ಇದು ಇಲಿಗಳನ್ನು ಪೂಜಿಸುವ ದೇವಸ್ಥಾನ..ಇಲಿ ತಿಂದ ಆಹಾರವೇ ಭಕ್ತರಿಗೆ ಪ್ರಸಾದ..!
source and pic credit: https://www.itinari.com
ಸಾಮಾನ್ಯವಾಗಿ ಇಲಿಗಳನ್ನು ಕಂಡರೆ ಸಾಕು ಎಲ್ಲರೂ ಮಾರುದ್ದ ಓಡುತ್ತಾರೆ. ಮನೆಯೊಳಗೆ ನುಗ್ಗಿದರೆ ಸಾಕು ಆಹಾರ ಪದಾರ್ಥ, ಬಟ್ಟೆಗಳನ್ನು ಹರಿದು ಹಾಕುವ ಇಲಿಯೆಂದರೆ ಎಲ್ಲರಿಗೂ ಎಲ್ಲಿಲ್ಲದ ಸಿಟ್ಟು. ಇಲಿಯೊಂದು ಮನೆಯೊಳಗೆ ಸೇರಿದರೆ ಸಾಕು ಒಂದೇ ಕ್ಷಣದಲ್ಲಿ ಅದರ ರಂಪಾಟಕ್ಕೆ ಮನೆ ರಣಾಂಗಣವಾಗಿ ಬಿಡುತ್ತದೆ, ಮನೆಯೊಳಗೆ ಸೇರಿಕೊಂಡು ಸಿಕ್ಕಿದ್ದನ್ನೆಲ್ಲಾ ಕಚ್ಚಿ, ಹರಿದು ಹಾಕುವ ಇಲಿಯನ್ನು ಹಿಡಿಯಲೆಂದೇ ಕೆಲವರು ಮನೆಯಲ್ಲಿ ಬೆಕ್ಕೊಂದನ್ನು ಸಾಕಿಕೊಂಡಿರುತ್ತಾರೆ. ಆದರೆ ನಿಮಗೆ ಗೊತ್ತಾ ಎಲ್ಲರೂ ಇಷ್ಟೊಂದು ದ್ವೇಷಿಸುವ ಇಲಿಗೂ ಒಂದು ದೇವಸ್ಥಾನವಿದೆ.
source and pic credit: https://www.itinari.com
ರಾಜಸ್ಥಾನದಲ್ಲಿ ಇಲಿಗಳನ್ನು ದೇವರೆಂದು ಪೂಜಿಸುತ್ತಾರೆ. ಅಚ್ಚರಿಯೆನಿಸಿದರೂ ನಿಜ, ಹೀಗೊಂದು ದೇವಾಲಯವಿದೆ. ಗರ್ಭಗುಡಿಯಲ್ಲಿ ಇಲಿಗಳಿಗೆ ಪ್ರಾಶಸ್ತ್ಯ ನೀಡಿ ಪೂಜಿಸುತ್ತಿರುವ ದೇವಾಲಯ. ರಾಜಸ್ಥಾನದ ಬಿಕಾನೇರ್ ನ ಕರ್ಣಿಮಾತಾ ದೇವಾಲಯದಲ್ಲಿ ಇಲಿಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಆವರಣದಲ್ಲಿ 25,000ಕ್ಕೂ ಹೆಚ್ಚು ಇಲಿಗಳು ಓಡಾಡಿಕೊಂಡಿರುತ್ತವೆ. ದೇವಾಲಯಕ್ಕೆ ಬರುವ ಮಂದಿ ಇಲಿಗಳಿಗೆ ಭಕ್ತಿಯಿಂದ ಕೈ ಮುಗಿದು ಪ್ರಾರ್ಥನೆ ಸಲ್ಲಿಸುತ್ತಾರೆ.
source and pic credit: google.com
ದೇವಾಲಯದ ಗರ್ಭಗುಡಿ, ಕಂಬ, ಗೋಡೆ, ಆವರಣದೊಳಗೆ ಓಡಾಡಿಕೊಂಡಿರುವ ಇಲಿಗಳಿಗೆ ಭಕ್ತಾಧಿಗಳು ಹಾಲು, ಆಹಾರ, ಹಣ್ಣನ್ನು ತಂದು ನೀಡುತ್ತಾರೆ. ಈ ದೇವಾಲಯದ ಆವರಣದಲ್ಲಿ ಅದೆಷ್ಟೋ ಇಲಿಗಳಿದ್ದರೂ, ಅದರಲ್ಲಿ ಬಿಳಿ ಇಲಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ. ಯಾರಿಗೆ ಬಿಳಿ ಇಲಿಯ ದರ್ಶನವಾಗುತ್ತದೆಯೋ ಅವರು ಅದೃಷ್ಟವಂತರು ಎಂದು ಹೇಳಲಾಗುತ್ತದೆ.
source and pic credit: https://www.itinari.com
ಪೌರಾಣಿಕ ಹಿನ್ನಲೆ
ಕರ್ಣಿಮಾತೆಯನ್ನು ದುರ್ಗಾ ದೇವಿಯ ಅವತಾರವೆಂದು ನಂಬಲಾಗಿದೆ. 14ನೇ ಶತಮಾನದಲ್ಲಿ ಬಾಳಿ ಬದುಕಿದ ಕರ್ಣಿಮಾತಾ ಚರಣಿ ಜಾತಿಗೆ ಸೇರಿದ ಹಿಂದೂ ಯೋಧೆ. ಕರ್ಣಿಮಾತೆಯ ಧೈರ್ಯ, ಸಾಹಸಕ್ಕೆ ಗ್ರಾಮದ ಮಂದಿ ತಲೆಬಾಗಿದ್ದರು. ಮೆಹ್ರಾಘರ್, ಬಿಕನೇರ್ ಕೋಟೆಯ ನಿರ್ಮಾಣಕ್ಕೆ ಕರ್ಣಿಮಾತಾ ಅಡಿಪಾಯ ಹಾಕಿದ್ದರು. ಬಿಕನೇರ್ ನಲ್ಲಿ ಹಲವು ದೇವಾಲಯಗಳು ಕರ್ಣಿಮಾತೆಯ ಹೆಸರಲ್ಲಿ ಪೂಜೆ ಸಲ್ಲಿಸುತ್ತವೆ.
source and pic credit:https://ift.tt/3hhLtyR
ಕರ್ಣಿಮಾತಾ ದೇವಾಲಯದಲ್ಲಿ ಇಲಿಗಳನ್ನು ಪೂಜಿಸಲು ಪೌರಾಣಿಕ ಹಿನ್ನಲೆಯೂ ಇದೆ. ಕರ್ಣಿಮಾತೆಯ ಮಲಮಗನಾದ ಲಕ್ಷ್ಮಣ ಎಂಬಾತನು ಒಂದು ಬಾರಿ ಕಪಿಲ ಸರೋವರದಲ್ಲಿ ನೀರು ಕುಡಿಯಲು ಹೋದಾಗ ಕಾಲು ಜಾರಿ ಮುಳುಗಿ ಸಾವನ್ನಪ್ಪುತ್ತಾನೆ. ಇದರಿಂದ ಮನನೊಂದ ಕರ್ಣಿಮಾತೆಯು ಯಮನಲ್ಲಿ ಲಕ್ಷ್ಮಣ ಜೀವವನ್ನು ಮರಳಿ ಕೊಡುವಂತೆ ಕೇಳಿಕೊಳ್ಳುತ್ತಾಳೆ. ಯಮಧರ್ಮರಾಯ ಮೊದಲಿಗೆ ನಿರಾಕರಿಸಿದರೂ ನಂತರ ಕರ್ಣಿಮಾತೆಯ ಬೇಡಿಕೆಗೆ ಒಪ್ಪುತ್ತಾನೆ. ಕರ್ಣಿ ಮಾತೆಯ ಮಗಲಕ್ಷ್ಮಣ ಇಲಿಯ ರೂಪದಲ್ಲಿ ಪುನರ್ಜನ್ಮ ತಾಳುತ್ತಾನೆ. ಜತೆಗೆ ಕರ್ಣಿಮಾತೆಯ ಉಳಿದ ಎಲ್ಲಾ ಮಕ್ಕಳೂ ಇಲಿಗಳಾಗಿ ಹುಟ್ಟುತ್ತಾರೆ.
source and pic credit: google.com
ಕರ್ಣಿಮಾತಾ ದೇವಾಲಯ
ಕರ್ಣಿಮಾತಾ ದೇವಾಲಯವನ್ನು 20ನೇ ಶತಮಾನದಲ್ಲಿ ಮಹಾರಾಜ ಗಂಗಾ ಸಿಂಗ್ ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ., ಸಂಪೂರ್ಣ ದೇವಾಲಯದಲ್ಲಿ ಅಮೃತಶಿಲೆ ಹಾಸಲಾಗಿದ್ದು, ಮೊಘಲ್ ಶೈಲಿಯಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಸಂಪೂರ್ಣ ಕೆತ್ತನೆಯ ಕೆಲಸಗಳನ್ನು ಮಾಡಿರುವ ದೇವಸ್ಥಾನಕ್ಕೆ ಬೆಳ್ಳಿಯ ಬಾಗಿಲುಗಳಿವೆ.
source and pic credit: https://ift.tt/33ybsdr
ಇಲಿ ತಿಂದು ಬಿಟ್ಟ ಆಹಾರವೇ ಪ್ರಸಾದ
ಕರ್ಣಿಮಾತಾ ದೇವಾಲಯದಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಇಲಿಗಳಿದ್ದು, ಇವು ತಿಂದು ಉಳಿಸಿರುವ ಆಹಾರವನ್ನು ಭಕ್ತಾಧಿಗಳು ಪ್ರಸಾದವೆಂದು ಸ್ವೀಕರಿಸುತ್ತಾರೆ. ಇಲ್ಲಿ ಪ್ರಸಾದ ತಿಂದವರುಯಾರೂ ಆರೋಗ್ಯ ತಪ್ಪಿಲ್ಲವಂತೆ. ಇಲಿಯ ಎಂಜಲಿನ ಪ್ರಸಾದ ಸ್ವೀಕರಿಸುವುದರಿಂದಶುಭವಾಗುತ್ತದೆ ಅನ್ನೋದು ಭಕ್ತರ ನಂಬಿಕೆ. ಸಹಸ್ರಾರು ಇಲಿಗಳು ಇಲ್ಲಿದ್ದರೂ ಈ ದೇಗುಲದಲ್ಲಿ ದುರ್ವಾಸನೆಯಿಲ್ಲ. ಅಲ್ಲದೆ, ಭಕ್ತರಿಗೆ, ಭಕ್ತರ ವಸ್ತುಗಳಿಗೆ ಈ ಇಲಿಯು ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ.
source and pic credit: google.com
ಈ ದೇವಸ್ಥಾನದಲ್ಲಿರುವ ಇಲಿಗಳನ್ನು ಕರ್ಣಿಮಾತೆಯ ಮಕ್ಕಳೆಂದು ನಂಬುವ ಕಾರಣ ಯಾರೂ ಇದಕ್ಕೆ ತೊಂದರೆ ಕೊಡುವಂತಿಲ್ಲ. ಅಕಸ್ಮಾತ್ ಆಗಿ ಯಾರಾದರೂ ತಿಳಿಯದೇ ಇಲಿಯನ್ನು ಸಾಯಿಸಿದರೆ ಪ್ರಾಯಶ್ಚಿತವಾಗಿ ಈ ದೇವಸ್ಥಾನಕ್ಕೆ ಚಿನ್ನದ ಇಲಿಯನ್ನು ತಂದು ಸಮರ್ಪಿಸುತ್ತಾರೆ.
from ಸುದ್ದಿ - Planet Tv
May 11, 2021 at 05:00PM