ಹಾಲಿನ ಜತೆ ಈ ಆಹಾರಗಳನ್ನು
ಸೇವಿಸಲೇಬಾರದು..!
Featured Image Credits : istock
ಹಾಲು ಆರೋಗ್ಯಕರ ಪೇಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಲು ಆರೋಗ್ಯಕ್ಕೆ ಅತ್ಯುತ್ತಮ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಲಿನಲ್ಲಿ ಹಲವಾರು ಪೋಷಕಾಂಶಗಳಿವೆ ಹಾಗೂ ನಿತ್ಯದ ಆರೋಗ್ಯ ಹಾಗೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಿರುವ ಕ್ಯಾಲ್ಸಿಯಂ ಹಾಗೂ ಶಕ್ತಿಗಾಗಿ ಪ್ರೋಟೀನ್ ಮೊದಲಾದ ಪ್ರಮುಖ ಅಂಶಗಳಿವೆ. ಈ ಕಾರಣದಿಂದಾಗಿಯಾದರೂ ಹಾಲನ್ನು ತಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವಂತೆ ತಜ್ಞರು ಸಲಹೆ ಮಾಡುತ್ತಾರೆ.
ಹಾಲು ನಮ್ಮ ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ಬಿಳಿ ಪೇಯದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಉತ್ತಮ-ಗುಣಮಟ್ಟದ ಪ್ರೋಟೀನ್, ಜೀವಸತ್ವಗಳು ಎ, ಡಿ ಮತ್ತು ಬಿ 12, ರೈಬೋಫ್ಲೇವಿನ್ ಮತ್ತು ನಿಯಾಸಿನ್ ಪೋಷಕಾಂಶಗಳಿರುತ್ತವೆ. ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವ ಪೋಷಕಾಂಶಗಳೇ ಆಗಿವೆ. ಹಾಲು ಪೋಷಕಾಂಶಗಳ ಹೊರತಾಗಿಯೂ ಪ್ರೋಟೀನ್’ನಿಂದಲೂ ಸಮೃದ್ಧವಾಗಿರುವ ಆಹಾರವಾಗಿದೆ. ಒಂದು ಲೋಟ ಹಾಲಿನಲ್ಲಿ 8 ಗ್ರಾಂ ನಷ್ಟು ಪ್ರೋಟೀನ್ ಇದೆ. ಹಾಲು ಹಲವಾರು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.
ಹಾಲು ಕುಡಿಯುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ನಿಮಗೆ ಗೊತ್ತಾ, ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವವೇ ಹೆಚ್ಚು. ಆ ಆಹಾರಗಳು ಯಾವುವು ತಿಳಿಯೋಣ..
ಇದನ್ನು ಓದಿ: ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಇವುಗಳನ್ನು ಸೇವಿಸಿ
ಕೆಲವು ಆಹಾರಗಳನ್ನು ಹಾಲಿನೊಂದಿಗೆ ತಿನ್ನಬಾರದು. ಅಥವಾ ಹಾಲು ಕುಡಿಯುವ ಮುನ್ನ ಸೇವಿಸಬಾರದು. ಈ ಆಹಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಿದರೆ, ಆರೋಗ್ಯಕ್ಕೆ ಒಳಿತಾಗುವ ಬದಲು ಕೆಟ್ಟದ್ದಾಗುವುದೇ ಹೆಚ್ಚುತ್ತದೆ. ಆರೋಗ್ಯಕರ ಆಹಾರಗಳನ್ನು ಕೂಡಾ ತಿನ್ನಲು ವಿಧಾನವಿದೆ. ಉದಾಹರಣೆಗೆ ಹಾಲು ಮತ್ತು ಮೊಸರು ಎರಡೂ ಆರೋಗ್ಯಕರ ಆಹಾರ, ಆದರೆ ಜೊತೆಗೆ ಸೇವಿಸುವಂತಿಲ್ಲ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸುವುದು ಒಳ್ಳೆಯ ಆಯ್ಕೆ ಅಲ್ಲ.
Image Credits : Wallpaperflare
ಹಾಲು ಕುಡಿದ ಮೇಲೆ ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ. ಹಾಲು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಪಾನಕ ಮುಂತಾದವುಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಹಾಲು ಒಡೆದು ಹುಳಿಯಾಗಿ ಅಸಿಡಿಟಿ ಸಮಸ್ಯೆ ಉಂಟಾಗುವುದು. ಆಯುರ್ವೇದ ಕೂಡ ಹಾಲು ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸಲು ಸಲಹೆ ನೀಡುತ್ತದೆ. ಬಾಳೆಹಣ್ಣುಗಳನ್ನು ತಿಂದ ಬಳಿಕವೂ ಹಾಲನ್ನು ಕುಡಿಯಬಾರದು, ಚೆರ್ರಿ ಹಣ್ಣುಗಳನ್ನು ಹಾಲನ್ನು ಸಹ ಒಟ್ಟಿಗೆ ಸೇವಿಸಬಾರದು ಆದರೆ ಕೆಲವೊಂದು ಸಿಹಿ ಹಣ್ಣುಗಳಾದ ಮಾವಿನಹಣ್ಣು, ಬೆನ್ಣೆಹಣ್ಣು, ಅಂಜೂರ, ಖರ್ಜೂರ ಈ ರೀತಿಯ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸಬಹುದು.
ಹಾಲು ಕುಡಿಯುವ ಮೊದಲು ಉಪ್ಪಿನ ಅಂಶ ಹೆಚ್ಚಿರುವ ಆಹಾರಗಳನ್ನು ತಿನ್ನಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಪ್ಪು ಮತ್ತು ಹಾಲು ಒಟ್ಟಿಗೆ ಸೇವಿಸದರೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಉಪ್ಪಿನ ಅಂಶ ಹೆಚ್ಚಾಗಿ ಇರುವ ವಸ್ತುಗಳನ್ನು ತಿಂದರೆ, ಆ ವಸ್ತುವನ್ನು ಸೇವಿಸಿದ ಎರಡು ಗಂಟೆಗಳ ಬಳಿಕ ಹಾಲು ಕುಡಿಯುವುದು ಒಳ್ಳೆಯದು.
Image credits : Daily Hunt
ಉದ್ದಿನ ಬೇಳೆಯಿಂದ ಮಾಡಿದ ತಿಂಡಿಗಳನ್ನು ತಿಂದ ನಂತರವೂ ಹಾಲು ಸೇವಿಸಬಾರದು. ಉದ್ದಿನ ಬೇಳೆ ಉಪಯೋಗಿಸಿ, ಮಾಡಿದ ತಿಂಡಿಯನ್ನು ತಿಂದ ಕೂಡಲೇ ಹಾಲು ಕುಡಿದರೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಹೀಗಾಗಿ ಕೂಡಲೇ ಹಾಲು ಕುಡಿಯಬಾರದು. ಹುಳಿ ವಸ್ತುಗಳನ್ನು ಅಥವಾ ಹುಳಿ ಹಣ್ಣುಗಳನ್ನು ಸೇವಿಸಿದ ನಂತರವೂ ಹಾಲು ಕುಡಿಯುವುದು ಒಳ್ಳೆಯದಲ್ಲ.
ಇದನ್ನು ಓದಿ : ಡಾರ್ಕ್ ಚಾಕೋಲೇಟ್ಸ್ ಬಗ್ಗೆ ನೀವು ತಿಳಿದಿರದ ವಿಷಯಗಳಿವು
ಹಾಲಿನಿಂದಲೇ ಮೊಸರು ಮಾಡುವುದಾದರೂ ಹಾಲು ಹಾಗೂ ಮೊಸರನ್ನು ಜೊತೆಗೆ ತೆಗೆದುಕೊಳ್ಳಬೇಡಿ. ಹಾಲು ಮೊಸರು ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಸಿಡಿಟಿ, ವಾಂತಿ ಮುಂತಾದ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಹಾಲು ಸೇವಿಸಿ ಕನಿಷ್ಠ ಎರಡು ಗಂಟೆಗಳಾದ ಬಳಿಕ ಮೊಸರನ್ನು ಸೇವಿಸಿ. ಮೊಸರು ತಿಂದು ಹಾಲು ಕುಡಿದರೆ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ದೇಹವು ಹಾಲಿನ ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡವೇ ಬೇಡ.
Image Credits : Naked Nutrition
ನಾವೆಲ್ಲಾ ಸಾಮಾನ್ಯವಾಗಿ ಹಾಲಿನ ಜೊತೆ ಇತರ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತೇವೆ. ಆದರೆ ನ್ಯೂಟ್ರಿಷಿಯನ್ ತಜ್ಞರು ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿಯುವುದು ಉತ್ತಮ ಆಯ್ಕೆ ಅಲ್ಲ ಎನ್ನುತ್ತಾರೆ. ಕೆಲವರಿಗೆ ಹಾಲಿನ ಜೊತೆ ಪ್ರೊಟೀನ್ ಪುಡಿ ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡಬಹುದು, ಅಂಥವರು ಪ್ರೊಟೀನ್ ಪುಡಿಯನ್ನು ನೀರಿನಲ್ಲಿ ಕಲಸಿ ಕುಡಿಯಿರಿ, ಹಾಲು ಹಾಗೂ ಪ್ರೊಟೀನ್ ಆಹಾರ ತೆಗೆದುಕೊಳ್ಳುವಾಗ ಕನಿಷ್ಠ ಎರಡು ಗಂಟೆ ಅಂತರವಿರಲಿ.
ಎಲ್ಲಕ್ಕಿಂತ ಮುಖ್ಯವಾಗಿ ಮಾಂಸಾಹಾರ ಸೇವನೆಯ ನಂತರ ಹಾಲು ಕುಡಿಯಬಾರದು. ಅದರಲ್ಲೂ ಮೀನು ತಿಂದ ಬಳಿಕ ಹಾಲು ಕುಡಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯಕ್ಕೆ ಹಾಲು ಉತ್ತಮವಾದರೂ ಇಂಥಹಾ ಆಹಾರಗಳನ್ನು ಹಾಲಿನ ಜತೆ ಸೇವಿಸಬೇಡಿ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
from Planet Tv https://ift.tt/35M7Ci0
June 23, 2021 at 10:55AM