ರುದ್ರಾಕ್ಷಿ ಎಂದರೇನು..? ಅದನ್ನು ಧರಿಸುವುದರಿಂದ ಏನೆಲ್ಲಾ
ಪ್ರಯೋಜನಗಳಿವೆ ಗೊತ್ತಾ..?
ಭಾರತದ ಅತ್ಯಂತ ಪ್ರಾಚೀನ ಹಾಗೂ ಪುರಾತನ ಧರ್ಮ ಹಿಂದೂ ಧರ್ಮ. ಹೀಗಾಗಿಯೇ ಹಳೇಕಾಲದ ಹಲವು ಆಚಾರ-ವಿಚಾರಗಳು, ಪದ್ಧತಿಗಳು, ಆಚರಣೆಗಳು ಇಂದಿಗೂ ಹಿಂದೂ ಧರ್ಮದಲ್ಲಿ ಅಳವಡಿಕೆಯಾಗಿದೆ. ಹಿಂದೂ ಧರ್ಮದಲ್ಲಿ ದೇವರ ಮೂರ್ತಿಯನ್ನು ಪೂಜಿಸಲಾಗುತ್ತದೆ. ಜತೆಗೆ ಇತರ ಕೆಲವೊಂದು ವಸ್ತುಗಳನ್ನು ಕೂಡ ಪವಿತ್ರವೆಂದು ನಂಬಿ ಅದನ್ನು ಪೂಜಿಸಲಾಗುತ್ತದೆ. ಅಗ್ನಿ, ಸೂರ್ಯ, ನದಿಗಳು, ತುಳಸಿ ಗಿಡ, ಮಣ್ಣು, ಅಶ್ವತ್ಥ ಮರ ಹೀಗೆ ಹಲವಾರು ವಸ್ತುಗಳು ಹಿಂದೂಗಳಿಗೆ ತುಂಬಾ ಪವಿತ್ರವೆನಿಸಿದೆ. ರುದ್ರಾಕ್ಷಿ ಸಹ ಹಿಂದೂಗಳ ಪಾಲಿಗೆ ಬಹಳ ಮಹತ್ವದ್ದಾಗಿದೆ,
ಹಿಂದೂ ಧರ್ಮದಲ್ಲಿ, ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಶಿವನಿಗೆ ಸಂಬಂಧಿಸಿದ್ದಾಗಿದೆ. ಸಾಧು, ಸಂತರು ಮಾತ್ರವಲ್ಲ ರುದ್ರಾಕ್ಷಿ ಹಾರವನ್ನು ಧರಿಸಿರುವ ಸಾಮಾನ್ಯ ಜನರನ್ನು ನೀವು ನೋಡಿರಬೇಕು. ಹೆಚ್ಚಿನ ಮನೆಗಳಲ್ಲಿ ಮಂತ್ರ ಜಪಿಸಲು ರುದ್ರಾಕ್ಷಿ ಮಾಲೆಯನ್ನು ಬಳಸಲಾಗುತ್ತದೆ. ವಿಶೇಷವಾಗಿ ಕುಂಭಮೇಳದ ಸಮಯದಲ್ಲಿ ನಾಗಾ ಸಾಧುಗಳು ರುದ್ರಾಕ್ಷಿ ಧರಿಸಿರುವುದನ್ನು ಗಮನಿಸಬಹುದು. ರುದ್ರಾಕ್ಷಿ ಎಂದರೇನು..? ಅದು ಉತ್ಪತ್ತಿಯಾದುದು ಹೇಗೆ..? ಅದರ ಪ್ರಯೋಜನಗಳೇನು ಎಂಬುವುದು ಹಲವರಿಗೆ ತಿಳಿದಿಲ್ಲ. ಆ ಬಗ್ಗೆ ವಿವರವಾಗಿ ತಿಳಿಯೋಣ..
ರುದ್ರಾಕ್ಷಿ ಎಂದರೇನು..?
Image Credits : Amazon.com
ರುದ್ರನ ಅಕ್ಷಿಯೇ ರುದ್ರಾಕ್ಷಿ. ಅರ್ಥಾತ್ ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಣಿಗಳಾದವು ಎಂದು ಹೇಳಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಇದೊಂದು ಜಾತಿಯ ಫಲ. ಹಣ್ಣಾಗಿ, ಸಿಪ್ಪೆ ಸುಲಿದು, ಒಣಗಿದ ಮೇಲೆ ನಾವು ನೋಡುವ ರುದ್ರಾಕ್ಷಿಯಾಗುತ್ತದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ. ಇದನ್ನು ಜಪಮಾಲೆಯಾಗಿಯೂ ಉಪಯೋಗಿಸುತ್ತಾರೆ.
ಹಿಮಾಲಯ ಮತ್ತು ನೇಪಾಳದ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳು ಹೆಚ್ಚಾಗಿ ಬೆಳೆಯುತ್ತವೆ. ಈ ಮರದಲ್ಲಿ ಮೂರ್ನಾಲ್ಕು ವರ್ಷಗಳಲ್ಲೇ ರುದ್ರಾಕ್ಷಿ ಬೀಜಗಳನ್ನು ಬಿಡತೊಡಗುತ್ತವೆ. ಇಂಥಹಾ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಒಳಜಾತಿಗಳಿವೆ. ಪ್ರತಿಯೊಂದಕ್ಕೂ ಅದರದೇ ಆದ ಮಹತ್ವವೂ ಇದೆ. ಒಂದು ಮರದಲ್ಲಿ ಸುಮಾರು 2000ದಷ್ಟು ಹಣ್ಣು ಬಿಡುತ್ತದೆ. ಅದರಲ್ಲಿ 108 ಮಣಿಗಳ ಜಪಮಾಲೆಗಳನ್ನು ಮಾಡುತ್ತಾರೆ. ಹಿಮಾಲಯದ ಯತಿಗಳು ಆ ಮರದ ಹಣ್ಣುಗಳನ್ನು ಅಮೃತ ಫಲವೆಂದು ತಿನ್ನುತ್ತಾರೆ.
ರುದ್ರಾಕ್ಷಿಯ ಪೌರಾಣಿಕ ಹಿನ್ನಲೆ
Image Credits : Neeta singhal.com
ಪುರಾಣದಲ್ಲಿ ಶಿವನು ದೀರ್ಘ ಕಾಲ ಧ್ಯಾನ ನಿರತನಾಗಿ ನಂತರ ಕಣ್ಣುಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಭಾಷ್ಪ ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ. ಅದು ಶಿವನ ಮೂರನೇ ಕಣ್ಣಿನ ರೂಪವಾಗಿದ್ದು, ಜನರ ದುಃಖವನ್ನು ದೂರಮಾಡುವ ಗುಣ ಹೊಂದಿದೆ ಎಂದು ಹೇಳುತ್ತಾರೆ.
ಇನ್ನೊಂದು ಪುರಾಣದ ಪ್ರಕಾರ ಶಿವನು ತಾರಕಾಸುರನನ್ನು ಸಂಹರಿಸಿದ ಮೇಲೆ ಆತನ ಮಕ್ಕಳಾದ ತದಿನ್ಮಾಲಿ, ತಾರಕಾಕ್ಷ, ಕಮಲಾಕ್ಷ, ಗುಣವಂತರಾಗಿ ದೇವತೆಗಳ ಸಾಲಿಗೆ ಸೇರಿದರು. ಆದರೆ ಕೆಲವು ಕಾಲಾನಂತರ ದುಷ್ಟರಾಗಿ ಜನರಿಗೆ ತೊಂದರೆ ಕೊಡಲು ಆರಂಭಿಸಿದ ಕಾರಣ ಶಿವನು ಅವರನ್ನು ಸಂಹರಿಸಿದನು. ಹೀಗೆ ತನ್ನ ಭಕ್ತರು ದುಷ್ಟರಾಗಿ ಸಾವನ್ನಪ್ಪಿದ್ದನ್ನು ನೋಡಿ ಶಿವನ ಕಣ್ಣಿನಿಂದ ನೀರ ಹನಿಗಳು ಉದುರಿದವು. ಅವೇ ಮರಗಳಾಗಿ ಅದರ ಸಂತತಿ ರುದ್ರಾಕ್ಷ್ಷಿಗಳನ್ನು ಕೊಡುತ್ತಿವೆ ಎಂದು ಹೇಳಲಾಗುತ್ತದೆ.
ಹಲವರಿಗೆ ಜಪಮಾಲೆ ಹಿಡಿದು ಮಂತ್ರ ಪಠಿಸುವುದರ ಪ್ರಯೋಜನ ಏನು ಎಂಬುದು ತಿಳಿದಿರುವುದಿಲ್ಲ. ಆದರೂ ಕೂಡ ಅವರು ಮಂತ್ರ ಪಠಿಸುವಾಗ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ. ಜಪಮಾಲೆ ಹಿಡಿದು ಮಂತ್ರ ಪಠಿಸುವುದರಿಂದ ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲ, ಸಾಕಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳೂ ಕೂಡ ಇದೆ. ಆ ಬಗ್ಗೆ ತಿಳಿಯೋಣ.
ರುದ್ರಾಕ್ಷಿ ಧರಿಸುವುದರಿಂದ ಏನೆಲ್ಲಾ ಪ್ರಯೋಜನವಿದೆ..?
Image Credits : Shivaloka
ರುದ್ರಾಕ್ಷಿ ಸಕಾರಾತ್ಮಕ ಶಕ್ತಿಯನ್ನು ಸಂವಹನ ಮಾಡುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ. ರುದ್ರಾಕ್ಷಿ ಧರಿಸುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ. ಇನ್ನು, ಏಕ ಮುಖಿ ರುದ್ರಾಕ್ಷಿ ಅಪರೂಪ ಮತ್ತು ಇದು ಬಹಳ ವಿರಳವಾಗಿ ಕಂಡುಬರುತ್ತದೆ. ಆದರೆ ಇದರ ವಿಶೇಷತೆಯೆಂದರೆ ಏಕ ಮುಖಿ ರುದ್ರಾಕ್ಷ ಹೃದಯ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂಬ ನಂಬಿಕೆಯಿದೆ.
ಪಂಚಮುಖಿ ರುದ್ರಾಕ್ಷಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಇದನ್ನು ಧರಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ಇದಲ್ಲದೆ, ರುದ್ರಾಕ್ಷಿಯನ್ನು ನಿಯಮಿತವಾಗಿ ಪೂಜಿಸುವ ಮನೆಯಲ್ಲಿ, ಆಹಾರ, ಧಾನ್ಯ. ಹಣದ ಕೊರತೆ ಎಂದಿಗೂ ಇರುವುದಿಲ್ಲ. ಅಂತಹ ಮನೆ ಲಕ್ಷ್ಮಿಯ ವಾಸಸ್ಥಾನವಾಗಿರಲಿದೆ ಎಂದು ಹೇಳಲಾಗುತ್ತದೆ.
ಇನ್ನು ವೈಜ್ಞಾನಿಕವಾಗಿಯೂ ರುದ್ರಾಕ್ಷಿಯಿಂದ ಹಲವು ಪ್ರಯೋಜನಗಳಿವೆ ಎಂದು ಹೇಳುತ್ತಾರೆ. ರುದ್ರಾಕ್ಷಿಯಲ್ಲಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಮತ್ತು ಪ್ಯಾರಾ ಮ್ಯಾಗ್ನೆಟಿಕ್ ಗುಣಗಳಿದ್ದು, ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಮನಸ್ಸನ್ನು ಶಾಂತವಾಗಿ ಇರಿಸುತ್ತದೆ. ರುದ್ರಾಕ್ಷಿಯಿಂದ ಹೊರಟ ಬಯೋಎಲೆಕ್ಟ್ರಿಕ್ ಸಿಗ್ನಲ್ಗಳು ಮೆದುಳನ್ನು ಉದ್ದೀಪಿಸಿ, ನರವ್ಯೂಹವನ್ನು ಚುರುಕುಗೊಳಿಸುತ್ತವೆ. ಅದರಿಂದಾಗಿ ರಕ್ತದೊತ್ತಡ, ಖಿನ್ನತೆ, ಆತಂಕ, ಏಕಾಗ್ರತೆ ಕೊರತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
►Subscribe to Planet Tv Kannada
►Follow us on Facebook
https://www.facebook.com/Planettvkannada
►Follow us on Blogspot
https://planettvkannada.blogspot.com
►Follow us on Dailymotion
https://www.dailymotion.com/planettvkannada
►Follow us on Instagram
https://www.instagram.com/planettvkannada/
►Follow us on Pinterest
https://in.pinterest.com/Planettvkannada/
►Follow us on Koo App
https://www.kooapp.com/profile/planettvkannada
►Follow us on Twitter
https://twitter.com/Planettvkannada
►Follow us on Share Chat
https://sharechat.com/profile/planettvkannada
►Follow us on Tumgir
https://www.tumgir.com/planettvkannada
►Follow us on Tumbler
https://planettvkannada.tumblr.com/
►Follow us on Telegram
.
from Planet Tv https://ift.tt/3xDYHLt
June 22, 2021 at 07:23PM