ಡಬಲ್ ಮಾಸ್ಕ್ ಎಂದರೇನು..? ಇದು ಕೊರೋನಾ ಸೋಂಕಿನ ವಿರುದ್ಧ ಎಷ್ಟು ಪರಿಣಾಮಕಾರಿ..?
source and pic credit: https://childrenswi.org
ದೇಶಾದ್ಯಂತ ಕೊರೋನಾ ಎರಡನೇ ಅಲೆಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಸಾವು-ನೋವಿನ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಹೀಗಾಗಿ ಜನರು ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕಾದುದು ಅತ್ಯಗತ್ಯ. ಆಗಿಂದಾಗೆ ಸ್ಯಾನಿಟೈಸರ್ ಅಥವಾ ಸೋಪು ಹಾಕಿ ಕೈ ತೊಳೆಯುವುದು, ಅಂತರ ಕಾಪಾಡಿಕೊಳ್ಳುವುದು, ಮಾಸ್ಕ ಧರಿಸುವುದು ಇಂಥಹಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಕೊರೋನಾ ಸೋಂಕು ತಗಲುದಂತೆ ಎಚ್ಚರವಹಿಸಬಹುದು. ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಕಾರಣ ಸಾಧ್ಯವಾದಷ್ಟೂ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.
source and pic credit: https://ift.tt/2lOlFLg
ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಆದರೆ ಜನರು ಕಾಟಾಚಾರಕ್ಕೆ ಎಂಬಂತೆ ಮಾಸ್ಕ್ ಧರಿಸುತ್ತಿದ್ದಾರೆ. ಮೂಗಿನಿಂದ ಕೆಳಗೆ, ಗಲ್ಲಕ್ಕೆ, ಕೆಲವರ ಮುಖದಲ್ಲಿ ಬದಲು ಕೈಯಲ್ಲಿ ಮಾಸ್ಕ್ ಕಾಣಸಿಗುತ್ತದೆ. ಆದರೆ ಕೊರೋನಾ ಸೋಂಕಿನಿಂದ ಪಾರಾಗಲು ಮಾಸ್ಕ್ ಅತ್ಯಂತ ಪ್ರಮುಖವಾಗಿದೆ ಎಂಬುದನ್ನು ತಜ್ಞರೇ ಒಪ್ಪಿಕೊಂಡಿದ್ದಾರೆ. ಮಾಸ್ಕ್ ಧರಿಸುವುದರಿಂದ ಕೊರೋನಾ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದ್ದಾರೆ.
source and pic credit: google.com
ಕೋವಿಡ್-19 ಮೊದಲ ಬಾರಿಗೆ ಬಂದಾಗ ಜನರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರೂ ಕೊರೋನಾ ಎರಡನೇ ಅಲೆ ಬಂದು ಜನೆರನ್ನು ಹೈರಾಣಾಗಿಸಿದೆ. ಲಸಿಕೆ ಹಾಕಿಸಿಕೊಂಡವರು ಮಾತ್ರ ಕೊರೋನಾ ಸೋಂಕಿಗೆ ಒಳಗಾಗದೆ ಸ್ಪಲ್ಪಮಟ್ಟಿಗೆ ಬಚಾವ್ ಆಗಿದ್ದಾರೆ. ದೇಶದಲ್ಲಿ ಲಸಿಕೆಗಳ ಕೊರತೆ ಇರುವುದರಿಂದ ಲಸಿಕೆ ಇನ್ನೂ ಹಲವರನ್ನು ತಲುಪಿಲ್ಲ. ಹೀಗಾಗಿಈ ಸಮಸ್ಯೆಯಿಂದ ಪಾರಾಗಲು ತಜ್ಞರು ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಡಬಲ್ ಮಾಸ್ಕ್ ಧರಿಸುವುದು.
ಡಬಲ್ ಮಾಸ್ಕ್ ಎಂದರೇನು..?
source and pic credit: https://ift.tt/3tSokWp
ಡಬಲ್ ಮಾಸ್ಕ್ ಎಂದರೆಮಾಸ್ಕ್ ಧರಿಸುವಾಗ ಎರಡು ಮಾಸ್ಕ್ಗಳ ಬಳಕೆ ಮಾಡಿಕೊಳ್ಳುವುದು. ಇದು ವೈರಸ್ ನಿಂದ ದೂರವಿರಲು ತಜ್ಞರು ಸೂಚಿಸಿರುವ ಒಂದು ಮಾರ್ಗವಾಗಿದೆ. ಸರ್ಜಿಕಲ್ ಮಾಸ್ಕ್ ಜೊತೆಗೆ, N –95 ಮಾಸ್ಕ್ ಗಳನ್ನು ಧರಿಸಬೇಕು.ಅಥವಾ ಇದರ ಜೊತೆಗೆ ನೀವು ಬಟ್ಟೆಯ ಮಾಸ್ಕ್ ಗಳನ್ನು ಸಹ ಸೇರಿಸಬಹುದು.ಇದು ಹೆಚ್ಚುವರಿ ರಕ್ಷಣೆಯ ಪದರವಾಗಿ ಕಾರ್ಯನಿರ್ವಹಿಸುತ್ತದೆ. ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆ ಎನ್ನುತ್ತಾರೆ ತಜ್ಞರು.
source and pic credit: google.com
ಬಹಳಷ್ಟು ಬಾರಿ, ಮೊದಲ ಮಾಸ್ಕ್ ನಲ್ಲಿ ಬೆವರು ಮತ್ತು ತೇವಾಂಶವು ವೈರಸ್ ಅನ್ನು ಆಕರ್ಷಿಸುತ್ತದೆ.ಆದರೆ ಹೆಚ್ಚುವರಿ ಮಾಸ್ಕ್ ನ್ನು ಧರಿಸಿದಾಗ ಈ ರೀತಿಯ ತೊಂದರೆಯಾಗುವುದಿಲ್ಲ. ಡಬಲ್ ಮಾಸ್ಕಿಂಗ್ ಇತ್ತೀಚಿಗೆ ಉತ್ತಮ ಸುರಕ್ಷತಾ ಮುನ್ನೆಚ್ಚರಿಕೆಯಾಗಿದ್ದರೂ, ನೀವು ವೈರಸ್ ಗೆ ತುತ್ತಾಗುವುದಿಲ್ಲ ಎಂದು ಇದರ ಅರ್ಥವಲ್ಲ.ಆದರೆ ಇದರಿಂದ ಸೋಂಕು ತಗುಲುವ ಸಾಧ್ಯತೆಗಳು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂಬುದಾಗಿದೆ.
source and pic credit: https://ift.tt/2JbYXrP
ಅಧ್ಯಯನದಲ್ಲಿ ತಿಳಿದುಬಂದಿದ್ದೇನು..?
ಡಬಲ್ ಮಾಸ್ಕ್ ಕುರಿತು ಅಮೇರಿಕಾದಲ್ಲಿ ಅಧ್ಯಯನವೊಂದನ್ನು ನಡೆಸಲಾಗಿತ್ತು. ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್ (CDC) ಈ ಅಧ್ಯಯನವನ್ನು ನಡೆಸಿದೆ. ಈ ಅಧ್ಯಯನದಲ್ಲಿ ಡಬಲ್ ಮಾಸ್ಕ್ ಧರಿಸುವುದರಿಂದ ಕೋವಿಡ್-19 ಸೋಂಕನ್ನು ಶೇ.95 ರಷ್ಟು ತಡೆಗಟ್ಟಬಹುದು ಎಂದು ಹೇಳಲಾಗಿದೆ.
source and pic credit:https://www.cnet.com
ಒಂದು ವೇಳೆ ಎಲ್ಲರೂ ಡಬಲ್ ಮಾಸ್ಕ್ ಧರಿಸಿದರೆ ಶೀಘ್ರ ಕೊರೋನಾ ವೈರಸ್ ಇಲ್ಲವಾಗಬಹುದು ಎಂದು ತಿಳಿಸಲಾಗಿದೆ.. ಈ ಅಧ್ಯಯನದ ಆಧಾರದ ಮೇಲೆ ತಜ್ಞರು ಜನರಿಗೆ ಡಬಲ್ ಮಾಸ್ಕ್ ಧರಿಸಲು ಮನವಿ ಮಾಡಿದ್ದರು.
ಡಬಲ್ ಮಾಸ್ಕ್ ಯಾವ ರೀತಿ ಧರಿಸಬೇಕು..?
source and pic credit: https://ift.tt/2lQziOq
ಡಬಲ್ ಮಾಸ್ಕ್ ಧರಿಸುವಾಗ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಡಬಲ್ ಮಾಸ್ಕ್ ಬಳಸುವಾಗ ಈ ಎರಡೂ ಮಾಸ್ಕ್ ಗಳು ಬೇರೆ ಬೇರೆ ರೀತಿಯದ್ದಾಗಿರಬೇಕು. ಸರ್ಜಿಕಲ್ ಮಾಸ್ಕ್ ಮತ್ತು ಬಟ್ಟೆಯ ಮಾಸ್ಕ್ ಹೀಗೆ. ಅಂದರೆ ಎರಡು ಸಹ ಸಹ ಸರ್ಜಿಕಲ್ ಮಾಸ್ಕ್, ಅಥವಾ ಎರಡೂ ಸಹ ಬಟ್ಟೆಯ ಮಾಸ್ಕ್. ಈ ರೀತಿ ಉಪಯೋಗಿಸುವುದರಿಂದ ಪ್ರಯೋಜನವಿಲ್ಲ. ಒಂದು ವೇಳೆ ನೀವು N-95 ಮಾಸ್ಕ್ ಧರಿಸುತ್ತಿದ್ದರೆ, ನೀವು ಡಬಲ್ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ.ಸರ್ಜಿಕಲ್ ಮಾಸ್ಕ್ ಅನ್ನು ಕೇವಲ ಒಂದು ಬಾರಿಗೆ ಮಾತ್ರ ಧರಿಸಬಹುದಾಗಿದೆ. ಬಳಕೆಯ ಬಳಿಕ ಅದನ್ನು ಸರಿಯಾಗಿ ಡಿಸ್ಪೋಸ್ ಮಾಡುವುದು ಅಗತ್ಯ.
source and pic credit: https://ift.tt/2qLMSBZ
ಇನ್ನು,ಮಾಸ್ಕ್ ಧರಿಸುವಾದ ಮೂಗಿನ ಮೇಲಿನಿಂದ ಸರಿಯಾದ ರೀತಿಯಲ್ಲಿ ಒತ್ತಿಕೊಂಡಿರಬೇಕು. ಅಂದರೆ ಟೈಟ್ ಆಗಿ ಕುಳಿತುಕೊಂಡಿರಬೇಕು.ಸಡಿಲವಾಗಿ ಮಾಸ್ಕ್ ಧರಿಸುವುದರಿಂದ ಯಾವುದೇ ರೀತಿಯ ಉಪಯೋಗವಿಲ್ಲ.ಮಾಸ್ಕ್ ತೆಗೆಯುವಾಗ ಮಾತನಾಡುವುದನ್ನು ನಿಲ್ಲಿಸಿ. ಮಾಸ್ಕ್ ತೆಗೆದ ಬಳಿಕ ಕೈಗಳನ್ನು ಸ್ಯಾನಿಟೈಸ್ ಮಾಡಲು ಮರೆಯದಿರಿ.ಮುಖಕ್ಕೆ ಧರಿಸುವ ಮಾಸ್ಕ್ ನ್ನು ಆಗಾಗ್ಗೆ ವಾಶ್ ಮಾಡುತ್ತಿರಬೇಕು.ಧರಿಸುವ ಮಾಸ್ಕ್ ಗಳನ್ನು ಆಗಿಂದಾಗೆ ಬಿಸಿ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುತ್ತಿರಬೇಕು.
from ಸುದ್ದಿ - Planet Tv https://ift.tt/3eUrlkL
May 18, 2021 at 06:02PM