್ಠ ಕುಂಭಕರ್ಣನ ಮಗನೆಂದು ಹೇಳುತ್ತಾಳೆ. ಈತನು ಲಂಕಾಧೀಶ್ವರನಾದ ಶಕ್ತಿಶಾಲಿ ರಾವಣನ ತಮ್ಮನೆಂದು ಹೇಳುತ್ತಾಳೆ.
ಭಗವಾನ್ ವಿಷ್ಣುವು ರಾಮನ ಅವತಾರದಲ್ಲಿ ಕುಂಭಕರ್ಣನನ್ನು ಸಂಹರಿಸುತ್ತಾನೆ. ತನ್ನ ಪತಿ ಹಾಗು ಅವನ ತಂದೆಯನ್ನು ಮಹಾ ಯುದ್ಧದಲ್ಲಿ ರಾಮನು ಸಂಹರಿಸಿದನೆಂದು ಕರ್ಕತಿಯು ಭೀಮನಿಗೆ ಹೇಳುತ್ತಾಳೆ. ಇದರಿಂದ ಕೆರಳಿದ ಭೀಮನು ಭಗವಾನ್ ವಿಷ್ಣುವಿನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಶಪಥ ಮಾಡುತ್ತಾನೆ. ಇದನ್ನು ಸಾಧಿಸಲು ಸಲುವಾಗಿ ಭಗವಾನ್ ಬ್ರಹ್ಮನನ್ನು ಸಂತೋಷಪಡಿಸಲು ಅವನು ಒಂದು ಕಠಿಣ ತಪಸ್ಸನ್ನು ಆಚರಿಸುತ್ತಾನೆ.
ಕರುಣಾಮಯನಾದ ಸೃಷ್ಟಿಕರ್ತನು ತನ್ನ ಭಕ್ತನ ತಪಸ್ಸಿಗೆ ಮೆಚ್ಚಿ ಅವನಿಗೆ ಅಪಾರವಾದ ಶಕ್ತಿಯನ್ನು ಕರುಣಿಸುತ್ತಾನೆ. ಬ್ರಹ್ಮನು ಈ ಘೋರ ತಪ್ಪನ್ನು ಮಾಡುತ್ತಾನೆ. ಮೂರು ಲೋಕಗಳಲ್ಲಿ ಈ ದುಷ್ಟ ಅಸುರನು ವ್ಯಾಪಕವಾದ ಹಾನಿಯನ್ನು ಉಂಟುಮಾಡುತ್ತಾನೆ. ಅವನು ರಾಜ ಇಂದ್ರನನ್ನು ಪರಾಭವಗೊಳಿಸಿ ಸ್ವರ್ಗವನ್ನು ವಶಪಡಿಸಿಕೊಳ್ಳುತ್ತಾನೆ. ಅವನು ಭಗವಾನ್ ಶಿವನ ಪರಮ ಭಕ್ತನಾದ ಕಾಮಾರೂಪೇಶ್ವರನನ್ನು ಸೋಲಿಸಿ ಅವನನ್ನು ನೆಲಮಾಳಿಗೆಯ ಬಂದಿಖಾನೆಯಲ್ಲಿ ಇಡುತ್ತಾನೆ.
ಅವನು ಋಷಿಗಳೂ ಹಾಗು ಸಾಧುಗಳಿಗೂ ಉಪದ್ರವವನು ನೀಡಲು ಆರಂಭಿಸುತ್ತಾನೆ. ಈ ಎಲ್ಲ ಕೃತ್ಯಗಳು ದೇವತೆಗಳಿಗೆ ಕ್ರೋಧವನ್ನು ಉಂಟುಮಾಡುತ್ತದೆ. ಇವರೆಲ್ಲರೂ ಸೇರಿ ಭಗವಾನ್ ಬ್ರಹ್ಮನೊಂದಿಗೆ ಭಗವಾನ್ ಶಿವನನ್ನು ತಮ್ಮ ರಕ್ಷಣೆ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಭಗವಾನ್ ಶಿವನು ದೇವತೆಗಳನ್ನು ಸಮಾಧಾನಪಡಿಸಿ ಅವರನ್ನು ಈ ಕ್ರೂರ ಅಸುರನಿಂದ ರಕ್ಷಿಸಲು ಒಪ್ಪಿಕೊಳ್ಳುತ್ತಾನೆ. ಮತ್ತೊಂದು ಕಡೆಯಲ್ಲಿ ಭೀಮನು, ಭಗವಾನ್ ಶಿವನ ಬದಲಿಗೆ ತನ್ನನ್ನು ಪೂಜಿಸಬೇಕೆಂದು ಕಾಮಾರೂಪೇಶ್ವರನಿಗೆ ಆದೇಶ ನೀಡುತ್ತಾನೆ.
ಕಾಮಾರೂಪೇಶ್ವರನು ಅವನನ್ನು ಪೂಜಿಸಲು ತಿರಸ್ಕರಿಸಿದಾಗ, ಕ್ರೂರ ಭೀಮನು ತನ್ನ ಕತ್ತಿಯನ್ನು ಎತ್ತಿ ಶಿವ ಲಿಂಗವನ್ನು ಹೊಡೆದು ಉರುಳಿಸಲು ಯತ್ನಿಸುತ್ತಾನೆ, ಈ ಲಿಂಗಕ್ಕೆ ಕಾಮಾರೂಪೇಶ್ವರನು ಅಭಿಷೇಕ ಹಾಗು ಪೂಜೆಯನ್ನು ನೆರವೇರಿಸುತ್ತಿರುತ್ತಾನೆ. ಭೀಮನು ತನ್ನ ಕತ್ತಿಯನ್ನು ಎತ್ತುತ್ತಿದ್ದಂತೆ, ಭಗವಾನ್ ಶಿವನು ತನ್ನ ಭವ್ಯ ರೂಪದೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಘೋರ ಯುದ್ಧವು ಆರಂಭವಾಗುತ್ತದೆ.
ಆದರೆ ನಂತರದಲ್ಲಿ ನಾರದ ಮಹಾಮುನಿಗಳು ಪ್ರತ್ಯಕ್ಷರಾಗಿ ಈ ಯುದ್ಧವನ್ನು ನಿಲ್ಲಿಸಬೇಕೆಂದು ಭಗವಾನ್ ಶಿವನಲ್ಲಿ ಕೋರಿಕೊಳ್ಳುತ್ತಾರೆ. ನಂತರ ಭಗವಾನ್ ಶಿವನು ಅಸುರನನ್ನು ಸಂಹರಿಸಿ ಉಪದ್ರವವನ್ನು ಕೊನೆಗೊಳಿಸುತ್ತಾನೆ. ಎಲ್ಲ ದೇವತೆಗಳು ಹಾಗು ಮಹಾ ಮುನಿಗಳು ಈ ಸ್ಥಳವನ್ನು ತನ್ನ ನೆಲೆಯನ್ನಾಗಿ ಮಾಡಬೇಕೆಂದು ಕೋರಿಕೊಳ್ಳುತ್ತಾರೆ. ಈ ರೀತಿಯಾಗಿ ಭಗವಾನ್ ಶಿವನು ತನ್ನ ಭೀಮಾಶಂಕರ ಜ್ಯೋತಿಲಿರ್ಂಗದ ರೂಪದಲ್ಲಿ ದರ್ಶನ ನೀಡುತ್ತಾನೆ. ಯುದ್ಧದ ನಂತರ ಶಿವನ ದೇಹದಿಂದ ಸುರಿದ ಬೆವರೇ ಭೀಮಾರಥಿ ನದಿಯ ಉಗಮಕ್ಕೆ ಕಾರಣವೆಂದು ನಂಬಲಾಗಿದೆ.
ಪ್ರತಿನಿತ್ಯ ಮೂರು ಯಾಮದಲ್ಲಿ ಪೂಜಾ ಸೇವೆಗಳು ನಡೆಯುತ್ತವೆ. ಮಹಾಶಿವರಾತ್ರಿ ಸಮಯದಲ್ಲಿ ಬೃಹತ್ ಉತ್ಸವಗಳು ಜರುಗುತ್ತವೆ.
ಭೀಮಾಶಂಕರಕ್ಕೆ ಸಂಬಂಧಿಸಿದಂತೆ ರುದ್ರಸಂಹಿತ ಶ್ಲೋಕವು, `ಡಾಕಿನೆ ಭೀಮಾಶಂಕರಮ್' ಎಂದು ಉಲ್ಲೇಖಿಸುತ್ತದೆ. ಅಸ್ಸಾಂನ ಗುವಾಹತಿಯ ಸಮೀಪವಿರುವ ಭೀಮಾಪುರ ಬೆಟ್ಟದಲ್ಲಿಯೂ ಸಹ ಭೀಮಾಶಂಕರ ದೇವಾಲಯವಿದೆ. ಉತ್ತರಾಖಂಡದ ನೈನೀತಾಲ್ ಸಮೀಪದ ಕಾಶಿಪುರದಲ್ಲಿಯೂ ಸಹ ಒಂದು ಭೀಮಾಶಂಕರ ದೇವಾಲಯವಿದೆ, ಇದನ್ನು ಪುರಾತನ ಕಾಲದಲ್ಲಿ ಡಾಕಿಣಿ ದೇಶವೆಂದು ಸೂಚಿತವಾಗುತ್ತಿತ್ತು.
ಪಾಂಡವ ರಾಜನಾದ ಭೀಮನು ಇಲ್ಲಿನ ಡಾಕಿನಿಯಾಗಿದ್ದ ಹಿಡಂಬೆಯನ್ನು ಮದುವೆಯಾಗಿದ್ದನೆಂದು ಹೇಳಲಾಗುತ್ತದೆ. ಇಲ್ಲೂ ಸಹ ಮಹಾಶಿವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯದಲ್ಲಿ ಭೈರವನಾಥ ಹಾಗು ದೇವಿಯ ದೇಗುಲಗಳಿವೆ ಹಾಗು ಶಿವಗಂಗ ಎಂಬ ಪುಷ್ಕರಣಿಯು ಇದೆ. ಈ ದೇವಾಲಯವು ಭೀಮಾನದಿಯ ಉಗಮದಲ್ಲಿರುವುದರಿಂದ ಇದಕ್ಕೆ ಭೀಮಾಶಂಕರ ಎಂದು ಹೆಸರು ಬಂದಿದೆ ಎಂದೂ ಹೇಳುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..
► Subscribe to Planet Tv Kannada: https://www.youtube.com/Planet Tv Kannada
► Follow us on Facebook: https://www.facebook.com/Planettvkannada
► Follow us on Twitter:- https://twitter.com/Planettvkannada
► Follow us on Instagram:- https://www.instagram.com/planettvkannada
► Follow us on Pinterest: https://www.pinterest.com/Planettvkannada
► Follow us on Koo app:- https://www.kooapp.com/planettvkannada
► Follow us on share chat:- https://sharechat.com/planettvkannada
► Join us on Telegram:- https://t.me/planettvkannada
► Follow us on Tumblr:- https://www.tumblr.com/planet-tv-kannada
► Follow us on Reddit https://www.reddit.com/Planet-tv-kannada