ನೆರಳು ಕಾಣಿಸಿದದೇಗುಲ, ತಾಂಜಾವೂರಿನ ಬೃಹದೀಶ್ವರ ದೇವಾಲಯ
source and pic credit: google.com
ಭಾರತದಲ್ಲಿ ಪುರಾಣ ಪ್ರಸಿದ್ಧವಾದ ಅದೆಷ್ಟೋ ದೇವಾಲಯಗಳಿವೆ. ಎಲ್ಲಾ ದೇವಾಲಯಗಳು ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಜತೆಗೆ ಆಯಾ ದೇಗುಲಗಳು ಸಹ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಕೆಲವು ದೇವಾಲಯಗಳು ತನ್ನ ವಿಭಿನ್ನ ವಿನ್ಯಾಸಕ್ಕೆ, ಕೆಲವು ದೇಗುಲಗಳು ಕುಸರಿ-ಕೆತ್ತನೆ ಕೆಲಸಗಳಿಗೆ, ಇನ್ನು ಕೆಲವು ಸುತ್ತ ಮುತ್ತಲಿನ ಪರಿಸರಕ್ಕೆ, ಗರ್ಭಗುಡಿಯ ವಿನ್ಯಾಸಕ್ಕೆ, ದೊಡ್ಡದಾದ ಗೋಪುರಕ್ಕೆ ಹೀಗೆ ಹಲವು ಕಾರಣಗಳಿಗೆ ಹೆಸರುವಾಸಿ ಯಾಗಿದೆ.
source and pic credit: https://ift.tt/2JK1quf
ಭಾರತದಲ್ಲಿರುವ ಹಿಂದೂ ದೇವಾಲಯಗಳ ವಾಸ್ತುಶಿಲ್ಪ ನಿಬ್ಬೆರಗಾಗುವಂತದ್ದು. ಇಲ್ಲಿನ ದೇವಾಲಯಗಳ ಕುಸುರಿ ಕೆತ್ತನೆಯ ಕೆಲಸ ಇಡೀ ವಿಶ್ವವನ್ನೇ ಬೆರಗು ಮೂಡಿಸುತ್ತದೆ. ಅದ್ಬುತ ವಿನ್ಯಾಸ, ಸೂಕ್ಷ್ಮ ಕೆತ್ತನೆಯ ಈ ಪ್ರಾಚೀನ ದೇವಾಯಗಳು ಇಂದಿಗೂ ಹೇಗೆ, ಯಾಕೆ ಅನ್ನೋ ಸಾವಿರಾರು ಪ್ರಶ್ನೆಗಳನ್ನು ಮೂಡಿಸುತ್ತವೆ. ನೂರಾರು ವರ್ಷಗಳ ಹಿಂದೆ ನಿರ್ಮಿತವಾದ ಈ ದೇವಾಲಯಗಳ ವಾಸ್ತುಶಿಲ್ಪ ಇಂದಿಗೂ ಕೌತುಕ ಮೂಡಿಸುತ್ತದೆ. ಭಾರತದಲ್ಲಿ ಇಂತಹ ಹಲವು ದೇವಾಲಯಗಳಿವೆ. ಇದು ಹಾಗೆಯೇ ತನ್ನದೇ ಆದ ವಿಭಿನ್ನತೆಯಿಂದ ಪ್ರಸಿದ್ಧಿ ಹೊಂದಿರುವ ದೇವಾಲಯ. ದೇಶದಲ್ಲಿರುವ ಅತ್ಯಂತ ದೊಡ್ಡದೇ ವಾಲಯಗಳಲ್ಲಿ ಒಂದು.
source and pic credit: https://ift.tt/1xyQlAH
ತಮಿಳುನಾಡಿನ ತಾಂಜಾವೂರಿನ ಬೃಹದೀಶ್ವರ ದೇವಾಲಯ. 11ನೇ ಶತಮಾನದಲ್ಲಿ ನಿರ್ಮಾಣವಾದ ವಿಶ್ವದ ಮೊದಲ ಗ್ರಾನೈಟ್ ದೇವಾಲಯ ಇದಾಗಿದೆ, ಯುನೆಸ್ಕೋ ಪಾರಂಪರಿಕಾ ಪಟ್ಟಿಯಲ್ಲಿ ಈ ದೇವಾಲಯ ಸ್ಥಾನಪಡೆದುಕೊಂಡಿದೆ. ಈ ದೇವಾಲಯವನ್ನು ತಾಂಜಾವೂರಿನ ದೊಡ್ಡ ದೇವಾಲಯ ಎಂದು ಕೂಡಾ ಕರೆಯುತ್ತಾರೆ.ಸುಮಾರು 130000 ಟನ್ ಗಳಷ್ಟು ಗ್ರ್ಯಾನೈಟ್ ಬಳಕೆಯಿಂದ ಈ ದೇವಾಲಯ ನಿರ್ಮಾಣವಾಗಿದೆ. ಈ ದೇವಾಲಯದ ವಿಶೇಷತೆಯೆಂದರೆ ಈ ದೇವಾಲಯದ ಗೋಪುರದ ನೆರಳು ಕಾಣಿಸುವುದಿಲ್ಲ.
ದೇವಾಲಯವ ವಿಶೇಷತೆಗಳುsource and pic credit: https://www.flickr.com
ತಾಂಜಾವೂರಿನ ಬೃಹದೀಶ್ವರ ದೇವಾಲಯದ ಸುಮಾರು 60 ಮೀಟರ್ ಎತ್ತರದ ವಿಮಾನದ ಕಟ್ಟಡದ ಶಿಲ್ಪವು ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿಯಾಗಿದೆ. ಈ ವಿಮಾನದಲ್ಲಿ ಯುರೋಪಿಯನ್ನರ ಕಟ್ಟಡದಂತೆ ತಿರುವುಗಳನ್ನು ನಿರ್ಮಿಸಿದ್ದು ಕಾಣುತ್ತದೆ. ಬ್ರಿಟಿಷರಿಗೆ ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು ಎಂದೂ ಸಹ ಹೇಳಲಾಗುತ್ತಿದೆ. ಆದರೆ ಪುರಾತತ್ವ ಇಲಾಖೆಯಲ್ಲಿ ಇದರ ಬಗ್ಗೆ ಸೂಕ್ತ ದಾಖಲೆಗಳಿಲ್ಲ. ಈ ಕಟ್ಟಡದ ಅತ್ಯಂತ ಮಹತ್ವದ ಅಂಶವೆಂದರೆ ಈ ಗೋಪುರದ ನೆರಳು ಇದರ ಆವರಣದಲ್ಲಿ ಕಾಣಿಸುವುದಿಲ್ಲ,ಅಲ್ಲದೇ ನೆಲಕ್ಕೆ ಬೀಳುವುದಿಲ್ಲ ಎಂದು ನಂಬಲಾಗಿದೆ
ದೇವಾಲಯದ ಇತಿಹಾಸ
source and pic credit: https://www.flickr.com
ತಾಂಜಾವೂರಿನ ಬೃಹದೀಶ್ವರ ದೇವಾಲಯ ವಿಶ್ವದಲ್ಲಿಯೇ ತನ್ನ ಅತ್ಯಂತ ಸುಂದರ ಶಿಲ್ಪಕಲೆ ಗೆ ಹೆಸರಾಗಿದೆ. ಇದರ ನಿರ್ಮಾಣವು ರಾಜಾರಾಜಾ ಚೋಳ I ಈತನ ಸ್ಮರಣಾರ್ಥ ಕಟ್ಟಲಾಗಿದೆ ಎಂದು ತಿಳಿದುಬಂದಿದೆ. ಭಾರತದ ಹಲವಾರು ವಾಸ್ತುಶಿಲ್ಪ ಕಲೆಗಳಲ್ಲಿ ಇದು ಅತ್ಯಂತ ವೈಭವಯುತವಾದ ಕಟ್ಟಡವಾಗಿದೆ. ಆಗಿನ ಚೋಳರ ಕಾಲದ ಅರಸರ ಆಳ್ವಿಕೆ ಸಮಯದಲ್ಲಿ ವಿಶ್ವಕರ್ಮರಿಂದ ನಿರ್ಮಿತ ಅತ್ಯಂತ ಸೂಕ್ಷ್ಮ ಕೆತ್ತನೆಯಿಂದ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಈ ದೇವಾಲಯವು ಯುನೆಸ್ಕೋದ ವಿಶ್ವಪರಂಪರೆ ಸ್ಥಳಗಳಲ್ಲೊಂದಾಗಿದೆ. ಇದನ್ನು ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್ ಎಂದೂ ಸಹ ಕರೆಯುತ್ತಾರೆ,
source and pic credit: google.com
ದೇವಾಲಯದ ಗೋಪುರವು ವಿಶ್ವದಲ್ಲಿನ ಎಲ್ಲಾ ದೇವಾಲಯಗಳಿಗಿಂತ ಹೆಚ್ಚುಅಂದರೆ216 ft ಎತ್ತರವಿದೆ. ಇಲ್ಲಿರುವ ಕಳಶ ಅಥವಾ ಅಗ್ರಸ್ಥಾನದಲ್ಲಿರುವ ಮೇಲ್ತುದಿಯನ್ನುಅಖಂಡ ಗ್ರ್ಯಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ.ದೇವಾಲಯದ ಪ್ರವೇಶ ದ್ವಾರದಲ್ಲಿ ನಂದಿ ಮೂರ್ತಿಯನ್ನು ಒಂದೇ ಒಂದು ಬಂಡೆಗಲ್ಲಿನಲ್ಲಿ ಕೆತ್ತಲಾಗಿದೆ.ಇದು ಸುಮಾರು 16 ಅಡಿ ಉದ್ದ ಮತ್ತು 13 ಅಡಿ ಎತ್ತರವಾಗಿದೆ.ಇಡೀ ದೇವಾಲಯವವನ್ನು ಗಡುಸಾದ ಅಪರೂಪವೆನ್ನಲಾದ ಗ್ರ್ಯಾನೈಟ್ ನ್ನು ಬಳಸಿ ನಿರ್ಮಿಸಲಾಗಿದೆ. ಸದ್ಯ ತಂಜಾವೂರ್ ನಲ್ಲಿನ ಈ ಸ್ಥಳದಲ್ಲಿ ಈ ಕಲ್ಲು ದೊರೆಯುವುದು ವಿರಳವಾಗಿದೆ.
ಇತಿಹಾಸದ ಹಿನ್ನಲೆsource and pic credit: tripadvisor
ದೇವಾಲಯದ ಶಂಕುಸ್ಥಾಪನೆಯನ್ನು ತಮಿಳು ಚಕ್ರವರ್ತಿ ಅರುಲಮೊಳಿವರ್ಮನ್ ಮಾಡಿದ್ದಾನೆ. ಆತ ತಮಿಳುನಾಡಿನ ದೊಡ್ಡ ಚೋಳ ಅರಸಲ್ಲೊಬ್ಬನಾಗಿದ್ದನು.ಈ ಅರಸನಿಗೆ ಕನಸಿನಲ್ಲಿ ಈ ದೇವಾಲಯ ನಿರ್ಮಿಸುವಂತೆ ಆದೇಶ ದೊರೆಯಿತಂತೆ.ಅದರಂತೆ ಕಟ್ಟಿದ ದೇವಾಲಯವು ಅದ್ಭುತ ಶೈಲಿಯು ಚೋಳರ ಸಾಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.ನದಿ ದಂಡೆಯೊಂದರ ಮೇಲಿರುವ ಅದು ಸುತ್ತಲೂ ಸುರಕ್ಷಿತವಾಗಿ ಕೋಟೆ ನಿರ್ಮಿಸಿಕೊಂಡಿದೆ ಎನ್ನುವಂತೆ ಕಾಣುತ್ತದೆ.ಇದರ ಗೋಡೆಗಳನ್ನು ಕೋಟೆಯ ಸುತ್ತಣ ಪ್ರಾಕಾರದಂತೆಯೇ ನಿರ್ಮಾಣ ಮಾಡಲಾಗಿದೆ. ದೇವಾಲಯದ ಸುತ್ತಲೂ ರಕ್ಷಣಾ ಕವಚಗಳಂತೆ ಎರಡು ಗೋಡೆಯಿಂದ ನಿರ್ಮಿತ ಹೊದಿಕೆಗಳಿವೆ.
source and pic credit: discovermyindia
ದೇವಾಲಯದ ಹೊರಭಾಗದ ಗೋಡೆಯು ಎತ್ತರವಾಗಿದ್ದು ಅದರ ಮೂಲಕ ದೇವಾಲಯದ ಸಂಕೀರ್ಣದ ಪ್ರಾಕಾರವನ್ನು ಗುರುತಿಸಬಹುದು. ಇಲ್ಲಿಯೇ ದೊಡ್ಡದಾದ ಗೋಪುರ ಅಥವಾ ಮೇಲೆ ತಿಳಿಸಿದಂತೆ ಪ್ರವೇಶ ದ್ವಾರವಿದೆ. ಇದರೊಳಗೇ ಒಂದು ಮೊಗಸಾಲೆಯಿದ್ದು ಬ್ಯಾರೆಲ್ ನಂತಹ ಕಮಾನಿರುವ ಗೋಪುರವು ಸುಮಾರು 400 ಆಧಾರಸ್ತಂಭಗಳಿಂದ ನಿರ್ಮಿತವಾದದ್ದು ಕಾಣಿಸುತ್ತದೆ. ಪ್ರಧಾನ ದೇವಾಲಯಕ್ಕೆ ಇಲ್ಲಿಂದ ದ್ವಾರ ಮಂಟಪವೂ ನಿರ್ಮಾಣಗೊಂಡಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3oK5AHL
May 24, 2021 at 09:41AM