The Challenge: ಬಾಹ್ಯಾಕಾಶದಲ್ಲಿ ಚಿತ್ರೀಕರಣಗೊಳ್ಳಲಿದೆ ಮೊತ್ತ ಮೊದಲ ಚಿತ್ರ
source and pic credit: https://www.google.com
ಮನುಷ್ಯನ ಉಗಮವೇ ಒಂದು ಅಚ್ಚರಿ..ನಾಗರೀಕತೆ ಬೆಳೆಯುತ್ತಾ ಹೋದಂತೆಲ್ಲಾ ಮನುಷ್ಯ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಅಚ್ಚರಿ ಮೂಡಿಸುತ್ತಾ ಹೋಗಿದ್ದಾನೆ. ಭೂಮಿ ಎಂಬ ಗ್ರಹದಲ್ಲಿನ ಸಂಶೋಧನೆಗಳು ಮಾತ್ರವಲ್ಲ ಬಾಹ್ಯಾಕಾಶದ ಬಗ್ಗೆಯೂ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದಾನೆ. ಮಾನವ ಭೂಮಿಯ ಸುತ್ತಲು ಗ್ರಹಗಳಿವೆ ಎಂಬುದನ್ನು ಸಂಶೋಧಿಸಿ ಬರೋಬ್ಬರಿ 60 ವರ್ಷಗಳೇ ಕಳೆದಿವೆ. ಇದೀಗ ಮೊತ್ತ ಮೊದಲ ಬಾರಿಗೆ ಸಿನಿಮಾವೊಂದು ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುತ್ತಿದೆ.
source and pic credit: https://futurism.com
ಹೌದು, ಬಾಹ್ಯಾಕಾಶದಲ್ಲಿ ಮೊತ್ತ ಮೊದಲ ಸಿನಿಮಾ ಚಿತ್ರೀಕರಣಗೊಳ್ಳಲಿದ್ದು, ರಷ್ಯಾ ಈ ಸಿನಿಮಾವನ್ನು ತಯಾರಿಸುತ್ತಿದೆ. ಪ್ರತಿ ಸಾರಿಯಂತೆ ಈ ಬಾರಿಯೂ ರಷ್ಯಾ ಅಮೇರಿಕಾವನ್ನು ಹಿಂದಿಕ್ಕಿ ಈ ಸಾಧನೆಯನ್ನು ಮಾಡಲು ಹೊರಟಿದೆ. ರಷ್ಯನ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸೊಮಸ್ ಈ ಬಗ್ಗೆ ಮಾಹಿತಿ ನೀಡಿದೆ. ಬಾಹ್ಯಾಕಾಶಕ್ಕೆ ತೆರಳುತ್ತಿರುವ ತಂಡದ ಬಗ್ಗೆಯೂ ಸಂಸ್ಥೆ ಮಾಹಿತಿ ನೀಡಿದೆ. ಈ ಅತ್ಯಪೂರ್ವ ಸಾಧನೆಯನ್ನು ಮಾಡಲು ತಾವು ಮುಂದಾಗುತ್ತಿರುವುದಾಗಿ ರಷ್ಯನ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
source and pic credit: https://www.rbth.com
ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುವ ಈ ಚಿತ್ರದಲ್ಲಿ ಯುಲಿಯಾ ಪರ್ಸಿಲಿಡ್ ಅಭಿನಯಿಸಲಿದ್ದು, ಕ್ಲಿಮ್ ಶೆಪೆಂಕೋ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಯುಲಿಯಾ ಪರ್ಸಿಲಿಡ್ ಈಗಾಗಲೇ ಹಲವು ರಷ್ಯನ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಯಶಸ್ವಿಯಾಗಿದ್ದಾರೆ. ಆದರೆ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುವ ಈ ಮೊತ್ತ ಮೊದಲ ರಷ್ಯನ್ ಸಿನಿಮಾದ ಕಥಾಹಂದರ ಏನು ಎಂಬ ಬಗ್ಗೆ ಇನ್ನೂ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.
source and pic credit: https://asviral.com
ರಷ್ಯನ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸೊಮಸ್ ಜತೆ ಸಿನಿಮಾದ ಕೆಲಸ ಮಾಡಲು ಮುಂದಾಗಿರುವ ರಷ್ಯನ್ ಪ್ರಸಿದ್ಧ ಚಾನೆಲ್ ಒನ್, ಇದು ವಿಜ್ಞಾನದ ಕುರಿತಾದ ಸಿನಿಮಾ ಅಲ್ಲ ಎಂಬುದನ್ನು ತಿಳಿಸಿದೆ. ಬದಲಾಗಿ ಬಾಹ್ಯಾಕಾಶ ಪ್ರಯಾಣದ ನಿಜವಾದ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಚಿತ್ರ ಎಂದು ಹೇಳಿಕೊಂಡಿದೆ. ವ್ಯಾಜೋವ್ ಎಂಬುದು ಸ್ಪೇಸ್ ನಲ್ಲಿ ಮೊತ್ತ ಮೊದಲು ಚಿತ್ರೀಕರಣ ನಡೆಯುವ ಈ ಸಿನಿಮಾದ ಹೆಸರಾಗಿದೆ. ವ್ಯಾಜೋವ್ ಎಂದರೆ ಚಾಲೆಂಜ್ ಎಂದರ್ಥ.
source and pic credit: https://asviral.com
ಬಾಹ್ಯಾಕಾಶದಲ್ಲಿ ಚಿತ್ರೀಕರಣಕ್ಕಾಗಿ ತಂಡಕ್ಕೆ ತರವೇತಿ
ದಿಚಾಲೆಂಜ್ಚಿತ್ರಕ್ಕಾಗಿಈಗಾಗಲೇಚಿತ್ರದತಂಡಕ್ಕೆಎಲ್ಲಾರೀತಿಯಟ್ರೈನಿಂಗ್ಗಳನ್ನುನೀಡಲಾಗುತ್ತಿದೆ. ಝೀರೋಗ್ರಾವಿಟಿಯಲ್ಲಿಇರುವಬಗ್ಗೆನಟಯುಲಿಯಾ ಪರ್ಸಿಲಿಡ್ ಮತ್ತಿತರರು ತರಬೇತಿ ಪಡೆಯುತ್ತಿದ್ದಾರೆ. ಚಿತ್ರ ಬಿಡುಗಡೆಯ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ.
ಬಾಹ್ಯಾಕಾಶದಲ್ಲಿ ಈ ಚಿತ್ರದ ಚಿತ್ರೀಕರಣ 5 October 2021ರಿಂದ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.. ನವೆಂಬರ್ 2020ರಲ್ಲಿ ಚಿತ್ರತಂಡ ನಟ-ನಟಿಯರ ಅಡಿಷನ್ ಗೆ ಕರೆ ನೀಡಿತ್ತು. ಸ್ಟಾರ್ ಬಳಿಗೆ ಸಾಗುವ, ಭವಿಷ್ಯದಲ್ಲಿ ದೊಡ್ಡ ಅಂತಾರಾಷ್ಟ್ರೀಯ ಸ್ಟಾರ್ ಆಗುವವರಿಗಾಗಿ ಹುಡುಕುತ್ತಿರುವುದಾಗಿ ಹೇಳಿಕೊಂಡಿತ್ತು. ನಟಿ ರಷ್ಯನ್ ಪ್ರಜೆಯಾಗಿದ್ದು, 25ರಿಂದ 40 ವರ್ಷದವರು ಆಗಿರಬೇಕೆಂದು ಹೇಳಿತ್ತು. ಅಲ್ಲದೆ 50ರಿಂದ 70 ಕೆಜಿ ಇರುವವವರು ಮಾತ್ರ ಅಡಿಷನ್ ನಲ್ಲಿ ಭಾಗವಹಿಸುವಂತೆ ಸೂಚಿಸಿತ್ತು.
source and pic credit: https://asviral.com
ಅಲ್ಲದೆ 1 ಕಿ.ಮೀಯನ್ನು 3 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಓಡಿ ಮುಗಿಸುವವರಾಗಿರಬೇಕು. 20 ನಿಮಿಷದಲ್ಲಿ 800 ಮೀಟರ್ ಈಜಬಲ್ಲವರು ಆಗಿರಬೇಕು ಎಂದು ಹೇಳಿತ್ತು. ಅಲ್ಲದೆ ಈ ಹಿಂದೆ ಅಭಿನಯಿಸಿದ ಅನುಭವ ಇಲ್ಲದಿದ್ದರೂ ಪರವಾಗಿಲ್ಲ ಎಂದಿತ್ತು. ರಷ್ಯನ್ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸೊಮಸ್ ಚಾಲೆಂಜ್ ಚಿತ್ರ, ರಷ್ಯಾದ ಬಾಹ್ಯಾಕಾಶ ಚಟುವಟಿಕೆಗಳನ್ನು ಹೆಚ್ಚು ಪ್ರಸಿದ್ಧಿಗೊಳಿಸಲಿದೆ ಎಂದು ಹೇಳಿಕೊಂಡಿದೆ.
ರೇಸ್ಟುಸ್ಪೇಸ್
source and pic credit: https://ift.tt/2OthSnr
ಈಗಾಗ್ಲೇವಿಶ್ವದದೊಡ್ಡಣ್ಣಅಮೇರಿಕಾಬಾಹ್ಯಾಕಾಶದಲ್ಲಿಮೊತ್ತಮೊದಲಸಿನಿಮಾನಿರ್ಮಾಣಕ್ಕೆಮುಂದಾಗಿದೆ. ಈಬಗ್ಗೆಕಳೆದವರ್ಷವಷ್ಟೇಅಮೇರಿಕಾಬಹಿರಂಗಪಡಿಸಿತ್ತು. ನಟಟೋಮ್ಕ್ರುಯಿಸ್, ಡೌಗ್ಲಿಮಾನ್ನಿರ್ದೇಶನದಚಿತ್ರದಲ್ಲಿನಟಿಸುತ್ತಿರುವುದಾಗಿಹೇಳಿಕೊಂಡಿದ್ದರು. ಅಲ್ಲದೆ, ಈಸಿನಿಮಾದಚಿತ್ರೀಕರಣಬಾಹ್ಯಾಕಾಶದಲ್ಲಿನಡೆಯಲಿದೆಎಂಬಮಾಹಿತಿಯನ್ನುಬಹಿರಂಗಪಡಿಸಿದ್ದರು.
from ಸುದ್ದಿ - Planet Tv https://ift.tt/3eSHes7
May 18, 2021 at 08:42AM