ಬೆಳಗ್ಗೆ ತಡವಾಗಿ ಎದ್ದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಗೊತ್ತಾ..?
Featured Image Credits : Timesheets.com
ನಿದ್ದೆ ಅನ್ನೋದು ಆರೋಗ್ಯಕ್ಕೆ ಬಹುಮುಖ್ಯ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಮನುಷ್ಯನ ಆರೋಗ್ಯಕ್ಕೆ ನಿದ್ದೆ ಅತೀ ಅಗತ್ಯ. ನಿದ್ದೆ ಸರಿಯಾಗಿ ಆಗದಿದ್ದರೆ ತಲೆನೋವು, ಮೈ ಕೈ ನೋವು ಸೇರಿ ಹಲವು ರೀತಿಯ ಅನಾರೋಗ್ಯಗಳು ಕಾಡುತ್ತವೆ. ಪ್ರತಿಯೊಬ್ಬರು ದಿನಕ್ಕೆ 7ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ವೈದ್ಯಕೀಯ ಅಧ್ಯಯನದಲ್ಲಿ ಹೇಳಲಾಗುತ್ತದೆ. ಹೀಗಾಗಿಯೇ ನಿದ್ರಾಹೀನತೆ ದೇಹದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆ ಕಂಡುಬಂದರೆ ದಿನದ ಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರುವುದು.
ಆದರೆ ನಿದ್ರಿಸುವ ಸಮಯ ಕೂಡಾ ಬಹಳ ಮುಖ್ಯ. ಕೆಲವೊಬ್ಬರು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಢಿ ಮಾಡಿಕೊಂಡಿರುತ್ತಾರೆ. ಇದು ಆರೋಗ್ಯಕರ ಅಭ್ಯಾಸ. ಆದರೆ, ಇನ್ನು ಕೆಲವರು ಹಾಗಲ್ಲ, ರಾತ್ರಿ ಬಹಳ ಹೊತ್ತು ಎಚ್ಚರವಿದ್ದು ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ನಿಮಗೆ ಗೊತ್ತಾ, ಈ ರೀತಿ ತಡವಾಗಿ ಏಳುವುದರಿಂದ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ನೀವು ಬೆಳಿಗ್ಗೆ 8 ಗಂಟೆ ಮೇಲೆ ಏಳುತ್ತಿರಾ ಎಂದಾದರೆ ಮುಂದಿನ ದಿನಗಳಲ್ಲಿ ಗಂಭೀರ ಕಾಯಿಲೆ ಬೀಳೋದು ಪಕ್ಕಾ. ತಡವಾಗಿ ಏಳುವವರನ್ನು ಹಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. 8 ಗಂಟೆಯ ಮೇಲೆ ನಿದ್ರಿಸುವುದರಿಂದ ತೂಕ ಹೆಚ್ಚಾಗುವುದು, ಹೃದಯ ಸಂಬಂಧಿತ ಸಮಸ್ಯೆ, ಒತ್ತಡ, ಸೋಮಾರಿತನ ಮೊದಲಾದ ಸಮಸ್ಯೆಗಳು ಕಾಡತೊಡಗುತ್ತವೆ. ಸಮಯಕ್ಕೆ ಸರಿಯಾಗಿ ಮಲಗುವುದರಿಂದ ಮತ್ತು ಏಳುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಅದೇ ಹೆಚ್ಚು ನಿದ್ರೆ ಮಾಡುವುದರಿಂದ ಅನಾರೋಗ್ಯಗಳು ಆವರಿಸಿಕೊಳ್ಳುತ್ತವೆ.
Image Credits : Everyday Health
ದೀರ್ಘಕಾಲ ಮಲಗುವುದು ಹೃದಯದ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅಧ್ಯಯನವೊಂದರ ವರದಿಯ ಪ್ರಕಾರ, ದೀರ್ಘಕಾಲದ ನಿದ್ರೆ ಹೃದಯದಲ್ಲಿ ಎಡ ಕುಹರದ ತೂಕವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ತಡವಾಗಿ ಮಲಗುವುದರಿಂದ ಪಾರ್ಶ್ವವಾಯು ಬರುವ ಅಪಾಯವು ಶೇಕಡಾ 46ರಷ್ಟು ಜಾಸ್ತಿ ಎಂದು ಹೇಳಲಾಗುತ್ತದೆ.
ಇದನ್ನು ಓದಿ : ಬೆಳಗ್ಗೆದ್ದು ಹೀಗೆ ಮಾಡಲೇಬೇಡಿ..ನಿಮ್ಮ ದಿನ ಹಾಳು ಮಾಡೋ ಅಭ್ಯಾಸಗಳಿವು..!
ಹೆಚ್ಚು ಕಾಲ ನಿದ್ದೆ ಮಾಡುವುದು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ನಿದ್ದೆ ಹೆಚ್ಚಾಗುವುದರಿಂದಲೂ ದಿನಪೂರ್ತಿ ತಲೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ನಿದ್ರೆಯಿಂದಾಗಿ ಮೈಗ್ರೇನ್ ಬರುವ ಸಾಧ್ಯತೆಯೂ ಹೆಚ್ಚಿದೆ. ಆದ್ದರಿಂದ ಹಗಲಿನಲ್ಲಿ ಕಿರು ನಿದ್ದೆ ಮಾಡುವ ಅಭ್ಯಾಸವನ್ನು ಬಿಡಿ. ರಾತ್ರಿಯಲ್ಲಿ 8 ಗಂಟೆಗಳ ನಿದ್ರೆ ಮಾಡಲು ಪ್ರಯತ್ನಿಸಿ.
ದೀರ್ಘಕಾಲ ನಿದ್ರಿಸುತ್ತಿದ್ದರೆ ಆ ಸಮಯದಲ್ಲಿ ದೈಹಿಕವಾಗಿ ನಿಷ್ಕ್ರಿಯರಾಗುತ್ತೀರಿ. ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಹೀಗಾಗಿ ದೀರ್ಘಕಾಲ ನಿದ್ರೆ ಮಾಡುವುದರಿಂದ ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಶುರುವಾಗುತ್ತದೆ. ಕಡಿಮೆ ದೈಹಿಕ ಚಟುವಟಿಕೆ ಎಂದರೆ ನಿಮ್ಮ ದೇಹವು ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಸಾಧ್ಯವಾಗುತ್ತದೆ, ಅದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ, ದೀರ್ಘಕಾಲ ನಿದ್ರೆ ಮಾಡುವುದರಿಂದ ಭವಿಷ್ಯದಲ್ಲಿ ತೂಕ ಹೆಚ್ಚಾಗುವುದರ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಅಧಿಕ ರಕ್ತದ ಸಕ್ಕರೆಯ ಸಮಸ್ಯೆ ಸಹ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
Image Credits : news.psu.edu
ಅತಿಯಾದ ನಿದ್ದೆ ಖಿನ್ನತೆಗೂ ಕಾರಣವಾಗಬಹುದು. ತಜ್ಞರ ಪ್ರಕಾರ, ನಿದ್ರೆ ಮೆದುಳಿನಲ್ಲಿನ ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘ ನಿದ್ರೆ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ, ಆದರೆ ನರಪ್ರೇಕ್ಷಕ ಮಟ್ಟವನ್ನು ಹೆಚ್ಚಿಸಲು ಹೆಚ್ಚಿನ ದೈಹಿಕ ಚಟುವಟಿಕೆಯು ಮುಖ್ಯವಾಗಿದೆ. ತಡವಾಗಿ ಏಳುವವರಿಗೆ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಇದನ್ನು ಓದಿ : ಯೋಗ ಮಾಡಲು ಯಾವ ಸಮಯ ಹೆಚ್ಚು ಸೂಕ್ತ ಮತ್ತು ಯಾಕೆ..?
ಇನ್ನು 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಿದರೆ, ದಿನವಿಡೀ ಆಲಸೀತನ ಕಾಣಿಸಿಕೊಳ್ಳುತ್ತದೆ. ದಿನವಿಡೀ ಸೋಮಾರಿತನ, ಆಲಸ್ಯ, ಮನಸ್ಥಿತಿ ಹದಗೆಡುವುದು, ತಲೆನೋವು, ಬೆನ್ನುನೋವು ಮತ್ತು ಎಲ್ಲಾ ಸಮಯದಲ್ಲೂ ಸುಸ್ತಾದಂತೆ ಅನುಭವವಾಗುತ್ತದೆ. ಇದರಿಂದ ಕೆಲಸದ ಕಾರ್ಯಕ್ಷಮತೆಯೂ ಸಹಜವಾಗಿಯೇ ಕಡಿಮೆಯಾಗುತ್ತದೆ. ಹೀಗಾಗಿ ಸರಿಯಾದ ಸಮಯದಲ್ಲಿ ಸಮರ್ಪಕ ಅವಧಿಯಷ್ಟು ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಿ.
Image Credits : cw39.com
ಸೂರ್ಯ ಮೂಡುವುದರೊಳಗೆ ನಾವು ಏಳಬೇಕು ಎಂದು ಹಿರಿಯರು ಹೇಳುತ್ತಾರೆ. ಇದು ಕೇವಲ ಧಾರ್ಮಿಕ ವಿಚಾರವಷ್ಟೇ ಅಲ್ಲ. ಇದರ ಹಿಂದೆ ದೈಹಿಕ, ಮಾನಸಿಕ ಹಾಗೂ ವೈಜ್ಞಾನಿಕ ಕಾರಣಗಳೂ ಇವೆ. ಬೇಗ ಮಲಗಿ ಬೇಗ ಏಳುವುದರಿಂದ ದೈಹಿಕ ಚಕ್ರ ಸರಿಯಾಗಿರುತ್ತದೆ. ದೇಹಕ್ಕೆ ಬೇಕಾದಷ್ಟು ನಿದ್ದೆ ಸಿಗುತ್ತದೆ. ದಿನವಿಡೀ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ
ಮುಂಜಾನೆ ತಡವಾಗಿ ಏಳುವುದು ಹೇಗೆ ಆರೋಗ್ಯಕ್ಕೆ ಹಾನಿಕಾರವೋ ಹಾಗೆಯೇ ಮಧ್ಯಾಹ್ನದ ನಿದ್ರೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ರೀತಿಯ ಜಡ ಹಾಗೂ ಆಲಸ್ಯದ ಭಾವನೆ ಉಂಟಾಗುತ್ತದೆ. ಇದು ನಮ್ಮ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸುತ್ತದೆ. ಹೀಗಾಗಿ ರಾತ್ರಿ 10ರಿಂದ 11ರ ಒಳಗೆ ಮಲಗಲು ಪ್ರಯತ್ನಿಸಿ ಮತ್ತು ಬೆಳಿಗ್ಗೆ 7 ರಿಂದ 8 ಗಂಟೆ ಒಳಗೆ ಏಳುವುದು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಒಳ್ಳೆಯದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3j3wsSn
June 23, 2021 at 11:24AM