ಬೆಳಗ್ಗಿನ ಹೊತ್ತು ಕೋಳಿ ಕೂಗುವುದು ಯಾಕೆ..?
source and pic credit: Pinrest.com
ಹಿಂದೊಂದು ಕಾಲವಿತ್ತು..ಗಡಿಯಾರ, ಅಲಾರಂ, ಮೊಬೈಲ್ ಯಾವುದೂ ಇಲ್ಲದ ಕಾಲ..ಸೂರ್ಯನ ಬೆಳಕು ನೋಡಿ ಸಮಯವನ್ನು ನಿರ್ಧರಿಸುತ್ತಿದ್ದರು. ಸೂರ್ಯ ಉದಯಿಸಿದ ಸಮಯದಿಂದ ತೊಡಗಿ ಸೂರ್ಯ ಚಲಿಸುವುದನ್ನು ನೋಡಿ ಬೆಳಕಿನ ಪ್ರಖರತೆಯನ್ನು ನೋಡಿ ಇಷ್ಟೇ ಸಮಯವೆಂದು ನಿಖರವಾಗಿ ಹೇಳುತ್ತಿದ್ದರು. ಹೊಲ-ಗದ್ದೆಗಳಿಗೆ, ತೋಟಗಳಿಗೆ ಕೆಲಸ ಮಾಡಲು ಹೋದವರು ಈ ರೀತಿ ಸಮಯ ನೋಡಿಯೇ ಊಟಕ್ಕೆಂದು, ವಿಶ್ರಾಂತಿಗೆಂದು ಮನೆಗೆ ಬರುತ್ತಿದ್ದರು.
source and pic credit: Financial Times
ನೆತ್ತಿ ಮೇಲೆ ಸುಡಲು ಶುರುವಾಯಿತೆಂದರೆ ಸೂರ್ಯ ನೆತ್ತಿ ಮೇಲೆ ಬಂದಾಯ್ತು, ಮಧ್ಯಾಹ್ನ ಊಟದ ಸಮಯ ಎಂದು ಅರ್ಥ ಮಾಡಿಕೊಳ್ಳಬಹುದಾಗಿತ್ತು. ನೇಸರ ಪಶ್ಚಿಮದೆಡೆಗೆ ಜಾರುತಿದ್ದಾನೆಂದರೆ ಸಾಯಂಕಾಲವಾಗುತ್ತಿದೆ ಎಂದರ್ಥ. ಯಾವುದೇ ಗಡಿಯಾರ, ಘಂಟೆಗಳ ಹಂಗಿಲ್ಲದೆ ಹಿಂದಿನ ಕಾಲದ ಜನರು ಸಮಯವನ್ನು ಸರಿಯಾಗಿ ಹೇಳುತ್ತಿದ್ದರು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಸಮಯವನ್ನು ತಿಳಿಯಪಡಿಸುತ್ತಿದ್ದದ್ದು ಕೋಳಿ.
source and pic credit: https://ift.tt/2RQivvh
ತನ್ನ ಕೋಳಿ ಕೂಗುವುದರಿಂದಲೇ ದಿನ ಬೆಳಗಾಗುವುದೆಂದು ನಂಬಿದ್ದ ಜಂಬದ ಮುದುಕಿಯ ಕತೆ ಎಲ್ಲರಿಗೂ ಗೊತ್ತು. ಹಿಂದೆಲ್ಲಾ ಸಮಯ ಮತ್ತು ಕೋಳಿಗೆ ಅಷ್ಟು ಗಾಢವಾದ ನಂಟಿತ್ತು. ಹಳ್ಳಿಗಳಲ್ಲಿ ಕೋಳಿಗಳು ಅಲಾರಂಗಳಂತೆ ಕೆಲಸ ಮಾಡುತ್ತಿದ್ದವು. ಕೋಳಿಗಳು ಕೂಗಿದಾಗ ಬೆಳಗಾಯಿತು ಎಂದು ಜನರು ಎದ್ದು ತಮ್ಮ ನಿತ್ಯದ ದಿನಚರಿಯಲ್ಲಿ ತೊಡಗಿಕೊಳ್ಳುತ್ತಿದ್ದರು.. ಜಂಬದ ಅಜ್ಜಿ ಅಂದುಕೊಂಡಂತೆ ಕೋಳಿ ಕೂಗುವುದರಿಂದ ಬೆಳಗಾಗುವುದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದೂ ಬೆಳ್ಳಂಬೆಳಗ್ಗೆ ಕೋಳಿ ಕೂಗುವುದ್ಯಾಕಪ್ಪಾ ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.
source and pic credit: https://ift.tt/2RQivvh
ಕೋಳಿ ಕೂಗುವುದಕ್ಕೋ, ಸೂರ್ಯೋದಯಕ್ಕೋ ಏನು ಸಂಬಂಧ..?
ಕೋಳಿಗೂ ಸೂರ್ಯೋದಯಕ್ಕೋ ಸಂಬಂಧವಿದೆಯಾ..?ಕೋಳಿ ಕೂಗುವುಕ್ಕೂ ಬೆಳಗಾಗುವುದಕ್ಕೂ ಏನಾದರೂ ನಂಟಿದೆಯಾ? ಹೀಗೆ ಹಲವು ಪ್ರಶ್ನೆಗಳು ಜನರನ್ನು ಕಾಡಿತ್ತು. ಜಗತ್ತಿನ ಹಲವೆಡೆ ಕಂಡುಬರುವ ಕೋಳಿಗಳ ಈ ನಡವಳಿಕೆ ಇತ್ತೀಚಿನ ತನಕ ಒಂದು ಗುಟ್ಟಾಗಿಯೇ ಉಳಿದಿತ್ತು. 2013ರಲ್ಲಿ ಜಪಾನಿನ ನಗೋಯಾದಲ್ಲಿ ನಡೆದ ಅಧ್ಯಯನಗಳಿಂದ ಕೋಳಿಗಳೇಕೆ ನಸುಕಿನಲ್ಲಿ ಕೂಗುತ್ತವೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ.
source and pic credit:https: //depositphotos.com
ಎಲ್ಲಾ ಹೊತ್ತಿನಲ್ಲೂ ಕೋಳಿಗಳು ಕೂಗಲು ಬೆಳಕಿನಲ್ಲಾಗುವ ಬದಲಾವಣೆಯೇ ಕಾರಣವೆಂದು ಹಕ್ಕಿ ತಜ್ಞರು ತಿಳಿದಿದ್ದರು. ಕೋಳಿಗೂಡಿಗೆ ಬೆಳಕು ಬಿದ್ದಾಗ ಇಲ್ಲವೇ ಕತ್ತಲಾದಾಗ,ಕೋಳಿಗಳು ಕೂಗುತ್ತವೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಅಧ್ಯಯನದಿಂದ ಅಚ್ಚರಿಯೆನಿಸುವ ಮಾಹಿತಿ ಲಭ್ಯವಾಗಿದೆ.ನಗೋಯಾ ಕಲಿಕೆವೀಡಿನ ಅಧ್ಯಯನ ತಂಡ ತಕಾಶಿ ಯೋಶಿಮುರಾ ಅವರ ನೇತೃತ್ವದಲ್ಲಿ ಈ ಅಧ್ಯಯನವನ್ನು ನಡೆಸಿತ್ತು. ಬೆಳಗ್ಗೆ ಕೋಳಿ ಯಾಕೆ ಕೂಗುತ್ತದೆ ಎಂಬುದನ್ನು ತಿಳಿಯಲು ಹಲವು ಅಧ್ಯಯನಗಳನ್ನು ನಡೆಸಲಾಯಿತು.
source and pic credit: https://ift.tt/2Meqq11
ಕೋಳಿ ಕೂಗುವುದು ಬೆಳಕು ಬಿದ್ದರೆ ಮಾತ್ರಾನಾ..?
ಇದರಲ್ಲಿ ತಂಡ ನಡೆಸಿದ ಪರಿಶೀಲನೆಯಲ್ಲಿ, ಕೋಳಿಗಳು ಸುತ್ತಮುತ್ತಲು ನಡೆಯುವ ಆಗುಹೋಗುಗಳಿಗೆ ತಕ್ಕಂತೆ ಕೂಗುವುದು ಎಂಬುದು ಗಮನಕ್ಕೆ ಬಂತು.ಮೊದಲ ಎರಡು ವಾರಗಳವರೆಗೆ ಹನ್ನೆರಡು ಗಂಟೆಗಳ ಹೊತ್ತು ಬೆಳಕು ಮತ್ತು ಹನ್ನೆರಡು ಗಂಟೆಗಳ ಹೊತ್ತು ಕತ್ತಲಿರುವ ಪರಿಸರದಲ್ಲಿ ಕೋಳಿಗಳನ್ನು ಬಿಡಲಾಯಿತು. ಬೆಳಗಾಗುವುದನ್ನು ಮೊದಲೇ ತಿಳಿದಿರುವಂತೆ ಎರಡು ಗಂಟೆ ಮುಂಚೆಯೇ ಕೋಳಿಗಳು ಕೂಗಲು ಶುರುಮಾಡಿದ್ದವು.
source and pic credit: google.com
ಇದೇ ತಂಡ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಕೋಳಿಗಳನ್ನು ದಿನಕ್ಕೆ 24 ಗಂಟೆಗಳ ಹೊತ್ತು ಕತ್ತಲಿನ ಕೋಣೆಗಳಲ್ಲಿ ಕೂಡಿಹಾಕಲಾಯಿತು. ಆದರೆ ಪೂರ್ತಿ ದಿನ ಕತ್ತಲಿನ ಕೋಣೆಯಲ್ಲಿದ್ದರೂ ಕೋಳಿಗಳು ಸರಿಯಾಗಿ ಬೆಳಗಾಗುವ ಮೊದಲು ಕೂಗುತ್ತಿದ್ದವು. ಬೆಳಕಿನ ಅರಿವಿಲ್ಲದಿದ್ದರೂ ಕೋಳಿಗಳು ಪ್ರತಿದಿನ ನಸುಕಿನ ಹೊತ್ತಿಗೆ ಕೂಗತೊಡಗಿದ್ದವು. ಕೋಳಿ ಕೂಗುವುದರ ಹಿಂದೆ ಬೆಳಕಿನ ಬದಲಾವಣೆಯ ಪರಿಣಾಮ ಇಲ್ಲ ಎನ್ನುವುದು ಇದರಿಂದ ಸಾಬೀತಾಗಿತ್ತು.
source and pic credit: google.com
ಕೋಳಿಗಳು ಅದೆಷ್ಟು ಸ್ಥಳ ಬದಲಾಯಿಸಿದರೂ, ಬೆಳಕು ಬೀಳುವ ಪ್ರಮಾಣ, ಹೆಚ್ಚು ಕಡಿಮೆ ಮಾಡಿದರೂ ಬೆಳಗ್ಗೆ ಸರಿಯಾದ ಸಮಯಕ್ಕೆ ಕೂಗುತ್ತಿದ್ದವು. ಹೀಗಾಗಿ, ಕೋಳಿಗಳು ಹೊರಗಿನ ಪರಿಣಾಮಕ್ಕಿಂತ ಹೆಚ್ಚಾಗಿ ತಮ್ಮೊಳಗಿನ ಸಂವೇದನಾ ಶಕ್ತಿಯಿಂದ ಬೆಳಗಾಗುತ್ತದೆ ಎಂಬುದನ್ನು ತಿಳಿದುಕೊಂಡು ಕೂಗುತ್ತವೆ ಎಂಬುದು ತಿಳಿದುಬಂತು.

ಕೋಳಿ ಕೂಗುವುದು ಬೆಳಗ್ಗೆ ಮಾತ್ರ ಅಲ್ಲ
ಹಾಗೆ ನೋಡಿದರೆ ತಮ್ಮ ಸುತ್ತ ನಡೆಯುವ ಹಲವು ಆಗುಹೋಗುಗಳಿಗೆ ತಕ್ಕಂತೆ ಕೋಳಿಗಳು ಯಾವಾಗಲೂ ಕೂಗುತ್ತವೆ. ಯಾವುದೋ ಸದ್ದು ಕೇಳಿಸಿದಾಗ, ಕೋಳಿಗೂಡಿಗೆ ಏನಾದರೂ ನುಗ್ಗಿದಾಗ, ಕೋಳಿಗಳ ಗುಂಪನ್ನು ಸೇರಿದಾಗಕೂಗುವುದನ್ನು ಹೇಳಬಹುದು. ಹೀಗಿದ್ದೂ, ಎಲ್ಲಾ ಹೊತ್ತಿನಲ್ಲಿ ಕೂಗಿದರೂ ಕೋಳಿಗಳ ಬೆಳಗಿನ ಕೂಗು ತುಸು ಅಚ್ಚರಿಯೆನಿಸುವಂತದ್ದು.
from ಸುದ್ದಿ - Planet Tv https://ift.tt/3o8261B
May 12, 2021 at 03:54PM