Image Source : Myers Detox
ಕೊರೋನಾ ಸೋಂಕು ಆರಂಭವಾದಾಗಿನಿಂದ ಲಾಕ್ ಡೌನ್ ಸಮಯದಲ್ಲಿ ಜನರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಆದಷ್ಟು ಎಲ್ಲಾ ವಸ್ತುಗಳನ್ನು ಮನೆಯಲ್ಲೇ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ, ಆರಂಭದಲ್ಲಿ ಹೊರಗೆ ತಿನ್ನುತ್ತಿದ್ದ ಫುಡ್ ಗಳನ್ನೆಲ್ಲಾ ಮನೆಯಲ್ಲೇ ತಯಾರಿಸಲು ಆರಂಭಿಸಿದ್ದಾರೆ. ಪಾನೀಪುರಿ, ಮಸಾಲ್ ಪುರಿ, ಕೇಕ್ ಗಳು ಮನೆಯಲ್ಲೇ ಸಿದ್ಧಗೊಳ್ಳುತ್ತಿದೆ. ಕೊರೋನಾ ನಮ್ಮೊಳಗಿನ ಸೃಜನಶೀಲತೆಯನ್ನು ಜಾಗೃತಗೊಳಿಸಿದೆ. ಆಫೀಸ್ ಕೆಲಸವೂ ಮನೆಗೇ ಶಿಫ್ಟ್ ಆದ ಕಾರಣ ಸಾಕಷ್ಟು ಸಮಯ ಸಿಗುತ್ತದೆ. ಹೀಗಾಗಿ ಲಾಕ್ ಡೌನ್ ಸಮಯದಲ್ಲಿ ಹಲವರು ಹೊಸ ಹೊಸ ಎಕ್ಸ್ ಪರಿಮೆಂಟ್ ಮಾಡುತ್ತಲೇ ಇದ್ದಾರೆ.
ಈ ಸಮಯವನ್ನು ಕಳೆಯಲು ಅನೇಕರು ತಮ್ಮ ಹಳೆಯ ಹವ್ಯಾಸಗಳಿಗೆ ಮರುಜೀವ ನೀಡುತ್ತಿದ್ದರೆ, ಮತ್ತೆ ಕೆಲವರು ಹೊಸ ವಿಷಯಗಳನ್ನು ಕಲಿಯುವತ್ತ ಆಸಕ್ತಿ ವಹಿಸುತ್ತಿದ್ದಾರೆ. ಕೆಲವರು ಮನೆಯ ಇಂಟೀರಿಯರ್ ಬದಲಾಯಿಸುತ್ತಾ ಕ್ರಿಯಾಶೀಲರಾಗಿದ್ರೆ, ಇನ್ನೂ ಕೆಲವರು ಸೆಲ್ಫ್ ಕೇರ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇನ್ನು ಅಡುಗೆಮನೆ ಕಡೆಗೆ ತಲೆ ಹಾಕದವರು ಕೂಡ ಹೊಸ ರೆಸಿಪಿಗಳನ್ನು ಟ್ರೈ ಮಾಡಿ ರುಚಿ ನೋಡುತ್ತಿದ್ದಾರೆ.
ಲಾಕ್ ಡೌನ್ ಶುರುವಾದಾಗಿನಿಂದ ಮಾಸ್ಕ್ ಕಡ್ಡಾಯವಾದಾಗಿನಿಂದ ಹೆಣ್ಣುಮಕ್ಕಳು ಬ್ಯೂಟಿ ಬಗ್ಗೆ ತಲೆಕೆಡಿಸಿಕೊಳ್ಳುವುದು ಸ್ಪಲ್ಪಮಟ್ಟಿಗೆ ಕಡಿಮೆ ಆಗಿದೆ. ಮಾಸ್ಕ್ ಧರಿಸಿದಾಗ ಮುಖದ ಸೌಂದರ್ಯ ಕಾಣುವುದಿಲ್ಲ ಅನ್ನೋದು ಒಂದು ಕಾರಣವಾದರೆ, ಬ್ಯೂಟಿ ಪಾರ್ಲರ್ ಗಳು ಓಪನ್ ಇಲ್ಲದಿರುವುದು ಇನ್ನೊಂದು ಕಾರಣ. ಹೀಗಿದ್ದೂ ಮನೆಯಲ್ಲೇ ಇದ್ದು ಬೇಜಾರು ಬರುತ್ತಿರುವುದರಿಂದ ಹಲವರು ಹೈಬ್ರೋ ಶೇಪ್, ಮೆನಿಕ್ಯೂರ್, ಪೆಡಿಕ್ಯೂರ್ ಸ್ವತಃ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇದನ್ನು ಓದಿ : ಉಗುರುಗಳ ಮೇಲೆ ಮೂಡುವ ಅರ್ಧ ಚಂದ್ರಾಕೃತಿಯ ಬಿಳಿಯ ಬಣ್ಣ ಏನನ್ನು ಸೂಚಿಸುತ್ತದೆ..?
ಇವತ್ತಿನ ದಿನದಲ್ಲಿ ಎಲ್ಲಾ ಮೇಕಪ್ ಸಾಧನಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆಯಾದರೂ ಅವೆಲ್ಲಾ ಆರ್ಟಿಫಿಶಿಯಲ್ ಆಗಿ ತಯಾರಿಸಿರುವಂತದ್ದು. ಆದರೆ ಈ ಎಲ್ಲಾ ಸೌಂದರ್ಯ ಸಾಧನಗಳು ಒಂದಾನೊಂದು ಕಾಲದಲ್ಲಿ ನೈಸರ್ಗಿಕವಾಗಿ ತಯಾರಿಸಲಾಗುತ್ತಿತ್ತು ಅನ್ನೋದು ಅಪ್ಪಟ ಸತ್ಯ. ಹೀಗಾಗಿಯೇ ಆರ್ಯುವೇದದಲ್ಲಿ ಬಳಕೆಯಲ್ಲಿರುವ ಚಂದನ, ಅರಿಶಿನ, ಅಲೋವೆರಾ, ಮೆಹಂದಿ, ಜೇನು ಇವೆಲ್ಲವನ್ನೂ ಇಂದಿಗೂ ಸೌಂದರ್ಯ ಸಾಧನಗಳಲ್ಲಿ ಬಳಸಿಕೊಳ್ಳಲಾಗುತ್ತದೆ.
ಉಗುರಿನ ಸೌಂದರ್ಯಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಲಾಕ್ ಡೌನ್ ಸಮಯದಲ್ಲಿ ನೈಲ್ ಪಾಲೀಶ್ ಖರೀದಿಸಲು ಮನೆಯಿಂದ ಹೊರ ಹೋಗುವುದಂತೂ ದೂರದ ಮಾತು, ಹೀಗಾಗಿ ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದ ಉಗುರಿನ ಬಣ್ಣ ಸಿದ್ಧಪಡಿಸಲು ಹಲವಾರು ಮಂದಿ ಪ್ರಯತ್ನ ಮಾಡಿದ್ದಾರೆ. ಹಾಗಾದರೆ ನೈಸರ್ಗಿಕವಾಗಿ ನೈಲ್ ಪಾಲಿಶ್ ತಯಾರಿಸುವುದು ಹೇಗೆ ನೋಡೋಣ..
ಬೇಕಾದ ಸಾಮಗ್ರಿಗಳು
ಮೆಹಂದಿ ಪೌಡರ್- 2 ಟೇಬಲ್ ಸ್ಪೂನ್
ಬೆಲ್ಲ-50ಗ್ರಾಂ
ಲವಂಗ-20ಗ್ರಾಂ
ಮಾಡುವ ವಿಧಾನ
ಮೊದಲು ಬೆಲ್ಲವನ್ನು ಪುಡಿ ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಇದಕ್ಕೆ ಸ್ಪಲ್ಪ ಲವಂಗವನ್ನು ಸೇರಿಸಿಕೊಳ್ಳಬೇಕು. ನಂತರ ಸ್ಟೌವ್ ಆನ್ ಮಾಡಿ ದೋಸೆ ಹಂಚನ್ನಿಡಬೇಕು. ಅದರ ಮೇಲೆ ಬೆಲ್ಲ ಹಾಗೂ ಲವಂಗವಿರುವ ಪಾತ್ರೆಯನ್ನಿಟ್ಟು ಪ್ಲೇಟ್ನಿಂದ ಮುಚ್ಚಿಡಬೇಕು.
ಇದನ್ನು ಓದಿ : ಲಿಪ್ ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್ಗಳನ್ನು ಮಾಡಬೇಡಿ
10 ನಿಮಿಷಗಳ ಬಳಿಕ ಬೌಲ್ನಿಂದ ಹಬೆ ಹೊರಗೆ ಬರುತ್ತಿರೋದು ಕಾಣಿಸುತ್ತದೆ.ಇದು ಬೆಲ್ಲ ಕರಗಿ ನೀರಾಗಿರೋದರ ಸೂಚನೆ. ಈಗ ಬೌಲ್ ಅನ್ನು ಸ್ಟೌವ್ನಿಂದ ಕೆಳಗಿಳಿಸಿ. ಈಗ ಕರಗಿರುವ ಬೆಲ್ಲದ ಪಾಕಕ್ಕೆ ಮೆಹಂದಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ತಣ್ಣಗಾಗಲು ಬಿಡಬೇಕು. ಅರ್ಧಗಂಟೆ ಕಳೆದ ಬಳಿಕ ಇದನ್ನು ಉಗುರುಗಳಿಗೆ ಹಚ್ಚಿಕೊಳ್ಳಬಹುದು. ದೀರ್ಘಕಾಲದ ತನಕ ಈ ನೇಲ್ ಕಲರ್ ನಿಮ್ಮ ಉಗುರುಗಳಲ್ಲಿ ಉಳಿಯುತ್ತದೆ.
ಕೆಮಿಕಲ್ ಯುಕ್ತ ಸೌಂದರ್ಯ ಸಾಧನಗಳನ್ನು ಬಳಸಲು ಇಷ್ಟವಿಲ್ಲದವರು ಈ ರೀತಿ ಮನೆಯಲ್ಲೇ ಸಿದ್ಧಪಡಿಸಿದ ಬಣ್ಣದುಗುರನ್ನು ಬಳಸಿಕೊಳ್ಳಬಹುದು. ಮಾಡುವ ವಿಧಾನ ಸ್ಪಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದಾದರೂ ಸುಲಭವಾಗಿ ಇದನ್ನು ತಯಾರಿಸಬಹುದು. ನೈಸರ್ಗಿಕ ಉಗುರಿನ ಬಣ್ಣಗಳಿಂದ ಉಗುರಿನ ಆರೋಗ್ಯವನ್ನು ಸಹ ಕಾಪಾಡಬಹುದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/3fqaVQZ
August 03, 2021 at 01:02PM