ಸಪ್ತ ಪಾತಾಳಗಳು ಎಂದರೇನು..? ಅತಳ, ಸುತಳ
ಪಾತಾಳಗಳು ಇರುವುದು ಎಲ್ಲಿ..?
Image Credits : Facebook
ಪುರಾಣ ಮತ್ತು ಶಾಸ್ತ್ರಗಳಲ್ಲಿ ಏಳು ಎಂಬ ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ. ಜಾನಪದದಲ್ಲಿ ಇದು ಪ್ರೇರಣೆಯ ಅಂಕಿ. ಪೃಥು ಮಹಾರಾಜನು ಈ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದನಂತೆ. ಏಳು ವರ್ಷ, ಏಳು ದಿನ, ಏಳು ತಿಂಗಳು, ಏಳು ಬಣ್ಣ, ಏಳು ಸಮುದ್ರ, ಸಪ್ತ ಋಷಿಗಳು, ಸಪ್ತ ಮಾತೃಕೆಯರು, ಸಪ್ತಪದಿ, ಸಪ್ತಸ್ವರ, ಏಳುಮಲೆ, ಎಪ್ಪತ್ತೇಳು ಮಲೆ, ಏಳು ಕುಂಡಲವಾಡ, ಏಳೇಳು ಜನ್ಮ, ಏಳುಮಲ್ಲಿಗೆ ತೂಕದ ರಾಜಕುಮಾರಿ ಹೀಗೆ ಏಳು ಎಂಬ ಸಂಖ್ಯೆ ಮಹತ್ತರವಾದುದಾಗಿದೆ.
ಜನಪದರ ದೃಷ್ಠಿಯಲ್ಲಿ ಕಷ್ಟ-ಸುಖಗಳು ಬದುಕಿನ ಏಳು-ಬೀಳುಗಳಿದ್ದ ಹಾಗೆ. ಏಳು ಎಂಬ ಸಂಖ್ಯೆ ಅಪಶಕುನಕಾರಿ ಸಂಖ್ಯೆ. ಏಳೇಳು ಜನ್ಮದ ಕಷ್ಟ, ಏಳು ವನವಾಸ, ಏಳು ರಾಹುವಿನ ಸಂಖ್ಯೆ, ಏಳು ಎಂಬ ಪದವನ್ನು ಮನೆಯೊಳಗೆ ಉಚ್ಚರಿಸಬಾರದು ಎಂದು ಹೇಳುತ್ತಾರೆ. ಏಳು ಎಂಬ ಸಂಖ್ಯೆಯೊಂದಿಗೆ ಹಲವಾರು ನಂಟುಗಳಿರುವಂತೆಯೇ, ಏಳು ಪಾತಾಳಗಳು ಸಹ ಗುರುತಿಸಿಕೊಂಡಿವೆ. ಇಷ್ಟಕ್ಕೂ ಪಾತಾಳ ಎಂದರೇನು..? ಭೂಮಿಯ ಕೆಳಗಿರುವ ಒಂದು ಭಾಗಾನಾ..? ಇಲ್ಲ ಇದೊಂದು ಪ್ರತ್ಯೇಕ ಪ್ರಾಂತ್ಯಾನಾ ಹೀಗೊಂದು ಅನುಮಾನ ಹಲವರನ್ನು ಕಾಡುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇದನ್ನು ಓದಿ : ಬ್ರಹ್ಮನನ್ನು ಯಾಕೆ ಪೂಜಿಸುವುದಿಲ್ಲ ಗೊತ್ತಾ..? ಇಲ್ಲಿದೆ ನೀವು ತಿಳಿದಿರದ ಅಚ್ಚರಿಯ ಮಾಹಿತಿ
ಪಾತಾಳ ಎಂದರೇನು..?
Image Credits : Native Planet
ಭಾರತೀಯ ಧರ್ಮಗಳಲ್ಲಿ, ಪಾತಾಳ ಬ್ರಹ್ಮಾಂಡದ ನೆಲದಡಿಯ ಪ್ರಾಂತ್ಯಗಳು ಎಂದು ಹೇಳಲಾಗುತ್ತದೆ. ಅಂದರೆ ಭೂಮಿಯ ಕೆಳಗಿರುವ ಪ್ರದೇಶವನ್ನು ಪಾತಾಳ ಲೋಕ ಎನ್ನುತ್ತಾರೆ. ವಿಶ್ವ ವಿಜ್ಞಾನದಲ್ಲಿ, ಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಭಜಿಸಲಾಗುತ್ತದೆ: ಸ್ವರ್ಗ (ಮೇಲಿನ ಪ್ರದೇಶಗಳು), ಪೃಥ್ವಿ (ಭೂಮಿ) ಮತ್ತು ಪಾತಾಳ. ಪಾತಾಳವು ಏಳು ಪ್ರದೇಶಗಳು ಅಥವಾ ಲೋಕಗಳಿಂದ ಕೂಡಿದೆ, ಅವುಗಳಲ್ಲಿ ಏಳನೇಯ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ. ದಾನವರು, ದೈತ್ಯರು, ಯಕ್ಷರು ಮತ್ತು ನಾಗರು ಪಾತಾಳ ಪ್ರದೇಶಗಳಲ್ಲಿ ಇರುತ್ತಾರೆ ಎಂದು ಹೇಳಲಾಗುತ್ತದೆ.
ವಿಷ್ಣು ಪುರಾಣದಲ್ಲಿ ನಾರದರು ಪಾತಾಳವನ್ನು ಸ್ವರ್ಗಕ್ಕಿಂತ ಸುಂದರವೆಂದು ವರ್ಣಿಸುತ್ತಾರೆ. ಅದ್ಭುತ ಆಭರಣಗಳು, ಸುಂದರ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರ ಅಸುರ ಕನ್ಯೆಯರಿಂದ ತುಂಬಿದ್ದು, ಎಂದು ಪಾತಾಳವನ್ನು ವರ್ಣಿಸಲಾಗಿದೆ. ಇಲ್ಲಿನ ಮಣ್ಣು ಬಿಳಿ, ಕಪ್ಪು, ಕೆನ್ನೀಲಿ, ಮರಳಿನಂತೆ, ಹಳದಿ, ಕಲ್ಲಿನಿಂದ ಕೂಡಿದೆ ಮತ್ತು ಚಿನ್ನವನ್ನು ಹೊಂದಿದೆ ಎಂದು ಹೇಳುತ್ತಾರೆ.
ಸಪ್ತಪಾತಾಳಗಳು ಎಲ್ಲಿವೆ..?
Image Credits : Native Planet
ಭಾಗವತ ಪುರಾಣವು ಏಳು ಕೆಳಗಿನ ಲೋಕಗಳನ್ನು ಭೂಮಿಯ ಕೆಳಗಿನ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸುತ್ತದೆ. ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ. ಭಾಗವತ ಪುರಾಣದಲ್ಲಿ ವಿವರಿಸಲಾದ ಕೆಳಗಿನ ಏಳು ಲೋಕಗಳೆಂದರೆ: ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಮತ್ತು ಪಾತಾಳ.
ಖಗೋಳಶಾಸ್ತ್ರದ ಸೂರ್ಯ ಸಿದ್ಧಾಂತವು, ದಕ್ಷಿಣ ಗೋಲಾರ್ಧವನ್ನು ಪಾತಾಳವೆಂದು ಮತ್ತು ಉತ್ತರ ಗೋಲಾರ್ಧವನ್ನು ಜಂಬೂದ್ವೀಪವೆಂದು ಸೂಚಿಸುತ್ತದೆ.
ಇದನ್ನು ಓದಿ : ಶತ್ರುಗಳಿಂದ ಮುಕ್ತಿ ಕೊಡುವ ಮದ್ಯಪಾನಪ್ರಿಯ ಕಾಲಭೈರವ
ಬಲಿಚಕ್ರವರ್ತಿ ಮತ್ತು ಅತಳ, ಸುತಳ, ಪಾತಾಳ ಲೋಕ
Image Credits : Oneindia Telugu
ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆ ಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ, ಎಂದು ಅದನ್ನೇ ಕರೆಯಲಾಗುತ್ತದೆ ಎಂದು ತಿಳಿಸಲಾಗಿದೆ. ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಬಲಿ ಚಕ್ರವರ್ತಿಯು ಆಳ್ವಿಕೆಯಲ್ಲಿತ್ತು. ಬಲಿ ಉತ್ತಮ ರಾಜನಾಗಿದ್ದರೂ ದೇವತೆಗಳ ವಿರೋಧಿಯಾಗಿ ಬೆಳೆಯತ್ತಿದ್ದ. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳು ಕಾಪಾಡುವಂತೆ ಮಹಾವಿಷ್ಣುವಿಗೆ ಮೊರೆಯಿಟ್ಟರು.
ವಿಷ್ಣು ವಾಮನಾವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. ಹಾಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ ಎಂದು ಹೇಳಲಾಗಿದೆ.
ಇದನ್ನು ಓದಿ : ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಗೊತ್ತಿಲ್ಲದ 8 ವಿಷಯಗಳು!
ವಿಷ್ಣು, ಬಲಿಯ ಚಲನವಲನಗಳ ಮಾಹಿತಿ ಪಡೆಯಲು ಅಸುರರು, ದೈತ್ಯರು,ದಾನವರನ್ನು ಕಳುಹಿಸಿದರು. ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು ಎಂದರೆ ಸುತಲ ಸಮುದ್ರಮಾರ್ಗದಲ್ಲಿ ಕಳುಹಿಸಿದ ಎಂದು ಹೇಳಲಾಗಿದೆ. ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ. ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ ಎಂದು ಹೇಳಲಾಗುತ್ತದೆ.
ಬಲಿಯ ಆಪ್ತ ಮಯ ಶ್ರೇಷ್ಠ ವಾಸ್ತುಶಿಲ್ಪಿ ಮಾಯನ್ಸ್, ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳನ್ನು ಹಲವು ಪ್ರದೇಶಗಳಲ್ಲಿ ಈಗಲೂ ನೋಡಬಹುದು ಎಂದು ಹೇಳುತ್ತಾರೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/2U1shMw
June 23, 2021 at 07:28PM