ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರುವಾಸಿಯಾದ ಮಧ್ಯಪ್ರದೇಶದ ಖಜುರಾಹೊ ದೇವಾಲಯ
Featured Image Credits : Tour My India
ಭಾರತ ದೇಶವನ್ನು ತೀರ್ಥ ಕ್ಷೇತ್ರಗಳ ತವರೂರು ಎಂದೇ ಕರೆಯುತ್ತಾರೆ. ಇಲ್ಲಿ ಪುರಾಣ ಪ್ರಸಿದ್ಧಿಯಾದ ಸಾವಿರಾರು ದೇವಾಲಯಗಳಿವೆ. ದೇವಾಲಯಗಳಲ್ಲಿ ಭಾರತದ ಆಚಾರ-ವಿಚಾರ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯದ್ಭುತ ಕುಸರಿ, ಕೆತ್ತನೆ, ಕಂಬಗಳ ನಿರ್ಮಾಣಗಳಿವೆ. ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಭಾರತೀಯ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶತ ಶತಮಾನಗಳ ರಾಜರ ಕಾಲದ ದೇವಸ್ಥಾನಗಳು ತಮ್ಮ ಶಿಲ್ಪಕಲೆ, ಅದ್ಭುತ ಕೆತ್ತನೆ, ಕುಸುರಿ ಕೆಲಸ, ಸ್ಮಾರಕ, ತಮ್ಮದೇ ಆದ ಪೌರಾಣಿಕ ಹಿನ್ನಲೆಯಿಂದ ಸಾಕಷ್ಟು ಪ್ರಸಿದ್ಧಿ ಹೊಂದಿವೆ. ಹಲವೆಡೆ ರಾಜರ ಕಾಲದ ಐತಿಹಾಸಿಕ ದೇಗುಲಗಳಿದ್ದು, ತಮ್ಮದೇ ಆದ ವಿಭಿನ್ನ ವಾಸ್ತುಶಿಲ್ಪ, ಅದ್ಭುತ ಕೆತ್ತನೆಗಳಿಂದ ಗಮನ ಸೆಳೆಯುತ್ತಿದೆ.
ದೇಶದಲ್ಲಿರುವ ಅಂಥಹದ್ದೇ ಒಂದು ಐತಿಹಾಸಿಕ ದೇವಾಲಯ, ಮಧ್ಯಪ್ರದೇಶದಲ್ಲಿರುವ ಖಜುರಾಹೊ ದೇವಸ್ಥಾನ. ಛತ್ತಪುರ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯಗಳ ಸಮೂಹವನ್ನು ಖಜುರಾಹೊ ದೇವಾಲಯಗಳು ಎಂದು ಕರೆಯಲಾಗುತ್ತದೆ. ಖಜುರಾಹೊ ದೇವಾಲಯವನ್ನು ಕ್ರಿ.ಶ. 950 ಮತ್ತು ಕ್ರಿ.ಶ 1050ರ ನಡುವೆ ಚಂಡೇಲಾ ರಾಜವಂಶದ ಆಡಳಿತಗಾರರು ನಿರ್ಮಿಸಿದರು ಎಂದು ಹೇಳಲಾಗಿದೆ. ಖಜುರಾಹೊ ದೇವಾಲಯಗಳು 85 ಹಿಂದೂ ಮತ್ತು ಜೈನ ದೇವಾಲಯಗಳ ಸಮೂಹವಾಗಿದ್ದು, ಅವುಗಳಲ್ಲಿ ಕೇವಲ 25 ಮಾತ್ರ ಉಳಿದುಕೊಂಡಿವೆ. ಈ ದೇವಾಲಯಗಳು ಸಂಕೀರ್ಣವಾಗಿ ಮತ್ತು ಸುಂದರವಾಗಿ ಅಲಂಕರಿಸಲ್ಪಟ್ಟಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
ಖಜುರಾಹೊ ದೇವಾಲಯವೆಂದು ಯಾಕೆ ಹೆಸರು ಬಂತು..?
Image Credits : Char Dham Yatra
ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಜುರಾಹೊ, ಮಧ್ಯಕಾಲೀನ ಹಿಂದೂ ದೇವಾಲಯಗಳ ಅತಿ ದೊಡ್ಡ ದೇವಾಲಯವೆಂದು ಕರೆಯಲ್ಪಡುತ್ತದೆ. ಖಜುರಾಹೊ ಭಾರತದ ಅದ್ಭುತಗಳಲ್ಲಿ ಒಂದಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿಕೊಂಡಿದೆ. ಐತಿಹಾಸಿಕ ಪುರಾಣಗಳು, ಕಥೆಗಳು, ಕಲಾತ್ಮಕ ಸೃಜನಶೀಲತೆ ಮತ್ತು ವಾಸ್ತುಶಿಲ್ಪದ ಅದ್ಭುತಗಳಿಂದ ಸಮೃದ್ಧವಾಗಿರುವ ಈ ದೇವಾಲಯಗಳು ಪ್ರಾಚೀನ ಭಾರತದ ಕಲೆ ಮತ್ತು ವಾಸ್ತುಶಿಲ್ಪದ ಪ್ರತಿನಿಧಿಸುತ್ತವೆ.
ಒಂದು ಕಾಲದಲ್ಲಿ ಖಜುರಾಹೊ ಚಂಡೇಲಾ ರಜಪೂತರ ರಾಜಧಾನಿಯಾಗಿತ್ತು. 10ನೇಯ ಶತಮಾನದಿ೦ದ 12ನೇಯ ಶತಮಾನದ ವರೆಗೆ ಆಳಿದ ಈ ರಾಜವ೦ಶದ ಅರಸರು, ಖಜುರಾಹೊದ ದೇವಸ್ಥಾನಗಳನ್ನು ಕ್ರಿ.ಶ. 950ರಿಂದ 1050ರ ವರೆಗೆ ಕಟ್ಟಿಸಿದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ ಖಜುರಾಹೊ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ.
ಶೃಂಗಾರಮಯ ಶಿಲ್ಪಕಲೆ ಇಲ್ಲಿನ ವಿಶೇಷತೆ
Image Credits : Viator
ಶೈವ, ವೈಷ್ಣವ ಮತ್ತು ಜೈನ ಧರ್ಮೀಯವಾದ ಈ ಮಂದಿರಗಳು ಆಗಿನ ರಾಜರ ಮತ್ತು ಜನತೆಯ ಸರ್ವಧರ್ಮ ಸಮನ್ವಯ ಭಾವನೆಗಳ ಪ್ರತೀಕಗಳಾಗಿವೆ. ಈ ದೇವಾಲಯದ ವಿಶೇಷತೆಯೆಂದರೆ, ಇಲ್ಲಿನ ಶೃಂಗಾರಮಯ ಶಿಲ್ಪಕಲೆ. ದೇವಾಲಯವು ಸಂಪೂರ್ಣವಾಗಿ ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿದೆ. ಈ ದೇವಾಲಯಗಳನ್ನು ಗಟ್ಟಿಯಾದ ನದಿ ಮರಳುಗಲ್ಲಿನಿಂದ ಕೆತ್ತಲಾಗಿದೆ, ಈ ಗೋಡೆಗಳ ಮುಖ್ಯ ಆಕರ್ಷಣೆಗಳೆಂದರೆ ಕಾಮಪ್ರಚೋದಕ ಕಲೆ.
ಖಜುರಾಹೊ ಶಿಲ್ಪಗಳ ವಿಶೇಷತೆಯೆಂದರೆ, ಇಲ್ಲಿನ ಶಿಲ್ಪಕಲೆಗಳಲ್ಲಿ ಮಾನವನ ಹಲವು ಭಾವನೆಗಳ ಚಿತ್ರಣವಿದೆ. ಮನುಷ್ಯನ ಆಕಳಿಕೆ, ಗೀಚುವುದು, ಪಾದಗಳಿಂದ ಮುಳ್ಳನ್ನು ತೆಗೆಯುವುದು, ಶಿಶುಗಳು ಮತ್ತು ಗಿಳಿಯಂತಹ ಸಾಕುಪ್ರಾಣಿಗಳೊಂದಿಗೆ ಆಟವಾಡುವುದು, ಮೇಕಪ್ ಮಾಡಲು ಕನ್ನಡಿಯನ್ನು ನೋಡುವುದು ಇತ್ಯಾದಿಗಳನ್ನು ಶಿಲ್ಪಕಲೆಗಳ ಮೂಲಕ ಚಿತ್ರಿಸಲಾಗಿದೆ. ಆ ದಿನಗಳಲ್ಲಿ ಮಹಿಳೆಯರ ಶಿಕ್ಷಣ ಮತ್ತು ಮಹಿಳೆಯರು ಕೊಳಲು ಮತ್ತು ವೀಣೆಯನ್ನು ನುಡಿಸುವ ಮತ್ತು ಪತ್ರಗಳನ್ನು ಬರೆಯುವ ಎರಡು ವಿಶೇಷ ಶಿಲ್ಪಗಳಿದ್ದು, ಎಲ್ಲರ ಗಮನ ಸೆಳೆಯುತ್ತದೆ. ಖಜುರಾಹೊ ದೇವಾಲಯಗಳು ಮುಖ್ಯವಾಗಿ ಕಾಮಪ್ರಚೋದಕ ಶಿಲ್ಪಗಳು ಮತ್ತು ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯದಲ್ಲಿ ಇದೇ ರೀತಿಯ ಶಿಲ್ಪಗಳಿವೆ. ಕುತೂಹಲಕಾರಿಯಾಗಿ ಈ ಶಿಲ್ಪಗಳು ಅವುಗಳ ಅಸ್ತಿತ್ವಕ್ಕೆ ಅನೇಕ ಸಿದ್ಧಾಂತಗಳನ್ನು ಹೊಂದಿವೆ.
ಖಜುರಾಹೊ ದೇವಾಲಯಗಳು ನಾಗರಾ ಶೈಲಿಯ ವಾಸ್ತುಶಿಲ್ಪದ ವಿನ್ಯಾಸ ಸಂವೇದನೆಗಳನ್ನು ನಿರ್ಮಿಸಲ್ಪಟ್ಟಿದೆ.ಅಲ್ಲದೆ, ಮರಳುಗಲ್ಲು ಮತ್ತು ಗ್ರಾನೈಟ್ನಿಂದ ಮಾಡಲ್ಪಟ್ಟಿದೆ. ಚತುರ್ಭುಜ ದೇವಾಲಯವನ್ನು ಹೊರತುಪಡಿಸಿ ಎಲ್ಲಾ ದೇವಾಲಯಗಳು ಸೂರ್ಯನಿಗೆ ಮುಖಮಾಡಿದ್ದು, ಹಿಂದೂ ದೇವಾಲಯಗಳಲ್ಲಿ ಕಂಡುಬರುವ ಸಾಮಾನ್ಯ ಸೌಂದರ್ಯವನ್ನು ಕಾಣಬಹುದು. ಗಂಡು ಮತ್ತು ಹೆಣ್ಣು ದೇವತೆಗಳು ಗಂಡು ಮತ್ತು ಹೆಣ್ಣು ಶಕ್ತಿಯ ಸಹ-ಅವಲಂಬನೆಯನ್ನು ಪ್ರದರ್ಶಿಸುತ್ತವೆ.
ಸಣ್ಣವಾದರೂ ಸುಂದರವಾಗಿರುವ ಈ ಮಂದಿರಗಳು ಸ್ವಯಂಪೂರ್ಣವಾದ ಉತ್ತಮ ವಾಸ್ತುಕೃತಿಗಳಾಗಿವೆ. ಎತ್ತರವಾದ ಪ್ರದೇಶದ ಮೇಲೆ ತಳಭಾಗದ ಅಂತಸ್ತು, ಗೋಡೆಗಳು, ಬಾಗಿಲು ಕಿಟಕಿಗಳು, ಮೇಲ್ಭಾಗದ ಉನ್ನತವಾದ ಶಿಖರಗಳು ಈ ದೇವಾಲಯಗಳ ಮುಖ್ಯ ಅಂಗಗಳಾಗಿವೆ. ಹೊರಗೋಡೆಗಳ ಮೇಲಿನ ಅಂಕಣ, ಕೆತ್ತನೆಗಳು, ಕಟ್ಟಡಗಳ ಭವ್ಯತೆಯನ್ನು ಹೆಚ್ಚಿಸುತ್ತವೆ. ಖಜುರಾಹೊ ದೇವಾಲಯಗಳ ಶಿಖರಗಳು ಬಹಳ ಸುಂದರವಾಗಿವೆ; ಕಟ್ಟಡದ ಎಲ್ಲ ಭಾಗಗಳಿಗೂ ಕೇಂದ್ರಬಿಂದುಗಳಾಗಿವೆ. ಕೇಂದ್ರಶಿಖರದ ಸುತ್ತ ಇರುವ ಸಣ್ಣಸಣ್ಣ ಶಿಖರಗಳು ಅದರ ಭವ್ಯತೆಯನ್ನು ಹೆಚ್ಚಿಸಿವೆ.
ದೇವಾಲಯದ ಎಡಪಾರ್ಶ್ವದಲ್ಲಿ ಮಹಾಮಂಟಪ ಮತ್ತು ಗರ್ಭಗೃಹದ ಸುತ್ತ ಪ್ರದಕ್ಷಿಣ ಮಾರ್ಗವಿದೆ. ದೇವಾಲಯದ ಒಳಭಾಗದಲ್ಲೂ ಅನೇಕ ಶಿಲ್ಪಗಳು ಅದರ ಅಂದವನ್ನು ಹೆಚ್ಚಿಸುತ್ತವೆ. ಆ ಶಿಲ್ಪಗಳಲ್ಲಿ ಕುಬ್ಜ ಸುಂದರ ಸ್ತ್ರೀ ವಿಗ್ರಹಗಳು ಗಮನಾರ್ಹವಾಗಿವೆ. ಅದರಲ್ಲೂ ಸೂರುಗಳಲ್ಲಿರುವ ವಿಗ್ರಹಗಳು ಮತ್ತು ಕುಸುರಿ ಕೆಲಸ ಕಲಾ ಐಸಿರಿಯ, ಕಲೆಗಾರನ ಮಹೋನ್ನತೆಯ ಸಾಕ್ಷಿಗಳಾಗಿವೆ. ವೃತ್ತ, ಅರ್ಧವೃತ್ತ ಮತ್ತು ರೇಖಾವಿನ್ಯಾಸಗಳಿಂದ ಅತ್ಯಂತ ನಯನಮನೋಹರವಾದ ಶಿಲ್ಪಗಳನ್ನು ಕಲ್ಲಿನಲ್ಲಿ ಬಿಡಿಸಲಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3ipkOAU
June 09, 2021 at 12:15PM