ಅರೆರೆ..ಇದು ಕೆಂಪುಅಲ್ಲ, ಹಳದಿಬಣ್ಣದಕಲ್ಲಂಗಡಿ..!
ತಾಜಾ ತಾಜಾ ರುಚಿಯಾದ ಕಲ್ಲಂಗಡಿ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕೆಂಪು ಕೆಂಪಾದ ಸಿಹಿಯಾದ ಕಲ್ಲಂಗಡಿ ಹಣ್ಣು ಸಿಕ್ಕರೆ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವವರೇ. ಅದರಲ್ಲೂ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಡಿಮ್ಯಾಂಡ್. ಹೀಗಾಗಿಯೇ ರಸ್ತೆ ಬದಿಗಳಲ್ಲಿ ಕಲ್ಲಂಗಡಿ ಹಣ್ಣನ್ನು ರಾಶಿ ಹಾಕಿ ಮಾರುವುದನ್ನು ನೋಡಬಹುದು. ಡಯಟ್ ಮಾಡುವವರಿಗಂತೂ ಕಲ್ಲಂಗಡಿ ಹಣ್ಣಿನ ಜ್ಯೂಸ್ ಹೇಳಿ ಮಾಡಿಸಿದ್ದು.
ಕಲ್ಲಂಗಡಿಯಲ್ಲಿ ಹಲವಾರು ತಳಿಗಳಿವೆ. ಇವುಗಳ ಹಣ್ಣಿನ ಆಕಾರ, ಗಾತ್ರ, ಬಣ್ಣ, ತಿರುಳಿನ ರುಚಿ ಹಾಗೂ ಬಣ್ಣ, ಬೀಜಗಳ ಬಣ್ಣ ಹಾಗೂ ಕಾಯಿಗಳು ಪಕ್ವವಾಗುವ ಕಾಲ-ಇವುಗಳಲ್ಲಿ ವೈವಿಧ್ಯತೆ ಸಹ ಇದೆ.ಹೀಗಾಗಿಯೇ ಇವುಗಳ ರುಚಿ ಸಹ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಕೆಂಪುಕಲ್ಲಂಗಡಿಹೇಗೆರುಚಿಯಾಗಿರುತ್ತದೋಹಳದಿಕಲ್ಲಂಗಡಿಕೂಡಾಇದೇರೀತಿತುಂಬಾಟೇಸ್ಟೀ. ಹಳದಿಕಲ್ಲಂಗಡಿನಾಅಂತಹುಬ್ಬೇರಿಸಬೇಡಿ. ಕೆಂಪುಕಲ್ಲಂಗಡಿಯಂತೆಯೇಹಳದಿಕಲ್ಲಂಗಡಿ ಹಣ್ಣುಸಹಇದೆ.
source and pic credit: https://www.oola.com
ಆಫ್ರಿಕಾದಲ್ಲಿ ಬೆಳೆಯುವ ಈ ಕಲ್ಲಂಗಡಿ ಹಣ್ಣು ಹಳದಿ ಹಾಗೂ ಬಿಳಿ ಮಿಶ್ರಿತ ಬಣ್ಣವನ್ನು ಹೊಂದಿದೆ. ಕೆಂಪು ಕಲ್ಲಂಗಡಿ ಹಣ್ಣಿಗೆ ಹೋಲಿಸಿದರೆ ಈ ಹಳದಿ ಹಣ್ಣು ಜೇನಿನಂತೆ ಹೆಚ್ಚು ಸಿಹಿಯಾಗಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವಷ್ಟೇ ಪ್ರೊಟೀನ್ ಗಳು, ಪೋಷಕಾಂಶಗಳು ಇದರಲ್ಲೂ ಇದೆ. ಅದಲ್ಲದೆ ಇದರ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
source and pic credit: https://ift.tt/3oqSUFM
ಹಳದಿ ಕಲ್ಲಂಗಡಿ ಆರೋಗ್ಯಕ್ಕೆ ಉತ್ತಮವೋ..?
ಒಂದು ವಸ್ತುಗಳು ನಿರ್ಧಿಷ್ಟ ಒಂದೇ ಕಲರ್ ನಲ್ಲಿ ನೋಡಿದ್ದು, ಏಕಾಏಕಿ ಬೇರೆ ಬಣ್ಣದಲ್ಲಿ ನೋಡಿದಾಗ ಯಾರಿಗಾದರೂ ಗಾಬರಿಯಾವುದು ಸಹಜ. ನೀಲಿ ಆಪಲ್, ಕಪ್ಪು ಆರೆಂಜ್, ನೀಲಿ ಬಾಳೆಹಣ್ಣು ನೋಡಿದರೆ ಹೇಗಾಗಬಹುದು ಹಾಗಾಗಿದೆ ಪರಿಸ್ಥಿತಿ. ಎಲ್ಲರೂ ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ಹಸಿರು ತೊಗಟೆ, ಕೆಂಪು ಬಣ್ಣದಲ್ಲಿ ನೋಡಿರುವುದರಿಂದ ಹಳದಿ ಬಣ್ಣಿನ ಹಣ್ಣನ್ನು ನೋಡಿ ಸಹಜವಾಗಿಯೇ ಚಕಿತಗೊಳ್ಳುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವೇ ಅನ್ನೋ ಪ್ರಶ್ನೆ ಕಾಡುತ್ತದೆ.
source and pic credit: https://ift.tt/29lZesr
ಅಧ್ಯಯನಗಳ ಪ್ರಕಾರ ಈ ಹಳದಿ ಕಲ್ಲಂಗಡಿ ಹಣ್ಣು, ಕೆಂಪು ಹಣ್ಣಿನಂತೆಯೇ ರುಚಿಕರವಾಗಿದೆ ಮತ್ತು ಆರೋಗ್ಯಕ್ಕೂ ಉತ್ತಮ. ಈ ಹಳದಿ ಕಲ್ಲಂಗಡಿ ಹಣ್ಣನ್ನು ಯೆಲ್ಲೋ ಕ್ರಿಮಸನ್ ಎಂದೂ ಕರೆಯುತ್ತಾರೆ. ಈ ಕಲ್ಲಂಗಡಿ ಹಣ್ಣಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಲೈಕೋಪೇನೆ ಅಂಶವು ಹೆಚ್ಚಾಗಿದೆ. ಆಹಾರ ತಜ್ಞರ ಪ್ರಕಾರ ಈ ಯೆಲ್ಲೋ ವಾಟರ್ ಮೆಲನ್ ನಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಅತ್ಯಧಿಕವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಆರೋಗ್ಯಯುತ ತ್ವಚೆಯನ್ನೂ ನಿಮ್ಮದಾಗಿಸುತ್ತದೆ
source and pic credit: https://curejoy.com
ಇಷ್ಟೇ ಅಲ್ಲದೆ, ರೆಡ್ ಕಲ್ಲಂಗಡಿ ಹಣ್ಣಿನಲ್ಲಿರದ ವಿಶೇಷ ಅಂಶವೊಂದು ಹಳದಿ ಕಲ್ಲಂಗಡಿ ಹಣ್ಣಿನಲ್ಲಿದೆ. ಯೆಲ್ಲೋ ವಾಟರ್ ಮೆಲನ್ ನಲ್ಲಿರುವ ಬೆಟಾ-ಕರೊಟೆನೆ ಕ್ಯಾನ್ಸರ್ ಹಾಗೂ ಕಣ್ಣಿನ ಸಮಸ್ಯೆಗಳಿಗೆ ಪ್ರತಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಕೆಂಪು ಕಲ್ಲಂಗಡಿ ಹಣ್ಣಿನಂತೆ ಹಳದಿ ಕಲ್ಲಂಗಡಿ ಹಣ್ಣಿನಲ್ಲಿಯೂ ನೀರಿನಂಶ ಹೆಚ್ಚಿರುವುದರಿಂದ ಇದು ದೇಹ ಡಿಹೈಡ್ರೇಟ್ ಆಗುವುದನ್ನು ತಪ್ಪಿಸುತ್ತದೆ.
ಹಳದಿಕಲ್ಲಂಗಡಿಹಣ್ಣನ್ನುಎಲ್ಲಿಬೆಳೆಯುತ್ತಾರೆ..?
source and pic credit: https://www.mashed.com
ಇನ್ನೊಂದು ವಿಶೇಷತೆ ಅಂದರೆ ಈಹಳದಿ ಕಲ್ಲಂಗಡಿ ಹಣ್ಣನ್ನು ಎಲ್ಲಾ ಸೀಸನ್ ಗಳಲ್ಲಿಯೂ ಬೆಳೆಯ ಬಹುದು. ಬಿಸಿಯಾದ ವಾತಾವರಣ ವಿರುವ ಪ್ರದೇಶದಲ್ಲಿ ಈ ಯೆಲ್ಲೋ ವಾಟರ್ಲೆಮನ್ ಸುಲಭವಾಗಿ ಮತ್ತು ವಿಪುಲವಾಗಿ ಬೆಳೆಯುತ್ತದೆ. ಆಫ್ರಿಕಾ. ಮೆಕ್ಸಕೋ, ಕ್ಯಾಲಿಫೋರ್ನಿಯಾದಲ್ಲಿ ಈ ಹಳದಿ ಕಲ್ಲಂಗಡಿ ಹಣ್ಣನ್ನು ಹೆಚ್ಚು ಬೆಳೆಯುತ್ತಾರೆ. ಮೇ, ಅಕ್ಟೋಬರ್ ತಿಂಗಳುಗಳಲ್ಲಿ ಈ ಯೆಲ್ಲೋ ವಾಟರ್ಮೆಲನ್ ಬಳ್ಳಿ ಹೆಚ್ಚೆಚ್ಚು ಫಸಲು ಕೊಡುತ್ತದೆ. ಅಚ್ಚರಿಯ ವಿಷಯ ವೆಂದರೆ ಹಲವರಿಗೆತಿಳಿದಿರದ ಈ ಹಳದಿ ಕಲ್ಲಂಗಡಿ ಹಣ್ಣು, ಕೆಂಪು ಕಲ್ಲಂಗಡಿ ಹಣ್ಣನ್ನು ಬೆಳೆಯುವ ಮೊದಲೇ ಬೆಳೆದಿದ್ದರಂತೆ.
source and pic credit: https://www.oola.com
ರಾಜ್ಯದಲ್ಲೂ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದ ಯುವ ರೈತ
ರಾಜ್ಯದಲ್ಲೂ ಈ ಹಿಂದೆ ರೈತರೊಬ್ಬರು ಈ ಹಳದಿ ಕಲ್ಲಂಗಡಿ ಹಣ್ಣನ್ನು ಬೆಳೆದು ಯಶಸ್ವಿಯಾಗಿದ್ದರು. ಕಲಬುರಗಿಯ ಯುವ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಎಲ್ಲರ ಗಮನ ಸೆಳೆದಿದ್ದರು. ಜರ್ಮನ್ ಬೀಜ ತಂದು, ಹಳದಿ ಕಲ್ಲಂಗಡಿ ಬೆಳೆದು, ಹೊಸ ಪ್ರಯೋಗದಲ್ಲಿ ಸಫಲನಾದ ರಾಜ್ಯದ ಮೊದಲ ರೈತ ಅನ್ನೋ ಹೆಗ್ಗಳಿಕೆಗೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಯುವ ರೈತ ಬಸವರಾಜ್ ಪಾಟೀಲ್ ಪಾತ್ರರಾಗಿದ್ದರು.
ಕಳೆದ 10 ವರ್ಷಗಳಿಂದ ಕೆಂಪು ಕಲ್ಲಂಗಡಿ ಬೆಳೆಯುತ್ತಿದ್ದ ಬಸವರಾಜ್,. ಒಮ್ಮೆ ಯೂಟೂಬ್ನಲ್ಲಿ ಸರ್ಚ್ ಮಾಡಿ, ಜರ್ಮನ್ ನಿಂದ ಯಲ್ಲೋ ಗೋಲ್ಡ್ ಬಣ್ಣದ ಕಲ್ಲಂಗಡಿ ಬೀಜ ತರಿಸಿಕೊಂಡಿದ್ದರು. ಪ್ರಾಯೋಗಿಕವಾಗಿ 2 ಎಕರೆಯಲ್ಲಿಈ ಯೆಲ್ಲೋ ವಾಟರ್ ಮೆಲನ್ ಬೆಳೆ ಬೆಳೆದಿದ್ದರು. ಇದು ನೋಡಲು ಗಾತ್ರದಲ್ಲಿ ಸಾಮಾನ್ಯ ಕಲ್ಲಂಗಡಿಯಂತೆ ಇದ್ದರೂ,ಅದರೊಳಗೆಕತ್ತರಿಸಿ ಒಳಗೆ ನೋಡಿದಾಗ ಹಳದಿ ಬಣ್ಣ ಕಂಡುಬರುತ್ತದೆ.
from ಸುದ್ದಿ - Planet Tv https://ift.tt/2RsBV9I
May 17, 2021 at 06:08PM