ಬ್ರಹ್ಮನನ್ನು ಯಾಕೆ ಪೂಜಿಸುವುದಿಲ್ಲ ಗೊತ್ತಾ..? ಇಲ್ಲಿದೆ ನೀವು ತಿಳಿದಿರದ ಅಚ್ಚರಿಯ ಮಾಹಿತಿ
ಬ್ರಹ್ಮ ಹಿಂದೂ ಧರ್ಮದ ಮೊದಲ ದೇವರು. ತ್ರಿಮೂರ್ತಿಗಳಲ್ಲಿ ಸೃಷ್ಟಿಕಾಯದ ಜವಾಬ್ದಾರಿ ಹೊತ್ತ ದೇವತೆ. ಜ್ಞಾನದ ಅಧಿಪತಿಯೂ ಆದ ಬ್ರಹ್ಮ ವೇದಗಳ ರಕ್ಷಕನೂ ಹೌದು. ಬ್ರಹ್ಮ ಜನಿಸಿದ್ದು ಮಹಾವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದಲ್ಲಿ. ನಾರದರು ಬ್ರಹ್ಮನ ಮಾನಸ ಪುತ್ರರು. ಬ್ರಹ್ಮನನ್ನು ಗುಣತ್ರಯ ರಹಿತ, ಉಪಾಧಿರಹಿತ, ಪರಿಚ್ಛೇದಶೂನ್ಯ, ಸಚ್ಚಿದಾನಂದ ಸ್ವರೂಪ, ಪರಾತ್ಪರ, ಪರಮಾತ್ಮ, ಪರಬ್ರಹ್ಮ, ಸರ್ವಲೋಕಪಿತಾಮಹ, ಪ್ರಜಾಪತಿ, ಸ್ವಯಂಭು. ಸರ್ವಲೋಕಪ್ರಭು, ಮಹಾತಪಸ್ವಿ, ಹಿರಣ್ಯಗರ್ಭ ಎಂದು ಮುಂತಾಗಿ ಭಾರತ, ಭಾಗವತ, ರಾಮಾಯಣ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂ ಧರ್ಮದಲ್ಲಿ ತ್ರಿಮೂರ್ತಿ ದೇವರುಗಳಿಗೆ ಪ್ರಮುಖ ಸ್ಥಾನವಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ತ್ರಿಮೂರ್ತಿಗಳೆಂದು ಪರಿಗಣಿಸಲಾಗುತ್ತದೆ. ಈ ಮೂವರಲ್ಲಿ ಬ್ರಹ್ಮನು ಸೃಷ್ಟಿಕರ್ತನಾದರೆ, ವಿಷ್ಣು ಪಾಲನಕಾರನಾಗಿದ್ದಾನೆ ಹಾಗೂ ಮಹೇಶ್ವರನೆಂದು ಕರೆಸಿಕೊಳ್ಳುವ ಶಿವನು ಸಂಹಾರಕನಾಗಿದ್ದಾನೆ. ದೇಶದಲ್ಲಿ ವಿಷ್ಣು ಮತ್ತು ಶಿವನ ದೇವಾಲಯಗಳನ್ನು ಸಾಕಷ್ಟು ದೇವಾಲಯಗಳಿವೆ. ಆದರೆ ಬ್ರಹ್ಮನಿಗೆ ಪೂಜೆ ಸಲ್ಲಿಸುವ ಬಗ್ಗೆ, ದೇವಾಲಯವಿರುವ ಬಗ್ಗೆ ನೀವೆಲ್ಲಾದರೂ ಕೇಳಿದ್ದೀರಾ..?
ದೇಶಾದ್ಯಂತ ಹಲವು ದೇವರ ದೇವಸ್ಥಾನಗಳಿಗೆ. ಹಲವು ದೇವರಿಗೆ ಪ್ರತಿನಿತ್ಯ ಪೂಜೆ ನಡೆಯುತ್ತಲೇ ಇರುತ್ತದೆ. ಆದರೆ ಪ್ರತಿನಿತ್ಯದ ಪೂಜೆಯಲ್ಲೂ ಬ್ರಹ್ಮನಿಗೆ ಪಾಲಿಲ್ಲ. ಯಾವುದೇ ಮನೆಯಲ್ಲಿ, ಮಂದಿರಗಳಲ್ಲಿ ಬ್ರಹ್ಮನಿಗೆ ಪೂಜೆ ಸಲ್ಲಿಸಲಾಗುವುದಿಲ್ಲ. ಶಿವ, ವಿಷ್ಣುವಿನ ಹೆಸರಲ್ಲಿ ದೇಶಾದ್ಯಂತ ಅಸಂಖ್ಯಾತ ದೇವಾಲಯಗಳಿವೆ. ಆದರೆ ಬ್ರಹ್ಮನ ಹೆಸರಿನಲ್ಲಿ ಕೇವಲ ಒಂದೇ ಒಂದು ದೇವಾಲಯ ದೇಶದಲ್ಲಿದೆ. ಆದರೆ ಇಲ್ಲಿಯೂ ಬ್ರಹ್ಮನಿಗೆ ಪೂಜೆ ನಡೆಯುವುದಿಲ್ಲ. ಬದಲು ಜನರು ಬ್ರಹ್ಮನ ದರ್ಶನವನ್ನು ಮಾತ್ರ ಪಡೆಯುತ್ತಾರೆ. ಯಾರೂ ಮನೆಯಲ್ಲಿ ಸಹ ದಿನನಿತ್ಯ ಬ್ರಹ್ಮನ ಪೂಜೆ ಮಾಡುವುದಿಲ್ಲ.
ಬ್ರಹ್ಮನನ್ನು ಯಾಕೆ ಪೂಜಿಸುವುದಿಲ್ಲ..?
Image Credits : Pinterest
ಸಾಮಾನ್ಯವಾಗಿ ಎಲ್ಲರಿಗೂ ಈ ಕುತೂಹಲ ಇದ್ದೇ ಇದೆ. ಯಾಕೆಂದರೆ ಬ್ರಹ್ಮ ದೇವತೆಗಳ ಅಧಿಪತಿ. ಸೃಷ್ಟಿಯ ಒಡೆಯ. ಆದರೆ ಇಂಥಹಾ ಪ್ರಮುಖ ದೇವರಿಗೇ ಪೂಜೆ ಯಾಕಿಲ್ಲ. ಬ್ರಹ್ಮ ದೇವನ ವಿಗ್ರಹ ಪ್ರತಿಷ್ಠಾಪಿಸಿ ಯಾಕೆ ಯಾರೂ ಪೂಜಿಸುವುದಿಲ್ಲ. ಭಕ್ತಿಯಿಂದ ಕೈ ಮುಗಿಯುವುದಿಲ್ಲ. ಬ್ರಹ್ಮನಿಗಾಗಿ ದೇವಾಲಯ, ಗುಡಿಗಳಿಲ್ಲ. ಇಂಥಹಾ ಹಲವಾರು ಪ್ರಶ್ನೆಗಳು ಮೂಡುತ್ತವೆ. ಪೌರಾಣಿಕ ಹಿನ್ನಲೆಯ ಪ್ರಕಾರ ಬ್ರಹ್ಮನಿಗೆ ಲಭಿಸಿದ ಶಾಪದಿಂದಾಗಿ ಸೃಷ್ಟಿಕರ್ತನಿಗೆ ಎಲ್ಲೂ ಪೂಜೆ ಸಲ್ಲಿಸಲಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಬ್ರಹ್ಮನ ಪತ್ನಿ ಸಾವಿತ್ರಿ ದೇವಿ ನೀಡಿದ ಶಾಪವಾಗಿದೆ.
ಪೌರಾಣಿಕ ಹಿನ್ನಲೆ
Image credits : facebook.com/105202624847890
ಬ್ರಹ್ಮಲೋಕಕ್ಕೆ ಒಂದು ಸಾರಿ ಭೃಗು ಮಹರ್ಷಿಗಳು ಬರುತ್ತಾರೆ. ಆ ಸಮಯದಲ್ಲಿ ಬ್ರಹ್ಮ ಸರಸ್ವತಿಯ ವೀಣಾವಾದನ ಆಲಿಸುತ್ತಾ ಮೈ ಮರೆತಿರುತ್ತಾನೆ. ಇದನ್ನು ನೋಡಿದ ಭೃಗು ಮಹರ್ಷಿಗಳು ಕೋಪಗೊಂಡು ಈ ರೀತಿ ಮೈ ಮರೆತ ನೀನು ಜನರ ಸಂಕಷ್ಟಗಳನ್ನು ಹೇಗೆ ಕೇಳುವೆ ಎಂದು ಸಿಟ್ಟಾಗುತ್ತಾರೆ. ಜನರ ಸಂಕಷ್ಟಗಳನ್ನು ಆಲಿಸಲು ಸಿಗದ ನಿನ್ನನ್ನು ಭೂಮಿಯಲ್ಲಿ ಯಾರೂ ಪೂಜಿಸುವ ಅಗತ್ಯವೇ ಇಲ್ಲ ಎಂದು ಶಾಪ ನೀಡುತ್ತಾರೆ. ಆದ್ದರಿಂದಲೇ ಬ್ರಹ್ಮನನ್ನು ಪೂಜಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಬ್ರಹ್ಮನ ಪತ್ನಿ ಸಾವಿತ್ರಿಯ ಶಾಪ..!
Image Credits : Jagran Today
ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ಪದ್ಮ ಪುರಾಣದ ಪ್ರಕಾರ, ಬ್ರಹ್ಮನ ಪತ್ನಿ ಸಾವಿತ್ರಿ ನೀಡಿರುವ ಶಾಪದಿಂದಾಗಿ ಬ್ರಹ್ಮನನ್ನು ಪೂಜಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ವಜ್ರನಾಶನೆಂಬ ರಾಕ್ಷಸನು ಭೂಮಿಯ ಮೇಲೆ ತನ್ನ ಅಟ್ಟಹಾಸವನ್ನು ಮೆರೆಯಲು ಪ್ರಾರಂಭಿಸುತ್ತಾನೆ. ಈ ರಾಕ್ಷಸನ ರೌದ್ರಾವತಾರವನ್ನು ಕಂಡು ಕೋಪಗೊಂಡ ಬ್ರಹ್ಮನು ಆತನನ್ನು ಸಂಹರಿಸುತ್ತಾನೆ. ಬ್ರಹ್ಮ ಮತ್ತು ವಜ್ರನಾಶನ ನಡುವೆ ನಡೆದ ಹೋರಾಟದಲ್ಲಿ ಬ್ರಹ್ಮನ ಕೈಯಲ್ಲಿದ್ದ ಕಮಲದ ಹೂ ಬ್ರಹ್ಮನ ಅರಿವಿಲ್ಲದೆ ನೆಲಕ್ಕೆ ಬೀಳುತ್ತದೆ. ಆ ಸ್ಥಳವನ್ನು ಅಂದಿನಿಂದ ಪುಷ್ಕರವೆಂದು ಕರೆಯಲಾಯಿತು.
ವಜ್ರನಾಶನನ್ನು ಸಂಹರಿಸಿದ ನಂತರ ಬ್ರಹ್ಮಾಂಡದ ಒಳಿತಿಗಾಗಿ ಬ್ರಹ್ಮನು ಪುಷ್ಕರದಲ್ಲಿ ಯಜ್ಞವನ್ನು ಮಾಡಲು ಮುಂದಾಗುತ್ತಾನೆ. ಬ್ರಹ್ಮನು ಪುಷ್ಕರ ಪ್ರದೇಶವನ್ನು ತಲುಪಿ ಯಜ್ಞವನ್ನು ಮಾಡುವುದಕ್ಕಾಗಿ ಮುಂದಾದರೂ ಬ್ರಹ್ಮನ ಪತ್ನಿ ಸಾವಿತ್ರಿಯು ಯಜ್ಞ ನಡೆಯುವ ಪುಷ್ಕರ ಪ್ರದೇಶವನ್ನು ತಲುಪಿರಲಿಲ್ಲ. ಪತ್ನಿ ಜತೆಗಿಲ್ಲದೆ ಬ್ರಹ್ಮ ಯಜ್ಞ ಆರಂಭಿಸಲು ಸಾಧ್ಯವಾಗುವುದಿಲ್ಲ.
ಅದೆಷ್ಟು ಹೊತ್ತು ಕಳೆದರೂ ಸಾವಿತ್ರಿ ಯಜ್ಞ ನಡೆಯುವ ಪುಷ್ಕರ ಪ್ರದೇಶವನ್ನು ತಲುಪುವುದಿಲ್ಲ. ಹೊತ್ತು ಮೀರುತ್ತಿರುವುದರಿಂದ, ಅದಲ್ಲದೇ ಬ್ರಹ್ಮನು ಈ ಯಜ್ಞವನ್ನು ಮಾಡಬೇಕಾದರೆ ಆತನ ಪತ್ನಿ ಅವನೊಂದಿಗಿದ್ದು, ಯಜ್ಞದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುವ ಕಾರಣ ಬ್ರಹ್ಮನು ಅದೇ ಸ್ಥಳದಲ್ಲಿ ಬೇರೊಂದು ಹುಡುಗಿಯನ್ನು ಮದುವೆಯಾಗುತ್ತಾನೆ. ಆಕೆಯೊಂದಿಗೆ ಕುಳಿತು ಯಜ್ಞವನ್ನು ಪರಿಪೂರ್ಣಗೊಳಿಸುತ್ತಾನೆ. ಬ್ರಹ್ಮನು ಎರಡನೇ ಮದುವೆಯಾದ ಆ ಹುಡುಗಿಯೇ ಗಾಯತ್ರಿ. ಯಜ್ಞದಲ್ಲಿ ಬ್ರಹ್ಮನೊಂದಿಗೆ ಗಾಯತ್ರಿಯನ್ನು ಕಂಡ ಸಾವಿತ್ರಿಯು ಕೋಪಗೊಳ್ಳುತ್ತಾಳೆ. ನೀವು ಭಗವಾನ್ ಬ್ರಹ್ಮನಾಗಿದ್ದರೂ ಕೂಡ ಇನ್ನು ಮುಂದೆ ಬ್ರಹ್ಮಾಂಡದಲ್ಲಿ ಯಾರು ನಿಮ್ಮನ್ನು ಪೂಜಿಸಬಾರದೆಂದು ಶಾಪವನ್ನು ನೀಡುತ್ತಾಳೆ.
ರಾಜಸ್ಥಾನದಲ್ಲಿದೆ ಬ್ರಹ್ಮನ ದೇವಾಲಯ
Image Credits : Gosahin
ದೇಶಾದ್ಯಂತ ಹಲವು ದೇವರ, ಹಲವು ದೇವಾಲಯಗಳಿವೆ. ಆದರೆ ಬ್ರಹ್ಮನನ್ನು ಪೂಜಿಸುವ ದೇವಾಲಯಗಳಿಲ್ಲ. ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನಿಗೆ ದೇವಾಲಯಗಳೇ ಇಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಬ್ರಹ್ಮನಿಗೂ ಕೂಡ ದೇವಾಲಯವಿದೆ. ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯವನ್ನು ಜಗತ್ಪೀಠ ಬ್ರಹ್ಮ ಮಂದಿರ ಎಂದು ಕರೆಯಲಾಗುತ್ತದೆ. ಈ ದೇವಾಲಯವು ರಾಜಸ್ಥಾನದ ಪುಷ್ಕರ ಸರೋವರದ ದಡದಲ್ಲಿದೆ.ಆದರೆ ಈ ದೇವಾಲಯದಲ್ಲಿ ಬ್ರಹ್ಮನನ್ನು ಪೂಜಿಸಲಾಗುವುದಿಲ್ಲ, ಬದಲಾಗಿ ಇಲ್ಲಿನ ಪುಷ್ಕರ ಸರೋವರವನ್ನು ಪೂಜಿಸಲಾಗುತ್ತದೆ. ಭಕ್ತರು ಬ್ರಹ್ಮನ ದರ್ಶನವನ್ನು ಮಾತ್ರ ಇಲ್ಲಿ ಪಡೆಯುತ್ತಾರೆ.
ಪುಷ್ಕರದಲ್ಲಿನ ಬ್ರಹ್ಮನ ದೇವಾಲಯದ ನಿರ್ಮಾಣದ ಕುರಿತು ಯಾವುದೇ ರೀತಿಯ ಮಾಹಿತಿಯಿಲ್ಲ. ಇತಿಹಾಸದಲ್ಲೂ ಕೂಡ ಈ ದೇವಾಲಯವನ್ನು ಯಾರು ನಿರ್ಮಿಸಿದರೆನ್ನುವ ಉಲ್ಲೇಖವಿಲ್ಲ. ಸುಮಾರು 1200 ವರ್ಷಗಳ ಹಿಂದೆ ಅರ್ಣವ ರಾಜ ವಂಶದ ಆಡಳಿತಗಾರರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಪುಷ್ಕರದಲ್ಲಿ ಕೇವಲ ಬ್ರಹ್ಮನ ದೇವಾಲಯ ಮಾತ್ರವಲ್ಲ, ಸಾವಿತ್ರಿ ದೇವಿಯ ದೇವಾಲಯವು ಕೂಡ ಇದೆ. ಆದರೆ ಸಾವಿತ್ರಿ ದೇವಾಲಯವು ಬ್ರಹ್ಮ ದೇವಾಲಯದ ಪಕ್ಕದಲ್ಲಿಲ್ಲ. ಬದಲಾಗಿ ಬ್ರಹ್ಮ ದೇವನ ದೇವಾಲಯದ ಹಿಂದಿರುವ ಪರ್ವತದಲ್ಲಿ ಸಾವಿತ್ರಿ ದೇವಿಯ ದೇವಾಲಯವನ್ನು ನೋಡಬಹುದಾಗಿದೆ.
Featured Image Credits : Travelling Krishnaite
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2THnXl9
June 09, 2021 at 10:24AM