ಕೊರೋನಾ ಸೋಂಕಿಗೊಳಗಾದ ಸಂದರ್ಭ ಪಲ್ಸ್ ಆಕ್ಸಿಮೀಟರ್ ಬಳಸುವುದು ಹೇಗೆ ಗೊತ್ತಾ..?
Image credits: https://ift.tt/2AGV0u5
ಕೊರೋನಾ ವಿರುದ್ಧದ ಹೋರಾಟದಲ್ಲಿ ಆಕ್ಸಿಮೀಟರ್ ಮನೆಯಲ್ಲಿ ಇರಬೇಕಾದ ಅಗತ್ಯವಾದ ಉಪಕರಣವಾಗಿದೆ. ಆಕ್ಸಿಮೀಟರ್ ನಮ್ಮ ಹೃದಯದ ಬಡಿತದ ಜೊತೆಗೆ ಆಮ್ಲಜನಕದ ಮಟ್ಟವನ್ನು ದಾಖಲಿಸುತ್ತದೆ. ಹೀಗಾಗಿ ಆರೋಗ್ಯದಲ್ಲಿ ಏರುಪೇರಾದರೆ ಆಕ್ಸಿಮೀಟರ್ ಬಳಸಿ ದೇಹದ ಆಮ್ಲಜನಕ ಮಟ್ಟವನ್ನು ಪರಿಶೀಲಿಸಬಹುದಾಗಿದೆ. ಅದರಲ್ಲೂ ಕೋವಿಡ್ ಸೋಂಕಿತರು ತಮ್ಮ ಜತೆಯಲ್ಲಿ ಆಕ್ಸಿಮೀಟರ್ ಇಟ್ಟುಕೊಳ್ಳುವುದು ಅತ್ಯಂತ ಹೆಚ್ಚು ಪ್ರಯೋಜನಕಾರಿ. ಇದರಿಂದ ದೇಹದ ಆಮ್ಲಜನಕ ಮಟ್ಟವನ್ನು ಪರಿಶೀಲಿಸುತ್ತಿರಬಹುದು. ಮತ್ತು ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಾಗಿದ್ದಲ್ಲಿ, ಸಡನ್ ಆಗಿ ಆರೋಗ್ಯ ಹದಗೆಡುವುದನ್ನು ತಪ್ಪಿಸಬಹುದು.
ಸ್ವತಃ ಸರ್ಕಾರವೇ ಕೊರೋನಾ ಸೋಂಕಿತರು ಪಲ್ಸ್ ಆಕ್ಸಿಮೀಟರ್ ಬಳಸಲು ಸೂಚನೆ ನೀಡಿದೆ. ಉತ್ತಮ ಆಕ್ಸಿಮೀಟರ್ ಮಾರುಕಟ್ಟೆಯಲ್ಲಿ ಎರಡು ಸಾವಿರ ರೂಪಾಯಿಗಳಿಂದ ಲಭ್ಯವಿದೆ. ಆಕ್ಸಿಮೀಟರ್ ನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಕೊರೋನಾ ಸೋಂಕಿತರು ದೇಹದ ಆಮ್ಲಜನಕ ಮಟ್ಟದ ಸರಿಯಾದ ರೀಡಿಂಗ್ ಕಂಡುಕೊಳ್ಳಲು ಆಕ್ಸಿಮೀಟರ್ ಅನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ.
Image credits: https://ift.tt/2x2scqQ
ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಬೇರೆ ಬೇರೆ ಬಗೆಯ ಪಲ್ಸ್ ಆಕ್ಸಿಮೀಟರ್ ಸಿಗುತ್ತದೆ. ಆದರೆ ಅದನ್ನು ಕೇವಲ ಬೆರಳ ತುದಿಗೆ ತಗುಲಿಸಿದಾಗಬಂದ ರೀಡಿಂಗ್ ನ್ನು ನಂಬಲು ಸಾಧ್ಯವಿಲ್ಲ. ಆಕ್ಸಿಮೀಟರ್ ಬಳಸುವ ಮುನ್ನ ಒಂದಷ್ಟು ಪದ್ಧತಿಯನ್ನು ಪಾಲಿಸಬೇಕು ಆಗಲೇ ಅದರಲ್ಲಿ ಸರಿಯಾದ ರೀಡಿಂಗ್ ತೋರಿಸುವುದು.ಪಲ್ಸ್ ಆಕ್ಸಿಮೀಟರ್ ಬಳಸುವ ಮುನ್ನ, ಪಲ್ಸ್ ಮೀಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ..? ಪಲ್ಸ್ ಆಕ್ಸಿಮೀಟರ್ ನ್ನು ಸರಿಯಾಗಿ ಬಳಸುವುದು ಹೇಗೆ..?ಎಂಬುದನ್ನು ತಿಳಿಯೋಣ
ಪಲ್ಸ್ ಮೀಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ..?
ಪಲ್ಸ್ ಆಕ್ಸಿಮೀಟರ್ ಉಪಕರಣಕ್ಕೆ ಸೆನ್ಸಾರ್ ಅಳವಡಿಸಲಾಗಿದ್ದು, ವಿವಿಧ ಬಣ್ಣದ ಎಲ್ ಇಡಿಗಳ ಮೂಲಕ ಬೆಳಕು ಬೆರಳ ತುದಿಯಲ್ಲಿರುವ ಅಂಗಾಂಶಗಳು ಮೇಲೆ ಹಾದು ಹೋಗುತ್ತದೆ. ಮತ್ತೊಂದು ಬದಿಯಲ್ಲಿರುವ ಸೆನ್ಸಾರ್ ನಿಂದ ಆಕ್ಸಿಜನ್ ಪೂರೈಕೆ ಪ್ರಮಾಣವನ್ನು ದಾಖಲಿಸುತ್ತದೆ. ಬೆಳಕಿನ ಸಾಂದ್ರತೆಯ ಮೂಲಕ ಆಕ್ಸಿಜನ್ ಕೊಂಡೊಯ್ಯುತ್ತಿರುವ ರಕ್ತ ಕಣಗಳನ್ನು ಪಲ್ಸ್ ಆಕ್ಸಿ ಮೀಟರ್ ಗುರುತಿಸುತ್ತದೆ. ಈ ಮೂಲಕ ದೇಹದಲ್ಲಿರುವ ಆಮ್ಲಜನಕದ ಮಟ್ಟವನ್ನು ಸ್ಕ್ರೀನ್ ನಲ್ಲಿ ನೋಡಬಹುದು. ಇನ್ನು, ಪಲ್ಸ್ ಆಕ್ಸಿಮೀಟರ್ ನ್ನು ಸರಿಯಾಗಿ ಬಳಸುವುದು ಹೇಗೆ..? ಎಂಬುದನ್ನು ತಿಳಯೋಣ..
Image credits:https://ift.tt/2JK1quf
ಮನಸ್ಸನ್ನು ಶಾಂತವಾಗಿರಿಸಿ: ಪಲ್ಸ್ ಆಕ್ಸಿಮೀಟರ್ ನಲ್ಲಿ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸುವ ಮೊದಲು, ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ದೇಹಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಸಂಪೂರ್ಣ ವಿಶ್ರಾಂತಿ ನೀಡಿ ನಂತರ ಪಲ್ಸ್ ಆಕ್ಸಿಮೀಟರ್ ಬಳಸಬೇಕು
ನೇರವಾಗಿ ಕುಳಿತುಕೊಳ್ಳಿ: ಆಕ್ಸಿಮೀಟರ್ ಬಳಸಿ ದೇಹದ ಆಮ್ಲಜನಕ ಮಟ್ಟವನ್ನು ಪರೀಕ್ಷಿಸುವಾಗ ನೇರವಾಗಿ ಕುಳಿತು ನಿಮ್ಮ ಬೆರಳನ್ನು ಆಕ್ಸಿಮೀಟರ್ ಒಳಗೆ ಇರಿಸಬೇಕು. ಆಕ್ಸಿಮೀಟರ್ ಒಳಗೆ ನಿಮ್ಮ ತೋರು ಅಥವಾ ಮಧ್ಯದ ಬೆರಳನ್ನು ಇರಿಸಬೇಕು.ಆಕ್ಸಿಮೀಟರ್ ಒಳಗೆ ನಿಮ್ಮ ಬೆರಳಿಟ್ಟು ಪರೀಕ್ಷಿಸುವಾಗ ನಿಮ್ಮ ಕೈಯನ್ನು ಅಲುಗಾಡಿಸಬಾರದು.ತೋರು ಬೆರಳ ತುದಿಗೆ ಪಲ್ಸ್ ಆಕ್ಸಿ ಮೀಟರ್ ನ್ನು ಅಳವಡಿಸಿಕೊಳ್ಳುವ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿರುವ ಪ್ರಮಾಣವನ್ನು ರೀಡಿಂಗ್ ನಲ್ಲಿ ನೋಡಬಹುದು. ಆಕ್ಸಿಮೀಟರ್ ನಲ್ಲಿ ದಿನಕ್ಕೆ ಮೂರು ಬಾರಿ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಿದರೆ ಉತ್ತಮ.
Image credits: https://www.bbc.com
ಪಲ್ಸ್ ಆಕ್ಸಿಮೀಟರ್ ನಲ್ಲಿನ ರೀಡಿಂಗ್ ಗಳು 95ರ ವರೆಗೂ ಇದ್ದರೆ ಸಮರ್ಪಕ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಅರ್ಥ. ಅದಲ್ಲದೆ ಕಡಿಮೆ ರೀಡಿಂಗ್ ಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.
ಯಾವುದರಿಂದ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ವ್ಯತ್ಯಯವಾಗುತ್ತದೆ?
ಹೀಗೊಂದು ಗೊಂದಲ ಹಲವರಲ್ಲಿ ಕಾಣಿಸಿಕೊಂಡಿರಬಹುದು. ಯಾಕೆಂದರೆ ಒಂದೊಂದು ಸಾರಿ ಪಲ್ಸ್ ಆಕ್ಸಿಮೀಟರ್ ನಲ್ಲಿ ಬೆರಳಿರಿಸಿದಾಗ 95-95ಕ್ಕಿಂತ ಕಡಿಮೆ ಪ್ರಮಾಣ ಕಾಣಿಸಿಕೊಳ್ಳುತ್ತದೆ. ಇದರಿಂದ ಆರೋಗ್ಯದ ಬಗ್ಗೆ ಆತಂಕ ಮೂಡುವುದು ಸಹಜ. ಆದರೆ, ಪಲ್ಸ್ ಆಕ್ಸಿಮೀಟರ್ ನಲ್ಲಿ ಬರುವ ರೀಡಿಂಗ್ ಗಳು ಪ್ರತಿ ಬಾರಿಯೂ ನಿಖರವಾಗಿರುವುದಿಲ್ಲ. ಆರೋಗ್ಯದ ಸಮಸ್ಯೆಯಿಲ್ಲದೆಯೂ ಇತರ ಬೇರೆ ಕಾರಣಗಳಿಂದ ಪಲ್ಸ್ ಆಕ್ಸಿಮೀಟರ್ ನಲ್ಲಿ ಆಮ್ಲಜನಕದ ಮಟ್ಟ ತಪ್ಪಾಗಿ ಕಾಣಿಸಿಕೊಳ್ಳಬಹುದು. ಅದಕ್ಕೇನು ಕಾರಣ..ಇಲ್ಲಿದೆ ನೋಡಿ ಮಾಹಿತಿ.
Image credits: https://ift.tt/2M9sVO4
ಚರ್ಮದ ಬಣ್ಣ ಹೆಚ್ಚು ಪಿಗ್ಮೆಂಟ್ ಇದ್ದರೆ, ಕೆಲವು ಆಕ್ಸಿಮೀಟರ್ ಗಳಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪೂರೈಕೆಯ ರೀಡಿಂಗ್ ನೀಡಬಹುದು. ಕೈ ಬೆರಳಿನ ರಕ್ತ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾದರೆ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ ಅಥವಾ ಕಡಿಮೆ ರೀಡಿಂಗ್ ತೋರಿಸುತ್ತದೆ. ಕೈಗಳು ತಣ್ಣಗಿದ್ದಲ್ಲಿ ಅಥವಾ ಚರ್ಮ ಒದ್ದೆಯಾದಾಗ ಪಲ್ಸ್ ಆಕ್ಸಿಮೀಟರ್ ನ್ನು ಹಾಕಿದರೆ ಆಗಲೂ ಕಡಿಮೆ ರೀಡಿಂಗ್ ತೋರಿಸಬಹುದು. ಹೀಗಾಗಿಯೇ ಆಕ್ಸಿಮೀಟರ್ ಬಳಸುವಾಗ ಕೈಯನ್ನು ಪರಸ್ಪರ ತಿಕ್ಕಿಕೊಂಡು ಬಿಸಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಕ್ಸಿಮೀಟರ್ ಬಾಕ್ಸ್ ನಲ್ಲಿ ಸೂಚಿಸಿರುತ್ತಾರೆ.
Image credits: https://ift.tt/2hzH4Gi
ಹೊರಭಾಗದಿಂದ ಬರುವ ಪ್ರಕಾಶಮಾನವಾದ ಬೆಳಕು ಉಪಕರಣದ ಒಳಗಿರುವ ಎಲ್ ಇಡಿ ಬೆಳಕಿಗೆ ಅಡ್ಡಿಯಾಗಿ ನಿಖರತೆ ತಪ್ಪಬಹುದು. ಇದರಿಂದ ಆಮ್ಲಜನಕದ ಮಟ್ಟ ತಪ್ಪಾಗಿ ತೋರಿಸುವ ಸಾಧ್ಯತೆಯಿದೆ. ಉಗುರು ದಪ್ಪವಾಗಿದ್ದಲ್ಲಿ ಅದೂ ಸಹ ರೀಡಿಂಗ್ ಕಡಿಮೆ ತೋರಿಸುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಆಕ್ಸಿಮೀಟರ್ ಬಳಸುವ ಮುನ್ನ ಉಗುರು ಕತ್ತರಿಸಿಕೊಳ್ಳುವುದು ಮುಖ್ಯ. ಇವಿಷ್ಟೇ ಅಲ್ಲದೆ, ಕಪ್ಪು, ನೀಲಿ, ಹಸಿರು ಬಣ್ಣದ ನೈಲ್ ಪಾಲಿಶ್ ಗಳಿಂದಲೂ ಪಲ್ಸ್ ಆಕ್ಸಿಮೀಟರ್ ಗಳು ಕಡಿಮೆ ರೀಡಿಂಗ್ ತೋರಿಸುವ ಸಾಧ್ಯತೆಗಳಿವೆ.
ಕಡಿಮೆ ರೇಟ್ ಅಂತ ಪರಿಶೀಲನೆ ಆಗದ ಆಕ್ಸಿಮೀಟರ್ ಖರೀದಿಸಿದರೆ ಈ ರೀತಿ ಆ್ಯಕ್ಯೂರೆಸಿ ಕಡಿಮೆ ಇರವ ಉಪಕರಣಗಳು ಸಿಗುತ್ತದೆ. ಹಾಗಾಗಿ ಆಕ್ಸಿಮೀಟರ್ ಖರೀದಿಸುವಾಗ ಸಾಕಷ್ಟು ಪರಿಶೀಲಿಸಿ ಖರೀದಿಸುವುದು ಉತ್ತಮ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3wQ6eGp
June 02, 2021 at 07:45PM