ಮಹಾ ಶಕ್ತಿ ಪೀಠಗಳ ಅಂದ್ರೆ ಏನು?
ಎಲ್ಲಿವೆ, ಎಷ್ಟಿವೆ ಗೊತ್ತಾ?
ಶಕ್ತಿ ಪೀಠ ಎಂದರೆ ಶಕ್ತಿ ದೇವತೆಯ ದೇವಾಲಯಗಳು ಮತ್ತು ತೀರ್ಥಯಾತ್ರೆಯ ತಾಣಗಳಾಗಿವೆ. ಶಕ್ತಿ ಪೀಠಗಳ ಹಿಂದಿನ ದಂತಕಥೆಯು ಶಿವನ ಪತ್ನಿ ಸತಿ ದೇವಿಯ ಆತ್ಮಹತ್ಯೆಯ ಕಥೆಯಾಗಿದೆ. ಆಕೆಯ ದೇಹವನ್ನು ವಿಷ್ಣು 51 ದೇಹದ ಭಾಗಗಳಾಗಿ ಕತ್ತರಿಸಿ ಭೂಮಿಯ ಮೇಲೆ ಹಾಕಿದ ಬಳಿಕ ಅವು ಪವಿತ್ರ ಕ್ಷೇತ್ರಗಳಾದವು.
ಮತ್ತೊಂದು ಕಥೆಯಲ್ಲಿ, ಸತಿ ದೇವಿಯ ಮರಣದ ಬಗ್ಗೆ ಶೋಕಿಸುತ್ತಾ ಶಿವನು ರುದ್ರ ತಾಂಡವವನ್ನಾಡುವಾಗ ಸತಿಯ ದೇಹವು 51 ಭಾಗಗಳಾಗಿ ಚದುರಿ ಭೂಮಿಯ ಮೇಲೆ ಬಿದ್ದು ಪವಿತ್ರ ತಾಣಗಳಾಗಿ ಮಾರ್ಪಟ್ಟಿತು.
ಭಾರತದಾಚೆಗೂ ಇವೆ ಶಕ್ತಿ ಪೀಠಗಳು
ದೇವತೆ ಪೂಜೆಯ ಈ ಐತಿಹಾಸಿಕ ಸ್ಥಳಗಳಲ್ಲಿ ಹೆಚ್ಚಿನವು ಭಾರತದಲ್ಲಿವೆ, ಆದರೆ ಬಾಂಗ್ಲಾದೇಶದಲ್ಲಿ 7, ಪಾಕಿಸ್ತಾನದಲ್ಲಿ 3, ನೇಪಾಳದಲ್ಲಿ 3 ಮತ್ತು ಚೀನಾ ಮತ್ತು ಶ್ರೀಲಂಕಾದಲ್ಲಿ ತಲಾ 1 ಕ್ಷೇತ್ರಗಳು ಇವೆ. 18 ಮಹಾಶಕ್ತಿ ಪೀಠಗಳ ಪೈಕಿ ಒಂದು ಮಾತ್ರ ಶ್ರೀಲಂಕಾದಲ್ಲಿದೆ. ಉಳಿದವು ಭಾರತದಲ್ಲೇ ಇವೆ.
ಶಕ್ತಿಪೀಠಗಳು ಯಾವ್ಯಾವು ಗೊತ್ತಾ?
1. ಶ್ರೀಲಂಕಾದ ತ್ರಿನ್ಕೋಮಲೆಯಲ್ಲಿರುವ ಶಂಕರಿ ದೇವಾಲಯದಲ್ಲಿ ಸತಿಯ ಹೃದಯ ಭಾಗವು ಬಿದ್ದಿತು ಎಂದು ಪರಿಗಣಿಸಲಾಗಿದೆ.
Image credits : Holidify
2. ತಮಿಳುನಾಡಿನ ಕಾಂಚೀಪುರದ ಕಾಮ ಕೋಟಿ ಪೀಠದಲ್ಲಿರುವ ನಡು(ಸೊಂಟ) ಬಿದ್ದಿತ್ತು. ಇಲ್ಲಿ ಸತಿಯನ್ನು ಕಾಮಾಕ್ಷಿ ಅಮ್ಮ ಎಂದು ಕರೆಯಲಾಗುತ್ತದೆ.
Image credits : holidify
3. ಬಂಗಾಳದ ಪಂಡುವಾದಲ್ಲಿರುವ ಭವತಾರಿಣಿ ಪೀಠದಲ್ಲಿ ಹೊಟ್ಟೆಯ ಭಾಗ ಬಿತ್ತು ಎನ್ನಲಾಗಿದೆ. ಇಲ್ಲಿ ದೇವತೆಯನ್ನು ಶ್ರಿನ್ಕಲಾ ದೇವಿ ಎಂದು ಕರೆಯಲಾಗುತ್ತದೆ.
Image credits : ipltours
4. ಕರ್ನಾಟದ ಮೈಸೂರಿನಲ್ಲಿರುವ ಕ್ರೌಂಚ ಪೀಠದಲ್ಲಿ ದೇವಿಯ ತಲೆಗೂದಲು ಬಿತ್ತು ಎನ್ನಲಾಗಿದೆ. ಇಲ್ಲಿ ದೇವತೆಯನ್ನು ಚಾಮುಂಡೇಶ್ವರಿ ಎಂದು ಆರಾಧಿಸಲಾಗುತ್ತದೆ.
Image credits : Metrosaga
5. ತೆಲಂಗಾಣದ ಆಲಂಪುರದಲ್ಲಿರುವ ಯೋಗಿಣಿ ಪೀಠದಲ್ಲಿ ದೇವಿಯ ಹಲ್ಲು ಬಿತ್ತು ಎನ್ನಲಾಗಿದೆ. ಇಲ್ಲಿ ದೇವಿಯನ್ನು ಜೋಗುಳಾಂಬ ಎಂದು ಕರೆಯಲಾಗುತ್ತದೆ.
Image credits : telanganaToday
6. ಆಂಧ್ರ ಪ್ರದೇಶದ ಶ್ರೀಶೈಲದಲ್ಲಿರುವ ಶ್ರೀಶೈಲ ಪೀಠದಲ್ಲಿ ದೇವಿಯ ಕತ್ತು ಬಿತ್ತು. ಇಲ್ಲಿ ದೇವಿಯನ್ನು ಬ್ರಹ್ಮರಾಂಬಿಕಾ ತಾಯಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.
Image credits : Srisailam tourism
7. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಶ್ರೀ ಪೀಠದಲ್ಲಿ ದೇವಿಯ ಕಣ್ಣುಗಳು ಬಿದ್ದಿದ್ದವು. ಈ ಕ್ಷೇತ್ರದಲ್ಲಿರುವ ಮಹಾಲಕ್ಷ್ಮೀ ದೇಗುಲದಲ್ಲಿ ದೇವಿಯನ್ನು ಆಯ್ ಅಂಬಾಬಾಯಿ ಎನ್ನಲಾಗುತ್ತದೆ.
Image credits : DNA India
8. ಮಹಾರಾಷ್ಟ್ರದ ಮಹುರ್ನಲ್ಲಿರುವ ಮೂಲ ಪೀಠದಲ್ಲಿ ದೇವಿಯ ಎಡಗೈ ಬಿದ್ದಿತ್ತು. ಇಲ್ಲಿ ದೇವಿಯನ್ನು ಏಕ ವೀರಿಕಾ ಎನ್ನುವ ಹೆಸರಿನಿಂದ ಭಕ್ತರು ಪೂಜಿಸುತ್ತಾರೆ.
Image credits : TemplesVibhaga
9. ಉತ್ತರ ಪ್ರದೇಶದ ಸಹರನ್ಪುರದಲ್ಲಿರುವ ಶಾಕಾಂಬರಿ ಪೀಠದಲ್ಲಿ ದೇವಿಯ ತಲೆ ಬಿದ್ದಿತ್ತು. ಇಲ್ಲಿ ಶಾಕಾಂಬರಿ ಎನ್ನುವ ಹೆಸರಿನಲ್ಲಿ ದೇವಿಯು ಭಕ್ತರನ್ನು ಸಲಹುತ್ತಿದ್ದಾಳೆ.
Image credits : Patrika
10. ಆಂಧ್ರ ಪ್ರದೇಶದ ಪೀಥಪುರಂನಲ್ಲಿರುವ ಪುಷ್ಕರಿಣಿ ಪೀಠದಲ್ಲಿರುವ ಕುಕ್ಕುಟೇಶ್ವರ ಸ್ವಾಮಿ ದೇಗುಲದಲ್ಲಿ ದೇವಿಯ ಬೆನ್ನು ಬಿದ್ದಿತ್ತು. ಇಲ್ಲಿ ದೇವಿಯನ್ನು ಪುರುಹುತಿಕ ಎನ್ನಲಾಗುತ್ತದೆ.
Image credits : East Godavari
11. ಒಡಿಶಾದ ಜಜ್ಪುರದಲ್ಲಿರುವ ಒಡ್ಯಾನ ಪೀಠಂನಲ್ಲಿರುವ ಬೀರಾಜ ದೇಗುಲದಲ್ಲಿ ದೇವಿಯ ಸೊಂಟದ ಮತ್ತೊಂದು ಭಾಗ ಬಿದ್ದತ್ತು. ಇಲ್ಲಿ ದೇವಿಯನ್ನು ಬೀರಾಜ ತಾಯಿ ಎಂದು ಕರೆಯಲಾಗುತ್ತದೆ.
Image credits : jajpur business
12. ಆಂಧ್ರ ಪ್ರದೇಶದ ದ್ರಾಕ್ಷರಾಮಂನಲ್ಲಿರುವ ದ್ರಾಕ್ಷರಾಮ ಪೀಠದ ಭೀಮೇಶ್ವರ ದೇಗುಲದಲ್ಲಿ ದೇವಿಯ ಎಡ ಕೆನ್ನೆ ಬಿದ್ದಿತ್ತು. ಇಲ್ಲಿ ದೇವಿಯನ್ನು ಮಾಣಿಕ್ಯಾಂಬ ಎನ್ನುವ ಹೆಸರಿನಿಂದ ಪೂಜಿಸಲಾಗುತ್ತದೆ.
Image credits : Templefolks
13. ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇಗುಲದಲ್ಲಿರುವ ಕಾಮರೂಪ ಪೀಠದಲ್ಲಿ ದೇವಿಯ ಯೋನಿ ಬಿದ್ದಿತ್ತು. ಇಲ್ಲಿ ದೇವಿಯನ್ನು ಕಾಮಾಕ್ಯ ದೇವಿ ಎಂದು ಕರೆಯಲಾಗುತ್ತದೆ.
Image credits : The sentinel Assam
14. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಪ್ರಯಾಗ ಪೀಠದಲ್ಲಿರುವ ಅಲೂಪಿ ದೇವಿ ಮಂದಿರದಲ್ಲಿ ದೇವಿಯ ಬೆರಳುಗಳು ಬಿದ್ದಿದ್ದವು. ಇಲ್ಲಿ ದೇವಿಯನ್ನು ಮಾಧವೇಶ್ವರಿ ಎಂದು ಕರೆಯಲಾಗುತ್ತದೆ.
Image credits : pilgrimaide
15. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಜ್ವಾಲಾಮುಖಿ ಪೀಠದಲ್ಲಿರುವ ಜ್ವಾಲಾಮುಖಿ ದೇಗುಲದಲ್ಲಿ ದೇವಿಯ ತಲೆ ಭಾಗ ಬಿದ್ದಿತ್ತು. ಇಲ್ಲಿ ದೇವಿಯನ್ನು ಜ್ವಾಲಾಮುಖಿ ಎನ್ನಲಾಗುತ್ತದೆ.
Image credits : myoksha
16. ಬಿಹಾರದ ಗಯಾದಲ್ಲಿರುವ ಗಯಾ ಪೀಠದಲ್ಲಿ ಮಂಗಳ ಗೌರಿ ದೇಗುಲವಿದೆ. ಇಲ್ಲಿ ದೇವಿಯ ಸ್ತನಗಳು ಬಿದ್ದಿದ್ದವು. ಇಲ್ಲಿ ದೇವಿಯನ್ನು ಸರ್ವಮಂಗಳ ತಾಯಿ ಎಂದು ಪೂಜಿಸಲಾಗುತ್ತದೆ.
Image credits : Temple Vibhaga
17. ಉತ್ತರ ಪ್ರದೇಶದಲ್ಲಿರುವ ವಾರಣಸಿ ಪೀಠದಲ್ಲಿ ವಿಶಾಲಾಕ್ಷಿ ದೇಗುಲವಿದೆ. ಇಲ್ಲಿ ದೇವಿಯ ಮೂಗು ಬಿದ್ದಿತ್ತು. ದೇವಿಯನ್ನು ಇಲ್ಲಿ ವಿಶಾಲಾಕ್ಷಿ ಎಂದು ಆರಾಧಿಸಲಾಗುತ್ತದೆ.
Image credits : Rengha Holidays
18. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದಲ್ಲಿ ದೇವಿಯ ಬಲಗೈ ಬಿದ್ದಿತ್ತು. ಇಲ್ಲಿ ದೇವಿಯನ್ನು ಶಾರದಾ ದೇವಿ ಎಂದು ಕರೆಯಲಾಗುತ್ತದೆ.
Image credits : DNA india
ನಿಮಗೆಈಮಾಹಿತಿಇಷ್ಟಆಗಿದ್ದರೆಲೈಕ್ಮಾಡಿ.. ಶೇರ್ಮಾಡಿ.. ನಿಮ್ಮಅನಿಸಿಕೆಗಳನ್ನುಕಮೆಂಟ್ಮೂಲಕತಿಳಿಸಿ..
ಇನ್ನಷ್ಟುಮಾಹಿತಿಗಾಗಿಈಕೆಳಗಿನಲಿಂಕ್ಕ್ಲಿಕ್ಮಾಡಿನಮ್ಮನ್ನಫಾಲೋಮಾಡಿ..
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3eSOpQS
May 16, 2021 at 08:59PM